ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದಲ್ಲಿರುವ ಕೆಳದಿ ರಾಜರ ಸ್ಮಾರಕ #ಚಂಪಕ_ಸರಸ್ಸು #Anandapuram #champakasarassu #keladi #archeologicalsurveyofindia #karnatakatourism #ShivamoggaNews #deputycommissionershivamogga #shivamoggaparlimentmember #gopalakrishnabelursagarmla ಇದು ಕೆಳದಿರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆಯ ಪ್ರೇಮಸೌಧ ಇದು ತಾಜ್ಮಹಲ್ ಕ್ಕಿಂತ ಮೊದಲೇ ನಿರ್ಮಾಣವಾಗಿದೆ ಈ ಸ್ಮಾರಕ ನಿರ್ಮಾಣವಾಗಿ ನಾಲ್ಕು ಶತಮಾನಗಳಾಗಿದೆ 2025 ನವಂಬರ್ ತಿಂಗಳು ಈ ಸ್ಮಾರಕದ 400ನೇ ವರ್ಷಾಚರಣೆ ಈ ಐತಿಹಾಸಿಕ ಸ್ಮಾರಕ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಬೇಕಾಗಿತ್ತು. ಆದರೆ ಈ ಸ್ಮಾರಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಉಳಿದಿದೆ ಆನಂದಪುರಂ ಕೋಟೆಯ ಅರಮನೆಯಿಂದ ಚಂಪಕ ಸರಸ್ಸುವಿಗೆ ನೇರ ರಾಜಮಾರ್ಗ ಇತ್ತು ಈಗಲೂ ಈ ನಕಾಶೆ ಕಂಡ ಮಾರ್ಗ ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕೆಎಮ್ಎಸ್ ರೈಸ್ ಮಿಲ್ ಮಧ್ಯದಲ್ಲಿ ಇದೆ ಇದರ ಮೋರಿ ಬಿದ್ದುಹೋಗಿದೆ ಈ ರಸ್ತೆ ನವೀಕರಿಸಿ ಚಂಪಕ ಸರಸ್ಸುವಿಗೆ ಬರುವವರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಅತ್ಯುತ್ತಮ ಸಂಪರ್ಕ ರಸ್ತೆಯನ್ನು ಮಾಡಬಹುದು