ಇವತ್ತು ರೈತ ಮುಖಂಡರು ಮತ್ತು ಹೋರಾಟಗಾರರ ಭೇಟಿ
ದಿನಾಂಕ 21 - ಅಕ್ಟೋಬರ್ -2024 ಸೋಮವಾರದಿಂದ
ಬೃಹತ್ ಆಹೋರಾತ್ರಿ ಧರಣಿ ಸತ್ಯಾಗ್ರಹ
ಸ್ಥಳ ಸಾಗರದ ಉಪವಿಭಾಗಾಧಿಕಾರಿ ಆವರಣ
ಸರ್ಕಾರಗಳ ನಿರ್ಲಕ್ಷಕ್ಕಾಗಿ ಪ್ರತ್ಯೇಕ #ಮಲೆನಾಡು_ರಾಜ್ಯ ಬೇಡಿಕೆ
#Malenadurajya #rathayatra2024 #kagoduhorata #sagara #ShivamoggaNews #karwara #sirsi #honnavara #chikkamagalore #kodagu #hassannews #udupi #kvsubbanna
ಇವತ್ತು ಡಾ. ಎಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ #ದಿನೇಶ್_ಶಿರವಾಳ ಜಿಲ್ಲಾ ಉಪಾಧ್ಯಕ್ಷರಾದ #ಕೆಳದಿ_ರಮೇಶ್ ಮತ್ತು ಸಾಗರ ತಾಲೂಕು ಅಧ್ಯಕ್ಷರಾದ ಡಾಕ್ಟರ್ #ರಾಮಚಂದ್ರಪ್ಪಮನೆಘಟ್ಟ ಮತ್ತು ಶಿವಮೊಗ್ಗ ಜಿಲ್ಲಾ ಮಲೆನಾಡು ರೈತ ಹೋರಾಟ ಸಂಘದ ಜಿಲ್ಲಾಧ್ಯಕ್ಷರಾದ #ತೀನಾ_ಶ್ರೀನಿವಾಸ್ ಬಂದಿದ್ದರು
ಮಲೆನಾಡು ಪ್ರಾಂತ್ಯದ ಎಲ್ಲಾ ರೈತ ಪರ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸುತ್ತಿದೆ ಈ ಹೋರಾಟದ ಮುಖ್ಯ ಉದ್ದೇಶ ಮಲೆನಾಡಿನ ರೈತರ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ವಿರೋಧಿಸಿ ರೈತರ ಒಕ್ಕಲೆಬ್ಬಿಸುವುದನ್ನು ವಿರೋದಿಸಿ ಈ ಹೋರಾಟ ಹಮ್ಮಿಕೊಂಡಿದ್ದಾರೆ.
ಅಷ್ಟೇ ಅಲ್ಲ ಈ ಹೋರಾಟವನ್ನು ಉತ್ತರ ಕರ್ನಾಟಕದ ಬೆಳಗಾಂ ಜಿಲ್ಲೆಯ ಖಾನಾಪುರದಿಂದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ತನಕದ ಪಶ್ಚಿಮ ಘಟ್ಟದ ಮಲೆನಾಡು ಪ್ರಾಂತ್ಯದಾದ್ಯಂತ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ ಆ ಭಾಗದ ಜನಪರ ಹೋರಾಟಗಾರರ ಸಂಘಟನೆ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ - -ಚಿಕ್ಕಮಗಳೂರು - ಹಾಸನ- ಕೊಡನು - ಮಂಗಳೂರು-ಉಡುಪಿಗಳನ್ನೊಳಗೊಂಡ #ಮಲೆನಾಡು_ರಾಜ್ಯ ಬೇಡಿಕೆ ಮಂಡಿಸಲಿದ್ದಾರೆ.
ರಾಜ್ಯ ವಿಧಾನ ಸಭಾ ಚುನಾವಣೆ ಮುನ್ನ ರಾಜ್ಯದ ರಾಜಕೀಯ ಪಕ್ಷಗಳು ಶರಾವತಿ ಮುಳುಗಡೆ ರೈತರ - ಬಗರ್ ಹುಕುಂ ರೈತರ ಮತ್ತು ಅರಣ್ಯ ಒತ್ತುವರಿದಾರರ ಸಮಾವೇಶ ನಡೆಸಿ ಭರವಸೆಗಳ ಮಹಾಪೂರ ಹರಿಸಿದ್ದವು.
ಬಿಜೆಪಿ ತೀರ್ಥಹಳ್ಳಿಯಲ್ಲಿ ಈ ಬಗ್ಗೆ ದೊಡ್ಡ ಸಮಾವೇಶ ನಡೆಸಿತ್ತು ಇದಕ್ಕೆ ಕೌಂಟರ್ ಆಗಿ ಕಾಂಗ್ರೇಸ್ ಪಕ್ಷ ಅಯನೂರಿಂದ ಶಿವಮೊಗ್ಗದ ತನಕ ಪಾದಯಾತ್ರೆ ಮೂಲಕ ಈಗಿನ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಭರವಸೆ ನೀಡಿದ್ದರು ಆದರೆ ಅದಾವುದೂ ಈಡೇರಲಿಲ್ಲ ಎಂಬುದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ರೈತ ಮುಖಂಡ ಯುವ ಹೋರಾಟಗಾರ ದಿನೇಶ್ ಶಿರವಾಳ ಮತ್ತು ಒಂದು ಕಾಲದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ. ಶ್ರೀನಿವಾಸ್ ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ.
ಕರಪತ್ರ ನೀಡಿ ಆಹ್ವಾನಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸುಮಾರು ಹೊತ್ತು ಚರ್ಚಿಸಿದರು ಅವರ ಹೋರಾಟಕ್ಕೆ ಶುಭ ಹಾರೈಸಿ ಬೀಳ್ಕೊಟ್ಟಿ.
Comments
Post a Comment