Skip to main content

Blog number 2304. ಹುಲಿ ವೇಷದ ಹುಲಿ ಕುಣಿತ

ಹುಲಿ_ವೇಷ_ಮೂಲ_ಎಲ್ಲಿ ?
  ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ,

#hulivesha #durgapuja #DurgaPuja2024 #navaratri #karavali #dasara2024 #karnatakatourism #pulikali #manavibhag #Puliyattam #baagnach

 ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ

 ದುರ್ಗಾದೇವಿಯ_ವಾಹನ_ಹುಲಿ

ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ 

    ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಮತ್ತು ದುಗಾ೯ ದೇವಿ ವಾಹನ ಹುಲಿ ಕೂಡ.
   ಹುಲಿ ವೇಷದ ಮೂಲ ಕರ್ನಾಟಕದ ಕರಾವಳಿಯೋ? ಅಥವ ಕೇರಳದ ಪುಲಿಕಲಿಯೇ ಮೂಲವೋ ಎಂಬ ಬಗ್ಗೆ ಚರ್ಚೆಗಳಿದೆ.
   ಆದರೆ ಈ ಹುಲಿ ವೇಷ ಆಯಾ ಪ್ರಾದೇಶಿಕ ಹೆಸರಲ್ಲಿ ಒಡಿಷಾದ ಗ೦ಜಾಂ ಡಿಸ್ಟ್ರಿಕ್ಟ್ ನಲ್ಲಿ ಬಾಗ್ ನಾಚ್ ಅಂತ, ಮಹಾರಾಷ್ಟ್ರದ ನಾಗಪುರದಲ್ಲಿ ಮಾನವಿ ವಾಗ್, ತಮಿಳುನಾಡಿನಲ್ಲಿ ಪುಲಿಯಾಟ್ಟಮ್ ಹೆಸರಿನಲ್ಲಿ ಭಾರತದಲ್ಲಿ ಹುಲಿ ವೇಷಗಳು ನಡೆಯುತ್ತಿದೆ ಅದು ಯಾವಾಗಿಂದ ಪ್ರಾರಂಭ ಆಗಿದೆ ಎಂಬ ಮಾಹಿತಿ ಇಲ್ಲ.
   ನೇಪಾಳದಲ್ಲಿ, ಚೈನಾದಲ್ಲಿ, ಹಾಂಕಾಂಗ್, ಜಪಾನ್, ಥಾಯ್ ಲ್ಯಾಂಡ್ ಅಷ್ಟೆ ಅಲ್ಲ ಕೊಲ೦ಬಿಯಾದ ಕಾರ್ನಿವಲ್ ನಲ್ಲೂ ಹುಲಿ ವೇಷಗಳಿದೆ.
  ಹುಲಿ ವೇಷದಾರಿಗಳು ಬಾರ್ ಗೆ ಹೋಗಿ ಬ್ರಾಂಡಿ ಕುಡಿಯುವ ಪನ್ನಿ ಸಂದರ್ಭಗಳ ಪೋಟೋಗಳು ತಮಾಷೆ ಅನ್ನಿಸಿ ನಗು ತರಿಸುತ್ತದೆ.
   ಒಮ್ಮೆ ಮಂಗಳೂರಿಂದ ಬರುವಾಗ ಕಾಪು ಸಮೀಪದ ಹೋಟೆಲ್ ನಲ್ಲಿ ಊಟ ಮಾಡುವಾಗ 8-10 ಜನರ ಹುಲಿ ವೇಷದ ತಂಡ ಬಾಯಾರಿಸಿಕೊಳ್ಳಲು ಬಾರ್ ಗೆ ಬಂದಾಗ ಎಲ್ಲಾ ಹುಲಿಗಳು ಕುಡಿದ ಪಾನಿಯದ ಬಿಲ್ ನಾನೇ ಕೊಟ್ಟಿದ್ದು ಒಂದು ಗಮ್ಮತ್ತಿನ ಸನ್ನಿವೇಷ ಆಗಿತ್ತು.
  ಈಗೆಲ್ಲ ಮೊದಲಿನ ರೀತಿ ದೇಹದ ಚರ್ಮಕ್ಕೆ ಅಪಾಯಕಾರಿ ಆದ ಸೀಸದ ಅಂಶದ ಆಯಿಲ್ ಪೇಯಿಂಟ್ ಬಳಸುವುದಿಲ್ಲ, ಸಿನಿಮಾ ನಾಟಕ ಕ್ಷೇತ್ರದಲ್ಲಿ ಬಳಸುವ ವಾಟರ್ ಬೇಸ್ ಬಣ್ಣಗಳಿಂದ ಈಗಿನ ಹುಲಿ ವೇಷದಾರಿಗಳು ಸೇಪ್ ಆಗಿದ್ದಾರೆ.
    ಇತ್ತೀಚಿನ ಕನ್ನಡದ ಚಲನಚಿತ್ರಗಳಲ್ಲೂ ಹುಲಿ ವೇಷಗಳು ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿಸಿದೆ, ಮೊನ್ನೆ ದಸರಾ ಕೊನೆಯ ದಿನ ನವರಾತ್ರಿಯಂದು ಕನ್ನಡದ ಚಲನಚಿತ್ರ ಮಾರುಕಟ್ಟೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಕರಾವಳಿಯ ಶೆಟ್ಟಿ ತ್ರಿಯತ್ರರು ಈ ಹುಲಿ ವೇಷದ ನೃತ್ಯ ಮಾಡಿ ಹುಲಿ ವೇಷಕ್ಕೆ ತಾರಾಮೌಲ್ಯವೂ ತಂದಿದ್ದಾರೆ.

Comments