ಕೇರಳದ ಕುಂಬಳೆ ಸಮೀಪದ ಅನಂತಪುರ ದೇವಾಲಯದ ಕೊಳದಲ್ಲಿ ಹೊಸ ಬಬಿಯ ಪ್ರತ್ಯಕ್ಷ.
ಕೆಳದಿ ಅರಸರ ಎರೆಡು ಆನಂದಪುರಂಗಳಲ್ಲಿ ಒಂದಾದ ಕೇರಳದ ಕುಂಬಳೆ ಸಮೀಪದ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ 70 ವರ್ಷ ಬದುಕಿದ್ದ ಬಬಿಯಾ ಎಂಬ ಮೊಸಳೆಯ ಎರಡನೆ ವರ್ಷದ ಪುಣ್ಯ ಸ್ಮರಣೆ ಇವತ್ತು
ಶಿವಮೊಗ್ಗ ಜಿಲ್ಲೆಯ ಆನಂದಪುರಂ ಚಂಪಕ ಸರಸ್ಸು ಕೇರಳದ ಕುಂಬಳೆ ಸಮೀಪದ ಅನಂತಪುರಕ್ಕೂ ಇರುವ ಸಂಬಂದ.
ಪುರಾತತ್ವ ಇಲಾಖೆ 1993ರಲ್ಲಿ ಕೆಳದಿ ಅರಸರ ನಿದಿಗಾಗಿ ಸಂಶೋದನೆಗೆ ಹಣ ಬಿಡುಗಡೆ ಮಾಡಿತ್ತು
ಈ ಎರೆಡೂ ಪ್ರದೇಶದಲ್ಲಿನ ಹೆಸರು ಆನಂದಪುರಂ
ಕೆಂಪು ಜಂಬಿಟ್ಟಿಗೆಯಲ್ಲಿ ಕೊಳ ನಿಮಾ೯ಣ ಕೊಳದ ಮಧ್ಯ ದೇವಾಲಯದ ಸಾಮ್ಯತೆ.
ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ ಕೆಳದಿ ಅರಸರ ನಿದಿ ಕಾಯುತ್ತಿದೆ ಎಂಬ ಪ್ರತೀತಿ ಇದೆ.
#Babiya #keralatourism #Kumble #ananthapuram #ananthapadmanabhaswamytemple #vegcrocodile #Manjeshwara #keladiviral
ದಿನಾಂಕ 9- ಅಕ್ಟೋಬರ್ -2022 ಭಾನುವಾರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆ ಸಮೀಪದ ಅನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯ ಕೊಳದ ಮಧ್ಯ ಇದ್ದು ಅಲ್ಲಿನ ಸುಮಾರು 70 ವಷ೯ದ ಬಬಿಯಾ ಎಂಬ ಮೊಸಳೆ ಮೃತವಾಯಿತು.
ಅದರ ಅಂತ್ಯ ಸಂಸ್ಕಾರ ಕೂಡ ಧಾರ್ಮಿಕ ಪದ್ಧತಿಯಲ್ಲಿ ನಡೆಯಿತು ಮತ್ತು ಅಲ್ಲಿ ಸಮಾದಿ ಕೂಡ ನಿರ್ಮಿಸಲಾಗಿದೆ.
ಈ ದೇವಾಲಯ ಕೂಡ ಕೆಳದಿ ರಾಜ ವೆಂಕಟಪ್ಪ ನಾಯಕರೇ ನಿಮಿ೯ಸಿದ್ದು ಮತ್ತು ಈ ಊರಿನ ಹೆಸರು ಆನಂದಪುರ (ಕೇರಳದ ಮಲೆಯಾಳ ಆಕ್ಸೆಂಟ್ ನಲ್ಲಿ ಅನಂತಪುರ ಆಗಿದೆ) ಹಾಗಾಗಿ ಕೆಳದಿ ಆಡಳಿತದಲ್ಲಿ ಎರೆಡು ಆನಂದಪುರಂ ಇರುವುದು ವಿಶೇಷ ಮತ್ತು ಈ ಎರೆಡೂ ಕೊಳ ನಿರ್ಮಿಸಿದ್ದು ಸ್ಥಳಿಯ ಕೆಂಪುಕಲ್ಲಿನಿಂದ (ಲಾಟರೇಟ್ ಸ್ಟೋನ್) ಹಾಗೂ ಎರೆಡೂ ಕೊಳದ ಮಧ್ಯದಲ್ಲಿ ದೇವಾಲಯ ಇದೆ.
ಕೇರಳದ ಅನಂತಪುರದ ಈ ಸ್ಥಳ ಪುರಾತತ್ವ ಇಲಾಖೆಗೆ ಸೇರಿದೆ, 1993 ರಲ್ಲಿ ಪುರಾತತ್ವ ಇಲಾಖೆ ಇಲ್ಲಿನ ಕೆಳದಿ ಅರಸರ ಗುಪ್ತ ನಿಧಿ ಸಂಶೋದನೆಗಾಗಿ 15 ಲಕ್ಷ ಮಂಜೂರು ಮಾಡಿ ಇಡೀ ಕೊಳದ ನೀರು ತೆಗೆದು ಕೊಳದ ಆಳದಲ್ಲಿ ಇದ್ದ ಗುಪ್ತ ಸುರಂಗದಲ್ಲಿದ್ದ 3 ಬಾವಿಗಳಲ್ಲಿ 2 ಬಾವಿ ಸಂಶೋಧಿಸಿತ್ತು ಆಗ ಮಳೆಗಾಲ ಪ್ರಾರಂಭವಾಗಿ ಸಂಶೋದನೆ ನಿಂತಿತು ನಂತರ ಈವರೆಗೆ ನಡೆದಿಲ್ಲ, ಈ ಸಂಶೋದನೆಗೆ ಕಾರಣ ರಾಮರಾವ್ ಎಂಬುವ ಕೆಳದಿ ವಂಶಸ್ಥರು ಹಾಜರು ಮಾಡಿದ ಪುರಾತನ ನಕ್ಷೆ ಅದರಲ್ಲಿ ಕೆಳದಿ ಅರಸರ ನಿದಿ ಈ ಕೊಳದ ತನಕ ತಂದ ಮಾಹಿತಿಯ ಚಿತ್ರ ನಕಾಶೆ ಅಂತೆ.
ಪುರಾತನ ಕಾಲದಿಂದ ಯಾವಾಗಲೂ ಈ ಕೊಳದಲ್ಲಿ ಮೊಸಳೆ ಒಂದು ಇರುತ್ತದೆ ಅದರ ಹೆಸರು ಬಬಿಯಾ ಅದು ಕೆಳದಿ ಅರಸರು ಸಂರಕ್ಷಿಸಿದ ನಿದಿ ಕಾಯುತ್ತದೆ ಎಂಬ ಪ್ರತೀತಿ ಇದೆ, 70 ವರ್ಷದ ಬಬಿಯಾ ಮೊಸಳೆ ಮೃತವಾಗಿದ್ದು ಇದರ ನಂತರ ಇನ್ನೊಂದು ಮೊಸಳೆ ಬಬಿಯಾ ಹೆಸರಲ್ಲೇ ಸಾಕುವುದು ಪದ್ದತಿ ಆದರೆ ಈ ಕಾಲದಲ್ಲಿ ಅದು ಮುಂದುವರಿಸುವ ಬಗ್ಗೆ ಮಾಹಿತಿ ಇರಲಿಲ್ಲ.
ಕೆಳದಿ ಅರಸರ ಕಾಲದ ನಿಧಿ ಕಾಯುವ ಮೊಸಳೆ ಬಬಿಯ ಎರಡನೆ ಪುಣ್ಯ ತಿಥಿಯಲ್ಲಿ ಅಲ್ಲಿನ ಕೊಳದಲ್ಲಿ ಹೊಸ ಬಬಿಯಾ ತೇಲುತ್ತಿದೆ.
ನಮ್ಮ ಜಿಲ್ಲೆಯ ಸಾಗರ ತಾಲ್ಲುಕಿನ ಕೆಳದಿ ಅರಸರು ಕೇರಳ ಕಾಸರಗೋಡು ತನಕ ಆಳ್ವಿಕೆ ಮಾಡಿದ್ದಾರೆ ಇವರ ಆಳ್ವಿಕೆಯ ಮತ್ತು ಅನೇಕ ವಿಚಾರಗಳ ಬಗ್ಗೆ ಸಂಶೋದನೆಗಳು ಆಗದೇ ಇರುವುದು ವಿಪಯಾ೯ಸ.
ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕವಾದ #ಚಂಪಕ_ಸರಸ್ಸು ನಿರ್ಮಾಣವಾಗಿ 400 ವರ್ಷಗಳಾಗುತ್ತಿದೆ ಆದರೆ ಈ ಸುಂದರ ಸ್ಮಾರಕ ಇನ್ನೂ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಮತ್ತು ಅದರ ಮಾಹಿತಿ ಕೂಡ ಸಂಗ್ರಹಿಸಿಲ್ಲ.
ರಾಜ ವೆಂಕಟಪ್ಪ ನಾಯಕ ಈಗಿನ ಸಾಗರ ಪಟ್ಟಣದ ನಿರ್ಮಾತೃ, ತನ್ನ ಅಜ್ಜ ಸದಾಶಿವ ನಾಯಕರ ಸ್ಮರಣೆಗಾಗಿ ಈ ಪಟ್ಟಣ, ಗಣಪತಿ ದೇವಾಲಯ ಮತ್ತು ಪಕ್ಕದಲ್ಲಿ ಕೆರೆ ನಿರ್ಮಿಸಿ ಸದಾಶಿವ ಸಾಗರ ಎಂದು ನಾಮಕರಣ ಮಾಡಿದ್ದರು.
ಕೆಳದಿ ಅರಸರಲ್ಲೇ ದೀರ್ಘ 43 ವರ್ಷ ಆಡಳಿತ ಮಾಡಿದ ರಾಜ ವೆಂಕಟಪ್ಪ ನಾಯಕರ ಹೆಸರನ್ನು ಕೆಳದಿ ಆಸ್ಥಾನದ ಕವಿಗಳು ಮತ್ತು ರಾಜವಂಶಸ್ಥರು ಮರೆ ಮಾಚಲು ಕಾರಣ ರಾಜ ಆನಂದಪುರಂನ ಬೆಸ್ತರ ಜಾತಿಯ ಸುಂದರಿ ಚಂಪಕಾಳು ನಿತ್ಯ ಬಿಡಿಸುತ್ತಿದ್ದ ರಂಗೋಲಿಗೆ ಮನಸೋತು ವಿವಾಹ ಆದದ್ದೆ ಕಾರಣ.
ಪಟ್ಟದ ರಾಣಿ ಇದರಿಂದ ಅಸಮದಾನ ಪಟ್ಟು ಅನ್ನ ಆಹಾರ ಸೇವಿಸದೇ ಜೀವ ತ್ಯಾಗಮಾಡಿದ್ದು ಇದರಿಂದ ರಾಜ್ಯದಲ್ಲಿ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಉಂಟಾದ ಅಸಹನೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಚಂಪಕಾಳ ಸ್ಮರಣೆಗಾಗಿ ಆನಂದಪುರಂ ಕೋಟೆಗೆ ಸಮೀಪದ ಉತ್ತರ ಭಾರತದ ನಾಥಪಂಥದ ಮಹಾಂತರ ಮಠದ ಸಮೀಪ ಸರಸ್ಸು (ಕೊಳ) ನಿಮಿ೯ಸಿ ಅದರ ಮಧ್ಯದಲ್ಲಿ ದೇವರ ಗುಡಿ ನಿಮಿ೯ಸಿ ಅಲ್ಲಿ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಇಟ್ಟಿದ್ದಾರೆಂಬ ಸ್ಥಳ ಪುರಾಣ ಅಥವ ಜನಪದ ಕಥೆಯಲ್ಲಿ ಹೇಳುತ್ತಾರೆ ಅದಕ್ಕೆ ಪೂರಕವಾಗಿ ರಾಣಿ ಭದ್ರಮ್ಮಾಜಿ ಮೃತಳಾದ ಸಂದರ್ಭದಲ್ಲಿ ಇಟಲಿಯ ಪ್ರವಾಸಿ ಡೆಲ್ಲೋ ವಲ್ಲೆ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ ಈ ಕಾರಣದಿಂದ ರಾಜನ ಬೇಟಿ ವಿಳಂಬವಾಗಿ ಆ ಸಂದರ್ಭದಲ್ಲಿನ ಘಟನೆಗಳನ್ನು ಬರೆದ ಡೆಲ್ಲೊ ವಲ್ಲೆ ಪತ್ರ ಐತಿಹಾಸಿಕ ದಾಖಲೆಗಳಾಗಿದೆ (ಬ್ರಿಟನ್ ನಲ್ಲಿನ ಬ್ರಿಟೀಶ್ ಮ್ಯುಸಿಯಂನಲ್ಲಿ ಸಂರಕ್ಷಿಸಲಾಗಿದೆ).
ಚಂಪಕಾಳ ನೆನಪಿಗಾಗಿಯೇ ಆನಂದಪುರಂ ಎಂದು ಹೆಸರಿಟ್ಟರೆಂದು ಮೈಸೂರು ಗೆಜೆಟಿಯರ್ ನಲ್ಲಿ ನಮೂದಾಗಿದೆ.
Comments
Post a Comment