Skip to main content

Posts

Blog number 1032. ಪಡುವಾರಳ್ಳಿ ಪಾಂಡವರಾಗಿ ಜೈಲಿಗೆ ಹೋದ ನಾನು ಮತ್ತು ನನ್ನ ಶಿಷ್ಯ ಹಂದಿಗನೂರು ನಾಗರಾಜ್ ತಂಡ.

ನನ್ನ_ರಾಜಕಾರಣದ_ಶಿಷ್ಯ_ಹಂದಿಗನೂರು_ನಾಗರಾಜ್ #ರಾಜಕೀಯದಲ್ಲಿನ_ಅಧಿಕಾರಸ್ಥರ_ಸುಳ್ಳು_ದೂರಿನಿಂದ_ನಾವಿಬ್ಬರೂ_ಸಾಗರದ_ಜೈಲು_ಪಾಲು #ನಾವು_ಪಡುವಾರಳ್ಳಿ_ಪಾಂಡವರಾಗಿ_ಗ್ರಾಮ_ಸುದಾರಣೆ_ಮಾಡಲು_ಹೋದವರು #ರಾಜಕಾರಣದ_ಅಧಿಕಾರದಿಂದ_ಪಡುವಾರಳ್ಳಿ_ಕೌರವರಿಂದ_ಸೋತವರು #ನಮ್ಮದು_ಕಲಿಯುಗದ_ಮಹಾಬಾರತ #ಸಾಹಸದಿಂದ_ನೆರೆಯಲ್ಲಿ_ಇಬ್ಬರ_ಜೀವ_ಉಳಿಸಿದ_ಇವರಿಗೆ_ಯಾವ_ಪ್ರಶಸ್ತಿ!?        2019 ರ ಅಕ್ಟೋಬರ್ ನಲ್ಲಿ ದಿಡೀರ್ ಬಂದ ಮಾಯದಂತ ಮಳೆಯಿ೦ದ ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಹೊಸೂರು ಕರಿನಳ್ಳದಲ್ಲಿ ನೆರೆ ಬಂದಾಗ,ಅದರಲ್ಲಿ ಸಿಕ್ಕಿಬಿದ್ದ ತಮ್ಮ ಎತ್ತನೊಂದು ಬಚಾವ್ ಮಾಡಲು ಪ್ರಯತ್ನಿಸುತ್ತಿದ್ದ ರೈತ ಮಹಿಳೆ ಮತ್ತು ಅವರ ಪುತ್ರ ಬಾರಿ ಮಳೆಯ ಪ್ರವಾಹದಲ್ಲಿ ಸಿಕ್ಕಿ ಬಿದ್ದಿದ್ದರು.      ಇದನ್ನ ಗಮನಿಸಿದವರು ಇವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಹಂದಿಗನೂರು ನಾಗರಾಜ್ ಗೆ ಪೋನ್ ನಲ್ಲಿ ತಿಳಿಸಿದ್ದಾರೆ.     ತಕ್ಷಣ ತಮ್ಮ ಮೋಟಾರ್ ಬೈಕ್ ನಲ್ಲಿ ಹಗ್ಗದೊ೦ದಿಗೆ  ಹೊಸೂರಿನಲ್ಲಿ ಕ್ಯಾ೦ಟಿನ್ ನಡೆಸುವ ಅರುಣ್ ಶೆಟ್ಟಿ ಮತ್ತು ಹೊಳೆನ ಕೊಪ್ಪದ ಈಶ್ವರಪ್ಪನ ಕರೆದುಕೊಂಡು ಹೊಳೆಯ ಇನ್ನೊಂದು ಭಾಗ ತಲುಪಿ ಇಬ್ಬರನ್ನ ರಕ್ಷಿಸಿದ್ದಾರೆ.   ಜನ ಸೇವೆಯಲ್ಲಿ ಯಾವತ್ತೂ ಹಿಂದೆ ಸರಿಯದ ನಾಗರಾಜ್ ಸಾಹಸಿ ಕೂಡ ಮೊನ್ನೆಯ ಇವರ ದೈಯ೯ ಮತ್ತು ಸಾಹಸದಿಂದ ಇಬ್ಬರ ಜೀವ ಉಳಿಯಿತು...

Blog number 1031. ಒಂದು ಕಾಲದ ಆನಂದಪುರಂನ ಮೊದಲ ಮತ್ತು ಕೊನೆಯ ಕಾಫಿ ಪುಡಿ ಮಿಲ್, ಜಗದೀಶ್ ಶೆಟ್ಟರ ನೆನಪು

#ಆನಂದಪುರದಲ್ಲಿ_ಒಂದು_ಕಾಲದಲ್ಲಿ_ಕಾಫಿಪುಡಿ_ಹಿಟ್ಟಿನಮಿಲ್ಲು_ಹೋಲ್ಸೇಲ್_ದಿನಸಿ_ಅಂಗಡಿ_ಸ್ಥಾಪಿಸಿದ್ದ.    ದಶರಥ ಶೆಟ್ಟರನ್ನು ಆನಂದಪುರದ ಮೂಲದವರು ಮರೆಯುವಂತಿಲ್ಲ.    ಆಯ೯ವೈಶ್ಯ ಸಮಾಜದ ಇವರು ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವಾಗ ಅಲ್ಲಿ ಹಿಟ್ಟಿನ ಮಿಲ್ ಮತ್ತು ದಿನಸಿ ಅಂಗಡಿ ಸ್ಥಾಪಿಸಿ ದುಡಿಮೆ ಮಾಡಿದವರು, ಆಣೆಕಟ್ಟು ಕಾಮಗಾರಿ ಮುಗಿದು ಕೆಲಸಗಾರರೆಲ್ಲ ಹೋದ ಮೇಲೆ ಆನಂದಪುರಕ್ಕೆ ಬಂದು ನೆಲೆಸಿದರು.   ಆನಂದಪುರದ ಸಕಾ೯ರಿ ಆಸ್ಪತ್ರೆ ಪಕ್ಕ ಜಾಗ ಖರೀದಿಸಿ ಅಲ್ಲಿ ಹೋಲ್ ಸೇಲ್ ದಿನಸಿ ಅಂಗಡಿ, ಹಿಟ್ಟಿನ ಮಿಲ್ ಮತ್ತು ಕಾಫಿ ಪುಡಿ ಘಟಕ ಸ್ಥಾಪಿಸಿದ್ದರು.    ಆಗ ಆನಂದಪುರದಲ್ಲಿ ಯಹ್ಯಾ ಸಾಹೇಬರು ಮತ್ತು ಈಗಿನ ಡಾಕ್ಟರ್ ಪ್ರಭುರವರ ತಂದೆ ಮಾದವ ಪ್ರಭುರವರ ದೊಡ್ಡ ದಿನಸಿ ಅಂಗಡಿ ಮಾತ್ರ ಇದ್ದ ಕಾಲ.   ದಶರಥ ಶೆಟ್ಟರು ತಮ್ಮ ಸಣ್ಣ ಪುತ್ರ ಅಶೋಕ ಹೆಸರಲ್ಲಿ ಪ್ರಾರಂಬಿಸಿದ ಅಶೋಕ ಕಾಫಿ ಪುಡಿ ಈಗ ಶಿವಮೊಗ್ಗದಲ್ಲಿ ಇವರ ಇಬ್ಬರು ಮಕ್ಕಳು (ಪಾಂಡು ಮತ್ತು ಅಶೋಕ ) ಮುಂದುವರಿಸಿದ್ದಾರೆ, ಹಿರಿಯ ಮಗ ಚಿಕ್ಕಮಗಳೂರಲ್ಲಿ ಪ್ರಸಿದ್ಧ ಬ್ರಾಂಡ್ ವಾಸವಿ ಕಾಫಿ ಮಾಲಿಕರು.    ಆನಂದಪುರದಲ್ಲಿಯೇ ಉಳಿದ ಎರಡನೆ ಪುತ್ರ ಜಗದೀಶ್ ಶೆಟ್ಟರು ಕಮಷಿ೯ಯಲ್ ಕಾಂಪ್ಲೆಕ್ಸ್ ನಿಮಿ೯ಸಿದ್ದಾರೆ, ಟ್ರಾನ್ಸ್ ಪೋಟ್೯ ಮತ್ತು ಜಂಬಿಟ್ಟಿಗೆ ಕಲ್ಲಿನ ವ್ಯವಹಾರ ಮಾಡುತ್ತಿದ್ದರು ಜನರೆಲ್ಲ ಇವರನ್ನ ಕಾಪಿ ಪು...

Blog number 1030. ಪಶ್ಚಿಮ ಘಟ್ಟದ ವಿಶೇಷ ಕಾಮದೇನು ಗೋತಳಿ ಮಲೆನಾಡು ಗಿಡ್ಡ ನಶಿಸುತ್ತಿರುವ ಗೋವಿನ ತಳಿಯಿಂದ ಗೋಮಯ ದೀಪಾವಳಿ ಹಣತೆ ದೀಪದ ತಯಾರಿಯಿಂದ ಮಲೆನಾಡು ಗಿಡ್ದ ಗೋ ತಳಿ ಸಂರಕ್ಷಣೆ ಮತ್ತು ದೀಪಾವಳಿ ಮುಗಿದ ನಂತರ ಈ ಹಣತೆ ಹೂವಿನ ಗಿಡಕ್ಕೆ ಗೊಬ್ಬರ ಆಗುವ ಪರಿಸರದ ಚಕ್ರ.

#ಹಚ್ಚೇವು_ಕನ್ನಡದ_ದೀಪ_ಪ್ರಸಿದ್ಧ_ಹಾಡು #ಹಚ್ಚೇವು_ಈಸಾರಿ__ಗೋಮಯದ_ಹಣತೆಯ_ದೀಪ #ಪಶ್ಚಿಮಘಟ್ಟದ_ವಿಶೇಷ_ಗೋಸಂತತಿ_ಮಲೆನಾಡುಗಿಡ್ಡದಿಂದ #ಪರಿಸರ_ಪ್ರೇಮಿ_ಕೃಷಿವಿಜ್ಞಾನಿ_ನಾಗೇಂದ್ರಸಾಗರ್_ನೀಡಿದ_ದೀಪಾವಳಿ_ಉಡುಗೊರೆ. #ದೀಪಾವಳಿ_ನಂತರ_ಹೂವಿನಗಿಡಗಳಿಗೆ_ಗೊಬ್ಬರವಾಗುವ_ಗೋಮಯದ_ದೀಪದ_ಹಣತೆಗಳು #ಇದರಲ್ಲಿ_ಎರೆಡು_ಉದ್ದೇಶದ_ಆಂದೋಲನ_ಅವರದ್ದು #ಮಲೆನಾಡು_ದೇಸಿ_ಗಿಡ್ಡ_ಸಂತತಿ_ಉಳಿಸುವುದು #ಪಿಂಗಾಣಿ_ಗಾಜಿನ_ಹಣತೆಯ_ಪರಿಸರ_ಮಾಲಿನ್ಯ_ತಡೆಯುವುದು. #ಗೋಮಯ_ಹಣತೆ_ದೀಪಾ_ಬೇಕಾದವರು_ಅವರನ್ನು_ಸಂಪರ್ಕಿಸಬಹುದು #ಅವರ_ಸೆಲ್_ನಂಬರ್_8147299353.     ನಾನು ನನ್ನ ವೈಯಕ್ತಿಕ ಆಹಾರೋದ್ಯಮದ ಪ್ರಯೋಗದಲ್ಲಿ  ನಾಗೇಂದ್ರ ಸಾಗರ್ ಅವರನ್ನು ಗೋಳುಹೊಯ್ದುಕೊಳ್ಳುವ ಸ್ನೇಹ ಸಲಿಗೆಗೆ 27 ವರ್ಷದ ದೀರ್ಘ ಕಾಲದ ಸಂಬಂದವೂ ಇದೆ.    ಪ್ರತಿ ದೀಪಾವಳಿ - ಯುಗಾದಿಗೆ ನನ್ನ ಸಿಬ್ಬಂದಿಗಳಿಗೆ ಮತ್ತು ಆತ್ಮೀಯರಿಗೆ ಹೋಳಿಗೆ ತುಪ್ಪ ತಲುಪಿಸುವ ನನ್ನ ಪದ್ಧತಿ ನಿರಂತರವಾಗಿ ನಡೆದಿದೆ ಆದರೆ ಹೋಳಿಗೆ ಮಾಡುವ ಹದ- ಕ್ರಮ ಮತ್ತು ಅದರ ಪ್ಯಾಕಿಂಗ್ ವಿಬಿನ್ನವಾದರೂ ನನಗೆ ತೃಪ್ತಿ ನೀಡುವ ಹೋಳಿಗೆ ತಯಾರಕರು ಅಥವ ಸರಬರಾಜುದಾರರು ಸಿಕ್ಕಿಲ್ಲ ಆದ್ದರಿಂದ ಈ ಸಾರಿ ನಾಗೇಂದ್ರ ಸಾಗರರಿಗೆ ವಿನಂತಿಸಿದ್ದೆ.     ಅವರು ಅವರಲ್ಲಿ ತರಬೇತಿಪಡೆದ ಒಬ್ಬರಿಗೆ ಜವಾಬ್ದಾರಿ ವಹಿಸಿದ್ದರು ಮತ್ತು ಗುಣಮಟ್ಟ, ಪ್ಯಾಕಿಂಗ...

Blog number 1029, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವುದು ಸುಲಭವಲ್ಲ

#ಗ್ರಾಮ_ಪಂಚಾಯಿತಿ_ಚುನಾವಣೆ_ಗೆಲ್ಲುವುದು_ಸುಲಭವೇನಲ್ಲ   ನನ್ನ ಊರು ಮನೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ, ರಾ.ಹೆ. 206 ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿದೆ ಒಂದು ಕಾಲದಲ್ಲಿ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ವಿಲೇಜ್ ಪಂಚಾಯತ್ ಆಗಿತ್ತು ಈ ಮೂರು ಪ್ರತ್ಯೇಕ ಗ್ರಾ.ಪಂ.ಮಾಡಿದ್ದಾರೆ, ಈ ಮೂರು ಗ್ರಾ.ಪಂ. ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಅಹ೯ತೆ ಇದ್ದರೂ ಆಳುವವರು ಯಾಕೋ ಮನಸ್ಸು ಮಾಡಿಲ್ಲ.    ಮೊನ್ನೆ ನನ್ನ ಶಿಷ್ಯ ನಾರೀ ಲೋಕಪ್ಪ ಬಂದಿದ್ದರು ಈ ಬಾರಿ ನಾಲ್ಕನೇ ಬಾರಿ ಗ್ರಾ.ಪಂ. ಆಯ್ಕೆ ಆಗಿದ್ದಾರೆ, ಸಿಹಿ ಕೊಟ್ಟು ಅಭಿನಂದಿಸಿದೆ.    1995ರಲ್ಲಿ ನಾನು ಜಿ.ಪ.ಸದಸ್ಯನಾಗುವಾಗ ನಾರೀ ಲೋಕಪ್ಪ ಚಿಕ್ಕ ಬಾಲಕ, ಇವರ ತಂದೆ ನಾರಿ ನಾರಾಯಣಪ್ಪ ನನ್ನ ಗೆಳೆಯರು, ಅವರು ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಇವರ ಈಡಿಗ ಸಮಾಜದ ಆ ಕಾಲದ ವಿದ್ಯಾವಂತ ಕೋವಿ ನಾರಾಯಣಪ್ಪರನ್ನ ಅಧ್ಯಕ್ಷರನ್ನಾಗಿಸದೆ ಬೇರೆಯವರನ್ನ ಆಯ್ಕೆ ಮಾಡುವ ಸಂದಭ೯ದಲ್ಲಿ ಇವರು ನನ್ನ ಸಹಾಯ ಬಯಸಿ ಬಂದಿದ್ದರು, ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರು ನನ್ನ ಹತ್ತಿರ ಇದ್ದರು ಆಗ ನಾನು, ಒಂದು ಕಾಲದ ದೀಘ೯ಕಾಲದ ಅಧ್ಯಕ್ಷರಾಗಿದ್ದ ಅಡೂರು ವಿಲೇಜ್ ಪಂಚಾಯತ್ ನ #ಜಮ್ಮಿನ_ಕೇವಿ_ಈರನಾಯ್ಕರು ಮತ್ತು ಒಂದು ಕಾಲದ ಸಾಗರ ತಾಲ್ಲೂಕ್ ಬೋಡ್೯ ಸದಸ್ಯರಾಗಿದ್ದ #ತಾರಸಿಕ್ಕೆ_ಹಿರಿಯಣ್ಣ_ನಾಯಕರು ನಾರೀ ನಾರಾಯಣಪ್ಪರೇ ಅಧ್ಯಕ್ಷರಾಗ...

Blog number 1028.ಕರಾವಳಿಯ ದೈವಾರಾದನೆಯ೦ತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬ, ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ

#ಮಲೆನಾಡಿನಲ್ಲಿ_ಊರ_ಕಾಯುವ_ಬೂತಗಳಿಗೆ_ನೋನಿಎಂಬ_ಕುರಿ_ಕೋಳಿ_ಬಲಿ_ನೀಡುವ_ಹಬ್ಬದ_ಆಚರಣೆ. #ನೋನಿಗೆ_ಜಾತಿ_ಬೇದ_ಇಲ್ಲ_ಆದರೆ_ಹುಟ್ಟು_ಸಾವು_ಮುಟ್ಟಿನ_ಸೂತಕ_ಇದೆ. #ಸೂತಕ_ಆದರೆ_ನೋನಿ_ಆಚರಿಸುವಂತಿಲ್ಲ #ನೋನಿ_ಸಂಭ್ರಮಕ್ಕೆ_ಸೂತಕವನ್ನೆ_ನಿವಾರಿಸುವ_ಉಪಾಯ #ಮುಟ್ಟಿನ_ಸಾಧ್ಯತೆಯ_ಹೆಣ್ಣು_ಮಕ್ಕಳು_ತಾತ್ಕಾಲಿಕವಾಗಿ_ಊರು_ಬಿಡುವುದು     ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ ನಮಗೆ ಪೂಜಾರ್ಹವೇ ಆಗಿದೆ.       ರಾಮಕ್ಷತ್ರಿಯ ಸಮಾಜದ ಬಗ್ಗೆ ಒಂದು ಪುಸ್ತಕ ಬರೆಯುವ ಉಮೇದಿನಲ್ಲಿ (ಪ್ರಕಟ ಆಗಿಲ್ಲ) ಮಹಾರಾಷ್ಟ್ರದ ವಿಜಯ ದುರ್ಗದಿಂದ ಕಾಸರಗೋಡಿನವರೆಗೆ ಓಡಾಡಿದಾಗ ಕು೦ಬಳೆಯ ಕೋಟೆ ಆ೦ಜನೇಯ ದೇವಾಲಯದ ವಾರ್ಷಿಕೊತ್ಸವದಲ್ಲಿ ಬೂತಾರಾಧನೆ - ಕೆಂಡ ಹಾಯುವುದು - ಕೋಲಾ ನೋಡಿದ್ದೆ ಈ ಬಗ್ಗೆ ತಿಳಿದದ್ದು ಇದು ರಾಮಕ್ಷತ್ರಿಯರ ಆಚರಣೆ ಅಲ್ಲ ಆದರೆ ಅದನ್ನು ಕೆಳದಿ ಅರಸರ ಕೋಟೆ ನಿರ್ವಹಣೆ ಮಾಡುವ ಈ ಸಮಾಜದವರು ಸ್ಥಳಿಯರ ನಂಬಿಕೆಗೆ ಗೌರವ ಕೊಡಲು ಅದಕ್ಕೆ ತಕ್ಕ ಹಾಗೆ ವರ್ತಿಸಿ ಅವರ ಜೊತೆ ಜೀರೋ ಟಾಲರೆನ್ಸ್ ಕಾಪಾಡಿಕೊಂಡಿದ್ದರೆಂದು ತಿಳಿದು ಬರುತ್ತದೆ.    ಕಾಂತಾರ ಸಿನಿಮಾದಿಂದ ಮತ್ತು ಕೊರಗಜ್ಜರ ಕಾರಣಿಕಗಳಿಂದ ದೈವಗಳ ಬೂತಾರಾಧನೆ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಆಸಕ್ತಿ ಹರಿದಾಡುತ್ತ...

Blog number 1028.70 ದಶಕದಲ್ಲಿ ಸಾಗರದ ಕ್ರಿಕೆಟ್ ಜಗತ್ತಿನ ಐಕಾನ್ ನಾಗೇಂದ್ರ ಪಂಡಿತ್ ಸಾಗರದ ಅವರ ಕ್ರಿಕೇಟ್ ಅಕಾಡೆಮಿಯಲ್ಲಿ ಅತ್ಯುತ್ತಮ ತರಬೇತಿ ನೀಡಿ ಉದಯೋನ್ಮುಖ ಕ್ರಿಕೆಟ್ ಆಟಗಾರರನ್ನು ತಯಾರಿ ಮಾಡುತ್ತಿದ್ದಾರೆ.

ಸಾಗರದ ಒಂದು ಕಾಲದ ಯುವ ಐಕಾನ್ ನಾಗೇ೦ದ್ರ ಪಂಡಿತರಿಂದ ಎರಡನೆ ಇನಿ೦ಗ್ಸ್  ನಾಗೇ೦ದ್ರ ಪ೦ಡಿತ್ ಕ್ರಿಕೇಟ್ ಆಕಾಡಮಿ                      ಸಾಗರ    ಒಂದು ಕಾಲದಲ್ಲಿ ಅಂದರೆ 1975ರಿಂದ 1980ರಲ್ಲಿ ಸಾಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಹವಾ ಜೋರಾಗಿತ್ತು ಅದರಲ್ಲೂ ಎಲ್.ಬಿ. ಕಾಲೇಜಿನ ನಾಗೇ೦ದ್ರಪಂಡಿತರೆಂದರೆ ಸಾಗರದ ಗಾವಸ್ಕರ್, ಸಿನಿಮಾ ನಟರಂತೆ ಸುಂದರಾಂಗ, ಯುನಿವಸಿ೯ಟಿ ಕೋಟ್ ಪಡೆದ ಏಕೈಕ ಕ್ರಿಕೆಟ್ ಆಟಗಾರ.   ನಾವೆಲ್ಲ 1978 ರಲ್ಲಿ ರೈಲಿನಲ್ಲಿ ಸಾಗರದ ಮುನ್ಸಿಪಲ್ ಹೈಸ್ಕೂಲಿಗೆ 8ನೇ ತರಗತಿಗೆ ಹೋಗುತ್ತಿದ್ದರು ನಾಗೇ೦ದ್ರ ಪಂಡಿತರ ಬ್ಯಾಟಿಂಗ್ ನೋಡಲು ಎಲ್.ಬಿ. ಕಾಲೇಜಿನ ಕ್ರಿಡಾ೦ಗಣಕ್ಕೆ ನಡೆದು ಹೋಗುತ್ತಿದ್ದೆವು, ಅವರ ಬ್ಯಾಟಿಂಗ್ ಸ್ಟೈಲ್ ಹಾಗಿತ್ತು, ಬೌ೦ಡರಿ ಸಿಕ್ಸ್ ರ್ ಗಳ ಸುರಿಮಳೆ.   ಭಾರತದ ರಾಷ್ಟ್ರಿಯ ಕ್ರಿಕೆಟ್ ಆಟಗಾರರಾಗಿ ಆಯ್ಕೆ ಆಗುವಂತ ಅವಕಾಶದಿ೦ದ ವಂಚಿತರಾಗಿದ್ದು ದುರಾದೃಷ್ಟ.     ಈಗ UAE ಯ ಅಬುದಾಬಿಯ Exchage ನಲ್ಲಿ ಉಪಾಧ್ಯಕ್ಷರಾಗಿ ಪ್ರತಿಷ್ಟಿತ ದೊಡ್ದ ಹುದ್ದೆಯಲ್ಲಿದ್ದಾರೆ ಆದರೂ ತಮ್ಮ ಹುಟ್ಟಿದ ಊರು ಸಾಗರದಲ್ಲಿನ ಯುವ ಜನತೆಗೆ ಏನಾದರೂ ಮಾಡಬೇಕೆಂಬ ತುಡಿತ ಅವರಿಗೆ ಈಗಿನ ಅವರ ಸಾಮಥ್ಯ೯ದಲ್ಲಿ ಬೆಂಗಳೂರಿನಲ್ಲಿ ಪ್ರಾರಂಬಿಸ ಬಹುದಾದ ಕ್ರಿಕೆಟ್ ಆಕಾಡಮಿ ಸಾ...

Blog number 1027. ಬನವಾಸಿಯ ಪೈನಾಪಲ್ ಕಿಂಗ್ ರೋವುಪ್ ಸಾಹೇಬರು ಡಾಕ್ಟರೇಟ್ ಪಡೆದ ಮೊದಲ ರೈತರು.

#ಬನವಾಸಿ_ಪೈನಾಪಲ್_ಕಿಂಗ್_ರೋವು ಪ್_ಸಾಹೇಬರು_ಡಾಕ್ಟರ್_ಆದ_ಕಥೆ.      ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ, ಇವರ ಸಾದನೆ ಆ ಮಟ್ಟದ್ದು.   ಉ.ಕ.ಜಿಲ್ಲೆಯ ಬನವಾಸಿಯ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.   ಈಗೆಲ್ಲ ಡಾಕ್ಟರೇಟ್ ಅಗ್ಗ ಆದರೆ ಅವಾಗ ಅದಕ್ಕೆ ಘನತೆ ಇತ್ತು.    ರೋವೂಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರವೂ ಇತ್ತು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ.   ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ ಜಾನಕಪ್ಪನವರು ಡಾಕ್ಟರ್ ರೋವೂಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.   ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುವಾಗ ಮುಂಬೈನ ನನ್ನ ಗೆಳೆಯ ವಿಜಯ್ ಗಡ್ಕರ್ ಅವರ ಮನೆಯ ಡೈನಿಂಗ್ ಹಾಲ್ ನಿಂದ ಬಂದಾಗ ಇಬ್ಬರಿಗೂ ಆಶ್ಚಯ೯.   ಹಿಂದೆಯೇ ಬಂದ ರೋವೂಪ್ ಸಾಹೇಬರಿಗೂ, ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮಾಡಿದ್ದ ಕಾರಣ ಅವರ ಅತಿಥಿ ಆಗಿದ್ದರು ಇ...