Skip to main content

Posts

BLOG NUMBER 982. ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದ ನೂತನ ಅಧ್ಯಕ್ಷರಾಗಿರುವ ನನ್ನ ಆತ್ಮೀಯ ಮಿತ್ರ ಸಜ್ಜನ ಎಂ.ಜಿ.ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು

#ಹಿರಿಯ_ಸಜ್ಜನ_ಮಾಜಿ_ಜಿಲ್ಲಾಪಂಚಾಯತ್_ಸದಸ್ಯ_ಎಂ_ಜಿ_ಕೃಷ್ಣಮೂರ್ತಿ #ವರದಳ್ಳಿ_ಶ್ರೀದರಾಶ್ರಮದ_ನೂತನ_ಅಧ್ಯಕ್ಷರು. #ಜಿಲ್ಲಾಪಂಚಾಯತ್_ಸಭೆಯಲ್ಲಿ_ನನ್ನ_ಜೊತೆಗಾರರು. #ಮಹಾರಾಜ_ಕಾಲೇಜಿನಲ್ಲಿ_ಉನ್ನತ_ವ್ಯಾಸಂಗ_ಮಾಡಿದವರು #ವರದಳ್ಳಿಯಲ್ಲಿ_2011ರಲ್ಲಿ_ನನ್ನ_ಎತ್ತಿನಗಾಡಿ_ಯಾತ್ರೆ_ಸಂದರ್ಭದಲ್ಲಿ #ಶೂದ್ರ_ದಲಿತರ_ಜೊತೆ_ಸಾಮೂಹಿಕ_ಬೋಜನ_ಮಾಡಿದ್ದರು. #ಶ್ರೀಧರ_ಸ್ವಾಮಿಗಳು_ಶೂದ್ರರಿಗೆ_ಪ್ರತ್ಯೇಕ_ಪಂಕ್ತಿ_ಊಟ_ಬಡಿಸಲು_ಹೇಳಿದ್ದಾರೆಂಬುದು_ಸತ್ಯವಾ?  #ನೂತನ_ಅಧ್ಯಕ್ಷರು_ಈ_ತಾರತಮ್ಯ_ಬದಲಿಸ_ಬಹುದಾ?     1995-2000 ಇಸವಿಯಲ್ಲಿ ಎಂ.ಜಿ. ಕೃಷ್ಣಮೂರ್ತಿ ಯಡಜಿಗಳೆಮನೆ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರು ನಾನು ಆನಂದಪುರಂ ಕ್ಷೇತ್ರದಿಂದ ಇಬ್ಬರೂ 5 ವರ್ಷ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಒಟ್ಟಿಗೆ ಕುಳಿತು ಕಲಾಪ ನಡೆಸಿದ್ದೆವು.    ಈಗ ಎಂ.ಜಿ. ಕೃಷ್ಣಮೂರ್ತಿ ಸಾಗರ ತಾಲ್ಲೂಕಿನ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ.     ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ ನಾನು ತಪಸ್ವಿಯಾದ ಶ್ರೀದರ ಸ್ವಾಮಿಗಳ ಭಕ್ತನೂ ಹೌದು.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲ...

Blog number 981. ರಬ್ಬರ್ ಗಿಡದ ಮದ್ಯದ ಹೋಕಿನ ಸ್ಥಳದಲ್ಲಿ ವೆಂಗುರಲಾ ಗೇರು ಗಿಡ ನಾಟಿ ಮಾಡಲು ಪೆಟ್ರೋಲ್ ಪಿಟ್ ಮೇಕಿಂಗ್ ಮೆಷಿನ್

#ರಬ್ಬರ್_ಕೃಷಿಯಲ್ಲಿ_ಹೊಸ_ಪ್ರಯೋಗ. #ನಾಗೇಂದ್ರಸಾಗರ್_ಶಿಪಾರಸ್ಸಿನ_ವಿಶ್ವನಾಥರ_ಯಂತ್ರಬಳಕೆ.    ನಮ್ಮ ರಬ್ಬರ್ ತೋಟದಲ್ಲಿ ಮಧ್ಯ ಮದ್ಯ ರಬ್ಬರ್ ಗಿಡ ಇಲ್ಲದ ಜಾಗದಲ್ಲಿ ಪುನಃ ರಬ್ಬರ್ ನಾಟಿ ಮಾಡಿದರೆ ಅದು ಬದುಕುವುದಿಲ್ಲ ಇದಕ್ಕೆ ಯಾವುದೇ ಪರಿಹಾರ ಇಲ್ಲ ರಬ್ಬರ್ ಸಸಿ ನಾಟಿ ಮಾಡಿದ 2 ವರ್ಷದಲ್ಲಿ ಬೇರೆ ಸಸಿ ನಾಟಿ ಮಾಡಿದರೆ ಮಾತ್ರ ಸಾಧ್ಯ ಅನ್ನುತ್ತಾರೆ.   ರಿಪ್ಪನ್ ಪೇಟೆಯ #ಅನಂತಮೂರ್ತಿಜವಳಿ ಪ್ರಕಾರ ಗೊಬ್ಬರದ ಗಿಡ ನೆಟ್ಟು ಅದಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಬಹುದು ಅಂತ 3 ವಷ೯ದ ಹಿಂದೆ ಈ ರೀತಿ ಗೊಬ್ಬರದ ಗಿಡ ನೆಟ್ಟರೂ ಸರಿ ಬರಲಿಲ್ಲ.    ನಮ್ಮ ಊರಲ್ಲೇ #ಇರುವಕ್ಕಿ_ಕೃಷಿ_ವಿಶ್ವವಿದ್ಯಾಲಯ ಆಗಿದೆ ಇಲ್ಲಿನ ಕೃಷಿ ವಿಜ್ಞಾನಿ #ಡಾಕ್ಟರ್_ಗಣಪತಿ ಯವರ ಮಾರ್ಗದರ್ಶನದಲ್ಲಿ ವೆಂಗುರಲಾ - 3 ಮತ್ತು -7 ತಳಿಯ ಕಸಿ ಗೇರು ಗಿಡಗಳು 35 ರೂ ನಂತೆ ಮಾರಾಟಕ್ಕೆ ಇಟ್ಟಿದ್ದಾರೆ ಅವರ ಪ್ರಕಾರ ರಬ್ಬರ್ ತೋಟದ ಮಧ್ಯದಲ್ಲಿ ಇದನ್ನು ನಾಟಿ ಮಾಡಲು ಶಿಪಾರಸ್ಸು ಮಾಡಿದ ಪ್ರಕಾರ 200 ಗಿಡ ಖರೀದಿಸಿದ್ದೆ.   ಇದನ್ನು ನಾಟಿ ಮಾಡಲು ಜನ ಹುಡುಕುವಾಗಲೇ ನಾಗೇಂದ್ರ ಸಾಗರರು ಹೊಸಗುಂದದ ವಿಶ್ವನಾಥರ ಸಸಿ ನೆಡುವ ಗುಂಡಿ ತೆಗೆಯುವ ಯಂತ್ರ ಮತ್ತು ಅವರೇ ಗಿಡ ನಾಟಿ ಮಾಡಿಕೊಡುವ ವ್ಯವಸ್ಥೆ ಬಗ್ಗೆ ಪೇಸ್ ಬುಕ್ ಲ್ಲಿ ಅವರ ಸಂಪರ್ಕ್ ನಂಬರ್ ಸಹಿತ ಬರೆದಿದ್ದರು.   ನಿನ್ನೆ ಸುಮಾರು 5 ...

Blog number 980. ಜೋಗ್ ಜಲಪಾತ ವಿಶ್ವ ಪ್ರಸಿದ್ದ ಮಾಡಿದ ಶರಾವತಿ ನದಿ ಉಗಮ ಸ್ಥಾನ ಜಿಲ್ಲೆಯ ತೀರ್ಥಹಳ್ಳಿಯ ಅಂಬುತೀರ್ಥ ಅಭಿವೃದ್ದಿ ಜಲಮೂಲಕ್ಕೆ ಯಾವುದೇ ತೊಂದರೆ ಆಗದಂತೆ ಆಗಲಿ ಈಗಾಗಲೇ ಜೋಗ್ ಫಾಲ್ಸ್ ಸಮೀಪದ ಲಕ್ಷಾಂತರ ವರ್ಷದ ಹೆರಿಟೇಜ್ ಬ್ರಿಡ್ಜ್ ಅಭಿವೃದ್ದಿ ಹೆಸರಲ್ಲಿ ಸಭಾಪತಿ ಕಾಗೇರಿ ಕಾಂಕ್ರೀಟ್ ನಲ್ಲಿ ಮುಚ್ಚಿದ್ದಾರೆ ಅದರ ವಿವರದ ಬ್ಲಾಗ್ ಈ ಲೇಖನದಲ್ಲಿ ಲಿಂಕ್ ಹಾಕಿದೆ.

#ಅಂಬು_ತೀಥ೯_ಶರಾವತಿ_ನದಿ_ಉಗಮ_ಸ್ಥಾನ #ಸಕಾ೯ರ_ಮತ್ತು_ಸಾವ೯ಜನಿಕರ_ನಿರಾಸಕ್ತಿಯ_ಅಮೂಲ್ಯ_ನದಿಮೂಲ. #ಈ_ಸ್ಥಳ_ಸಂದರ್ಶಿಸಿದ_ಮೊದಲ_ಮತ್ತು_ಕೊನೆಯ_ಮುಖ್ಯಮಂತ್ರಿ_ನಿಜಲಿಂಗಪ್ಪನವರು. #ಮೊದಲೆಲ್ಲ_ಜಿಲ್ಲೆಯಾದ್ಯಂತ_ಶಾಲಾ_ಶಿಕ್ಷಕರು_ವಿದ್ಯಾರ್ಥಿಗಳನ್ನು_ಇಲ್ಲಿಗೆ_ಪಿಕ್ನಿಕ್_ತರುತ್ತಿದ್ದರು. #ನಾನು_ನಮ್ಮೂರ_ಶಾಲೆಯಲ್ಲಿ_1972ರಲ್ಲಿ_ಎರಡನೆ_ತರಗತಿ_ಇದ್ದಾಗ_ಲೋಬೋ_ಮಾಸ್ತರ್_ತೋರಿಸಿದ್ದರು. #ಇತ್ತೀಚಿಗೆ_2015ರಲ್ಲಿ_ಸಂಸಾರ_ಸಮೇತ_ಹೋಗಿದ್ದೆ. # THIS IS WORLD FAMOUS JOGFALLS RIVER SHARAVATHI BORNING PLACE, AMBUTHIRTHA OF THIRTHALL I TQ, SHIMOGA DIST OF KARNATAKA BUT GOVT AND PUBLIC NEGLECTED THIS GREAT AND WONDERFUL PLACE, I VISITED SOME DAYS BACK THIS PLACE.# https://arunprasadhombuja.blogspot.com/2022/09/blog-number-979-27-1965.html     ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ .   ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊ...

Blog number 979. ಜೋಗ ಜಲಪಾತದ ಶರಾವತಿ ನದಿ ನೀರಿನ ಮೂಲ ಅಂಬೂ ತೀರ್ಥ 27- ಡಿಸೆಂಬರ್ -1965 ರಲ್ಲಿ ಆಗಿನ ಮುಖ್ಯಮಂತ್ರಿ ನದಿ ಉಗಮ ಸ್ಥಳದಲ್ಲಿ ಶರಾವತಿ ಮಂದಿರದ ಶಂಕುಸ್ಥಾಪನೆ ನೆರವೇರಿಸಿದ್ದರು.

# ಅಂಬು ತೀಥ೯ ಶರಾವತಿ ನದಿ ಉಗಮ ಸ್ಥಾನ# ಸಕಾ೯ರ ಮತ್ತು ಸಾವ೯ಜನಿಕರ ನಿರಾಸಕ್ತಿಯ ಅಮೂಲ್ಯ ನದಿ ಮೂಲ. # THIS IS WORLD FAMOUS JOGFALLS RIVER SHARAVATHI BORNING PLACE, AMBUTHIRTHA OF THIRTHALL I TQ, SHIMOGA DIST OF KARNATAKA BUT GOVT AND PUBLIC NEGLECTED THIS GREAT AND WONDERFUL PLACE, I VISITED SOME DAYS BACK THIS PLACE.# ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ .   ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊಳೆಯಾಗಿ ನದಿಯಾಗಿ ತೀಥ೯ಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನ ಬಹುಭೂಭಾಗ ಆಣೆಕಟ್ಟಿಂದ ಮುಳುಗಡೆ ಆಗಿ ರಾಜ್ಯಕ್ಕೆ ಪ್ರಮುಖ ಜಲ ವಿದ್ಯುತ್ ಉತ್ಪಾದಿಸಿ ನೀಡುವ ಈ ನದಿ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಶರಾವತಿ ಕಣಿವೆಯಲ್ಲಿ ಹರಿದು ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.   ಪ್ರಸಿದ್ದ ಪ್ರವಾಸಿ ಕೇಂದ್ರವಾಗುವ೦ತ ಇತಿಹಾಸ ಮತ್ತು ರಾಜ್ಯಕ್ಕೆ ಆಥಿ೯ಕ ಲಾಭ ತರುವ ಈ ನದಿಯ ಉಗಮ ಸ್ಥಾನ ಯಾವುದೇ ಅಭಿವೃ...

ಬ್ಲಾಗ್ ನಂಬರ್ 978 ಡಾಕ್ಟರ್ ಪ್ರೀತಮ್ ಶಿವಮೊಗ್ಗದ ಪ್ರಸಿದ್ಧ ಡಯಾಬಿಟಿಕ್ ತಜ್ಞರು ಶಿವಮೊಗ್ಗದ ಐಲೆಟ್ ಡಯಾಬಿಟಿಕ್ ಆಸ್ಪತ್ರೆ ಮಾಲಿಕರು, ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಕಾದಂಬರಿ ಓದಿ ಆನಂದಪುರಂ ಚಂಪಕಾ ಸರಸ್ಸು ಸಂದರ್ಶಿಸಿ ಅವರು ಪೇಸ್ ಬುಕ್ ಲ್ಲಿ ಪೋಸ್ಟ್ ಮಾಡಿದ ಅಭಿಪ್ರಾಯ ಇಲ್ಲಿದೆ.

#ಪ್ರೀತಂ_ಡಾಕ್ಟರ್_ಚ೦ಪಕ_ಸರಸ್ಸು_ಬೇಟಿ    ಶಿವಮೊಗ್ಗದ ಜನಾನುರಾಗಿ ವೈದ್ಯರಾದ ಡಾ.ಪ್ರೀತಂ ನನ್ನ ಕಾದಂಬರಿ ಓದಿ ಪ್ರೇರಿತರಾಗಿ ನಿನ್ನೆ ಆನಂದಪುರದ ಚಂಪಕ ರಾಣಿ ಸ್ಮಾರಕ #ಚಂಪಕ_ಸರಸ್ಸು ವಿಗೆ ಸಂಸಾರ ಸಮೇತ ಪಿಕ್ ನಿಕ್ ಮಾಡಿದ್ದಾರೆ.     ಡಾ. ಪ್ರೀತಂ ಎಷ್ಟೆಲ್ಲ ಕ್ರಿಯಾಶೀಲರಂತ ಹೇಳಲೇ ಬೇಕು ಶಿವಮೊಗ್ಗದ ಐಲೆಟ್ಸ್ ಡಯಾಬಿಟೀಸ್ ಸೆಂಟರ್ ಮಾಲಿಕರು, ಇವರು ಶಿವಮೊಗ್ಗದ ಪ್ರಸಿದ್ದ ಡಯಾಬಿಟಿಕ್ ತಜ್ಞರು.   ಅಧಿಕೃತ ರಾಜ್ಯ ಮಟ್ಟದ ಕ್ರಿಕೆಟ್ ಅಂಪೈರಿಂಗ್ ಅಹ೯ತೆ ಪಡೆದಿದ್ದಾರೆ, ಸ್ವತಃ ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಬೈಕ್ ಮತ್ತು ಕಾರ್ ರ್ಯಾಲಿ, ದೇಶ ವಿದೇಶ ಪ್ರಯಾಣ ಇವರ ವಿಶೇಷ ಕಾಯ೯ಚಟುವಟಿಕೆ .     ಇದರ ಜೊತೆ ಜೊತೆಯಾಗಿ ಓದು ಬರಹ ಕೂಡ, ಇಷ್ಟೆಲ್ಲ ಬಿಡುವಿಲ್ಲದ ವೈದ್ಯರು ನನ್ನ ಕಾದಂಬರಿ ಓದಿ ಅದರ ಕೇಂದ್ರವಾದ ಚಂಚಕ ಸರಸ್ಸು ಸಂದಶಿ೯ಸಿದ್ದಾರೆಂದರೆ ಅವರಲ್ಲಿ ಸಂಶೋಧನಾ ಮನೋಬಾವ ಕೂಡ ಇದೆ.    ಧನ್ಯವಾದಗಳು ಡಾಕ್ಟರ್ ಪ್ರೀತಂ ಸಾರ್  ಇವರು ಈ ಬಗ್ಗೆ ಬರೆದ FB ಸಾಲುಗಳನ್ನ ನೋಡಿ      Champaka sarassu. This is a monument built in the memory of ರಾಣಿ ಚ೦ಪಕ by ರಾಜಾ ವೆ೦ಕಟಪ್ಪ ನಾಯಕ ,  some 400 years back ,,after reading the wonderful  novel by Arun Prasad about th...

Blog number 977.ರೈತ ಹೋರಾಟದ ಮಹಾನ್ ನೇತಾರ 1999 ರಲ್ಲಿ ನನ್ನ ಮನೆಗೆ ಬೇಟಿ ಮಾಡಿದ್ದರು, ಬಲಭಾಗದಲ್ಲಿ ನನ್ನ ತಂದೆ ಎಸ್ ಕೃಷ್ಣಪ್ಪ, ಎಡ ಭಾಗದಲ್ಲಿ ನಾನು ಮತ್ತು ನನ್ನ ಪಕ್ಕದಲ್ಲಿ ಗೆಳೆಯ ಶೇಖ್ ಆಹಮದ್

ಇಂತಹ ಕ್ಷಣಗಳು ನನ್ನ ಜೀವಮಾನದ ಸಾದನೆ. 1999 ರಲ್ಲಿ ಪಕ್ಷೇತರನಾಗಿ ಸಾಗರ ವಿದಾನಸಭಾ ಚುನಾವಣೆಗೆ ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪರ ನೇತೃತ್ವದಲ್ಲಿ ಸ್ಪದಿ೯ಸಿದ್ದೆ, ಎದುರಾಳಿ ಆಗ ಮಂತ್ರಿ ಆಗಿದ್ದ ಕಾಗೋಡು ವಿರುದ್ಧ ಶೇಕಡಾ 10 ರಷ್ಟು ಮತ ನೀಡಿದ್ದರು ಸಾಗರದ ಮತದಾರರು. ಇದೇ ಸಂದಭ೯ದಲ್ಲಿ ನಮ್ಮ ಮನೆಗೆ ರೈತ ಸಂಘದ ಮುಖ೦ಡರಾದ ಶ್ರೀ ನಂಜುಂಡಸ್ವಾಮಿ ಬಂದಿದ್ದರು. ನಮ್ಮ ತಂದೆಗೆ ಅವರೆಂದರೆ ಅಪಾರ ಗೌರವ, ಅವರು ರೈತ ಸಂಘದ ಜೈಲ್ ಬರೋ ಕಾಯ೯ಕ್ರಮದಲ್ಲಿ ಜೈಲಿಗೆ ಹೋಗಿದ್ದರು.

Blog number 976. ಸಾಗರದ ಸೋಮೇಶ್ವರ ಅವರ ಜೀವನದಲ್ಲಿಯ ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳಿನ ಹಾದಿ ಸವಿಸಿ, ಪ್ರವಾಹದಲ್ಲಿ ಈಜಿ ದಡ ತಲುಪಿದಂತ ಸಾದಕರು ಅವರ ಜೀವನ ಮಾರ್ಗ ಆದರ್ಶನೀಯ ಅದು ನುಡಿದ೦ತೆ ನಡೆಯುವುದು, ಸಾಹಿತಿ- ಬರಹಗಾರ - ಓದುಗ -ಹಾಡುಗಾರರಾದ ಸೋಮೇಶ್ವರ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕ ಓದಿ ವಿಮರ್ಷೆ ಮಾಡಿದ್ದಾರೆ

#ಸೋಮೇಶ್ವರ್    ನಾನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಗೆ ಡಿಪ್ಲೋಮೋಗೆ ಹೋಗುವಾಗ ಸೋಮೆಶ್ವರ್ ಸಾಗರದ ಎಲ್.ಬಿ. ಕಾಲೇಜಿಗೆ ಬರುತ್ತಿದ್ದರು ನಮಗಿಬ್ಬರಿಗೂ ಸಮಾನ ಸ್ನೇಹ ಬಂದ ಉಂಟು ಮಾಡಿದವರು ನಂಜವಳ್ಳಿ ಮಲ್ಲಿಕಾರ್ಜುನ ಗೌಡರು.   ಆಗಲೇ ಸೋಮೇಶ್ವರ ಬರೆದ ಕಥೆಗಳು ಪ್ರಜಾವಾಣಿ, ಸುದಾಗಳಲ್ಲಿ ಪ್ರಕಟ ಆಗುತ್ತಿತ್ತು ಇವರ ತಂದೆ ಕೂಡ ಕೆಳದಿ ಮಠದಲ್ಲಿ ಸಲಹೆಗಾರರಾಗಿ ಸಹಕರಿಸಿದವರು.    ಸೋಮೇಶ್ವರ್ ಈಗ ಬೆಂಗಳೂರಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ ನನ್ನ ಮೊದಲ ಇತಿಹಾಸ ಆದರಿತ ಕಾಲ್ಪನಿಕ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ಅಭಿಪ್ರಾಯ ದಾಖಲಿಸಿದ್ದಾರೆ. #ಸೋಮೇಶ್ವರರ ವಿಮಷೆ೯ . ' ಸಾಧಾರಣ ಮಾನವನಲ್ಲಿರುವ ಅರಿವುರಹಿತತೆ ಎನ್ನುವುದು ಶೇಕಡಾ ೯೦% ರಷ್ಟು ಎನ್ನುವುದನ್ನು ಬದುಕು ಕ್ರಮೇಣ ಅರ್ಥವಾಗಿಸುತ್ತಾ ಹೋದಂತೆ, ವೈಯುಕ್ತಿಕವಾಗಿ, ಯಾವುದೇ ಮನುಷ್ಯರ, ರಾಜರ, ಅಧಿಕಾರಸ್ತರ, ರಾಜಕಾರಣಿಗಳ ಪೂರ್ವೇತಿಹಾಸ (ಚರಿತ್ರೆ), ನನ್ನ ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ತರಾಸುರವರ ಚಿತ್ರದುರ್ಗದ ಕುರಿತಾದ ಕೃತಿಗಳು, ಕೆ.ವಿ. ಅಯ್ಯರ್  ಅವರ ಶಾಂತಲೆಯನ್ನು ಸಹಾ ಅವುಗಳ ರೋಚಕ ಶೈಲಿಗಾಗಿಯೇ ಓದಿದವನು ನಾನು!!  ಆದರೆ.... ಪ್ರಿಯ ಅರುಣ್ ಪ್ರಸಾದ್, ಸಾಗರದ ಕಾಲೇಜಿನ ದಿನಗಳಿಂದ ನನಗೆ ಪರಿಚಿತರೂ ಗೆಳೆಯರೂ ಆದ ನೀವು, ಅಂದಿನಿಂದಲೂ ತುಂಬಾ ವಿಶೇಷ ಹಾಗೂ ಆಸಕ್ತಿದಾಯಕ ವ್ಯಕ್ತಿತ್ವ...