Skip to main content

Posts

Blog number 936. ಕೆರೆಹಿತ್ತಲು ಶಾಲೆಗೆ ಭೂದಾನ ಮಾಡಿದ ಗುಮ್ಮಿ ನಾಗಣ್ಣರ ಪುತ್ರಿ ಶ್ರೀಮತಿ ಜಯಮ್ಮ ರುದ್ರಪ್ಪ ನನ್ನ ಕಛೇರಿಗೆ ಕೃತಜ್ಞತೆ ತಿಳಿಸಲು ಬಂದಿದ್ದರು.

ತಂದೆಯ_ಬಗ್ಗೆ_ಹೆಣ್ಣುಮಕ್ಕಳ_ಪ್ರೀತಿ_ವರ್ಣಿಸಲು_ಸಾಧ್ಯವಾ? #ನಮ್ಮಊರಿನ_ಸಮೀಪದ_ಗುಮ್ಮಿನಾಗಣ್ಣರ_ಬಗ್ಗೆ_ಆನಂದಪುರಂ_ಇತಿಹಾಸದಲ್ಲಿ_ಉಲ್ಲೇಖ_ಮಾಡಿದ್ದೆ #ಕೃತಜ್ಞತೆ_ಹೇಳಲು_ಬೆಂಗಳೂರಿಂದ_ಬಂದ_ಅವರ_ಪುತ್ರಿ_ಜಯಮ್ಮ.    ಸಾಮಾಜಿಕ ಜಾಲ ತಾಣದ ವಿಸ್ಮಯದ ಬಗ್ಗೆ ಏನು ಹೇಳಲಿ? ನಿನ್ನೆ ಸಂಜೆ ನನ್ನ ಕಛೇರಿಗೆ ಬಂದವರು ಶ್ರೀಮತಿ ಜಯಮ್ಮ ಇವರು ಬಂದ ಉದ್ದೇಶ, ಇವರ ತಂದೆ ದಿವಂಗತ ಗುಮ್ಮಿ ನಾಗಣ್ಣ ಆನಂದಪುರಂ ಸಮೀಪದ ಆಚಾಪುರ ಗ್ರಾಮ ಪಂಚಾಯತ್ ನ ಕೆರೆಹಿತ್ತಲು ಗ್ರಾಮದಲ್ಲಿ ಊರಿನ ಪ್ರಾಥಮಿಕ ಶಾಲೆಗೆ ಬೆಲೆ ಬಾಳುವ ಜಮೀನು ದಾನ ಮಾಡಿದ್ದಾರೆ ಈ ಬಗ್ಗೆ ಒಂದು ಲೇಖನ ಆನಂದಪುರಂ ಇತಿಹಾಸ ಪುಸ್ತಕಕ್ಕಾಗಿ ಬರೆದಿದ್ದೆ (ಜನವರಿ 2023ರಲ್ಲಿ ಪುಸ್ತಕ ಬಿಡುಗಡೆ ಆಗಲಿದೆ) ಮತ್ತು ಅದನ್ನು ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದೆ ಇದನ್ನು ಓದಿದ ಇವರು ನನಗೆ ಕೃತಜ್ಞತೆ ಹೇಳಲು ಬಂದಿದ್ದರು.   ಗುಮ್ಮಿ ನಾಗಣ್ಣರ ಶಾಲಾ ಭೂಮಿ ದಾನದ ಲೇಖನ ಈ ಲಿಂಕ್ ಕ್ಲಿಕ್ ಮಾಡಿ ನೋಡಬಹುದು https://arunprasadhombuja.blogspot.com/se    ಗುಮ್ಮಿ ನಾಗಣ್ಣರ ಪುತ್ರಿ ಜಯಮ್ಮನವರು ಆನಂದಪುರಂನಲ್ಲೆ 5ನೇ ತರಗತಿಯಿಂದ ವ್ಯಾಸಂಗ ಮಾಡಿದವರು. ಇವರ ಪತಿ ರುದ್ರಪ್ಪನವರು ಬೆಂಗಳೂರಿನ ಅಕೌ೦ಟೆಂಟ್ ಜನರಲ್ (AG) ಆಫೀಸಿನ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ ಅವರು ನಮ್ಮ ಆನಂದಪುರಂ ಸಮೀಪದ ಅಂದಾಸುರದವರು.   ಇ...

Blog number 935. ದೇಶದ ಸ್ವಾತಂತ್ರ್ಯ ಮಹೋತ್ಸವದ ಬೆಳ್ಳಿಹಬ್ಬ, ಸುವಣ೯ ಮಹೋತ್ಸವ ಮತ್ತು ಈಗಿನ ಅಮೃತ ಮಹೋತ್ಸವದಲ್ಲಿ ನಾನು ಭಾಗಿಯಾದೆ ಎಂಬ ಹೆಮ್ಮೆ ಹಾಗೂ ಕಟ್ಟುನಿಟ್ಟಿನ ದ್ವಜ ಸಂಹಿತೆ ತಿದ್ದುಪಡಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಖ್ಯಾತ ಉದ್ದಿಮೆದಾರ ನವೀನ್ ಜಿಂದಾಲ್ ಗೆ ದೇಶವಾಸಿಗಳ ಸಲಾಂ .

#ದೇಶದ_ಪ್ರತಿ_ಮನೆ_ಮನದಲ್ಲಿ_ತ್ರಿವರ್ಣ #ಇದಕ್ಕಾಗಿ_ನ್ಯಾಯಾಲಯದಲ್ಲಿ_ಸುದೀರ್ಘ_ಹೋರಾಟ_ಮಾಡಿದ_ಉದ್ಯಮಿ_ನವೀನ್_ಜಿಂದಾಲ್ #ಸರ್ವೋಚ್ಚ_ನ್ಯಾಯಾಲಯದ_ಆದೇಶದಂತೆ_ದ್ವಜ_ಸಂಹಿತೆ_ಮಾರ್ಪಾಡು. #ಹಗಲು_ರಾತ್ರಿ_ತ್ರಿವರ್ಣಧ್ವಜ_ಹಾರಿಸಬಹುದು #ಯ೦ತ್ರದಲ್ಲಿ_ತಯಾರಿಸಿದ_ಪಾಲಿಯೆಸ್ಟರ್_ಉಣ್ಣೆ_ಬಟ್ಟೆಯ_ದ್ವಜ_ಬಳಸಬಹುದು #ದ್ವಜಕ್ಕೆ_ಅಗೌರವ_ಮಾಡಿದರೆ_ಮೂರು_ವರ್ಷ_ಜೈಲು_ದಂಡ_ಬದಲಾಗಿಲ್ಲ_ಎಚ್ಚರ. #ಸ್ವಾತಂತ್ರದ_ಬೆಳ್ಳಿಹಬ್ಬ_ಸುವರ್ಣಮಹೋತ್ಸವ_ಅಮೃತಮಹೋತ್ಸವಕ್ಕೂ_ನಾನು_ಸಾಕ್ಷಿ_ಆದ_ಹೆಮ್ಮೆ_ನನ್ನದು        ಗ್ರಾಮ ಪಂಚಾಯತ್, ಅಂಚೆ ಇಲಾಖೆ, ಬಿಜೆಪಿ ಪಕ್ಷ, ಕಾಂಗ್ರೇಸ್ ಪಕ್ಷಗಳು ತ್ರಿವರ್ಣ ಧ್ವಜಗಳನ್ನು ನಿಗದಿತ ಬೆಲೆಯಲ್ಲಿ ಮತ್ತು ರಾಜಕೀಯ ಪಕ್ಷಗಳು ಉಚಿತವಾಗಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆ ಮನೆಗಳಲ್ಲಿ ದ್ವಜ ಹಾರಿಸಲು ಅನುವು ಮಾಡುತ್ತಿದೆ.   ನಮ್ಮ ಮನೆಗೂ ಬೆಳಿಗ್ಗೆ ಒಂದು ದ್ವಜ ಉಚಿತವಾಗಿ ಕಾಂಗ್ರೇಸ್ ಪಕ್ಷದ ಮಾಜಿ ಸದಸ್ಯರಾದ ಅಮೀರ್ ಸಾಹೇಬರ ಮಗ ತಂದು ಕೊಟ್ಟಿದ್ದಾಗಿ ನಮ್ಮ ಸಿಬ್ಬಂದಿ ಕಣ್ಣೂರಿನ ನಾಗರಾಜ್ ತಿಳಿಸಿ ಅದನ್ನು ಮನೆ ಎದರು ಹಾರಿಸಲಾಗಿದೆ, ನಮ್ಮ ಹಳ್ಳಿಯ ಎಲ್ಲಾ ಮನೆಗಳ ಎದರೂ ರಾಷ್ಟ್ರ ಧ್ವಜ ಸಾಲಾಗಿ ಹಾರುತ್ತಿದೆ.    ನಮ್ಮ ಹಳ್ಳಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಮನೆಗಳು ಹೆಚ್ಚು ಎಲ್ಲರ ಮನೆಯ ಮೇಲೂ ತ್ರಿವರ್ಣ ಹಾರುತ್ತಿದ...

Blog number 934. ಕರ್ನಾಟಕ ರಾಜ್ಯ ಅಯ್ಯಪ್ಪ ಸ್ವಾಮಿ ಗುರುಸ್ವಾಮಿಗಳ ಸಂಘದ ಸ್ಥಾಪಕ ಅಧ್ಯಕ್ಷ ಶಿವಮೊಗ್ಗ ರೋಜಾ ಷಣ್ಮುಗಂ ಅವರಿಗೆ ಶ್ರದ್ಧಾಂಜಲಿಗಳು

#ಶಿವಮೊಗ್ಗದ_ರೋಜಾಷಣ್ಮುಗಂ_ಇನ್ನು_ನೆನಪು_ಮಾತ್ರ. #ಅಯ್ಯಪ್ಪಸ್ವಾಮಿಯ_ಪರಮಭಕ್ತ #ರಾಜ್ಯ_ಅಯ್ಯಪ್ಪಸ್ವಾಮಿ_ಗುರುಸ್ವಾಮಿಗಳ_ಸಂಘಟನೆ_ಮಾಡಿದ್ದಾರೆ. #ಇವತ್ತು_ಶಿವಮೊಗ್ಗನಂದನ್_ಹಾಕಿದ_ಪೋಸ್ಟನಿಂದ_ಗೊತ್ತಾಯಿತು #ಎರೆಡು_ವರ್ಷದ_ಹಿಂದೆ_ನನ್ನ_ಕಛೇರಿಗೆ_ಬಂದು_ಆಶ್ರೀವಾದ_ಮಾಡಿದ್ದರು. #ಶ್ರದ್ದಾಂಜಲಿಯೊಂದಿಗೆ_ಅವತ್ತಿನ_ನನ್ನ_ಲೇಖನ_ಇನ್ನೊಮ್ಮೆ https://arunprasadhombuja.blogspot.com/search?q=%E0%B2%B0%E0%B3%8B%E0%B2%9C%E0%B2%BE ರೋಜಾ ಷಣ್ಮುಗಂರ ನೆನಪಿನಲ್ಲಿ. #ಗುಲಾಬಿಹೂವಿನಂತಹ_ಮನಸ್ಸಿನ_ರೋಜಾಷಣ್ಮುಗಂ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಭದ್ರಾವತಿ ಮಹಾನಗರ ಪಾಲಿಕೆ ಹೊಸದಾಗಿ ರಚಿಸಿದಾಗ ಅವರ ನೀಲಿಗಣ್ಣಿನ ಹುಡುಗನOತಿದ್ದ ಮಲ್ಲಿಕಾಜು೯ನ ರಾವ್ ಮೇಯರ್ ಆಗಿ ನಾಮ ನಿದೆ೯ಶನ ಮಾಡಿದ್ದು ಇತಿಹಾಸ ಆಗ ಕಾಪೊ೯ರೇಟರ್ ಆಗಿ ರೋಜ ಷಣ್ಮುಗಂ ಕೂಡ ಆಯ್ಕೆ ಮಾಡಿದ್ದರು.   ರೋಜಾ ಸ್ವಾಮಿಯವರು punctual ಮತ್ತು ಶಿಸ್ತಿನ ವ್ಯಕ್ತಿತ್ವದವರು ಹಾಗಾಗಿ ಬಂಗಾರಪ್ಪರಿಗೆ ಇವರು ಅಚ್ಚುಮೆಚ್ಚು.   ನಂತರ ಆದ್ಯಾತ್ಮದ ಬಗ್ಗೆ ಹೆಚ್ಚು ಒಲವು ಕಾಲ ಮೀಸಲಿಟ್ಟರು ಈಗ ವಿಶ್ವಮಟ್ಟದಲ್ಲಿ ಪ್ರಖ್ಯಾತರಾಗಿರುವ #ರವಿಶಂಕರ್_ಗುರೂಜಿ ಆಗ ಶಿವಮೊಗ್ಗದಲ್ಲಿ ಇವರ ವೆಸ್ಪಾ ಸ್ಕೂಟರ್ ನಲ್ಲಿ ಇವರ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.    ಬೆಜ್ಜವಳ್ಳಿ ಅಯ್ಯಪ್ಪ ...

Blog number 933. ಗುಣವಂತೆಯ ಭಟ್ಟರ ಹೋಟೆಲಿನ ಅವಲಕ್ಕಿ ಮೊಸರಿನ ಸುಲಭ - ಸರಳ ರೆಸಿಪಿ,ಇದರ ರುಚಿಗೆ ಸೋಲದವರೇ ಇಲ್ಲ, ಕನ್ನಡದ ವರನಟ ರಾಜ್ ಕುಮಾರರಿಗೂ ಇದು ತುಂಬಾ ಇಷ್ಟವಾಗಿತ್ತು

ಗುಣವಂತೆಯ_ಭಟ್ಟರ_ಹೋಟೇಲಿನ_ಅವಲಕ್ಕಿ_ಮೊಸರಿಗೆ_ಸಾಟಿ_ಇಲ್ಲ. #ರಾಜಕುಮಾರ್_ಪಿದಾ_ಆಗಿದ್ದರು_ಇದಕ್ಕೆ #ಸರಳ_ರೆಸಿಪಿ_ಶ್ರೀಮಂತ_ರುಚಿ_ಬೆಲೆ_ಕಟ್ಟಲಾಗದ_ಆರೋಗ್ಯ. #ಸಾಗರದ_ಸಾಹಿತಿ_ಜಿ_ಎಸ್_ಭಟ್ಬರ_ಮ೦ಜೀಮಹಾದೇವನ_ಗಂಜೀಪುರಾಣದಲ್ಲೂ_ಉಲ್ಲೇಖ.   ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಾವರದಿಂದ ಭಟ್ಕಳ ಮಾರ್ಗದಲ್ಲಿ ಇಡಗು೦ಜಿ ಕ್ರಾಸಿಗಿಂತ ಮೊದಲು ಬಲ ಭಾಗದಲ್ಲಿ ಭಟ್ಟರ ಹೋಟೆಲ್ ಒಂದು ಇದೆ ಇದರ ಹೆಸರು ಗುರುಕೃಪಾ ಭಟ್ಟರ ಹೋಟೆಲ್, ಇಲ್ಲಿನ ವಿಶೇಷ ಖಾದ್ಯ ಅವಲಕ್ಕಿ ಮೊಸರು ಮಾತ್ರ ಜಗತ್ ಪ್ರಸಿದ್ಧ.    ಕನ್ನಡದ ವರನಟ ಡಾ.ರಾಜ್ ಕುಮಾರ್ ರವರೂ ಈ ಭಾಗದಲ್ಲಿ ಸಂಚರಿಸುವಾಗ ಈ ಹೋಟೆಲ್ ನ ಅವಲಕ್ಕಿ ಮೊಸರು ಸವಿಯದೆ ಹೋಗುತ್ತಿರಲಿಲ್ಲವಂತೆ.    ನಾನು 1986 ರಲ್ಲಿ ಈ ಹೋಟೆಲ್ ನ ಅವಲಕ್ಕಿ ಮೊಸರು ರುಚಿ ನೋಡಿದ್ದೆ ಈಗಲೂ ಈ ಬಾಗದಲ್ಲಿ ಸಾಗುವಾಗ ಈ ಅವಲಕ್ಕಿ ಮೊಸರು ಸವಿಯಲೇ ಬೇಕು.   ಈ ಅವಲಕ್ಕಿ ಮೊಸರ ರೆಸಿಪಿ ತುಂಬಾ ಸರಳ ದಪ್ಪ ಅವಲಕ್ಕಿ ನೀರಿನಲ್ಲಿ ತೊಳೆದು ನೀರು ಬಸಿದು ಅದಕ್ಕೆ ಗಟ್ಟಿ ಮೊಸರು ಸಕ್ಕರೆ ಸೇರಿಸುತ್ತಾರೆ ಅಷ್ಟೆ ಆದರೆ ಇದರ ರುಚಿ ಮಾತ್ರ ಅಮೋಘ ಇದು ಆರೋಗ್ಯಕ್ಕೆ ಒಳ್ಳೆಯದು.    ಮೊದಲಿನ ಈ ಭಟ್ಟರ ಹೋಟೆಲ್ ಈಗ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಹೊಸ ರೂಪದಲ್ಲಿ ಗುರುಕೃಪಾಭಟ್ಟರ ಹೋಟೆಲ್ ಆಗಿದೆ.   ಸಾಗ...

Blog number 932. ಗೆಳೆಯ ಹಾವೇರಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರೈತರ ಒಡನಾಡಿ ರಾಜೇಂದ್ರ ಹಾವೇರಣ್ಣ ವಿಧಾನಸಭಾ ಸದಸ್ಯರಾಗಲಿ ಎಂದು ಹಾರೈಸಿದೆ.

#ಹಾವೇರಿ_ಜಿಲ್ಲಾಪಂಚಾಯತ್_ಮಾಜಿ_ಅಧ್ಯಕ್ಷರು_ಹಾಲಿ_ಸದಸ್ಯರು. #ಜಿಲ್ಲಾ_ಬಿಜೆಪಿ_ಉಪಾದ್ಯಕ್ಷರು #ಕುರುಬ_ಸಮಾಜದ_ಯುವ_ಮುಂದಾಳು #ಗೆಳೆಯ_ರಾಜೇಂದ್ರಹಾವೇರಣ್ಣನವರು_ನನ್ನ_ಅತಿಥಿ #ಮುಂದಿನ_ವರ್ಷ_ಇವರು_ವಿಧಾನಸಭೆಗೆ_ಪ್ರವೇಶಿಸಲಿ_ಎಂದು_ಹಾರೈಸುತ್ತೇನೆ.    ರಾಜೇಂದ್ರ ಹಾವೇರಣ್ಣನವರು 2013ರಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಈಗಲೂ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ ಮತ್ತು ಹಾವೇರಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷರು.     ಇವರ ಕ್ಷೇತ್ರದಲ್ಲಿಯೇ ಕಾಗಿನೆಲೆ ಕನಕದಾಸರ ಹುಟ್ಟೂರು ಬಾಡಾ ಮತ್ತು ಕನಕದಾಸರ ಸಮಾದಿ ಸ್ಮಾರಕಗಳು ಇದೆ, ಕುರುಬ ಸಮಾಜ ಪರಿಶಿಷ್ಟ ಪಂಗಡದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.      ಸ್ವಾಮೀಜಿಗಳ ಆಪ್ತ ವಲಯದವರು ಈಗಿನ ಇನ್ನೊಂದು ಅವದಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗುವ ಅಥವ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ ಅಂತ ಹಾವೇರಿಯ ರಾಜಕೀಯ ವಲಯದಲ್ಲಿ ಸುದ್ದಿ ಇದೆ.    ರಾಜೇಂದ್ರ ಹಾವೇರಣ್ಣನವರು ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ವೀರ ಯೋದರು ಕೂಡ.   ಇವರು ತುಂಬಾ ಕಷ್ಟದಲ್ಲಿ ಮೇಲೆ ಬಂದವರು ಒಟ್ಟು ಕುಟುಂಬದಲ್ಲಿ 15 ಎಕರೆ ಜಮೀನು ಮತ್ತು ಒಂದು ಬೋರ್ ವೆಲ್ ನೀರಿದ್ದರೂ ಇಡೀ ಕುಟುಂಬ ಕೃಷಿಯಲ್ಲಿ ನಿರಾಸಕ್ತಿ ತೋರಿದ್ದರಿಂದ ಎಲ್...

Blog number 931. ಪ್ರಸಿದ್ದ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಬಣ್ಣ ಮಾಡುವುದು ಶಕುಂತಳಾ ಗುಡಿಗಾರ್ ಎಂಬ ಮಹಿಳೆ, ಸರ್ಪಸುತ್ತು ಕಾಯಿಲೆಗೆ ಆಸ್ಥಳದಲ್ಲಿ ಗರುಡ ಬಿಡಿಸಿ ಕಟ್ಟು ಚಿಕಿತ್ಸೆ ಮಾಡುವ ಇವರ ಕುಟುಂಬದ ವೈದ್ಯ ಪದ್ದತಿಯಲ್ಲೂ ಇವರು ಪ್ರಸಿದ್ದರು.

#ಗುಡಿಗಾರರೆಂಬ_ಶ್ರೀಗಂದದ_ಕೆತ್ತನೆಗಾರರು. #ಜಡೆ_ಊರಿಂದ_ಕುರುಬರಲಿ೦ಗಣ್ಣ_ಮತ್ತು_ಪುತ್ತೂರಾಯರು_ಸಾಗರಕ್ಕೆ_ಕರೆತಂದ_ಅಣ್ಣಪ್ಪಗುಡಿಗಾರ_ಕುಟುಂಬ #ಶ್ರೀಗಂದವೇ_ಇಲ್ಲದ_ಈ_ಕಾಲದಲ್ಲಿ_ತಮ್ಮ_ಕುಲಕಸಬು_ಬಿಡುತ್ತಿರುವ_ಗುಡಿಗಾರರು #ಇಪ್ಪತ್ತೈದು_ವರ್ಷದ_ಹಿಂದೆ_ಅಣ್ಣಪ್ಪಗುಡಿಗಾರರ_ಮಗ_ದೇವಿಪ್ರಸಾದಗುಡಿಗಾರರ_ಬಗ್ಗೆ_ಪತ್ರಿಕೆಗಳಲ್ಲಿ_ಲೇಖನ_ಬರೆದಿದ್ದೆ #ದೇವಿಪ್ರಸಾದಗುಡಿಗಾರರ_ಮರಣ_ನಂತರ_ಕುಟುಂಬದ_ಹೊಣೆ_ಹೊತ್ತ_ಅವರ_ಸಹೋದರಿ_ಶಕುಂತಲಾಗುಡಿಗಾರ್ #ಪ್ರಸಿದ್ಧ_ಸಾಗರದ_ಮಾರಿಕಾಂಬೆ_ಜಾತ್ರೆಯಲ್ಲಿ_ದೇವರ_ವಿಗ್ರಹಕ್ಕೆ_ಬಣ್ಣ_ಮಾಡುವ_ಶಕುಂತಲಾಗುಡಿಗಾರ್_ಎಂಬ_ಸಾಹಿಸಿ. #ಸಪ೯ಸುತ್ತು_ಕಾಯಿಲೆಗೆ_ಬಣ್ಣದಿಂದ_ಗರುಡ_ಬಿಡಿಸಿ_ಕಟ್ಟು_ಮಾಡುವ_ಇವರ_ವಂಶಪಾರಂಪರ್ಯ_ಚಿಕಿತ್ಸೆ    ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಒಂದು ಕಾಲದಲ್ಲಿ ಶ್ರೀಗಂದದ ಮರದ ವಿಗ್ರಹಗಳ ಕೆತ್ತನೆಗಾರರಿಗೆ ಕೈ ತುಂಬಾ ಕೆಲಸ ಅವರು ಕೆತ್ತಿದ ವಿಗ್ರಹಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ.   ಸುವಾಸನೆಯ ಶ್ರೀಗಂದದ ಬಗ್ಗೆ ಗಾದೆಯೂ ಇದೆ "ಸಗಣಿಯವನ ಕೈಯಲ್ಲಿ ಗುದ್ದಾಡುವುದಕ್ಕಿಂತ ಗಂದದವನ ಕೈಯಲ್ಲಿ ಗುದ್ದಾಡುವುದು ಲೇಸು" ಅಂತ ಇದರ ಗೂಡಾರ್ಥ ಏನೇ ಇರಲಿ ಇದು ಶ್ರೀಗಂಧದ ಶ್ರೇಷ್ಟತೆ ಹೇಳುತ್ತದೆ.    ಆದರೆ ಈಗ ಶ್ರೀಗಂದ ವಿರಳ, ಅರಣ್ಯದಲ್ಲಿನ ಶ್ರೀಗಂದ ಇಲ್ಲವೇ ಇಲ್ಲ, ಸರ್ಕಾರದಲ್ಲಿ ಕೂಡ ಬೇಕಾದಷ್ಟು ಶ್ರೀ...

Blog number 930.ಸ್ವಾಮಿಮಾನಿ ರಾಷ್ಟ್ರಾಭಿಮಾನಿ ಕನ್ನಡಿಗರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಗೆ ಕನ್ನಡದ ಉದ್ಘೋಷಣೆ " ಪ್ರತಿ ಮನೆ ಮನಗಳಲ್ಲಿ ತ್ರಿರಂಗ"

#ಸ್ವಾಭಿಮಾನಿ_ದೇಶಪ್ರೇಮಿ_ಕನ್ನಡಿಗರಿಗಾಗಿ #ಹರ್_ಘರ್_ತಿರಂಗ  #ಹಿಂದಿಯಲ್ಲಿ #ಕನ್ನಡದಲ್ಲಿ #ಪ್ರತಿ_ಮನೆ_ಮನದಲ್ಲಿ_ತ್ರಿವರ್ಣ   ಸ್ವಾತಂತ್ರ್ಯದ ಅಮೃತ ಮಹೋತ್ಸವ (75 ನೇ ಆಚರಣೆ) ಯಲ್ಲಿ ದೇಶದಾದ್ಯಂತ ಹಿಂದಿ ಭಾಷೆಯಲ್ಲಿ ಆಕರ್ಷಕ ಹರ್ ಘರ್ ತಿರ೦ಗ ಘೋಷಣೆಯೊಂದಿಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಅನುವಾಗುವಂತೆ ಕೇಂದ್ರ ಸಕಾ೯ರ ದ್ವಜ ಸಂಹಿತೆಯಲ್ಲಿ ಅವಕಾಶ ನೀಡುವ ಮಾರ್ಪಾಟು ಮಾಡಿದೆ.   ರಾಜ್ಯದಲ್ಲಿ ಹಿಂದಿ ಘೋಷಣೆ ಏಕೆ ಬೇಕು? ಎಂದು ವಿರೋದವೂ ವ್ಯಕ್ತಪಡಿಸುತ್ತಿದ್ದಾರೆ ಆದರೆ ಕನ್ನಡದಲ್ಲಿ ಹಿಂದಿ ವಾಕ್ಯದ ಬಾವಾರ್ಥದ ವಾಕ್ಯ ಇಲ್ಲಿ ಹಾಕಿದ್ದೇನೆ.   ರಾಷ್ಟ್ರ ದ್ವಜ - ರಾಷ್ಟ್ರೀಯತೆಯ ಬಗ್ಗೆ ಅಪಾರ ಅಭಿಮಾನ ಇರುವ ಸ್ವಾಭಿಮಾನಿ ಕನ್ನಡಿಗರು ಇದನ್ನು ಬಳಸಬಹುದು ರಾಜ್ಯ ಸರ್ಕಾರವೂ ಕೂಡ.  #ಪ್ರತಿ_ಮನೆ_ಮನದಲ್ಲೂ_ತ್ರಿವರ್ಣ