Skip to main content

Posts

Blog number 840.ಶೃಂಗೇಷರ ಜನ ಹೋರಾಟ ದಿನಪತ್ರಿಕೆ ಮತ್ತು ಪ್ರಿ೦ಟಿಂಗ್ ಉದ್ಯಮದ ಸ್ವಂತದ್ದಾದ ನೂತನ ಕಟ್ಟಡದ ಕಛೇರಿ ಬೇಟಿ ನಿನ್ನೆ ಪುಟ್ಟಯ್ಯರೊಂದಿಗೆ

#ನಿನ್ನೆ_ಶೃಂಗೇಷರ_ನೂತನ_ಕಛೇರಿ_ಬೇಟಿ #ಹಿರಿಯರಾದ_ಸಮಾಜವಾದಿ_ಪುಟ್ಟಯ್ಯರೊಂದಿಗೆ #ಲೇ_ಔಟ್_ಮಾಲಿಕರಾದ_ಕಿಣಿರಾಯರು_ಜೊತೆಯಲ್ಲಿ.   ಪ್ರತಿಯೊಬ್ಬ ಉದ್ಯಮಿಯ ಕನಸು ತನ್ನ ಉದ್ಯಮ ಸ್ವಂತ ಕಟ್ಟಡದಲ್ಲಿ ಪ್ರಾರಂಬಿಸುವ ಕನಸು, ಗಟ್ಟಿ ತನ್ನ ಎರೆಡೂ ಕಾಲೂರಿ ಉಸಿರುಗಟ್ಟಿ ಸ್ವಯಂ ಉದ್ಯೋಗ ಮಾಡಿದರೂ ಕನಸು ನನಸಾಗಲು ಕಾಲವೇ ನಿಧ೯ರಿಸುವ ತನಕ ಈಡೇರುವುದಿಲ್ಲ.   ಸುಮಾರು 27 ವರ್ಷದ ಸತತ ಪರಿಶ್ರಮದಿಂದ ಶೃಂಗೇಶ್ ಈಗ ಹೊಸ ಕಟ್ಟಡದಲ್ಲಿ ಅವರ ಪತ್ರಿಕೆ ಮತ್ತು ಪ್ರಿಂಟಿಂಗ್ ಉದ್ಯಮ ಪ್ರಾರಂಬಿಸಿದ್ದಾರೆ, ಸ್ವಂತ ಜಾಗ ಕಟ್ಟಡಗಳು ಈಗ ಬ್ಯಾಂಕ್ ಸಾಲದ ಸಹಾಯದಿಂದ ಸುಲಭವಾದರು ಪ್ರತಿ ತಿಂಗಳು ಸಾಲದ ಮರುಪಾವತಿಯ ಕಂತು ಕಟ್ಟುವುದು ಸುಲಭವಲ್ಲ.   ಉದ್ಘಾಟನ ದಿನ ಹೋಗಲಾಗಲಿಲ್ಲ, ಪುಟ್ಟಯ್ಯನವರೂ ಒಟ್ಟಿಗೆ ಹೋಗೋಣ ಎಂದಿದ್ದರಿಂದ ನಿನ್ನೆ ಇಬ್ಬರೂ ಹೋಗಿದ್ದೆವು, ಹಿರಿಯರಾದ ಪುಟ್ಟಯ್ಯನವರು ಶೃಂಗೇಷರಿಗೆ ಶಾಲು-ಹಾರ - ಪೇಟದೊಂದಿಗೆ ಶುಭ ಹಾರೈಸಿದರು.   ನಾನು ಶಾಲು ಮತ್ತು ರಾಧಕೃಷ್ಣರ ನೆನಪಿನ ಪ್ರತಿಮೆ ನೀಡುವ ಮೂಲಕ ಶುಭ ಹಾರೈಕೆ ಮಾಡಿದೆ.    ಈ ಸಂದರ್ಭದಲ್ಲಿ ಈ ಲೇಔಟ್ ನ ಮಾಲಿಕರಾದ ಕಿಣಿಯವರ ಬೇಟಿ ಮತ್ತು ಪರಿಚಯ ಆಯಿತು, ಅತ್ಯಂತ ಚುರುಕು ಸ್ವಬಾವದ ನೇರ ನಡೆ ನುಡಿಯ ಅವರ ಪರಿಚಯ ಈ ಸಂದರ್ಭದ ವಾತಾವರಣ ಇನ್ನೂ ಸುಂದರಗೊಳಿಸಿತ್ತು.    ಭಾಷಾರ ಕ್ಯಾಂಟೀನ್ ನಿಂದ ತರಿಸಿದ  ಕಾಫಿ ಕುಡಿದ...

Blog number 839.ಕಳೆ ಅಂತ ಬಾವಿಸಿದ್ದ ವಡೇಲಿಯಾ ಟ್ರಿಲೋಬಾಟ ಪ್ರಕೃತಿ ತಾನಾಗಿ ಬೆಳೆಸಿದ ಹೊಸ ತಳಿ, ಇದರ ಉಪಯೋಗದ ಬಗ್ಗೆ ರೈತ ಸಮುದಾಯದಲ್ಲಿ ಆರೋಗ್ಯಕರ ಚಚೆ೯ ಪ್ರಾರಂಭ ಆಗಿದೆ

#ವಡೇಲಿಯಾ_ಟ್ರಿಲೋಬಾಟ #ಪ್ರಕೃತಿ_ತಾನಾಗಿ_ಬೆಳೆಸಿದ_ಹೊಸ_ತಳಿ #ಕಳೆನಾ_ಅಥವ_ಉಪಯುಕ್ತ_ಬೆಳೆನಾ  #ಅಡಿಕೆ_ಬೇರುಹುಳಕ್ಕೆ_ಇದು_ಔಷದಿಯಾ #ಕೋಳಿಗಳಿಗೆ_ಬಲು_ಪ್ರೀತಿ_ಇದು.   ನಮ್ಮ ವಿಕ್ಟೋರಿಯಾ ಕಾಟೇಜ್ ನ ಗಾರ್ಡನ್ ನಲ್ಲಿ ತೆಂಗಿನ ಮರಗಳಿಗೆ ಸ್ಥಳಿಯ ಜಂಬಿಟ್ಟಿಗೆ ಕಲ್ಲಿನಿಂದ ವೃತ್ತಾಕಾರದ ಕಲ್ಲಿನ ಕಟ್ಟಿ ಕಟ್ಟಿ ಅದರಲ್ಲಿ ಮರಳು ತುಂಬಿದ್ದೇನೆ (ಮಣ್ಣಿದ್ದರ ತೆಂಗಿನ ಮರದ ಬೇರು ಬಿಡುತ್ತದೆಂದು.   ಈ ಕಟ್ಟೆಯ ಸುತ್ತಾ ಈ ವಡೇಲಿಯಾ ಟ್ರಿಲೋಬಾಟ (wadelia trilobata) ಎಂಬ ಬೊಟಾನಿಕಲ್ ಹೆಸರಿನ, ಚಿಕ್ ಪೀ ಅಂತೆಲ್ಲ ಕರೆಯುವ ಇದನ್ನು ನಮ್ಮ ಆತ್ಮೀಯ ಕೆಲಸಗಾರ ಮಿತ್ರ #ಕಣ್ಣೂರಿನ_ನಾಗರಾಜ್ ನಾಟಿ ಮಾಡಿದ್ದರು.    ಇದು ಹುಲುಸಾಗಿ ಬೆಳೆದು ಹಳದಿ ಹೂ ಬಿಟ್ಟಿದೆ ಮತ್ತು ಈ ತೆಂಗಿನ ಮರದ ಕಟ್ಟೆಗೆ ಸುಂದರವಾದ ಲುಕ್ ಕೊಟ್ಟಿದೆ.   ಇತ್ತೀಚಿಗೆ ಇದನ್ನು ನೋಡಿದ ಪ್ರಸಿದ್ಧ ಜಲ ತಜ್ಞ, ಕಾಡಿನ ವಿಜ್ಞಾನಿ ಶಿವಾನಂದ ಕಲವೆ ಇದು ಬೆಳೆಯುವ ಹರಡುವ ಕ್ಷಿಪ್ರತೆಯ ಬಗ್ಗೆ ತಿಳಿಸಿದಾಗಲೇ ಗೊತ್ತಾಗಿದ್ದು.   ಇದರ ಬೀಜ ಪ್ರಸಾರ ಮತ್ತು ವೇಗವಾಗಿ ಹರಡುವುದರಿಂದ ಇದೊಂದು ನಿವಾರಿಸಲು ಕಷ್ಟಸಾಧ್ಯವಾದ ಹೊಸ ರೀತಿಯ ಕಳೆ ಎಂದೇ ಬಾವಿಸಲಾಗಿದೆ ಇದರ ಸುಂದರ ನೋಟ ಇದನ್ನು ಕಿತ್ತು ತೆಗೆಯಲಾಗಲಿಲ್ಲ.   ಮೊನ್ನೆ FB ಯಲ್ಲಿ #ಕಿಲಾರ_ಸತೀಷ್_ಹೆಗ್ಗಡೆ ಇದರ ಬಗ್ಗೆ ಉಲ್ಲೇಖಿಸ...

Blog number 838. ಕೆ.ಟಿ.ಗಟ್ಟಿಯವರ ಕಾದಂಬರಿ ಕಾಮು೯ಗಿಲು ಗೆ ಪ್ರೇರಣೆ ಆದದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಠದ ವ್ಯಾಪ್ತಿಯ ಅಂತರ್ದಮಿ೯ಯ ಪ್ರೇಮ ಕಥೆ, ಕೋಣಂದೂರು ವೆಂಕಪ್ಪ ಗೌಡರು ತಮ್ಮ ಅಳಿಯನನ್ನು ಹೀರೋ ಮಾಡಿ ಸಿನಿಮಾ ಮಾಡಿದರು, ನಾನು ಈ ನಿಜ ಕಥೆಯ ನಿಜ ಹೀರೋ ಅವರಿಗೆ ಬೇಟಿ ಮಾಡಿಸಿದ್ದ ಈ ಘಟನೆ !?

#ನಮ್ಮ_ಜಿಲ್ಲೆಯ_ಸಾಹಿತಿ_ಕೋಣಂದೂರು_ವೆಂಕಪ್ಪಗೌಡರು_ಸಿನಿಮಾ_ಮಾಡಿದ್ದು #ಕೆ_ಟಿ_ಗಟ್ಟಿಯವರ_ಕಾದಂಬರಿ_ಕಾರ್ಮುಗಿಲು #ಇದು_ಮಲೆನಾಡಿನ_ಸತ್ಯಘಟನೆ_ಆದಾರಿತ_ಕಾದಂಬರಿ #ಸತ್ಯಘಟನೆ_ಆ_ಕಾಲದಲ್ಲಿ_ಪ್ರಜಾವಾಣಿಯಲ್ಲಿ_ಪ್ರಕಟವಾಗಿ_ಸೆನ್ಸೇಷನಲ್_ನ್ಯೂಸ್_ಆಗಿತ್ತು. #ಈ_ಘಟನೆಯ_ನಿಜ_ಹೀರೋ_ಸಿನಿಮಾ_ನಿರ್ಮಾಪಕರಿಗೆ_ಬೇಟಿ_ಮಾಡಿಸಿದ್ದೆ.   ಕೋಣಂದೂರು ವೆಂಕಪ್ಪ ಗೌಡರು ಸಮಾಜವಾದಿ ಸಾಹಿತಿಗಳು, ಶಾಂತವೇರಿ ಗೋಪಾಲಗೌಡರ ಆತ್ಮಚರಿತ್ರೆ "ಜೀವಂತ ಜ್ವಾಲೆ", ಕೆಂಗಲ್ ಹನುಮಂತಯ್ಯ, ದೇವರಾಜ ಅರಸರು, ಜೆ.ಹೆಚ್.ಪಟೇಲರ , ಹುಚ್ಚು ಮಾಸ್ತಿ ಗೌಡರು, ದೇಶದ ಪ್ರಧಾನ ಮಂತ್ರಿ ದೇವೇಗೌಡರ ಆತ್ಮಚರಿತ್ರೆ ಬರೆದವರು.  ಇವರಿಂದಲೇ ನಮ್ಮ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಆತ್ಮಚರಿತ್ರೆ ಕೋಣಂದೂರು ವೆ೦ಕಪ್ಪ ಗೌಡರಿಂದ ಬರೆಸಿ ಪ್ರಕಟಿಸಿದ್ದರಿಂದ ನನ್ನ ಮತ್ತು ಕೋಣಂದೂರು ವೆಂಕಪ್ಪ ಗೌಡರ ಆತ್ಮೀಯತೆ ಹೆಚ್ಚಾಯಿತು.   ಗಣಪತಿಯಪ್ಪರ ಆತ್ಮಚರಿತ್ರೆ ಸತ್ಯ ಘಟನೆ ಹಸಿ ಹಸಿಯಾಗಿ ಗೌಡರು ಬರೆದಿದ್ದರಿಂದ ಅನೇಕ ತೊಂದರೆ, ಅಡೆತಡೆ ನಾವೆಲ್ಲ ಅನುಭವಿಸಿದೆವು.   ಬೆಂಗಳೂರಿಂದ ಶಿವಮೊಗ್ಗಕ್ಕೆ ಅಥವ ಅವರ ಹುಟ್ಟೂರು ಕೊಣಂದೂರಿಗೆ ಬರುವಾಗ ಆನಂದಪುರಂನ ನನ್ನ ಮನೆಗೆ ಅತಿಥಿ ಆಗಿ ಬಂದು ಉಳಿಯುವ ಸಲಿಗೆ ಅವರಿಗಿತ್ತು.   ಇವರ ಜೀವನದಲ್ಲಿ ಒಂದು ದುರ೦ತ ನಡೆಯುತ್ತದೆ ಶಾಂತವೇರಿ ಗೋಪಾಲಗೌಡರು ವಿವಾಹ ಆದಾಗ ನೂತನ...

Blog number 837. ಕುಡುಕರು ಬೇರೆ ಕುಡಿಯೋರು ಬೇರೆ ಅಂದಿದ್ದ ಜೆ.ಹೆಚ್.ಪಟೇಲರ ತರ್ಕ

#ಕುಡುಕರಿಂದ_ಕುಡಿಯೋರ_ಮಯಾ೯ದೆ_ಹೋಗ್ತಾ_ಇದೆ#                      - ಜೆ.ಹೆಚ್.ಪಟೇಲರು           ಶಿವಮೊಗ್ಗದಲ್ಲಿ ಮಿತ್ರರೊವ೯ರ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.          ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.          ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.             ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಂ ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರಂತೆ ಅದನ್ನ ಇವರೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಿಲ್ಲವಂತೆ, ಆಗ ಮೊಬೈಲ್ ಇಲ್ಲ ಪಟೇಲರಿಗೆ ಕ...

Blog number 836, ಇವತ್ತು ಎಳೆ ಹಲಸಿನ ಕಾಯಿಯಿಂದ ಮಾಡಿದ ಬಿರಿಯಾನಿ ಯಾವ ಮಟನ್ ಬಿರಿಯಾನಿಗೂ ಕಡಿಮೆ ಇರಲಿಲ್ಲ.

#ಈಗ_ಹಲಸಿನ_ಕಡಿ_ಸೀಸನ್ . #ಇವತ್ತು_ಹಲಸಿನ_ಕಡಿಯ_ಬಿರಿಯಾನಿ. #ವಿಶ್ವದಾದ್ಯಂತ_ಪ್ರೋಜನ್‌_ಟೆಂಡರ್_ಜಾಕ್_ಪ್ರೊಟ್_ಹೊಸ_ಶಕೆ_ಪ್ರಾರಂಭ_ಆಗಿದೆ. #ಅಮೇಜಾನ್_300_ಗ್ರಾಂ_ಹಲಸಿನ_ಕಡಿ_ಹೋಳು_180_ರೂಪಾಯಿಗೆ_ಮಾರುತ್ತಿದೆ. #ವೀಗನ್_ನವರಿಗೆ_ಮಾಂಸದ_ಪರ್ಯಾಯ.   ನಮ್ಮ ಮನೆ ಹಿತ್ತಿಲಲ್ಲಿ ನಮ್ಮ ತಂದೆ ನೆಟ್ಟಿದ್ದ ಹಲಸಿನ ಮರ ಬುಡದಿಂದಲೇ ಎರೆಡು ಮರವಾಗಿ ಬೆಳೆದಿದೆ, ಇದರ ಎಲೆ ನಿತ್ಯ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಗೆ ಹಲಸಿನ ಎಲೆ ಕೊಟ್ಟೆ ಕಡುಬಿಗೆ ಬಳಕೆ ಮಾಡುತ್ತೇವೆ, ನಿನ್ನೆ ವಾಕಿಂಗ್ ಮಾಡುವಾಗ ಅದರಲ್ಲಿದ್ದ ಎರೆಡು ಎಳೆ ಹಲಸಿನ ಕಡಿಗಳು ತಂದಿದ್ದೆ.   ಇವತ್ತು ಇದರಿಂದ ಮಾಡಿದ ಬಿರಿಯಾನಿ ಮಾತ್ರ ಸೂಪರ್, ಮಟನ್ ಬಿರಿಯಾನಿ ಮೀರಿಸುವಂತಾ ರುಚಿ, ಸ್ವಾದ ಮತ್ತು ಆರೋಮ ಹಲಸಿನ ಕಡಿಯಲ್ಲಿದೆ.   ಮಾಂಸಹಾರದ ಬಿರಿಯಾನಿ ಮಾಡಿದಂತೆಯೇ ಹಲಸಿನ ಕಡಿ ಕತ್ತರಿಸಿ ಮೊಸರು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಪುಡಿ ಮತ್ತು ಉಪ್ಪಿನೊಂದಿಗೆ ಅರ್ದ ಗಂಟೆ ಮ್ಯಾರಿನೇಟ್ ಮಾಡಿ ನಂತರ ತುಪ್ಪದಲ್ಲಿ ಚೆನ್ನಾಗಿ ರೋಸ್ಟ್ ಆಗಿ ಹುರಿದು ನಂತರ ನಿಮ್ಮದೇ ರೀತಿಯಲ್ಲಿ ಬಿರಿಯಾನಿ ಮಾಡದರೆ ಆಯಿತು ಇದು ಸುಲಭ ಕೂಡ, ಇದರಲ್ಲೇ ದಂ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ಲಕ್ನೋ ಬಿರಿಯಾನಿ, ಸಿಂಪಲ್ ಬಿರಿಯಾನಿ ಎಲ್ಲಾ ಮಾಡಬಹುದು.   ವಿಶ್ವದಾದ್ಯಂತ ವೀಗನ್ (ಪ್ರಾಣಿಜನ್ಯ ಯಾವು...

Blog number 835,ಅವದೂತರಾದ ಸಖರಾಯಪಟ್ಟಣದ ವೆಂಕಟಚಲಪತಿಗಳ ಸಮಾದಿ ದರ್ಶನ ಸಾಧ್ಯವಾಗಿಲ್ಲ ಆದರೆ ಅವರ ದಿವ್ಯ ದರ್ಶನ ಆಗುತ್ತಿರುವ ಈ ಪರಿ ಮರೆಯಲುಂಟೆ?

#ಇದನ್ನ_ಕಾಕತಾಳಿಯ_ಅಥವ_ಟೆಲಿಪತಿ_ಅನ್ನಬಹುದಾ? #ಸಖರಾಯಪಟ್ಟಣದ_ವೆಂಕಟಚಲಪತಿ_ಅವದೂತರ_ಪುಸ್ತಕ_ನೀಡಿದಾಗ #ಜಿಗಳೆಮನೆ_ಗಣಪತಿ_ಭಟ್ಟ_ದಂಪತಿಗಳು_17_ಮಾರ್ಚ್_2019_ರಂದು_ಬಂದಾಗ. #ಇವತ್ತು_ಸಖರಾಯಪಟ್ಟಣದ_ಗುರುಕುಲದಿಂದ_ಡಾಕ್ಟರ್_ಸಂತೋಷ್_ಹೆಬ್ಬಾರ್_ಪೋನಾಯಿಸಿದಾಗ_ನೆನಪು_ಮಾಡಿದ_ಘಟನೆ.   ಇವತ್ತು ಬೆಳಿಗ್ಗೆ ಸಖರಾಯಪಟ್ಟಣದ ಗುರುಕುಲದ ಡಾಕ್ಟರ್ ಸಂತೋಷ್ ಹೆಬ್ಬಾರರು ಗುರುಕುಲದಲ್ಲಿ ವೆಂಕಟಾಚಲಪತಿ ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಆನಂದಪುರಂನಲ್ಲಿ ಉತ್ತಮ ಗುಣಮಟ್ಟದ ಜಂಬಿಟ್ಟಿಗೆ ಕಲ್ಲು ಸಿಗಬಹುದಾ ಎಂದು ವಿಚಾರಿಸಲು ಪೋನ್ ಮಾಡಿದ್ದರು ಅವರಿಗೆ ನನ್ನ ಸಂಪರ್ಕದ ನಂಬರ್ ನೀಡಿದವರು ಶಿವಮೊಗ್ಗದ ADC ನಾಗೇಂದ್ರ ಹೊನ್ನಾಳಿಯವರು ಇವರೂ ದತ್ತರ ಭಕ್ತರು.  ಬಹಳ ವರ್ಷದಿಂದ ಸಖರಾಯಪಟ್ಟಣದ ಅವದೂತರ ಸಮಾದಿ ಸಂದರ್ಶಿಸಲು ಸಾಧ್ಯವಾಗಿಲ್ಲ ಆದರೆ ಅವದೂತರು ಈ ರೀತಿ ದರ್ಶನ ನೀಡುತ್ತಿದ್ದಾರೆ, ನಮ್ಮ ಊರಿನ ಜಂಬಿಟ್ಟಿಗೆ ಕಲ್ಲು ಸರಬರಾಜುದಾರರಿಗೆ ವಿನಂತಿ ಮಾಡಿದರೆ ನಾಲ್ಕು ಸಾವಿರ ಕಲ್ಲು ಒಟ್ಟು ಮಾಡಿಕೊಡುವುದು ಕಷ್ಟವಿಲ್ಲ ಆದರೆ ಅವದೂತರಿಗೆ ಸೇವೆಗೆ ಅವರಿಗೆ ಮನಸ್ಸು ಬರಬೇಕಷ್ಟೆ.   ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಅಲ್ಲಿಯ ಗುರುಕುಲದಲ್ಲಿ ವ್ಯಾಸಂಗ ಮಾಡಿ ಉದ್ಯೋಗದಲ್ಲಿರುವ ವಿದ್ಯಾರ್ಥಿ ಎರೆಡು ಕೋಟಿ ಮೌಲ್ಯದ ಜಮೀನು ದಾನ ನೀಡಿದ್ದಾರೆ ವಿಶೇಷ ಅಂದರೆ ವಿದ್ಯಾರ್ಥಿ ಮುಸ್ಲಿಂ ದಮಿ೯ಯ ಅಂತೆ.    ಈ ಸ...

Blog number 834.ಅನಾಥ ಹೆಣ್ಣು ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮೂಲಕ ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮುಂದಾಗಬೇಕು.

#ಭಾನುವಾರ_ಸಂತಾನಹರಣ_ಶಸ್ತ್ರ_ಚಿಕಿತ್ಸೆ_ಆದವರು. #ಇವತ್ತು_ಲವಲವಿಕೆಯಲ್ಲಿ #ಇವುಗಳ_ಆಪರೇಷನ್_ಸ್ವತಃ_ನೋಡಿದ್ದೆನಾದ್ದರಿಂದ_ಇವುಗಳ_ಚೇತರಿಕೆ_ಕುತೂಹಲ.       ಭಾನುವಾರ ನಾಲ್ಕು ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಹೃದಯಿ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದರು ಇದರ ನೇತೃತ್ವವನ್ನು ಜಿಲ್ಲೆಯ ಹಿರಿಯ ಸಮಾಜವಾದಿ ಒಂದು ಕಾಲದಲ್ಲಿ ಮಲ್ನಾಡಳ್ಳಿಯ ಕಿರಿಯ ಸ್ವಾಮಿ ಸ್ಥಾನ ನಿರಾಕರಿಸಿದ ನಿಜ ಸನ್ಯಾಸಿಗಳಾದ ಪ್ರಕೃತಿ ಪಿ. ಪುಟ್ಟಯ್ಯನವರು ಮತ್ತು ಅವರ ಜೊತೆಯಾಗಿ ಬಂದವರು ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಆದ ತೀ.ನಾ. ಶ್ರೀನಿವಾಸ್.   ಇವರೆಲ್ಲರ ಪ್ರಾಣಿ ದಯಾ ಹೃದಯದಿಂದ ಇದೆಲ್ಲ ಯಶಸ್ವಿ ಆಯಿತು,ಇವೆಲ್ಲವೂ ನಾಲ್ಕು ರಸ್ತೆ ಸೇರುವ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಹೆಣ್ಣು ನಾಯಿ ಅಂತ ಕಣ್ಣು ಬಿಡುವ ಮೊದಲೆ ಕಟುಕ ಮನಸ್ಸಿನವರು ಬಿಟ್ಟು ಹೋದವು.   ಈ ಅನಾಥವಾದ ನಾಯಿಗಳು ಅಪಘಾತದಿಂದ ಕಾಲು, ಸೊಂಟ ಮುರಿದುಕೊಂಡಾಗೆಲ್ಲ ಅವುಗಳ ಇಲಾಜಿಗೆ ನಮ್ಮಲ್ಲಿ ಸೇರಿಕೊಂಡವು.   ಇವುಗಳ ಆಪರೇಷನ್ ಸ್ವತಃ ನೋಡಿದ್ದರಿಂದ ಮನಸ್ಸು ಒಂದು ರೀತಿ ಆತಂಕಕ್ಕೆ ಒಳಗಾಗಿತ್ತು, ಅನೆಸ್ತಿಯಾದಿಂದ ಪ್ರಜ್ಞೆ ಬರಲು ಸಮಯ ತೆಗೆದುಕೊಂಡಿದ್ದು ನಂತರವೂ ನೋವು ನಿದ್ರಾವಸ್ಥೆಯಲ್ಲೇ ಇದ್ದವು.   ಮರುದಿನ ಆಂಟಿ ಬಯೋಟಿಕ್ ಮಾತ್ರೆ, ಸ್ವಲ್ಪ ಆಹಾರ ಸೇವಿಸಿದರೂ ಅವುಗಳ ಕಳಾಹೀನ ಮುಖ ಅವುಗಳ...