Skip to main content

Posts

ಮ್ಯಾನ್ಯೂಯಲ್ ಕ್ಲಿಪ್ಪರ್ ಎಂಬ ಜೈಲಿನ ಬಂದಿಗಳಿಗೆ ಮತ್ತು ಸೈನ್ಯದ ಸೈನಿಕರಿಗೆ ಕ್ಷೌರಕ್ಕಾಗಿ ಬಳಸುತ್ತಿದ್ದ ಕೂದಲು ತೆಗೆಯುವ ಕೈ ಕಟಿಂಗ್ ಮೆಷಿನ್ ಬಳಕೆ ಒಂದು ಕಾಲದಲ್ಲಿ ಭಾರತದ ಸಲೂನಿನಲ್ಲಿ ಅನಿವಾಯ೯ ಅನ್ನಿಸಿ ಬಿಟ್ಟಿತ್ತು, ಇದರಿಂದ ಮಕ್ಕಳು ಸಲೂನಿಗೆ ಹೋಗಲು ನಿರಾಕರಿಸುತ್ತಿದ್ದರು.

#ಮ್ಯಾನ್ಯೂಯಲ್_ಕ್ಲಿಪ್ಪರ್_ನಮ್ಮ_ಬಾಲ್ಯದಲ್ಲಿ_ಅತಿಹೆಚ್ಚು_ನೋವು_ತರಿಸಿದ_ಕ್ಷೌರಿಕಯಂತ್ರ   ನಿನ್ನೆ ನನ್ನ ಬಾಲ್ಯದಲ್ಲಿ ಪ್ರಬಾವ ಬೀರಿದ ಡುಮಿಂಗ್ ರೆಬೆಲೋ ಲೇಖನ ಬರೆದಿದ್ದೆ ಅದರಲ್ಲಿ ಅವರು ಪ್ರತಿ ತಿಂಗಳು ಆನಂದಪುರದ ರಾಮಣ್ಣನ ಸಲೂನಿನಲ್ಲಿ ಕಷ್ಟಪಟ್ಟು ನನ್ನ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಬಗ್ಗೆ ಅಲ್ಲಿನ ಮಿಷನ್ ಒಂದರ ಬಗ್ಗೆ ಬರೆದಿದ್ದೆ, ಆ ಕಾಲಮಾನದ ಬಾಲ್ಯದಲ್ಲಿದ್ದ ಅನೇಕರಿಗೆ ಈ ಯಂತ್ರ ಯಮಯಾತನೆ ನೀಡಿತ್ತಂತೆ.   ಹಾಗಾಗಿ ನನಗೂ ಆ ಯಂತ್ರದ ಬಗ್ಗೆ ಕುತೂಹಲ ಹೆಚ್ಚಾಗಿ ಅಂತರ್ ಜಾಲದಲ್ಲಿ ಮಾಹಿತಿಗಾಗಿ ಹುಡುಕಿದಾಗ ಸಿಕ್ಕಿದ ವಿವರ ಇಲ್ಲದೆ.   ಇದರ ಹೆಸರು ಮ್ಯಾನ್ಯೂಯಲ್ ಕ್ಲಿಪ್ಪರ್ ಇದನ್ನು ಸೆರಿಬಿಯನ್ ದೇಶದ ಬಾಬ೯ರ್ ನಿಕೋಲಾ ಬಿಜುಮಿಲ್ ಎಂಬಾತ 1850-1890 ರ ಅವದಿಯಲ್ಲಿ ತಯಾರಿಸಿ ಅದನ್ನು ಕಾಲಕಾಲಕ್ಕೆ ಅಭಿವೃದ್ದಿ ಮಾಡುತ್ತಾನೆ.  ಈ ಮ್ಯಾನ್ಯೂಯಲ್ ಕ್ಲಿಪ್ಪರ್ ನ ಆ ಕಾಲದ ಸೈನಿಕರ ಕ್ಷೌರಕ್ಕಾಗಿ ಮಿಲಿಟರಿಗಳಲ್ಲಿ, ಜೈಲಿನ ಖೈದಿಗಳ ಕ್ಷೌರಕ್ಕಾಗಿ ಜೈಲಿನಲ್ಲಿ ನಂತರ ಶಾಲಾ ವಿದ್ಯಾಥಿ೯ಗಳಾದ ಗಂಡು ಮಕ್ಕಳ ಕ್ಷೌರಕ್ಕಾಗಿ ಬಳಸುತ್ತಿದ್ದರಂತೆ.  ರಷಿಯಾದ ಸ್ಯೆನ್ಯದಲ್ಲಿ ಇದನ್ನ ಬಳಸಿ ಸೈನಿಕರ ಕ್ಷೌರ ಮಾಡುತ್ತಿದ್ದರಂತೆ.  ಗ್ರೀಸ್ ನಲ್ಲಿ 1950-1960 ರಲ್ಲಿ ಶಿಕ್ಷೆಗಾಗಿ ಇದರಿಂದ ಕ್ಷೌರ ಮಾಡಿಸುತ್ತಿದ್ದರಂತ ವಿವರ ಇದೆ.   #ಹಾಗಾದರೆ_ಬಾರತದಲ್ಲಿ_ಯಾಕಾಗಿ_ನಮ್ಮ_ಬಾಲ್ಯದಲ್ಲಿ_ಇ...

ನನ್ನ ಬಾಲ್ಯದ ಪ್ರಬಾವಿ ವ್ಯಕ್ತಿ ದುಮುಗಣ್ಣ(ಡುಮಿಂಗ್ ರೆಬೆಲೊ) ಮತ್ತು ಆ ಕಾಲದ ಸಲೂನ್ ನ ಮ್ಯಾನ್ಯೂಯಲ್ ಕ್ಲಿಪ್ಪರ್ ಎಂಬ ಕೂದಲು ಕಿತ್ತಿ ನೋವು ಮಾಡುವ ಯಂತ್ರ

#ನನ್ನ_ಬಾಲ್ಯದಲ್ಲಿ_ಅತ್ಯಂತ_ಪ್ರಭಾವ_ಬೀರಿದ_ಡುಮಿ೦ಗ್_ರೆಬೆಲೋ.  ಡುಮಿಂಗ್ ರೆಬೆಲೋ ಯಾನೆ ಡುಮಿಂಗಣ್ಣ ಯಾನೆ ದುಮುಗ ಎಂದು ಸ್ಥಳಿಯರು ಕರೆಯುವ ಇವರು ನನ್ನ ಬಾಲ್ಯದಲ್ಲಿ ರೋಲ್ ಮಾಡೆಲ್ ಆಗಿದ್ದರು.  ನನಗೆ ಯಾರಾದರು ದೊಡ್ಡವನಾದ ಮೇಲೆ ಏನಾಗುತ್ತೀಯ ಅಂದರೆ "ನಾನು ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗುತ್ತೀನಿ ಅಂತಿದ್ದೆ" ಕೇಳಿದವರೆಲ್ಲ ನಗಾಡುತ್ತಿದ್ದದ್ದು ಯಾಕೆಂದು ಅಥ೯ ಆಗುತ್ತಿರಲಿಲ್ಲ ಆಗ.   ಇದಕ್ಕೆ ಕಾರಣ ನಮ್ಮ ಡುಮಿಂಗಣ್ಣ ಆನಂದಪುರದ ಟೂರಿಂಗ್ ಸಿನಿಮಾ ಟಾಕೀಸಿನಲ್ಲಿ ರಾತ್ರಿ ಗೇಟ್ ಕೀಪರ್ ಆಗಿ ಬೆಳಿಗ್ಗೆ ಹೊಸ ಬಾಡಿಗೆ ಸೈಕಲ್ ನಲ್ಲಿ ಸಿನಿಮಾ ಪೋಸ್ಟರ್ ತಟ್ಟಿ ಕಟ್ಟಿಕೊಂಡು ಆ ಸೈಕಲ್ ಚಕ್ರದ ಪ್ರಿವಿಲ್ ಗೆ  ಕತ್ತದ ಹಗ್ಗ ಕಟ್ಟಿ ಅದನ್ನು ತಗಡಿನ ಡಬ್ಬದಿಂದ ಹಾಯಿಸಿ ಸೈಕಲ್ ಹ್ಯಾಂಡಲ್ ಕೆಳಗಿನ ಪ್ರೇಮ್ ಗೆ ಕಟ್ಟುತ್ತಿದ್ದರು ಇದು ಸೈಕಲ್ ವೇಗವಾಗಿ ತುಳಿದಂತೆ ಬೊಂವ್ ಎಂಬ ಶಬ್ದ ಕಿವಿಯ ತಮಟೆ ಕೊಯ್ಯುವಂತೆ ಶಬ್ದ ಉಂಟು ಮಾಡುವುದರಿಂದ ಹಳ್ಳಿಯಲ್ಲಿ ಈ ಸಿನಿಮಾ ಸೈಕಲ್ ಬಂದಾಗ ಜನರ ಗಮನ ಸೆಳೆದು ಯಾವ ಸಿನಿಮಾ ಅಂತ ಗೊತ್ತಾಗುವಂತೆ ಡುಮಿ೦ಗಣ್ಣ ಕೆಲಸ ಮಾಡುವುದು ನನಗೆ ಅವರಂತೆ ಸಿನಿಮಾ ಗೇಟ್ ಕೀಪ್ ರ್ ಆಗಲು ಪ್ರೇರಣೆ ಆಗಿತ್ತು.   ಸಿನಿಮಾ ಆಪರೇಟರ್ ರೀಲ್ ಕಟ್ಟು ಆದಾಗ ಅದನ್ನು ಸೇರಿಸಲು ಎರೆಡೂ ಕಡೆಯ ಕೆಲವು ರೀಲ್ ಕಟ್ ಮಾಡಿ ಒಗಾಯಿಸುತ್ತಿದ್ದದ್ದಕ್ಕೆ ಆ ಕಾಲದಲ್ಲಿ ಬಾರೀ ಬೇಡಿಕೆ ಅದ...

ನ್ಯೂಜಿಲೆಂಡ್ ನ ಜೇನುತುಪ್ಪಕ್ಕೆ ಜಾಗತೀಕ ಮಾರುಕಟ್ಟೆಯಲ್ಲಿ ರೂ 22 ಸಾವಿರ ಇದೆ, ಪಶ್ಚಿಮ ಘಟ್ಟದಲ್ಲಿನ ಶುದ್ಧ ಪೆಟ್ಟಿಗೆ ಜೇನಿಗೆ 450 ರಿಂದ 500 ಇದೆ ಆದರೆ ಇತ್ತೀಚಿನ ವರ್ಷದಲ್ಲಿ ಜೇನು ಉತ್ಪಾದನೆ ಕಡಿಮೆ ಇದೆ ಆದರೆ ನಕಲಿ ಜೇನು ತುಪ್ಪ ಮಾತ್ರ ಭರಪೂರ ಮಾರಾಟದಲ್ಲಿದೆ

#ಜೇನುತುಪ್ಪಾ_ತಾಜಾ_ಬೇಕಾ? #ನ್ಯೂಜಿಲೆಂಡನ_ಜೇನುತುಪ್ಪ_ಕೇಜಿಗೆ_ಇಪ್ಪತ್ತೆರೆಡು_ಸಾವಿರ ಪ್ರಸಿದ್ಧ ಬ್ರಾಂಡ್ ಜೇನು ತುಪ್ಪಾ ಶುದ್ದ ಜೇನುತುಪ್ಪ ಅಂತ ಬಾವಿಸಿದ್ದು ಮೊನ್ನೆಯ ಪ್ರಜಾವಾಣಿಯ ವರದಿಯಿಂದ ಹುಸಿ ಆಯಿತು, ಸ್ಥಳಿಯ ಜೇನು ತುಪ್ಪ ಮಾರಾಟಗಾರರು ಕಲಬೆರಕೆ ಜೇನು ತುಪ್ಪವನ್ನೇ ಮಾರುತ್ತಾರೆ, ಕಾರಣ ಶುದ್ಧ ಜೇನುತುಪ್ಪದ ಕೊರತೆ ಮತ್ತು ಅದರ ಬೆಲೆಯೂ ಕಾರಣ.  ನನ್ನ ಹತ್ತಿರ 6 ಪೆಟ್ಟಿಗೆ ಇದೆ ಅದರಲ್ಲಿ 5 ರಲ್ಲಿಯ ಜೇನು ಇಲ್ಲ ಆದ ಕಾರಣ ಸಾಗರದ ಜೇನು ತಜ್ಞರಾದ #ನಾಗೇಂದ್ರಸಾಗರ್ ಜೇನು ಕುಟುಂಬ ತುಂಬಿಸಿ ತರಲು ಒಯ್ದಿದ್ದಾರೆ.   ಇತ್ತೀಚಿನ ಕೆಲ ವರ್ಷದಿಂದ ನಾನು ನಾಗೇಂದ್ರ ಸಾಗರ್ ಹತ್ತಿರ ಜೇನು ತುಪ್ಪ ಖರೀದಿಸುತ್ತೇನೆ ಕೆಜಿಗೆ 450 ತೆಗೆದುಕೊಳ್ಳುತ್ತಾರೆ ಹೆಚ್ಚಾಗಿ ಉಡುಗೊರೆ ಆಗಿ ಕೊಡಲು ಇದನ್ನ ಖರೀದಿಸುತ್ತೇನೆ ಈ ವರ್ಷ 50 ಕೆಜಿ ಖರೀದಿಸಿರ ಬಹುದು.  ಈ ರೀತಿ ಉಡುಗೊರೆ ಪಡೆದವರು ಜೇನು ತುಪ್ಪ ಬೇಕು ಅಂತ ಒತ್ತಾಯಿಸುತ್ತಾರೆ ಅವರನ್ನ ನಾಗೇಂದ್ರ ಸಾಗರ್ ಗೆ ಪರಿಚಯಿಸುವುದು ನನ್ನ ಕೆಲಸ.   ಪರಿಶುದ್ಧ ಜೇನು ತುಪ್ಪ (Raw Honey ) ದುಬಾರಿ ಅನ್ನುತ್ತೇವೆ ಆದರೆ ನ್ಯೂಜಿಲೆಂಡಿನ ಜೇನು ತುಪ್ಪಕ್ಕೆ ಕೆ.ಜಿ.ಗೆ 22 ಸಾವಿರ ಇದೆ ಅಂದರೆ ನಂಬಲು ಸಾಧ್ಯವಾಗಲಿಲ್ಲ ಆದರೆ ಅದು ಖಚಿತ, ಒಮ್ಮೆ ದುಬೈನ ಶೇಖ್ ನಮ್ಮಲ್ಲಿ ಉಳಿದಿದ್ದರು ಅವರು ಕುಡಿಯುವ ಚಹಾಕ...

2012 ರಿಂದ ಅನಿವಾಯ೯ವಾಗಿ ನಾನು ರೆಸ್ಟೋರೆಂಟ್ ಮಾಲಿಕನಾದೆ, ನನ್ನ ಗುರಿ, ಅನುಭವಗಳಿಂದ ಇವತ್ತು ನಮ್ಮ ರೆಸ್ಟೋರೆಂಟ್ ಮಲ್ಲಿಕಾ ವೆಜ್ ಶುಚಿ-ರುಚಿಯಿಂದ ಮನೆ ಮಾತಾಗಿದೆ.

#ರೆಸ್ಟೋರಂಟ್_ಮಾಲಿಕರು_ಹೊಸದಾಗಿ_ಹೋಟೆಲ್_ಉದ್ಯಮ_ಮಾಡುವವರಿಗಾಗಿ   ವಿಜಯವಾಣಿಯ ಶನಿವಾರದ ಹಣ- ಝುಣ - ಮನ ಕಾಲಂ ಬರೆಯುವ ಉದಯ್ ಜಾದುಗಾರರ ಇವತ್ತಿನ ಕಾಲಂ ವಿಶೇಷವಾಗಿದೆ ರೆಸ್ಟೋರಂಟ್ ಮಾಲಿಕರ ಕಷ್ಟ ಅದಕ್ಕೆ ಪರಿಹಾರದ ಟಿಪ್ಸ್ ಕೂಡ ನೀಡಿದ್ದಾರೆ.   2012 ರಿಂದ ನಾನು ಅನಿವಾಯ೯ವಾಗಿ ಈ ಉದ್ಯಮದಲ್ಲಿ ತೊಡಗ ಬೇಕಾಯಿತು, ಎಲ್ಲಾ ರೀತಿಯ ಸಕ೯ಸ್ ನಡಿತಾನೆ ಇದೆ ಅದರಲ್ಲೂ ಪ್ರತಿ ದಿನ ಬೆಳಿಗ್ಗೆ ಹೊಸ ರಿಪೈಂಡ್ ಆಯಿಲ್ ನಿಂದ ಅಡುಗೆ ಭಟ್ಟರು ಸ್ನಾನ ಮಾಡಿ ಬಂದು ಅಡಿಗೆ ಪ್ರಾರಂಬಿಸ ಬೇಕು, ಪ್ರತಿ ದಿನ ಒಗೆದು ಶುಭ್ರ ಮಾಡಿದ ಸಮವಸ್ತ್ರ, ತಲೆಯ ಕೂದಲು ಉದರುವುದು ತಡೆಯಲು ಟೋಪಿ, ಈಗ ಕೊರಾನಾ ಕಾಲದಲ್ಲಿ ಮಾಸ್ಕ್, ಅಡುಗೆ ಮನೆಗಾಗಿಯೇ ಪ್ರತ್ಯೇಕ ಶುಚಿಗೊಳಿಸಿದ ಪಾದರಕ್ಷೆ ದರಿಸಿ ಅಡುಗೆ ಶುರು ಮಾಡಬೇಕು.   ಬೇರೆ ಸಿಬ್ಬಂದಿ ಅಥವ ಅತಿಥಿಗಳಿಗೆ ಪ್ರವೇಶ ಇಲ್ಲ, ಪ್ರಿಜ್ ನಲ್ಲಿಟ್ಟು ಬಳಸುವ ಚಟ್ನಿ/ಸಂಬಾರ್ ಗೆ ನಮ್ಮಲ್ಲಿ ಅವಕಾಶ ಇಲ್ಲ, ಟೇಸ್ಟಿಂಗ್ ಪೌಡರ್ (ಅಜಿನೋ ಮೋಟೋ), ಕೃತಕ ಬಣ್ಣ ಬಳಕೆ ಕೂಡ ನಮ್ಮಲ್ಲಿ ನಿಶೇದ ಇದೆ, ತರಕಾರಿ ಪ್ರತಿ ನಿತ್ಯ ತೊಳೆದು ಟೇಬಲ್ ರೋಲ್ ಹಾಸಿದ ಟೀಬಲ್ ಮೇಲೆ ಚಾಪಿಂಗ್ ಪ್ಲೇಟ್ ಮೇಲೆ ತರಕಾರಿ ಹೆಚ್ಚಬೇಕು.   ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ ಗಾಗಿ ಪ್ರತ್ಯೇಕ ಕಸದ ಬುಟ್ಟಿ ಬಳಸಬೇಕು ಇಡ್ಲಿ, ವಡೆ ಇತ್ಯಾದಿ ತಿಂಡಿ ಚಿಮುಟದಲ್ಲಿ ತೆಗೆದು ಬಳ...

ಶಿವಾನಂದ ಕಳವೆ ಬಗ್ಗೆ ಓದಿ ತಿಳಿದಿದ್ದೆ, ಇವರ ಬಗ್ಗೆ ಪ್ರಕಾಶ್ ರೈ ಅಂತ ಸಿನಿಮಾ ನಟರು ಬರೆದ ಲೇಖನ, ಇವರ ಕಾಡಿನ ಒಡನಾಟಗಳು, ಹೊಸ ಕೆರೆ ನಿಮಾ೯ಣ ಅದಕ್ಕೆ ಚಲನಚಿತ್ರ ನಟ ಯಶ್ ರ ಬೆಂಬಲ ಹೀಗೆಲ್ಲ ಇವರ ನನ್ನ ಸ್ನೇಹ ಪೇಸ್ ಬುಕ್ ನಿಂದಾಗಿ ನಿನ್ನೆ ಪ್ರತ್ಯಕ್ಷ ಬೇಟಿ ಆಯಿತು

#ಶಿವಾನಂದಕಳವೆ_ಸಿಸಿ೯_ನನ್ನ_ಅತಿಥಿ ಪಶ್ಚಿಮ ಘಟ್ಟದ ಜಲತಜ್ಞ, ಪರಿಸರ ಪ್ರೇಮಿ, ಕೃಷಿ ತರಬೇತಿದಾರ, ಕಾಡಿನ ಬಗ್ಗೆ ಇವರು ಜ್ಞಾನ ಭಂಡಾರ ಇದ್ದಂತೆ, ಅನೇಕ ಕೆರೆಗಳ ಪುನರಿಜ್ಜೀವನ ಮಾಡಿದ ಆದುನಿಕ ಭಗೀರಥ ಅಂತೆಲ್ಲ ಇವರಿಗೆ ಬಿರುದುಗಳಿದೆ ಆದರೆ ಇವರು ಅತ್ಯಂತ ಸರಳ ವ್ಯಕ್ತಿ ಅಷ್ಟೇ ಅಲ್ಲ ಈ ಬಿರುದುಗಳಿಗಿಂತ ಹತ್ತು ಪಟ್ಟು ಹೆಚ್ಚಿನವರು. ನಿನ್ನೆ (30- ನವೆಂಬರ್ -2020) ಸಿಸಿ೯ಯಿಂದ ಬಿದನೂರು ನಗರಕ್ಕೆ ಹೋಗಿ ಅಲ್ಲಿನ ಕೆಳದಿ ಅರಸರು ನಿಮಿ೯ಸಿದ ದೇವಗಂಗೆ ಕೊಳ, ಅದಕ್ಕೆ ನೀರಿನ ಮೂಲದ ಗುಡ್ಡದ ಮೇಲಿನ ದೊಡ್ಡ ಕೆರೆ ಮತ್ತು ಕೋಟೆ ಇತಿಹಾಸಕಾರರೂ ಕಾದಂಬರಿಕಾರರೂ ಆದ #ಅ೦ಬ್ರಯ್ಯಮಠ ಜೊತೆ ವೀಕ್ಷಿಸಿ ಆನಂದಪುರಕ್ಕೆ ಬಂದರು.   ಇವರ ಆಗಮನ ತಿಳಿದು ನಮ್ಮ ಊರಿನ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್, ಸ್ಥಳಿಯ ಈಜು ಬಳಗ ಮತ್ತು ಪತ್ರಕರ್ತರು ಬಂದು ಇವರನ್ನ ಬೇಟಿ ಮಾಡಿದರು.   ನಮ್ಮ ಸಂಸ್ಥೆಯವತಿಯಿಂದ ಇವರಿಗೆ ಕುಂಟಿಕಾನು ಮಠದವರು ಬರೆದ 800 ಪುಟಗಳ ಶ್ರೀ ರಾಮಕಥಾ ಮಂಜರಿ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿ ಸ್ವಾಗತಿಸಿದೆವು. ಇಲ್ಲಿ ತನಕ ಪೇಸ್ಬುಕ್ ಸ್ನೇಹಿತರಾಗಿದ್ದವರು, ಪೋನಿನಲ್ಲಿ ಮಾತ್ರ ಸಂಪಕ೯ ಇವತ್ತು ನೇರ ಬೇಟಿ ಆಯಿತು.   ಅವರ ಅನೇಕ ಅನುಭವಗಳನ್ನು ಕೇಳುವ ಅವಕಾಶ ಆಯಿತು ಮರುದಿನ ನೂತನ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದು ಮಧ್ಯಾಹ್ನ ನನಗೆ ಅವರು ಬರೆದ ಪುಸ್ತಕ   ಕ...

ನಾವಿಬ್ಬರು ಸಹೋದರರು ನಮ್ಮಿಬ್ಬರ ವಯಸ್ಸು ಅಣ್ಣನದ್ದು 65, ನನ್ನದು 55 ಇಲ್ಲಿಯವರೆಗೆ ನಮ್ಮಿಬ್ಬರ ಜೀವನ ಸಾಮರಸ್ಯದಿಂದ ನಡೆದಿದೆ

#ನಾನು_ನನ್ನ_ಸಹೋದರ ಹೆಚ್ಚಿನ ಕುಟುಂಬದಲ್ಲಿ ಸಹೋದರರು ಮದುವೆ ಆಗುತ್ತಲೇ ಆಸ್ತಿ ಪಾಲು ಮಾಡಿಕೊಂಡು ಅಥವ ಪಿತ್ರಾಜಿ೯ತ ಆಸ್ತಿ ಮಾರಿಕೊಂಡು ಹಣ ಹಂಚಿಕೊಂಡು ಪ್ರತ್ಯೇಕರಾಗಿ ಬಿಡುತ್ತಾರೆ.  ಪರಸ್ಪರ ಹೊಡೆದಾಟ ದ್ವೇಷದಲ್ಲಿ ಒಂದೇ ತಾಯಿ ಮಕ್ಕಳಲ್ಲ ಎನ್ನುವಂತೆ ವತಿ೯ಸುತ್ತಾರೆ.  ನಾನು ಬಾಲ್ಯದಲ್ಲೇ ಒ0ದು ತೀಮಾ೯ನ ಮಾಡಿದ್ದೆ ನಾನು ನನ್ನ ಅಣ್ಣ ಜೀವನ ಪಯ೯೦ತ ಜೊತೆಯಲ್ಲಿರಬೇಕು ಅಂತ.  ನನ್ನೆಲ್ಲ ದಶಾವತಾರಗಳನ್ನ ಹತ್ತು ಹಲವು ವ್ಯವಹಾರಗಳನ್ನ ನನ್ನಣ್ಣ ಪ್ರಶ್ನಿಸದೇ ಸಹಕರಿಸಿದ್ದ, ನಮ್ಮ ತಂದೆ ದೇಹಾಂತ್ಯದ ನಂತರ ಬ್ಯಾಂಕಿನ ಸಾಲ ಸೋಲಗಳಿಗೂ ಕಣ್ಣು ಮುಚ್ಚಿ ಸಹಿ ಹಾಕಿದ್ದ, ನಂತರ ಉದ್ದಿಮೆಯಲ್ಲಿ ನಷ್ಟವಾಗಿ ಸಾಲ ತೀರಿಸಲಾಗದೇ ಆಸ್ತಿ ಹರಾಜಿಗೆ ಬಂದರೂ "ನಿನ್ನಿ೦ದ ನಾನು ಆಸ್ತಿ ಕಳೆದುಕೊಂಡೆ " ಅಂತ ಒಂದು ದಿನವೂ ಅನ್ನಲಿಲ್ಲ.  ದೇವರ ದಯೆಯಿಂದ ಎಲ್ಲಾ ಸಾಲಗಳನ್ನು ತೀರಿಸಿ ಆಸ್ತಿ ಉಳಿಸಿಕೊಂಡೆವು 2015 ರ ತನಕ ಒಂದೇ ಮನೆಯಲ್ಲಿ ವಾಸವಾಗಿದ್ದೆವು ನಂತರ ಒಂದೇ ತರದ ಎರೆಡು ಮನೆ ನಿಮಿ೯ಸಿ ಅಕ್ಕ ಪಕ್ಕದಲ್ಲಿ ಇದ್ದೇವೆ.  ನಮ್ಮೆಲ್ಲ ವ್ಯವಹಾರ ಈಗಲೂ ಅಧಿಕೃತ ಕಾನೂನು ಬದ್ದ ಪಾಲುದಾರಿಕೆಯಲ್ಲಿ ಲಾಭ ನಷ್ಟದಲ್ಲಿ ಸರಿ ಸಮನಾಗಿ ನಡೆಸುತ್ತಿದ್ದೇವೆ.  ಈಗಲೂ ಲೆಖ್ಖ ಪತ್ರ ನಾನೇ ನೋಡುತ್ತೇನೆ ಆದರೆ ಬ್ಯಾಂಕ್ ಅಕೌಂಟ್ ಮತ್ತು ಚೆಕ್ ಗೆ ನನ್ನ...

ಚಿಕ್ಕಮಗಳೂರು ಜಿಲ್ಲೆಯ ಹೊಯ್ಸಳ ಖ್ಯಾತಿಯ ವಾಸಂತಿಕಾ ಪರಮೇಶ್ವರಿ ದೇವಸ್ಥಾನದ ಪ್ರದಾನ ಅಚ೯ಕರು ಸಾಗರ ತಾಲ್ಲೂಕಿನ ಕರೂರು ಮೂಲದವರು, ಇಲ್ಲಿನ ಎರೆಡು ಬೃಹದಾಕಾರದ ಸಂಪಿಗೆ ಮರ ಒಂದು ಸಾವಿರ ವರ್ಷದ ಪುರಾತನದ್ದು ಎಂದು ಸಾಬೀತಾಗಿದೆ.

#ಐತಿಹಾಸಿಕ_ಹೊಯ್ಸಳ_ಖ್ಯಾತಿಯ_ವಾಸಂತಿಕ_ದೇವಾಲಯದ_ಪ್ರದಾನ_ಅಚ೯ಕರ_ವಿಮಷೆ೯  ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಪುರಾಣ ಪ್ರಸಿದ್ದ ವಾಸಂತಿಕ ದೇವಸ್ಥಾನ ಐತಿಹಾಸಿಕವಾಗಿಯೂ ಪ್ರಮುಖ ಸ್ಥಳ ಹೊಯ್ಸಳ ವಂಶ ಸ್ಥಾಪಕಕ ಸಳ ತನ್ನ ವಿದ್ಯಾಬ್ಯಾಸದ ಕಾಲದಲ್ಲಿ ಗುರುಗಳ ಆದೇಶ "ಹೊಯ್ - ಸಳ " ಎಂದಿದ್ದರಿಂದ ಎದುರಿಗೆ ಬಂದಿದ್ದ ಹುಲಿ ಸಂಹಾರ ಮಾಡಿದ್ದ ಸ್ಥಳವೂ ಇದೇ.   ಈ ದೇವಾಲಯದ ಎದುರು ಬೃಹದಾಕಾರದ ಎರೆಡು ಸಂಪಿಗೆ ಮರವೂ ಇದೆ, ಇದನ್ನ ಕಾಬ೯ನ್ ಟೆಸ್ಟಿಂಗ್ ನಲ್ಲಿ ಒಂದು ಸಾವಿರ ವರ್ಷ ಪುರಾತನವಾಗಿದ್ದೆಂದು ಸಾಬೀತಾಗಿದೆ.   ವಾಸಂತಿಕ ದೇವಿ ವಿಗ್ರಹ  ಮಣ್ಣಿನದ್ದು (ಕಡು ಶಾಕ೯ರ ಪಾಕ), ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯವರಿಗೆ ಇದೆಲ್ಲ ಗೊತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಯವರಿಗೆ ಇದರ ಮಾಹಿತಿ ಕಡಿಮೆ, ನಾನು ಈ ದೇವಾಲಯ ನೋಡಿದ್ದೇನೆ.  ಈ ದೇವಾಲಯದ ಪ್ರದಾನ ಅಚ೯ಕರು #ಕಮಕೋಡು_ದತ್ತಾತ್ರೇಯ ಭಟ್ಟರು ಇವರು ಸಾಗರ ತಾಲ್ಲೂಕಿನ ಕರೂರು ಹೋಬಳಿ ಮೂಲದವರು, ಇವರು ನಿಟ್ಟೂರು ಸಮೀಪದ ಮುಳುಗಡೆ ಆದ ಕಮಕೋಡಿನವರು ಈ ಊರು ಕೆಳದಿ ಸಂಸ್ಥಾನದ ಸೈನಿಕ ತರಬೇತಿ ಪ್ರದೇಶ ಇದನ್ನೆಲ್ಲ ಇಲ್ಲಿ ಉಲ್ಲೇಖಿಸಲು ಕಾರಣ ನನ್ನ ಬೆಸ್ತರ ರಾಣಿ ಚಂಪಕಾ ಇವರು ಓದಿದ್ದಾರೆ ಮತ್ತು ಈ ಪುಸ್ತಕದ ವಿಮಷೆ೯ #ನಿಟ್ಟೂರು_ರವೀಶ್ ಮಾಡುವಾಗ ಈ ಕಮಕೋಡು ಕೆಳದಿ ಅರಸರ ಸೇನಾ ಶಿಬಿರ, ತರಬೇತಿ ಮತ್ತು ಶಸ್ತ್ರಾ...