ಲಕ್ಷ್ಮಣ್ ಕೊಡಸೆ ನಮ್ಮ ಜಿಲ್ಲೆಯವರು ಪ್ರಜಾವಾಣಿ ಮುಖ್ಯ ವರದಿಗಾರರು, ಉಪ ಸಂಪಾದಕರಾಗಿದ್ದವರು, ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಸ್ತುನಿಷ್ಟವಾಗಿ ವಿಮಶೆ೯ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಕೊಡಸೆ ಎಂಬ ಊರಿನ ಲಕ್ಷ್ಮಣ್ ಕೊಡಸೆ ವಿದ್ಯಾವಂತರು, ಇವರ ಅನೇಕ ಪುಸ್ತಕ ಪ್ರಕಟ ಆಗಿದೆ. ರಾಜ್ಯದ ಪ್ರತಿಷ್ಠಿತ ಪ್ರಜಾವಾಣಿ ಪತ್ರಿಕೆ ಮುಖ್ಯ ವರದಿ ಗಾರರಾಗಿ ಉಪ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ಹೆಸರಾದವರು ನಮ್ಮ ಜಿಲ್ಲೆಯವರಾದ ಇವರ ಬಗ್ಗೆ ನನಗೆ ಅಪಾರ ಗೌರವ, ಪೇಸ್ ಪುಸ್ತಕದಲ್ಲಿ ಪರಸ್ಪರ ಸ್ನೇಹ ನಮ್ಮದು. ನನ್ನ ಮೊದಲ ಕಾದಂಬರಿ ಓದಿ ಪ್ರೋತ್ಸಾಹದ ನುಡಿ ಬರೆದಿದ್ದಾರೆ ಇದು ನನ್ನ ಕಾದಂಬರಿಗೊಂದು ಮುಕುಟ ಇಟ್ಟ೦ತೆ ಇದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಅವರು ಬರೆದ ಅನಿಸಿಕೆ ನಿಮಗಾಗಿ ಅರುಣ್ ಪ್ರಸಾದ್ ಅವರ ಬೆಸ್ತರ ರಾಣಿ ಚಂಪಕಾ ಎಚ್.ಎಲ್.ನಾಗೇಗೌಡರು ಅಧ್ಯಯನ ಮಾಡಿ ಹೊರತಂದ `ಪ್ರವಾಸಿ ಕಂಡ ಇಂಡಿಯಾ' ಕೃತಿಯಲ್ಲಿ ಪ್ರಸ್ತಾಪವಾದ ಎಷ್ಟೋ ಸಂಗತಿಗಳು ದೇಶದ ರಾಜಕೀಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅದರಲ್ಲಿನ ಒಬ್ಬ ಪ್ರವಾಸಿಯ ಅನುಭವದ ಪ್ರಸ್ತಾಪವನ್ನು ಆಧರಿಸಿ ಕೆಳದಿ ಸಂಸ್ಥಾನದ ಅರಸು ಮನೆತನದ ಒಂದು ಪ್ರೇಮ ಕಥೆಯನ್ನು ಕೆ.ಅರುಣ್ ಪ್ರಸಾದ್ ಕಾದಂಬರಿಯಾಗಿ ವಿಸ್ತರಿಸಿದ್ದಾರೆ. ಕೆಳದಿಯ ರಾಜಾ ವೆಂಕಟಪ್ಪನಾಯಕ ಬೆಸ್ತರ ಹುಡುಗಿ ಚಂಪಕಾಳನ್ನು ಆಕೆಯ ರಂಗೋಲಿಯ ಕಲೆಗೆ ಮನಸೋತು ಮದುವೆಯಾಗುವ ಸ್ವಾರಸ್ಯಕರ ಸಂಗತಿಯನ್ನು ಆಧರಿಸಿದೆ ಈ ಕಾದಂಬರಿ. ಈಗ ಆನಂದಪುರದಲ್...