ಪರಿಸ್ಥಿತಿ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಹೋರಾಡುವುದು ಬಿಟ್ಟು ಬೇರಾವ ರಾಜ್ಯ, ಬಾಷೆ, ದಮ೯ ಮತ್ತು ಜಾತಿ ಗಡಿಯೂ ಇರುವುದಿಲ್ಲ ನೆನಪಿರಲಿ.
#CORONA LOCKDOWN DAIRY 2020 #LETTER NO 11 #DATE 9-APRIL- 2020 *ಸ್ವಲ್ಪ ದಿನ ತಾಳಿ ಈ ವೈರಸ್ ಏನಾದರೂ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಇದನ್ನ ಎದುರಿಸುವುದು ಬಿಟ್ಟು ಯಾವ ಗಡಿಯೂ ಇರುವುದಿಲ್ಲ" ಗಡಿನಾಡಾದ ಕಾಸರಗೋಡಿನ ಕನ್ನಡಿಗರ ಈ ಪ್ರತಿಕ್ರಿಯೆ ಓದಿ..... "ಆಗುವುದೆಲ್ಲ ಒಳ್ಳೆಯದಕ್ಕೇ..... ಮಂಗಳೂರು ಲೋಕಸಭಾ ಸದಸ್ಯರು ಕಾಸರಗೋಡು ಗಡಿ ಬಂದ್ ಮಾಡಿರುವುದಕ್ಕೆ ಕಾಸರಗೋಡಿನವರೆಗೆ ಒಳ್ಳೆಯದೇ ಆಯ್ತು .. ಭಾರತದ ಬೃಹತ್ ಉದ್ಯಮ ಸಂಸ್ಥೆಯಾದ ಟಾಟಾ ಸಮೂಹದಿಂದ 540 bed ಗಳುಳ್ಳ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂರು ತಿಂಗಳೊಳಗಾಗಿ ನಿರ್ಮಾಣ ಮಾಡಲು ಟಾಟಾ ಸಂಸ್ಥೆಯ ಆಡಳಿತಾಧಿಕಾರಿಗಳು ಒಪ್ಪಿರುತ್ತಾರೆ ...ಇದರಿಂದಾಗಿ ಮಂಗಳೂರಿನ ಬೃಹತ್ ಆಸ್ಪತ್ರೆಗಳ ಹಬ್ ಎಂದು ಪ್ರಸಿದ್ಧಿ ಹೊಂದಿ ಮಂಗಳೂರಿಗೆ ದೇಶ ವಿದೇಶಗಳಿಂದಲೂ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರು ಹಾಗೂ ಕಾಸರಗೋಡಿನ ಮತ್ತು ಕಾಸರಗೋಡು ಸಮೀಪವಿರುವ ಜಿಲ್ಲೆಗಳಿಂದಲೂ ಅತ್ಯಧಿಕ ರೋಗಿಗಳು ಮಂಗಳೂರಿಗೆ ಅವಲಂಬಿತರಾಗಿದ್ದರು.ಆದರೆ ಕೋರನಾ ಸಾಂಕ್ರಾಮಿಕ ರೋಗದಿಂದಾಗಿ ಮಂಗಳೂರಿನ ಜಿಲ್ಲಾಡಳಿತವು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರು,ಸ್ಥಳೀಯ ಸದಸ್ಯರು ಮತ್ತು ಸ್ಥಳೀಯರ ವಿರೋಧದಿಂದಾಗಿ ಕಾಸರಗೋಡಿನ ಕರೋನ ಹೊರತುಪಡಿಸಿದ ...