Skip to main content

Posts

#ಈ ಬಸ್ ನಿಲ್ದಾಣ ಪರಿಸರ ಪ್ರೇಮಿ#

#ದಾಸವಾಳದ ಹೂವಿನ ಬಸ್ ನಿಲ್ದಾಣ ತಾಳಗುಪ್ಪ ಮತ್ತು ಸಿದ್ದಾಪುರ ಮದ್ಯದಲ್ಲಿದೆ#   ತಾಳಗುಪ್ಪದಿಂದ ಸಿಸಿ೯-ಸಿದ್ದಾಪುರ ಮಾಗ೯ದಲ್ಲಿ 10 ಕಿ.ಮಿ.ದೂರ ಸಾಗಿದರೆ ಅಕ್ಕುOಜಿಗಿ೦ತ 5 ಕಿ.ಮಿ.ಹಿಂದೆ ಎಡ ಭಾಗದಲ್ಲಿ ಒಂದು ವಿಶಿಷ್ಟ ಬಸ್ ನಿಲ್ದಾಣ ಒಂದು ಇದೆ ಅನೇಕ ವಷ೯ದಿಂದ ನೋಡುತ್ತಿದ್ದೆ ಹತ್ತಿರ ಹೋಗಿ ನಿಂತು ನೋಡಲು ಆಗಿರಲಿಲ್ಲ ಇವತ್ತು ಸಾಧ್ಯವಾಯಿತು.     ಕೆ೦ಪು ದಾಸವಾಳದ ಹೂವಿನ ಗಿಡವನ್ನ ಸುಮಾರು ಹತ್ತು ವಷ೯ದಿOದ ಜೋಪಾನ ಮಾಡಿ ಅದನ್ನ ಚಪ್ಪರದ೦ತೆ ಆಗಾಗ್ಗೆ ಪ್ರೋನಿ೦ಗ್ ಮಾಡಿ ಸುತ್ತಲೂ ಅದಕ್ಕೆ ಸಪೋಟ್೯ ಆಗಿ ದೆಬ್ಬೆಯ ಚಪ್ಪರ ಕೊಟ್ಟು  ಸುತ್ತ ಕಲ್ಲಿನ ಕಟ್ಟೆ ಕಟ್ಟಿದ್ದಾರೆ ಮತ್ತು ಮುಂದುಗಡೆ ಚಪ್ಪಡಿಕಲ್ಲಿನ ಕಟ್ಟೆ ಇದೆ.   ಬಸ್ ಗೆ ಕಾಯುವ ಜನ ಈ ಸುಂದರ ಹೂವಿನ ಚಪ್ಪರದ ಬಸ್ ನಿಲ್ದಾಣದ ನೆರಳಿನಲ್ಲಿ ವಿರಮಿಸಿದರೆ ಹಿಂಬಾಗದ ಇದರ ನೆರಳಿನಲ್ಲಿ ಮೊಟಾರ್ ಸೈಕಲ್ ಗಳ ಪಾಕಿ೯೦ಗ್ ಆಗಿದೆ.   ಈ ಪರಿಸರ ಪ್ರೇಮಿ ಬಸ್ ನಿಲ್ದಾಣದ ಕಲ್ಪನೆ, ನಿಮಾ೯ಣ ಮತ್ತು ನಿವ೯ಹಣೆ ಹಿಂಬಾಗದಲ್ಲಿನ ದಿನಸಿ ಅಂಗಡಿ ಮಾಲಿಕ ಅಣ್ಣಪ್ಪರದ್ದು.   TV ಯವರ ಕಣ್ಣಿಗೆ ಇನ್ನು ಬಿದ್ದಿಲ್ಲ, ನಿಜಕ್ಕೂ ಇವರಿಗೊಂದು ಪ್ರಶಸ್ತಿ ಕೊಡಬೇಕು ಈ ಹಳ್ಳಿಯ ಹೆಸರು ಅರೆಂದೂರು.

# ನಿರOಜನ ಕುಗ್ವೆ ನಮ್ಮ ಊರ ಜಾತ್ರೆಯಲ್ಲಿ ಮತ್ತು ನನ್ನ ಆಪೀಸಿನಲ್ಲಿ #

#ನಿರOಜನಕುಗ್ವೆ ಇವತ್ತು ನನ್ನ ಕಚೇರಿಯಲ್ಲಿ ಮತ್ತು ನಮ್ಮ ಊರ ವರಸಿದ್ಧಿ ವಿನಾಯಕ ಜಾತ್ರೆಯಲ್ಲಿ #   ಅವರು ಬರುವುದೇ ಹಾಗೆ ಸುದ್ದಿ ಇಲ್ಲದೆ ಹಾಗೇ ಇವತ್ತು ನಿರ೦ಜನ್ ಕುಗ್ವೆ ನನಗಾಗಿ ಬರೆದ ಕ್ಯಾರಿಕೇಚರ್ ಉಡುಗೊರೆ ಪ್ರೇ೦ ಹಾಕಿ ತಲುಪಿಸಿದರು ಸಂತೋಷದಿ೦ದ ಸ್ಟೀಕರಿಸಿದೆ ನನ್ನ ಆಪೀಸಿನಲ್ಲಿ ಇಟ್ಟು ಕೊಂಡಿದ್ದೇನೆ.  ಅವರಿಗೆ ಕಾಫಿಯೊ೦ದಿಗೆ ಅವರ ಹುಟ್ಟುಹಬ್ಬದ ನೆನಪಿಗಾಗಿ ಸಾಗರದ ಪ್ರಖ್ಯಾತ ಬರಹಗಾರ ಪತ್ರಕತ೯ರಾದ ಆರ್.ಟಿ. ವಿಠಲ್ ಮೂತಿ೯ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ .   ನಮ್ಮ ಊರ ವರಸಿದ್ದಿ ವಿನಾಯಕ ದೇವರ ದೇವಲಯದಲ್ಲಿ ಅವರ ಎಲ್ಲಾ ಹೋರಾಟಕ್ಕೆ ಯಶಸ್ಸು ದೊರೆಯಲಿ ಎಂದು ವಿಶೇಷ ಪೂಜೆ ಮಾಡಿ ಪ್ರಾಥಿ೯ಸಿ ಪ್ರಸಾದ ನೀಡಲಾಯಿತು.   ಪ್ರತಿ ವಷ೯ ನಡೆಯುವ ಜಾತ್ರ ರಂಗೋಲಿ ಸ್ಪದೆ೯ಯ ತೀಪು೯ಗಾರರಾಗಿ ಕಾಯ೯ ನಿವ೯ಹಿಸಿದರು ಅಲ್ಲೆಲ್ಲಾ ಇವರು ನನ್ನ ಬಗ್ಗೆ ಬರೆದ ಕಾಟೂ೯ನ್ ಬಗ್ಗೆಯೆ ಎಲ್ಲರೂ ಮಾತಾಡುತ್ತಿದ್ದದ್ದು ವಿಶೇಷ.   ನಮ್ಮ ಊರ ಜಾತ್ರೆಗೆ ಬಂದು ಭಾಗವಹಿಸಿದ ಕುಗ್ವೆ ನಿರಂಜನರಿಗೆ ಕೃತಜ್ಞತೆಗಳು.

#ಶೃ೦ಗೇಶ್ ರಾಜ್ಯ ಮತ್ತು ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಅಚ್ಚಳಿಯದ ಹೆಸರು#

#ಶೃ೦ಗೇಶ್ ಸಂಪಾದಕತ್ವದ ಜನ ಹೋರಾಟಕ್ಕೆ ಇವತ್ತಿಗೆ 15 ನೇ ವಾಷಿ೯ಕೋತ್ಸವ #      ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 15ನೇ ವಷ೯ಕ್ಕೆ ಕಾಲಿಟ್ಟಿದ್ದಾರೆ.     ಅನೇಕ ಜನಪರ ಹೋರ...

#ಪ್ರಖ್ಯಾತ ಕಾಟೂ೯ನಿಸ್ಟ ಕುಗ್ವೆ ನಿರ೦ಜನರ ಕೈಚಳಕದಲ್ಲಿ ನನ್ನ ಕ್ಯಾರಿಕೇಚರ್#

#ನಿರ೦ಜನಕುಗ್ವೆ ಕಾಟೂ೯ನಿಸ್ಟ್, ಹೋರಾಟಗಾರ, ಶಿಕ್ಷಕ ಮತ್ತು ಕೃಷಿಕರು ಇವರು ಅಭಿಮಾನ ಪೂವ೯ಕವಾಗಿ ನನ್ನ ಕ್ಯಾರಿಕೇಚರ್ ಉಡುಗೊರೆ ಇವತ್ತು ನೀಡಿದ್ದಾರೆ#   ಉದಯೋನ್ಮುಖ ಚಿತ್ರಕಾರರಾದ  ಸಾಗರ ತಾಲ್ಲೂಕಿನ ಕುಗ್ವೆಯವರು ಶಿಕ್ಷಕರಾಗಿ ಸಕಾ೯ರಿ ಸೇವೆಯಲ್ಲಿದ್ದಾರೆ ಇವರು ಇವರ ಸಮಾಜದ ಮಠಾದೀಷರ ಅನೈತಿಕ ವತ೯ನೆಯನ್ನ ತಮ್ಮ ಕುಂಚದಲ್ಲಿ ಮೊನಚಾಗಿ ವ್ಯಂಗ್ಯ ಚಿತ್ರವಾಗಿಸುತ್ತಿದ್ದರಿಂದ ಇವರನ್ನ ಅನೇಕ ತೊಂದರೆಗೆ ಗುರಿಪಡಿಸಿದ್ದರು ಆದರೂ ಇವರು ತಮ್ಮ ಹೋರಾಟಕ್ಕೆ ಬೆನ್ನು ತೋರಿಸಲಿಲ್ಲ ಆಗ ಎಲ್ಲರ ವಿರುದ್ದವಿತ್ತು ಈಗ ಸತ್ಯಾಂಶ ಗೊತ್ತಾಗಿ ಇವರಿಗೆ ಜನಬೆಂಬಲ ಹೆಚ್ಚಾಗಿದೆ.  ನಾನು ಇವರ ಕಲೆಗೆ ಅಭಿಮಾನಿ, ಇವರ ಹೋರಾಟಕ್ಕೆ ಬೆಂಬಲಿಗ ಇವರು ಮುಂದಿನ ದಿನದಲ್ಲಿ ರಾಜ್ಯದ ಪ್ರಖ್ಯಾತ ಕಲಾವಿದರಾಗುವ ದಿನ ದೂರವಿಲ್ಲ ಪ್ರಖ್ಯಾತ ಚಿತ್ರಕಾರ ಪಂಜುಗOಗೋಲಿ ಕೂಡ ಇವರ ಅಥ೯ಗಬಿ೯ತ ಸಾಂದಭಿ೯ಕ ಚಿತ್ರಗಳನ್ನ ಅಭಿನಂದಿಸಿದ್ದಾರೆ.   ಇವತ್ತು ಇವರು ನೀಡಿದ ಉಡುಗೊರೆ ಸಂತೋಷದಿಂದ ಸ್ವೀಕರಿಸಿದ್ದೇನೆ, ನನ್ನ ಕಚೇರಿಯಲ್ಲಿ ನಿರಂಜನರ ಸವಿ ನೆನಪಿನೊಂದಿಗೆ ಇಟ್ಟುಕೊಳ್ಳುತ್ತೇನೆ.

#ಕಾಗಿ೯ಲ್ ನ ದೇಶ ಪ್ರೇಮಿ ಮೊಹಮದ್ ಆಲೀ ಅಕ್ಬರ್ ನಮ್ಮ ಅತಿಥಿ #

    ಮೊಹಮದ್ ಆಲೀ ಅಕ್ಬರ್ ಕಾಗಿ೯ಲ್ ನಿವಾಸಿ ಇವತ್ತು ನಮ್ಮ ಅತಿಥಿ ಇವರು ಮಹಾನ್ ದೇಶ ಪ್ರೇಮಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ಮು೦ದೆ ದೇಶದ ರಕ್ಷಣಾ ಇಲಾಖೆಗೆ ಇವರು ತುಂಬಾ ಸಹಾಯ ಮಾಡುತ್ತಾರೆ ಇವರ ಮಾವನಿಗೆ ಕ್ಯಾನ್ಸರ್ ಎಲ್ಲಾ ಕಡೆ ಚಿಕಿತ್ಸೆ ಮಾಡಿದರೂ ಪ್ರಯೋಜನ ಆಗಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಆಯುವೆ೯ದ ಪಂಡಿತರಾದ ನರಸೀಪುರ ನಾರಾಯಣ ಮೂತಿ೯ ಜಾಷದಿಗಾಗಿ ಬರುತ್ತಿದ್ದಾರೆ ಆದರೆ ಆದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ       ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕಾಗಿ ಕಾಗಿ೯ಲ್ ಆಮಿ೯ ಬೇಸ್ ನಿಂದ ಬಂದ ಕರೆಯOತೆ ಇವರ ಕುಟುಂಬವನ್ನ ನಮ್ಮ ಲಾಡ್ಜ್ ನಲ್ಲಿ ಉಳಿಸಿ ವೈದ್ಯರನ್ನ ಬೇಟಿ ಮಾಡಿಸಿ ಔಷದಿ ಕೊಡಿಸಿ ವಿದಾಯ ಮಾಡಿದೆ.    ಇವರ ತಂದೆ ಕಾಗಿ೯ಲ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆ ನೀಡಿದವರು ಇವರ ಪ್ರಯತ್ನದಿಂದ ಇಡೀ ಜಿಲ್ಲೆ 75% ಅಕ್ಷರಸ್ಥರಾಗಿದ್ದಾರೆ, ಬಂದ ಪ್ರಶಸ್ತಿಗಳನ್ನ ನಯವಾಗಿ ನಿರಾಕರಿಸಿದವರು ಅವರು ಒಪ್ಪಿದ್ದರೆ ಶಾಸಕ ಸಂಸದರಾಗ ಬಹುದಿತ್ತು ಅವರು ಅದನ್ನೆಲ್ಲ ಬಯಸದೆ ಕಿಂಗ್ ಮೇಕರ್ ಆಗಿದ್ದರು ಅಂತ ಅಕ್ಬರ್ ವಿವರಿಸಿದರು.   ಸ್ಥಳಿಯರ ಸಹಕಾರ ಇಲ್ಲದೆ ಕಾಗಿ೯ಲ್ ಯುದ್ಧ ಗೆಲ್ಲಲಾಗುತ್ತಿರಲಿಲ್ಲ ಅಂತ ಅವತ್ತಿನ ಮುಂಚೂಣಿ ಸೇನಾ ಅಧಿಕಾರಿಗಳ ಹೇಳಿಕೆ 1999ರಲ್ಲಿ ನೆನಪಿತ್ತು ಇದನ್ನ ಪ್ರಸ್ತಾಪಿಸಿದಾಗ ಅವರು ಹೇಳಿದ್ದು ಕಾಗಿ೯ಲ್ ನ...

#ರಾಷ್ಟ್ರಿಯ ಸಂತ ಜಂಗಲ್ ವಾಲೆ ಬಾಬರು ನಮ್ಮಲ್ಲಿ ತಂಗಿದ್ದರು #

#ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರ ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ನಿನ್ನೆ ಶನಿವಾರದಿಂದ (12 ಅಕ್ಟೋಬರ್ 2019) ದಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದೇಹ ತ್ಯಾಗ ಮಾಡಿದ್ದಾರೆ#.   ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ಯಥಾವತ್ತು ಇಲ್ಲಿ ಹಾಕಿದ್ದೇನೆ.  ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.     ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.       ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪ...

ಚಿತ್ರಸಿರಿ ಶಿರವಂತೆ ಮಲೆನಾಡ ಕಲಾಕೇ೦ದ್ರ

#ಶಿರವಂತೆಚಂದ್ರಶೇಖರ್ ರ ಚಿತ್ರ ಸಿರಿ ಎಂಬ ಮಲೆನಾಡಿನ ಕಲಾ ಕೇಂದ್ರ# ಅನೇಕ ಬಾರಿ ಇಲ್ಲಿಗೆ ಬೇಟಿ ನೀಡಬೇಕೆಂದಿದ್ದರೂ ಆಗಿರಲಿಲ್ಲ ಮೊನ್ನೆ ಸಿರಸಿಗೆ ಹೋಗುವಾಗಲೇ ವಾಪಾಸ್ ಬರುವಾಗ ಇಲ್ಲಿ ಬೇಟಿ ಮಾಡುವ ವಿದಾ೯ರ ಮಾಡಿದ್ದೆ.   ಚಂದ್ರಶೇಖರ್ ಮತ್ತು ಅವರ ಪತ್ನಿ ಗೌರಮ್ಮ ಹಸೆ ಚಿತ್ತಾರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.    ಇಲ್ಲಿ ಇವರು ಭತ್ತದ ತೆನೆಯಿ೦ದ ಮಾಡುವ ತೋರಣ ಅತಿ ಸುಂದರ 40-50 ವಷ೯ದ ಹಿಂದೆ ಇದು ಮಲೆನಾಡಿನ ಪ್ರತಿ  ಕೃಷಿಕರ ಮನೆಯಲ್ಲಿ ಸುಗ್ಗಿಯ ಮೊದಲು ಹಸಿ ಕಾಳು ಕಟ್ಟಿದ ಭತ್ತದ ತೆನೆ ಆಯ್ದು ಸುಂದರ ತೋರಣ ಮಾಡಿ ಮನೆಯ ಮುಂಬಾಗಿಲಿಗೆ ಹಾಕುತ್ತಿದ್ದರು, ಭತ್ತದ ತೆನೆಯ ತೋರಣ ಮನೆಯ ಒಳ ಹೊರಗುವವರ ತಲೆಗೆ ಸ್ಪಷ೯ವಾಗುತ್ತಿದ್ದರೆ ಅದು ಆ ಕುಟು೦ಬಕ್ಕೆ ಸಮೃದ್ಧಿ ಉoಟು ಮಾಡುತ್ತದೆ ಎಂಬ ನಂಬಿಕೆ ಇದೆ ಅ೦ತ ಚಂದ್ರಶೇಖರ್ ಹೇಳುತ್ತಿದ್ದರು.   ಇವರು ಸ್ವತಃ ತಯಾರಿಸುವ ಆಯುವೆ೯ದದ ಕಾಷಾಯ ಅದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಕುಡಿಯಲು ಇವರು ನೀಡಿದ್ದರು ಅದರ ರುಚಿ ಅದ್ಬುತ.    ಭತ್ತದ ತೆನೆಯ ತೋರಣ, ಹಸೆ ಚಿತ್ರ ಬಿಡಿಸಿದ ಪೆನ್ ಸ್ಟ್ಯಾ೦ಡ್, ಕಷಾಯದ ಪುಡಿ ಖರೀದಿಸಿದೆ.   ಜೋಗ ಮತ್ತು ಸಾಗರದ ಮಧ್ಯೆ ಶಿರವಂತೆ ಯಲ್ಲಿ ಇವರ ಔಟ್ ಲೆಟ್ ಇದೆ ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿ ಒಮ್ಮೆ ಬೇಟಿ ಮಾಡಿ. ಅವರ ಸೆಲ್ ನಂಬರ್ 9449698979