Skip to main content

Posts

#ಅಭಿರಾಮ ಹೆಗ್ಗಡೆ ಎಂಬ fb ಮಿತ್ರ ಅಕಸ್ಮಾತ್ ಬೇಟಿ#

#Facebook ನಿನ್ನ ಮಹಿಮೆ ಅಪಾರ #   ಸಿದ್ದಾಪುರ ತಾಲ್ಲೂಕಿನ ಒಬ್ಬರ ಮನೆಗೆ ಹೋಗ ಬೇಕಾಗಿತ್ತು, ವಿಳಾಸ ತಪ್ಪಾಗಿ ಪಕ್ಕದ ಮನೆಗೆ ಹೋದಾಗ ಆ ಮನೆಯವರು ಸರಿ ವಿಳಾಸ ತಿಳಿಸಿದರು ವಾಪಾಸು ಬರುವಾಗ ಅರುಣ್ ಪ್ರಸಾದ್ ಅ೦ದ೦ಗೆ ಆಯಿತು ಆದರೆ ದೂರದ ಆ ಊರಲ್ಲಿ ಪರಿಚಿತರಿಲ್ಲವಲ್ಲ ಬೇರೆ ಯಾರ ಬಗ್ಗೆನೋ ಅಂತ ನಿಲ೯ಕ್ಷಿಸಿದೆ.   ಮುಂದೆ ಗೇಟು ದಾಟುವಾಗ ನನ್ನ ಕರೆಯುತ್ತಾ ಒಬ್ಬರು ಬಂದರು ನಾನು ಯಾವತ್ತೂ ಬೇಟಿ ಆಗಿರಲಿಲ್ಲ ಆದರೆ ಅವರ ಚಹರೆ ಚಿರಪರಿಚಿತ ಎನ್ನಿಸುತ್ತಿತ್ತು ಅವರೇ ಮುಂದಾಗಿ "ನಾನು ಅಭಿರಾಮ್ " ಎಂದಾಗ ಮೆದುಳಿನ ಮೆಮೊರಿ ಚಿಪ್ ಕನೆಕ್ಟ್ ಆಯಿತು.   ನನ್ನ FB ಫ್ರೆಂಡ್ ಅಭಿರಾಮ್ ನಿಜ ಗೆಳೆಯರಾದರು ಅವರು ಸಂಬಂದಿಗಳ ಮನೆಗೆ ಬಂದವರು ಅಲ್ಲಿ೦ದ ಹೊನ್ನಾವರಕ್ಕೆ ಹೋದರು.   ಇವರು ರಾಮಚಂದ್ರಪುರದ ಹಾಲಿ ಸ್ವಾಮಿಗಳ ವಿರುದ್ಧದ ಕೇಸಿನಲ್ಲಿ prime witness, ಇವರ ಕನ್ನಡ ಮತ್ತು ಇಂಗ್ಲೀಷ್ ಟಿವಿ ಮಾಧ್ಯಮದಲ್ಲಿನ ಸಂದಶ೯ನ ವೈರಲ್ ಆಗಿತ್ತು ಇವರ ವಿರುದ್ಧ ಮಠ 5 ಕೋಟಿ ಮಾನ ನಷ್ಟ ಕೇಸು ಹಾಕಿತ್ತು ನಂತರ ವಾಪಾಸ್ ಪಡೆಯಿತು ಅಂತಾರೆ ಮತ್ತು ಇವರ ಟಿವಿ ಸಂದಶ೯ನ ಟೆಲಿಕಾಸ್ಟ್ ಮಾಡದಂತೆ ನ್ಯಾಯಾಲಯದ ಪ್ರತಿಬಂದಕ ಆಜ್ನೆ ಇದೆ.   ಒಂದು ಹಂತದಲ್ಲಿ ಇವರಿಗೆ ಜೀವ ಬೆದರಿಕೆಯೂ ಇತ್ತು.   ವಾಮನನಂತೆ ಚಿಕ್ಕ ಮೈಕಟ್ಟಿನ ಪ್ರಚಂಡ ಬುದ್ಧಿವಂತ ಕೆಲವರಿಗೆ ಸೆಲಬ್ರಿಟಿ ಮತ್ತೆ ಕೆಲವರಿಗೆ ವಿಲನ್ ರ೦ತೆ ಕಾಣುವ ಅಭಿರಾಮ ಹೆಗ...

#2019ರ ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ನ ಸಮಾವೇಶ #

#ಸಾಗರ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ವಿ.ಅಕ್ಷರ ನೀನಾಸಂ ಮ್ಯಾಗ್ಸೆಸ್ಸೆ ಅವಾಡ್೯ ಪಡೆದ ಕೆ.ವಿ. ಸುಬ್ಬಣ್ಣರ ಪುತ್ರರ ಸಂದಶ೯ನ ಪ್ರಕಟಿಸಿದ ಮಲೆನಾಡು ಮಲ್ಲಿಗೆ ಸಾಗರದ ವಾರಪತ್ರಿಕೆ #   ಇವತ್ತು ಅಂಚೆಯಲ್ಲಿ ಬಂದ ಸಾಗರದ ಮಲೆನಾಡು ಮಲ್ಲಿಗೆ ಈ ವಷ೯ದ ವಿಶಿಷ್ಟ ಸಂಚಿಕೆ ಆಗಿದೆ.   ಅಕ್ಷರರ ತಂದೆ ನಾಡಿಗೆ ಪ್ರಸಿದ್ದರು ಮಗ ಅಕ್ಷರ ಹೆಚ್ಚಾಗಿ ಎಲೆ ಮರೆಯ ಕಾಯಿಯ೦ತೆ ಅವರನ್ನ ತಾಲ್ಲೂಕ ಸಾಹಿತ್ಯ ಪರಿಷತ್ ಈ ಬಾರಿಯ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಸಿದ್ದು ಶ್ಲಾಘನೀಯ.  ಬೇದೂರು ವೆಂಕಟಗಿರಿ ಸಂಪಾದಕತ್ವದ ವಾರ ಪತ್ರಿಕೆ ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ಪ್ರಕಟಿಸಿದೆ ಅದು ಸಂಗ್ರಹ ಯೋಗ್ಯ.    ಎನ್.ಎಂ.ಕುಲಕಣಿ೯ಯವರ ಹಾಟ್ ಸೀಟ್ ಸಂದಶ೯ನ, ಸಂಪಾದಕರ ಕೆ.ವಿ.ಅಕ್ಷರ ಪರಿಚಯ, ಕೆ.ವಿ.ಅಕ್ಷರರ "ಚಿತ್ರದ ಕುದುರೆ "ಕವನ, ಕೆ.ವಿ.ಅಕ್ಷರ ತಮ್ಮ ಜನ್ಮ ನೀಡಿದ ಜಾತಿ ಹವ್ಯಕದ ಬಗ್ಗೆ 2002 ರಲ್ಲಿ ಬರೆದ ಲೇಖನ, ಎರೆಡು ಸಮುದ್ರದ ನಡುವೆ, ಸಾಲ ಮನ್ನ ಕುರಿತು, ಟಿ.ಪಿ.ಅಶೋಕರ ಬೌದ್ಧಿಕ ಒಡನಾಡಿ ... ಹೀಗೆ ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧ್ಯಕ್ಷರಾದ ಅಕ್ಷರರ ಪರಿಚಯದ ವಿಶೇಷ ಸಂಚಿಕೆ ಮನಸೆಳೆಯುತ್ತದೆ.   ನಿಕಟಪೂವ೯ ಅಧ್ಯಕ್ಷ ಪ್ರಸನ್ನರ ಉದ್ದೇಶ ಪೂವ೯ಕ ಅನುಪಸ್ತಿತಿ ಮತ್ತು ಅಕ್ಷರರ ಪ್ರಾಥಮಿಕ ಶಿಕ್ಷಣದ ಮಾಹಿತಿ ನೀಡದಿರುವುದು ಕೊರತೆ ಅನ್ನಿಸಿತು.

#ಚಂಪಕ ಸರಸ್ಸು ಬಗ್ಗೆ ಆದಶ೯ ಹುOಚದ ಕಟ್ಟೆ ನೀಡಿದ ಉಪಯುಕ್ತ ಮಾಹಿತಿ ಮತ್ತು ಚಿತ್ರ ಗಳು#

ಅಲ್ಲಿ ಸ್ಥಾಪಿತವಾಗಿರುವ ಆನೆಗಳಲ್ಲಿ ಒಂದು ಗಂಡಾನೆಯಾಗಿದ್ದು ವೆಂಕಟಪ್ಪ ನಾಯಕ ಮತ್ತು ಇನ್ನೊಂದು ಹೆಣ್ಣಾಗಿದ್ದು ಚಂಪಕ ಅರಸಿಯ ನೆನಪಿಗೆ ವೆಂಕಟಪ್ಪ ನಾಯಕ ನಿಲ್ಲಿಸಿ ಸತ್ತ ನಂತರ ಜನಮಾನಸದಲ್ಲಿ ಅವರ ನೆನಪು ಉಳಿಯಲಿ ಎಂದು ಹಾರೈಸಿದ್ದನಂತೇ.‌.... ಮೊಘಲ್ ದೊರೆಗಳು ಗುಲಾಬಿಯನ್ನು ಪ್ರೀತಿಯ ಸಂಕೇತ ವನ್ನಾಗಿ ಮಾಡುವ ಮೊದಲು ಕಮಲ ಪ್ರೀತಿಯ ಸಂಕೇತವಾಗಿತ್ತು...ಅರಳಿದ ಕಮಲ ಗಂಡಾನೆ ಬಳಿ ಇದ್ದು ಮೊಗ್ಗು ಕಮಲ ಹೆಣ್ಣಾನೆ ಬಳಿ ಇದೆ.....ಗಂಡನ್ನು ಅರಳಿದ ಕಮಲಕ್ಕೂ ಹೆಣ್ಣನ್ನು ಮೊಗ್ಗಾಗಿಯೂ ತೋರಿಸಿದ್ದಾರೆ.....ಗಂಡಾನೆಯ ಕಾಲುಗಳ ದಷ್ಟಪುಷ್ಟವಾಗಿದೆ, ಹೆಣ್ಣಾನೆಯ ಕಾಲು ಸ್ವಲ್ಪ ತಳುಕು ಬಳಕು ಹೊಂದಿದೆ, ಕಣ್ಣುಗಳ ಅಲಂಕಾರದಲ್ಲೂ ವ್ಯತ್ಯಾಸವಿದೆ, ಕಿವಿಗಳು ಬೇರೆ ಬೇರ ಅಕಾರದಲ್ಲಿದೆ....ಗಂಡಾನೆಯ ಹಣೆಯ ಮೇಲಿನ ಕೆತ್ತನೆಯು ಅರೇಬಿಯನ್ ಶೈಲಿಯ ಗಿಳಿ ಎಂದು ಕನಫ್ಯೂಸ್ ಆಗಬಹುದು ಆದರೆ ನಿಜವಾಗಲೂ ನೋಡಿದರೆ ಅದು ಗಂಡ ಬೇರುಂಡದ ಮಿರರ್ ಅಥವಾ ಫ್ಲೀಪ್ ಇಮೇಜ್ ಆಗಿದೆ.....  ಹೆಣ್ಣು ಮತ್ತು ಗಂಡಾನೆಯ ಹಣೆಯ ಅಲಂಕಾರವೂ ಬೇರೆ ಬೇರೆ ಆಗಿದೆ.... ಇನ್ನು ಚಂಪಕ ಅರಸಿ ಅಥವಾ ಸರಸಿ ಅತಿಲೋಕ ಸುಂದರಿಯಾಗಿದ್ದು ಬಾಂಗಾರದ ನೀಳ ರಾಶಿ ಹೊಂದಿದ್ದಳು, ಅವಳ ಕೂದಲು, ಬಟ್ಟೆ ಇನ್ನೂ ಎಲ್ಲಿಯೋ ಅನಂತಪುರದ ಯಾರದೋ ಮನೆಯಲ್ಲಿದೆ ಎಂಬ ಗುಮಾನಿಯಿದೆ... ದೊಡ್ಡ ರಾಣಿಯ ಸನ್ಯಾಸತ್ವ,ಜನರ ಹೀಗೆಳಿಯುವಿಕೆ ಎದುರು ವೆಂಕಟಪ್ಪನ ಪ್ರೀತಿ ಕೆಲ ಕಾಲ ಕಾಪಾ...

#1980ರ ದಶಕದಲ್ಲಿ ಸಾಗರ ತಾಲ್ಲೂಕಿನ ಹೋರಾಟದ ದಿನಗಳಲ್ಲಿನ ಸಂಗಾತಿಗಳು#

1985 ರಲ್ಲಿ ಸಾಗರದಲ್ಲಿ ದಲಿತ ಸಂಘಷ೯ ಸಮಿತಿ ಪ್ರಾರಂಭದ ದಿವಸಗಳು, ಶಿವಾನಂದ ಕುಗ್ವೆ, ವಸಂತ ಕುಗ್ವೆ,ಸಿಗರೇಟು ನಾಗರಾಜ್, ತೀ.ನಾ.ಶ್ರೀನಿವಾಸ್, ಅದರOತೆ ವಿಶ್ವನಾಥ ಗೌಡರು ನಮಗೆ ನಾಯಕರು, ಬಗರ್ ಹುಕುಂ ಮಂಜೂರಾತಿ ಒತ್ತಾಯಿಸಿ ಸಾಗರದ AC ಕಚೇರಿ ಎದರು 43 ದಿನ ಧರಣಿ, ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಕಾಮಿ೯ಕ ಚಳವಳಿ, ಆನಂದಪುರದಿಂದ ಸಾಗರದ ವರೆಗೆ ಪಾದಯಾತ್ರೆ, ಆನಂದಪುರದಿಂದ ಶಿವಮೊಗ್ಗದ ತನಕ ಸೈಕಲ್ ಯಾತ್ರೆ, ಲಾಠಿ ಚಾಜ್೯ ಜೈಲು ಹೀಗೆ ಈ ಎಲ್ಲಾ ಸಂದಭ೯ದಲ್ಲಿ ಹಸಿವು ಕಾಡುತ್ತಿದ್ದಾಗ ಕಂಚಿನ ಕಂಠದಲ್ಲಿ ವಸಂತರ ಹಾಡು ನಮ್ಮ ಹೊಟ್ಟೆ ತುಂಬಿಸುತ್ತಿತ್ತು, ಅವರ ಕುಗ್ವೆ ಮನೇಲಿ ಅನ್ನ ಟೋಮೊಟೋ ಹಣ್ಣು ಮತ್ತು ಉಪ್ಪು ಹಾಕಿಕೊ೦ಡು  ಊಟ ಮಾಡಿದ್ದು ನೆನಪು.  ಮೊನ್ನೆ ನನ್ನ ಮಗಳ ಮದುವೆಗೆ ತಂದೆ ಮತ್ತು ಮಗ ಕವಿಗಳಾದ ವಿ.ಟಿ.ಸ್ವಾಮಿ ಜೊತೆಗೆ ಬಂದಿದ್ದರು ತುಂಬಾ ಸಂತೋಷ ಪಟ್ಟಿದ್ದೆ ಇವತ್ತು ಈ ಲೇಖನ ಸಂತೋಷ ದುಪ್ಪಟ್ಟಾಗಿಸಿದೆ.

#ಚOಪಕ ಸರಸ್ಸು ಕೆಳದಿ ರಾಣಿಯ ದುರಂತ ಪ್ರೇಮಕಥೆಯ ಸ್ಮಾರಕ ಜೋಗಿ ಜನಪದ ಸಂಗೀತ ಕಲಾವಿದ ನಾಗರಾಜ ತೋOಬ್ರಿ ಧ್ವನಿಯಲ್ಲಿ ಮತ್ತು ಕಿನ್ನರಿಯ ನಾದದೊಂದಿಗೆ #

ಜೋಗಿ ಜನಪದ ಸಂಗೀತ ಕಲಾವಿದ ಜಿ.ನಾಗರಾಜ ತೋoಬ್ರಿ. ಆನoದಪುರದ ಚಂಪಕ ಸರಸ್ಸು ಎಂಬ ಸುಂದರ ಕೊಳ, ಸ್ವಾಗತಿಸುವ ಕಲಾತ್ಮಕ ಕಲ್ಲಿನ ಜೋಡು ಆನೆ, ಕೊಳದ ಮದ್ಯದ ದೇವಾಲಯ, ಸುತ್ತುವರಿದ ಪಗಾರ, ದೇವರ ಕಣ್ಣು ಚಲನ ಚಿತ್ರದಲ್ಲಿ ಪ್ರಖ್ಯಾತ ಚಲನ ಚಿತ್ರಗೀತೆ "ಓ ಇನಿಯಾ ನೀ ಎಲ್ಲಿರುವೆ" ಹಾಡು 1970 ರ ದಶಕದಲ್ಲಿ ಚಿತ್ರಿಕರಣ ಆದ ಸ್ಥಳ ಈಗ ಪಾಳು ಬೀಳುವುದನ್ನ ಸ್ಥಳಿಯ ಕ್ರೀಯಾ ಶೀಲ ಯುವ ಪಡೆ ಪ್ರತಿ ವಷ೯ ಶ್ರಮದಾನದಿಂದ ಪ್ರವಾಸಿಗರ ವೀಕ್ಷಣೆಗೆ, ಸ್ಥಳಿಯರ ಈಜು ತರಬೇತಿಗೆ ವ್ಯವಸ್ಥೆಗೆ ಅನುವು ಮಾಡಿ ಸಾವ೯ಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.     ಚಂಪಕ ಸರಸ್ಸು ಅಂದರೇನು? ಚಂಪಕ ಯಾರು ಎನ್ನುವ ಚಚೆ೯ ಆಗಾಗ್ಗೆ ಮುನ್ನಲೆಗೆ ಬಂದು ಮರೆತು ಹೋಗುತ್ತಿದೆ.   ಆನಂದಪುರದ ಹಿಂದುಳಿದ ಜಾತಿಯ ಸುಂದರ ತರುಣಿ ಚOಪಕಳು ಪ್ರತಿ ದಿನ ಮುಂಜಾನೆ  ರಾಜ ವೆಂಕಟಪ್ಪ ನಾಯಕ ಸಾಗಿ ಹೋಗುವ ರಾಜ ಮಾಗ೯ದ ಇತಿ ಹಾಸ ಪ್ರಸಿದ್ಧ ಗಂಗಾ ಮಠದ ಎದುರಿನ ಮನೆಯವಳು, ರಾಜರ ಸ್ವಾಗತಕ್ಕೆ ದಿನಕ್ಕೆ ಒಂದೊಂದು ರೀತಿ ಸುಂದರ ರಂಗೋಲಿ ಬಿಡಿಸಿ ಮರೆಯಲ್ಲಿ ವೀಕ್ಷಿಸುತ್ತಿದ್ದಳು ರಾಜ ವೆಂಕಟಪ್ಪ ನಾಯಕ ಗಂಗಾಮಠದ ಗಂಗಾಮಾತೆಗೆ ಬಲಕ್ಕೆ ತಿರುಗಿ ಕುದುರೆ ಮೇಲಿಂದ ತಲೆಬಾಗಿ ವ೦ದಿಸುವುದು ನಂತರ ಎಡಕ್ಕೆ ತಿರುಗಿ ಸುಂದರ ರಂಗೋಲಿ ವೀಕ್ಷಿಸುವುದು ಪದ್ದತಿ ಆಗಿ ಇದು ಪ್ರೇಮ ಕಥೆಗೆ ಕಾರಣವಾಗಿ ರಾಜವೆಂಕಟಪ್ಪ ನಾಯಕರು ಚಂಪಕಳನ್ನ ವರಸಿ ವಿವಾಹವಾಗಿ ಆನಂದಪುರದ ಕೋಟೆಯ ಅರ...

#ಶುOಠಿ ಬೆಳೆ ಲಾಭದಾಯಕ ಕೃಷಿ ಇದನ್ನ ರಾಸಾಯನಿಕ ಮುಕ್ತ ಮಾಡುವ ಮತ್ತು ಹೆಚ್ಚು ಲಾಭದಾಯಕ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿದೆ #

      ಶುOಠಿ ಬೆಳೆ ಸಾವಯುವ ಆಗುವ ಪ್ರಕ್ರಿಯೆ ಪ್ರಾರಂಭ ಆಗಬೇಕು     ಶುಂಠಿ ನಮ್ಮ ಭಾಗದ ರೈತರನ್ನ ಹಣವಂತರಾಗಿ ಸಾಲ ಮುಕ್ತರನ್ನಾಗಿಸಿದೆ, ಮನೆ, ವಾಹನ ಖರೀದಿ, ಮದುವೆಗಳಿಗೆ ಸಹಕಾರಿ ಆಗಿದೆ ಈಗಲೂ ನಮ್ಮ ರೈತರು ಬೆಳೆದ ಶುಂಠಿಗೆ ವಿಷಕಾರಿ ಕೀಟನಾಶಕದ ಕಾರಣ ಮುಂದುವರಿದ ದೇಶದಲ್ಲಿ ಪ್ರವೇಶವಿಲ್ಲ, ದೇಶಿಯ ಮಾರುಕಟ್ಟೆ, ಗಲ್ಪ್ ದೇಶಗಳಿಗೆ ಮಾತ್ರ ಸೀಮಿತ ಆಗಿದೆ.  ಇಲ್ಲಿ ಇನ್ನೋOದು ಸ್ವಾರಸ್ಯವಿದೆ ಏನೇOದರೆ ಈ ಕ್ಷೇತ್ರಕ್ಕೆ ಸಂಬಂದ ಪಡದ ಶ್ರೀಮಂತರು, ದೊಡ್ಡ ಬಡ್ಡಿ ಕುಳಗಳು, ಶೇರು ದಲ್ಲಾಳರು ಒಣ ಶುಂಠಿ ಖರೀದಿಸಿ ದಾಸ್ತಾನು ಮಾಡಿ ಬೆಲೆ ಹೆಚ್ಚಿದಾಗ ಲಾಭಕ್ಕೆ ಮಾರಾಟ ಮಾಡುವ ಪ್ರಕ್ರಿಯೆ ಶುಂಠಿ ಉದ್ಯಮಕ್ಕೆ ವರ ಆಗಿದೆ.   ರಾಸಾಯನಿಕವಲ್ಲದ ಸಾವಯವ ಶುಂಠಿಗೆ ಸರಿಯಾದ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸದ್ಯ ರೈತರಿಗೆ ದೊರೆಯುತ್ತಿಲ್ಲ ಇದಕ್ಕೆ ಸಂಬಂದ ಪಟ್ಟ ಸಕಾ೯ರ ಅಥವ ಸಂಸ್ಥೆಗಳು ಇನ್ನು ಗಮನಹರಿಸಿಲ್ಲ.   ಶುಂಠಿ ಬೆಳೆಗೆ ಬೆಂಬಲ ನೀಡಿ ರಾಸಾಯನಿಕ ಬಳಕೆ ಮುಕ್ತ ಮಾಡುವಂತ ವ್ಯವಸ್ಥೆ ಬರಬೇಕು ಇದು ಕೃಷಿಕರಲ್ಲಿ ಹೆಚ್ಚು ಉದ್ಯೋಗ ಮತ್ತು ಹಣ ಗಳಿಸುವ ಬೆಳೆ ಆಗಿದೆ ಎನ್ನುವುದು ನಿಸ್ಸಂಶಯ.

My daughter marriage

With the blessings of God, my daughter’s wedding was solemnised . I could not invite everyone personally due to time constraints. I sent invitation via post,WhatsApp, messenger. I was not expecting that everyone will be able to attend.  It was a pleasant surprise for me to see that many of them graced their presence and blessed the newly weds. I could not thank all of them personally.  As I was thinking of thanking all my friends through Facebook, my dear friend Nagendra Sagar posted an article on this. It touched my heart, I am sharing the article. Thank you.. may you people’s well wishes lead us on the right path..  thank you K.Arun prasad Ex Zilla Panchayath member. ANANDAPURAM www.hombujalodge.com