Skip to main content

Posts

# ಗಣಪೆ ಕಾಯಿ, ಪಶ್ಚಿಮ ಘಟ್ಟದ ಬಳ್ಳಿ ಕಾಯಿ#

# ಬಹುಶಃ ಈ ತರಕಾರಿ ಬಹಳ ಜನಕ್ಕೆ ಗೊತ್ತೇ ಇಲ್ಲ, ಮಲೆನಾಡಿಗರಿಗೂ ಕೂಡ# ಇದರ ಹೆಸರು ಗಣಪೆ ಕಾಯಿ +----++++++++++++++----+ ಇದು ಮಲೆನಾಡಿನ ದಟ್ಟ ಅಡವಿಯಲ್ಲಿನ ಬೃಹತ್ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ ಬಿಡುತ್ತದೆ, ಉದ್ದದ ಕಾಯಿಯಲ...

#ಸಾಗರ ತಾಲ್ಲೂಕಿನ ಏಕೈಕ ನಿಷ್ಟಾವಂತ ಕಾಂಗ್ರೇಸ್ ನೇತಾರ ಖಾನ್ ಸಾಹೇಬರೆಂದೇ ಜನ ಕರೆಯುವ ಮುತ್ಸದ್ದಿ ಆಹಮದಾಲಿ ಖಾನ್#

#ಸಾಗರ ತಾಲ್ಲೂಕಿನ ಕಾಂಗ್ರೇಸ್ ನೇತಾರರಾದ ಪ್ರೀತಿಯ ಖಾನ್ ಸಾಹೇಬರು#   ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರ...

# ಕಲಸೆ ಸ್ವಾಮಿಗಳೆಂದೇ ಖ್ಯಾತರಾಗಿದ್ದ ಶ್ರೀ ಕಲಸೆ ನರಸಿಂಹಾನಂದ ಸ್ವಾಮಿ #

ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಪ್ರಜ್ವಲಿಸಿದ ಖೇಚರಿಯೋಗಿ –---------------------------------------------------- -------    ಮಠಮಂದಿರಗಳು ಧಾರ್ವಿುಕ ಕಾರ್ಯಕ್ರಮಗಳಿಗೆ ಮೀಸಲಾದ ಪುಣ್ಯಸ್ಥಳ. ಮನೆಗೊಂದು ಯಜಮಾನ, ಮಠಕ್ಕೊಂದು ಗುರುಗಳು ಇರುವುದು ಲೋಕರೂಢಿ. ಹೀಗೆ ಪ್ರತಿಯೊಂದಕ್ಕೂ ಒಬ್ಬ ನಾಯಕ ಬೇಕೇ ಬೇಕು. ಪ್ರತಿ ಮನುಜರಲ್ಲಿಯೂ ವಿಭಿನ್ನ ಪ್ರತಿಭೆಯಿದೆ. ಅಂಥವರು ಮಹಾನ್ ಸಾಧನೆ ಮಾಡಲು ಕಠಿಣ ಪರಿಶ್ರಮ, ಸುದೀರ್ಘ ಸಮಯ, ಸಹನೆ, ತಾಳ್ಮೆ, ಏಕಾಗ್ರತೆ, ಛಲ ಎಲ್ಲವೂ ಅತ್ಯಗತ್ಯ. ಅವನ್ನೆಲ್ಲ ಮೈಗೂಡಿಸಿಕೊಂಡರೇ ಅಪ್ರತಿಮ ಸಾಧನೆ ಮಾಡಲು ಸಾಧ್ಯ. ಈ ಮಾತಿಗೆ ಉತ್ತಮ ನಿದರ್ಶನ ಕಲಸಿಯ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳು. ಖೇಚರೀಯೋಗಿ ಎಂದೇ ಪ್ರಸಿದ್ಧವಾಗಿರುವ ಕಲಸಿಯ ಶ್ರೀಗಳು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರು. ಇವರು 1917ರ ಮಾರ್ಚ್ 20ರಂದು ಜನಿಸಿದರು. ಇವರಿಗೆ ಪೂರ್ವಾಶ್ರಮದ ಹೆಸರು ಚಿದಂಬರ. ಚಿದಂಬರರಿಗೆ ಬಾಲ್ಯದಲ್ಲಿಯೇ ಉಪನಯನ ನೆರವೇರಿತು. ತಾಯಿಯ ತವರುಮನೆಯಾದ ಕಲಸಿಯಲ್ಲಿ ಪ್ರಾಥಮಿಕ ಶಾಲೆ ಸೇರಿದ ಚಿದಂಬರ, ಭೀಮನಕೋಣೆಯಲ್ಲಿ ವೇದಾಭ್ಯಾಸ ಮಾಡತೊಡಗಿದರು. ಕೆಲವು ವರ್ಷಗಳಲ್ಲಿ ತಂದೆ ನಿಧನರಾದ ಕಾರಣ ತಾಯಿಯೇ ಕುಟುಂಬ ಜವಾಬ್ದಾರಿ ಹೊತ್ತುಕೊಂಡರು. ದಾಯಾದಿಕಲಹದಿಂದ ನೊಂದ ಚಿದಂಬರರಿಗೆ, ಎಲ್ಲವನ್ನೂ ಬಿಟ್ಟು ದೂರ ಹೋಗುವುದೇ ಮೇಲು ಎನಿಸಿತ್ತು. ಒಮ್ಮೆ ಮಿತ್ರರೊಂದಿಗೆ ಯಾಣದ ಭೈರವೇಶ...

#ಉಮ್ಮತ್ತದ (ದತ್ತೂರ)ಗಿಡದ ವಿಶೇಷತೆಗಳು ಮತ್ತು ಅದರ ಮಲೆನಾಡಿಗರ ಅನುಭವ#

FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ.     ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.‌ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿ‌ಕೊಡುತ್ತಿದ್ದರು ಅವರ ಬಳಿ ಹೋದೆ.    ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ‌ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ.‌ "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ' " ಔಷಧಿ ತಗಂಡು ಸ್ವಲ್ಪ‌ಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್  ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ. "ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗ...

#ಶಿವಮೊಗ್ಗ ಜಿಲ್ಲೆಯ ರೈತ ಹೋರಾಟದ ಹೀರೋ ಕೊಡ್ಲು ವೆಂಕಟೇಶ್#

ರೈತ ಸಂಘದ ಚಳವಳಿಗಳಲ್ಲಿ ನಮ್ಮ ತಂದೆ ಜೈಲಿಗೆ ಹೋದವರು, ಆ ದಿನದಲ್ಲಿ ಕೊಡ್ಲು ವೆಂಕಟೇಶ್ರ ಹೋರಾಟ ನಿತ್ಯ ತೀಥ೯ಹಳ್ಳಿಯಿಂದ ನಮ್ಮ ಊರಿಗೆ ಬರುತ್ತಿದ್ದ ಛಲಗಾರ ಪತ್ರಿಕೆ(ನಮ್ಮ ಅಣ್ಣ ಗಣಪತಿಯವರ ಮಿತ್ರ ಆ ಪತ್ರಿಕೆಯ ಆನಂದಪುರಂ ನ ವರದಿಗಾರರು) ಯಿಂದ ಗೋತ್ತಾಗುತ್ತಿತ್ತು. ಸಕಾ೯ರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ  ಕ್ರಿಕೆಟ್ ಕಾಮೆಂಟರಿ ಕೇಳೋದು ಈಗ FB ಅಥವ ವಾಟ್ಸ್ ಪ್ ನೋಡೋ ಅಷ್ಟೆ ಚಟ ಆಗಿತ್ತು, ಇವರ ಹೋರಾಟದಿಂದ ಇಡೀ ರಾಜ್ಯದಲ್ಲೇ ಇದೊಂದು ಸಂಚಲನೆ ಆಯಿತು ಮತ್ತು ಕಚೇರಿಗೆ ಟ್ರಾನ್ಸಿಸ್ಟರ್ ತರೋದು ಕಡಿಮೆ ಆಯಿತು. ನಾನು ಇವರನ್ನ ಆ ದಿನದಲ್ಲಿ ಭೇಟಿ ಮಾಡಬೇಕ೦ತ ಮಾಡಿದ್ದೆ ಆದರೆ ಈ ವರೆಗೆ ಆಗಿಲ್ಲ ನಿಮ್ಮ ಲೇಖನ ಇದೆಲ್ಲ ನೆನಪಿಸಿತು. ಇವರು ನಮಗೆಲ್ಲ ಹೀರೋ ಆಗಿದ್ದವರು ಆ ದಿನದಲ್ಲಿ. ಮಲೆನಾಡ ಕ್ಯಾಸ್ಟ್ರೋ ತರಹದ ಕೋಡ್ಳು ವೆಂಕಟೇಶ್   (ಕೃಪೆ :ನೆಂಪೆ ದೇವರಾಜರ FB ಲೇಖನ)  ಯೂರೋಪಿನ ತತ್ವ ಜ್ಞಾನಿಗಳಂತೆ  ಕಾಣುವ ಕೋಡ್ಳು ವೆಂಕಟೇಶ್ ಒಂದು ಕಾಲದ ಭಯಂಕರ ಅಹಿಂಸಾತ್ಮಕ ಗೆರಿಲ್ಲಾ ವಾರಿಗ.ನೌಕರಶಾಹಿ ಗಢಗಢ ನಡುಗುವಂತಹ ಇವರ ಹೋರಾಟಗಳೋ ಇಂದಿಗೂ ಮೈ ಜುಮ್ಮೆನಿಸುತ್ತವೆ.ಅರಣ್ಯವೆಂಬುದು  ಜೀವನದ ನಡುವೆ ಹಾಸು ಹೊಕ್ಕಾಗಿರಬೇಕೆಂಬುದನ್ನು ತನ್ನ ಅನುಭವದ ಮೂಲಕವೇ ನವಿರಾಗಿ ವಿವರಿಸುವ ವೆಂಕಟೇಶ್ ರೈತ ಚಳುವಳಿ ಪ್ರವರ್ಧಮಾನ ಕಾಲ ಘಟ್ಟದಲ್ಲಿ ನಿರ್ಮಿಸಿದ ಹೋರಾಟಗಳು ಒಂದೆರಡಲ್ಲ.ಎಂತಹ ಕಷ್ಟದ ಸಂದರ್ಭದಲ್ಲೂ ...

#BEWARE OF FAKE AYURVEDIC MEDICINE IN THE NAME OF VAIDYA NARAYANA MURTHY NARASIPURA#

information Beware of counterfeit        drugs 1. Vaidya prepares the medicine for 27 days on the basis of sickness, sex, age, etc. of the patient. 2. Do not buy medicine by external unauthorized people or by courier. 3. Counterfeit drugs can harm innocent people or even kill them. 4. The validity of medicines made by Vaidya is up to 27 days, after which the drug expires.                सूचना नकली दवाओं से सावधान रहें 1. वैद्यजी  मरीज़ के  बीमारी, लिंग, आयु इत्यादि के आधार ...

#ಇತಿಹಾಸದ ಪುಟದಲ್ಲಿ ಆನಂದಪುರಂನಲ್ಲಿ ಟಿಪ್ಪು ಸುಲ್ತಾನ್#

#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ#     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹಯಾತ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) .      ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿ...