Skip to main content

Posts

ಪಟಮಕ್ಕಿ ರತ್ನಕರ್ ಎಂಬ ಸಜ್ಜನ ಮಾಜಿ ಶಾಸಕರೊಂದಿಗೆ ನನ್ನ ಒಡನಾಟ.

        ಪಟಮಕ್ಕಿ ರತ್ನಕರ್ ಸಣ್ಣ ವಯಸ್ಸಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ಪಡೆದು ತೀಥ೯ಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಅವರೊಂದಿಗೆ ನನ್ನ ಒಡನಾಟ ಇರಲಿಲ್ಲ.         ಶಿವಮೊಗ್ ಜಿಲ್ಲಾ ಪಂಚಾಯತ್ ಲ್ಲಿ ಸದಸ್ಯನಾದಾಗ ಒಮ್ಮೆ ಅಧ್ಯಕ್ಷನಾಗುವಂತ ಅವಕಾಶ ಉಂಟಾಗಿತ್ತು ಆಗ ಸಂಸದರಾದ ಮಾಜಿ ಮುಖ್ಯಮಂತ್ರಿ ಬಂಗಾರಪನವರು ನನಗೆ ಈ ಬಗ್ಗೆ ಮು೦ದುವರಿಯಲು ಹೇಳಿದ್ದರು ಆಗ ಮಾಜಿ ಶಾಸಕರಾಗಿದ್ದ ಸ್ವಾಮಿ ರಾವ್, ಕರಿಯಣ್ಣ ಮತ್ತು ಪಟ ಮಕ್ಕಿಯವರ ಒಂದು ಸಮಿತಿ ಮಾಡಿ ಬೇರೆ ಪಕ್ಷ ಮತ್ತು ನಾಯಕರ ಜೊತೆ ಮಾತುಕತೆ ಮಾಡಲು ಜವಾಬ್ದಾರಿ ನೀಡಿದ್ದರು.          ಹಾಗಾಗಿ ನನಗೆ ಈ ಮೂವರು ಮಾಜಿ ಶಾಸಕರ ಒಡನಾಟ ಹೆಚ್ಚಾಗಿ ಆಯಿತು ಸುಮಾರು ಒಂದು ತಿಂಗಳು ತಿರುಗಾಟದಲ್ಲಿ ಅವರ ಅನುಭವಗಳು ನನಗೆ ತಿಳಿಯಲು ಸಾಧ್ಯವಾಯಿತು.ಮೂವರೂ ಸಜ್ಜನರು, ಮಧ್ಯಪಾನ ಮಾಡುವವರಲ್ಲ ಅದರಲ್ಲಿ ಕರಿಯಣ್ಣ ಮತ್ತು ಸ್ವಾಮಿ ರಾಯರು ಮಾಂಸಹಾರ ಪ್ರಿಯರು ಆದರೆ ಪಟಮಕ್ಕಿ ಮಾತ್ರ ಶುದ್ದ ಸಸ್ಯಹಾರಿ ಮತ್ತು ದೇವರು ಧ್ಯಾನ ಮತ್ತು ನಿರ೦ತರ ಓದು ಅವರ ಹವ್ಯಾಸವಾಗಿತ್ತು.          ಕೆಲವು ಹಿತ ಶತೃಗಳು, ಪಟ್ಟ ಬದ್ರ ಹಿತಾಸಕ್ತಿಗಳು ಕೊ...

ಹೊಸಗುಂದದ ಕಲ್ಲೇಶ್ವರ ದೇವಸ್ಥಾನದ ಪುರಾತನ

        ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡ ತ್ರಿ ಮಲ್ಲಪಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.        ಮಲ್ಲಪ್ಪ ಗೌಡರು ದೂರದೃಷ್ಟಿ ಇದ್ದ೦ತಹ ವ್ಯಕ್ತಿ ಆದ್ದರಿಂದ ಹೊಸಗುಂದಕ್ಕೆ ಬಂದವರೆ ಸಾವ೯ಜನಿಕರಿಗಾಗಿ ಕುಡಿಯುವ ನೀರಿನ ಬಾವಿ ಮತ್ತು ಶಾಲೆ ಒಂದನ್ನ ನಿಮಿ೯ಸಿ ಅದರ ಉದ್ಘಾಟನೆಯನ್ನ ಆ ಕಾಲದ ಜನಪ್ರಿಯ ಮುಖ್ಯ ಮಂತ್ರಿ ನಿಜಲಿಂಗಪ್ಪರನ್ನ ಕರೆಸಿ ಮಾಡಿಸಿದ್ದರೆಂದರೆ ಅವರ ಘನತೆ ಅಥ೯ವಾದೀತು.         ಅವರ ನಂತರ ಅವರ ಮಗ ಹೆಡ ತ್ರಿ ನಾಗರಾಜ ಗೌಡರು ಅವರ೦ತೆ ಜನ ಬಳಕೆ, ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸಿದರು, ಅವರು ಹೇಳುವಂತೆ ಮುಳುಗಡೆಯಿ೦ದ ಬ೦ದ ಕೆಲ ವಷ೯ ಹೊಸಗುಂದದ ಕಾಡಲ್ಲಿದ್ದ ದೇವಸ್ಥಾನ ಅವರ ಕುಟು೦ಬಕೆ ಗ...

ಹೊಸಗುಂದ ಕಲ್ಲೇಶ್ವರ ದೇವಸ್ಥಾನಕ್ಕೆ ಅಂಟಿ ಬೆಳೆದಿದ್ದ ಬೃಹತ್ ಮರ ತೆಗೆಸಿದ ನಮ್ಮ ಸಾಹಸ

ಹಿಂದೂ ದಮ೯ದ ನಾನು ಮುಸ್ಲಿಂ ದಮ೯ದ ಗನ್ನಿಸಾಹೇಬರಿಗೆ ಮೆಕ್ಕಾ ಯಾತ್ರೆ ಮಾಡಿಸಿದ್ದು

     ಹಿಂದೂ ದಮ೯ದವನು ಮುಸ್ಲಿ೦ ಗೆಳೆಯರಿಗೆ ಮೆಕ್ಕಾ ಯಾತ್ರೆ ಮಾಡಿಸಬಹುದೆ? ಮುಸ್ಲಿಂ ಗೆಳೆಯ ಈ ರೀತಿ ಮೆಕ್ಕಾ ಯಾತ್ರೆ ಮಾಡಿದರೆ ಹರಾಂ ಅಂತೆ ಅಂತ ಒಂದು ಸುದ್ದಿ ನಮ್ಮ ಊರಲ್ಲಿ ಪ್ರಾರಂಭವಾಗಿತ್ತು.     ಬಹುಶಃ ಇದು ಅಪರೂಪದ ಪ್ರಕರಣ ಆದ್ದರಿಂದ ಸ್ಥಳೀಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಇರಲಿಲ್ಲ, ಜೊತೆಗೆ ಮತ್ಸರ, ಹೊಟ್ಟೆಕಿಚ್ಚು ಬೇರೆ ಸೇರಿದ್ದರಿಂದ ಮೆಕ್ಕಾ ಯಾತ್ರೆಗೆ ತಯಾರಿ ನಡೆಸಿದವರಿಗೆ ಒಂದು ರೀತಿ ಕಿರಿಕಿರಿ ಆದರೆ, ಮೆಕ್ಕಾ ಯಾತ್ರೆ ಮಾಡಿಸಲು ಹೊರಟ ಹಿಂದೂ ದಮಿ೯ಯನಿಗೆ ಹಿಂದಿನಿಂದ ಹೋಗಿ ಹೋಗಿ ಸಾಬರಿಗೆ ಮೆಕ್ಕಾ ಕಳಿಸಲು ಅವನಿಗೆ ಬುದ್ಧಿ ಇಲ್ಲ ಅಂತ ಕುಹಕ ಬೇರೆ.       ಇದು ನಾನೂ ಮತ್ತು ನನ್ನ ಹಿರಿಯ ಮಿತ್ರರಾದ ಗನ್ನಿ ಸಾಹೇಬರು 2007 ರಲ್ಲಿ ಅನುಭವಿಸಿದ ಪ್ರಕರಣವಿದು, ಇದಕ್ಕೆ ಒಂದು ಸಕಾರಣ ಇತ್ತು ಮತ್ತು ನಮ್ಮುರ ದೇವಸ್ಥಾನದಲ್ಲಿ ನಾನು ಗನ್ನಿಸಾಬರಿಗೆ ಒಂದು ಮಾತು ಕೊಟ್ಟಿದ್ದೆ.      2006ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಎಂಬ ನಮ್ಮ ಊರಲ್ಲಿ ಗಣಪತಿ ದೇವಸ್ಥಾನ ಕಟ್ಟಿಸಿ ಪ್ರತಿಷ್ಟಾಪನೆ ನಡೆಯಿತು, ಅಲ್ಲಿವರೆಗೆ ಇಡಿ ಹೋಬಳಿಯಲ್ಲಿ ಗಣಪತಿ ದೇವಸ್ಥಾನವೇ ಇರಲಿಲ್ಲ, ಯಡೇಹಳ್ಳಿಯಲ್ಲಿ ಎರಡು ಚಚ್೯ ಮತ್ತು ಒಂದು ಮಸೀದಿ ಇತ್ತು, ಗಣಪತಿ ದೇವಸ್ಥಾನದ ದೇವರ ವಿಗ್ರಹ ಕೋಲಾರ ಜಿಲ್ಲ...

ಭಕ್ತ ಕನಕದಾಸರ ಶಂಖ, 600 ವಷ೯ ಇತಿಹಾಸದ್ದು.

ಕನಕದಾಸರು ಬಳಸಿದ್ದ ಶoಖ ಈಗ ಕಾಗಿನೆಲೆ ದೇವಸ್ಥಾನದಲ್ಲಿ ಸಂರಕ್ಷಿಸಿಡಲಾಗಿದೆ. ಕನಕದಾಸರು ಮೊದಲಿಗೆ ಕಾಗಿನೆಲೆಗೆ ಬಂದು ನರಸಿಂಹ ಸ್ವಾಮಿ ದೇವಾಲಯದಲ್ಲಿ ಇದನ್ನ ಊದಿದಾಗ ಸುತ್ತಲಿನ 7 ಹಳ್ಳಿಗಳಿಗೆ ಶಂಖಾನಾದ ಕೇಳಿ ಜನ ಬಂದಿದ್ದರಂತೆ, ಈಗಲೂ ಈ ಶಂಖ ಊದಿದರೆ ಬೆರೆಲ್ಲ ಶಂಖಗಿಂತ ಹೆಚ್ಚಿನ ಶಂಖಾನಾದ ಬರುತ್ತೆ.    ಇದರ ಜೊತೆ ಅವರು ಬಳಸುತ್ತಿದ್ದ ಮರದ ಬಿಕ್ಷಾಪಾತ್ರ ಕೂಡ ಇದೆ.      ಉಡುಪಿಯ ಕನಕನ ಕಿಂಡಿಗರುವ ಮಹತ್ವ, ಕನಕದಾಸರ ಸಾಹಿತ್ಯ, ಹಾವೇರಿ ಜಿಲ್ಲೆಯ ಬಾಡಾದಲ್ಲಿರುವ ಕನಕದಾಸರು ಹುಟ್ಟಿದ ಮನೆ, ಕೋಟೆ ಮತ್ತು ವಸ್ತು ಸಂಗ್ರಹಾಲಯ, ಕಾಗಿನೆಲೆಯಲ್ಲಿರುವ ಅವರ ಸಮಾದಿ ಕನಕರ ನೆನಪು ಸದಾ ಹಸಿರಾಗಿಡುವ ಐತಿಹಾಸಿಕ ಸ್ಮರಣೆಯ ಸ್ಥಳಗಳು.     ಇದನ್ನೆಲ್ಲ ನೋಡುವ ಅವಕಾಶ ನನಗೆ ಒದಗಿ ಬಂದದ್ದು ನನಗೆ ಒಂದು ಸುಸ೦ದಭ೯.      https://youtu.be/9NNITwY0LIM

ದೇವನೂರು ಮಹಾದೇವರ ಪೋನ್ ಬ0ದಾಗ.........

ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ. ನೀವು ದಸರಾ ಎದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಸಂದಭ೯ ಹಾಗಿತ್ತು ನಿರಾಕರಿಸಿದೆ, ಈ ಸಾರಿಯ ಕುವೆಂಪು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು........................... ಮೈಸೂರಿಗೆ ಬನ್ನಿ ಅಂತ ಆಮಂತ್ರಿಸಿದರು.ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿದೆ, ಮುಖತಃ ಅವರನ್ನ ಬೇಟಿ ಮಾಡಲು ಉತ್ಸುಕನಾಗಿದ್ದೇನೆ.(4 ನವೆಂಬರ್ 20l 6)     ನಿನ್ನೆ ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು.   ನವೆ೦ಬರ 4ರಂದು ನಾನು ಅದರೊಂದಿಗೆ...

ಮಹಾನ್ ಮಾನವತಾವಾದಿ ಯೋಮಕೇಶ್ವರಗೌಡರು.

ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.       ಇವರನ್ನ ಯಾಕೆ ಸ್ಮರಿಸ...