Skip to main content

Posts

Blog number 3412.ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ - 2

#ಕುಗ್ರಾಮದಿಂದ_KAS_ಸ್ಥಾನದವರೆಗೆ #ಕಾಳೇಶ್ವರ_ದರ್ಮಪ್ಪನವರ_ಸಂದರ್ಶನ_ಭಾಗ_2 https://youtu.be/41oArS_Pr7Q?si=SuefbjDydoxxMWLt #sagar #muncifhighschool #Riponpet #hosanagara    ಒಂದೇ ಬಾರಿಗೆ ಸಾಗರದ ಮುಸ್ಸಿಪ್ ಹೈಸ್ಕೂಲಿನ ನಾಲ್ಕು ಅಧ್ಯಾಪಕರು KAS ಪಾಸು ಮಾಡುತ್ತಾರೆ.     ಹೊಸನಗರ ತಾಲೂಕಿನ ಹರತಾಳು ಸಮೀಪದ #ನಂದಿಗದ_ಗುಂಡಪ್ಪನವರು ಸಾಗರದ ಮುನ್ಸಿಪ್ ಹೈಸ್ಕೂಲ್ ಉನ್ನತಿಗೆ ಶ್ರಮಿಸಿದ್ದರು.    ಹೀಗೆ ಅನೇಕ ವಿಚಾರಗಳನ್ನ ಈ ಸಂದರ್ಶನದಲ್ಲಿ ದರ್ಮಪ್ಪನವರು ನೆನಪು ಮಾಡಿದ್ದಾರೆ.

Blog number 3411. ಕಾಳೇಶ್ವರ ಧರ್ಮಪ್ಪ ಸಾಹೇಬರ ಸಂದರ್ಶನ ಭಾಗ 1

#ಸಂದರ್ಶನ_ಭಾಗ_1 #ನಮ್ಮ_ಹೆಮ್ಮೆ_ನಮ್ಮೂರ_ಕಾಳೇಶ್ವರ_ದರ್ಮಪ್ಪನವರು https://youtu.be/7g5Uz5g6Uts?si=cA6Qq3RUMk2-EnJ3 #KAS #dharmappa #ripponpet #hosanagara   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣೆಯ ಈ ಸಂದರ್ಶನ ಗ್ರಾಮೀಣ ಯುವ ಜನತೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವಂತದ್ದಾಗಿದೆ.    ಹುಟ್ಟಿದ ಊರು ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಕಾಳೇಶ್ವರ,ತಾಯಿ ತವರು ಮನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಗಿಳಾಲಗುಂಡಿ.    ಪ್ರಾಥಮಿಕ ಶಿಕ್ಷಣ ಗಿಳಾಲಗುಂಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣ ರಿಪ್ಪನಪೇಟೆ ಸರ್ಕಾರಿ ಮಾದ್ಯಮಿಕ ಶಾಲೆ, ಪ್ರೌಡ ಶಿಕ್ಷಣ ಆನಂದ ಪುರಂ ಸರ್ಕಾರಿ ಪ್ರೌಡಶಾಲೆ, ಪಿಯುಸಿ ಶಿವಮೊಗ್ಗದ NES ಕಾಲೇಜಿನಲ್ಲಿ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್.   ಕೆ.ದರ್ಮಪ್ಪನವರು ಈಗ ಚಿಕ್ಕಮಗಳೂರು ಉಡುಪಿ ಲೋಕಸಭಾ ಸದಸ್ಯರಾದ ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರೈವೇಟ್ ಸೆಕ್ರೆಟರಿ ಆಗಿ ಮುಂದುವರಿದಿದ್ದಾರೆ.    ಕುಗ್ರಾಮದಿಂದ  KAS ಪದವಿ ತನಕ ಅವರು ಸಾಗಿ ಬಂದ ಹಾದಿಯ ವಿವರಣ...

Blog number 3410. ಮಮತಾ ಸಾಗರ್ ವಾಚಿಸಿದ "ನಾನು ಅಂದರೆ...." ಕವನ ಬೆಂಕಿ ಬಿರುಗಾಳಿ

#ನಾನು_ಎಂದರೆ.... #ಮಮತಾಸಾಗರ್_ವಾಚಿಸಿದ_ಕವನ #ಬೆಂಕಿ_ಬಿರುಗಾಳಿ_ಆಗಿದೆ #ಕವನ_ವಾಚನ_ಪೂರ್ಣವಾಗಿ_ನೋಡಿ #ಮಮತಾಸಾಗರ್_ಬಗ್ಗೆ_ನಾನು_ಬರೆದ_ಲೇಖನ ಇನ್ನೊಮ್ಮೆ  #mamathasagar #Nanu #viral #poem #akhilakarnatakawriters   8ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ವಾಚಿಸಿದ #ನಾನು ಎಂಬ ಶಿರ್ಷಿಕೆಯ ಕವನದ ಬಗ್ಗೆ ಪರ- ವಿರೋದದ ಚರ್ಚೆ ನಡೆಯುತ್ತಿದೆ. World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು.  ಖ್ಯಾತ ಸಾಹಿತಿ ಅಂಕಣಕಾರ #ಅರವಿಂದಚೊಕ್ಕಾಡಿ ಅವರು ಈ ಕವನ ವಾಚನದ ಬಗ್ಗೆ  ಅವರ ಪೇಸ್ ಬುಕ್ ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ... ಕವಿತೆ ನಿಗೂಢವಾಗಿರಬೇಕು ನಿಜ. ಕವಿತೆಯ ಕುರಿತ ವಿಮರ್ಶೆಯೂ ನಿಗೂಢವೇ ಆಗಿದ್ದರೆ ವಿಮರ್ಶೆಯನ್ನೂ ಕವಿತೆಯೆಂದೇ ಪರಿಗಣಿಸಬೇಕಾದೀತು.    ಕಡೆಗೂ ಚರ್ಚೆಯಾಗುತ್ತಿರುವ ಕವಿತೆಯನ್ನು ನೋಡಿದೆ. ಅದು ನವ್ಯ ಸ್ಕೂಲ್ ಆಫ್ ಥಾಟ್‌ನ ಕವಿತೆ.‌ ಸಮಾಜದ ಮಡಿವಂತ ಮನಸ್ಥಿತಿಯನ್ನು ಒಡೆಯುವ ಹಾಗೆಯೇ ಬರೆದು ಹಾಕುವ ಹಾಗೆ ಬರೆಯಬೇಕೆಂಬುದು ನವ್ಯದ ಸಿದ್ಧಾಂತ. ಬಹುಶಃ ನವ್ಯರಲ್ಲಿ ಅಡಿಗರೊಬ್ಬರೇ ಸೋಷಿಯಲ್ ಡೀಸೆನ್ಸಿಯನ್ನು ಸಾಹಿತ್ಯ...

Blog number 3409. ಎಕ್ಕದ ಗಿಡದ ಮಹತ್ವ

#ಎಕ್ಕದಗಿಡ #ಆಯುರ್ವೇದ_ಮತ್ತು_ಧಾರ್ಮಿಕದಲ್ಲಿ_ಮಹತ್ವದ_ಗಿಡ #ಶಿವನ_ಗಣಪತಿಯ_ಪೂಜೆಲ್ಲಿ_ಎಕ್ಕೆ_ಹೂವಿನ_ಬಳಕೆ #ಬಿಳಿಎಕ್ಕೆಗಿಡದ_ಬೇರಿನಿಂದ_ಗಣಪತಿ_ವಿಗ್ರಹ #ganapathi #lordshiva #ayurveda #calotropigigantea #KRSParty #ravikrishnareddy #lsumitra    ರೆಡ್ಡಿ ಅವರು ಒಂದು ಪೋಸ್ಟ್ ಹಾಕಿದ್ದರು ಓದಿ....  ಎಕ್ಕದ ಹೂವು. ಉತ್ತರ ಭಾರತದಲ್ಲಿ ಈ ಹೂವಿನ ಮಾಲೆಯನ್ನು ಶಿವನಿಗೆ ವಿಶೇಷವಾಗಿ ಅರ್ಪಿಸುತ್ತಾರೆ. ನಮ್ಮಲ್ಲಿ ಇದೊಂದು ಏನಕ್ಕೂ ಬಾರದ ಯಃಕಶ್ಚಿತ್ ಕಳೆ ಗಿಡ. ಇನ್ನೂ ಅರಳದ ಇದರ ಒಳಗೆ ಗಾಳಿ ತುಂಬಿದ ಮೊಗ್ಗಿನ ಬುಡ್ಡೆಯನ್ನು ಅಮುಕಿದರೆ ಅದು ಟಪ್ ಎಂದು ಶಬ್ದ ಮಾಡುತ್ತ ಒಡೆಯುತ್ತದೆ. ನಾನಂತೂ ಚಿಕ್ಕಂದಿನಿಂದ ಈ ಗಿಡ ಮತ್ತು ಅದರ ಅರಳದ ಮೊಗ್ಗಿನ ಬುಡ್ಡೆ ಕಂಡರೆ ಅದನ್ನು ಅಮುಕಿ, ಅದರಿಂದ ಹೊಮ್ಮುವ ಟಪ್ ಶಬ್ದವನ್ನು ಆನಂದಿಸುತ್ತೇನೆ. ನೀವೂ ಹಾಗೆ ಮಾಡಿದ್ದೀರಾ?... ಇದಕ್ಕೆ ನನ್ನ ಪ್ರತಿಕ್ರಿಯೆ... ಎಕ್ಕದ ಹೂವು ಶಿವನಿಗೆ ಗಣಪತಿಗೆ ಅರ್ಪಿಸಿದರೆ, ಎಕ್ಕದ ಎಲೆ ಶನೀಶ್ವರನಿಗೆ ಅರ್ಪಿಸುತ್ತಾರೆ.  ಶಿರಡಿ ಸಮೀಪದ ಶನಿ ಶಿಂಗಾಪುರದಲ್ಲಿ ಹೂವಿನ ಪ್ರಸಾದಕ್ಕಿಂತ ಎಕ್ಕದ ಎಲೆಯೇ ಪ್ರಸಾದವಾಗಿ ನೀಡುತ್ತಾರೆ.   ಮನೆ ಎದರು ಎಕ್ಕದ ಗಿಡ ಇದ್ದರೆ ಅದೃಷ್ಟ ಎಂಬ ನಂಬಿಕೆ ಇದೆ.   ಎಕ್ಕದ ಗಿಡ ಜಾನುವಾರುಗಳು ತಿನ್ನುವುದಿಲ್ಲ ಆದ್ದರಿಂದ ನಮ್ಮ ಸಂಸ್ಥೆ ಮತ್ತು ಮನೆ ಎದುರು ಈ ಗಿಡ ನೆಟ್ಟಿದ್...

Blog number 3408. ಕೋವಿಶೀಲ್ಡ್ ಮೊದಲ ಡೋಸ್ ಪಡೆದ ದಿನ

#ಕೋವಿಶೀಲ್ಡ_ವ್ಯಾಕ್ಸಿನ್_ಮೊದಲ_ಡೋಸ್_ಪಡೆದ_ನೆನಪುಗಳು #ನಾಲ್ಕು_ವರ್ಷದ_ಹಿಂದೆ_ಈ_ಲಸಿಕೆಗಾಗಿ_ಕಾಯುತ್ತಿದ್ದ_ನೆನಪು_ನಿಮಗೆ_ಇದೆಯಾ? #ಭಯಪಟ್ಟವರು_ಎಷ್ಟೋ_ಜನ_ಕಾರಣ_ಗೊತ್ತಾ?    ಆಗ ಲಸಿಕೆ ಬಗ್ಗೆ ಸುಳ್ಳು ಸುದ್ದಿಯೂ ಪ್ರಾರಂಭ ಆಗಿತ್ತು, ಲಸಿಕೆ ತೆಗೆದುಕೊಂಡರೆ ಜೀವಮಾನದಲ್ಲಿ ಒಮ್ಮೆಯೂ ಮದ್ಯಪಾನ ಮಾಡುವಂತಿಲ್ಲ ಎಂಬುದು ಅನೇಕ ಪಾನಪ್ರಿಯರಿಗೆ ಭಯ ಉಂಟು ಮಾಡಿತ್ತು, ಲಸಿಕೆ ಬೇಕಾದರೆ ಬಿಡುತ್ತೇವೆ ಆದರೆ ಮಧ್ಯಪಾನ ಬಿಡುವುದಿಲ್ಲ ಎಂಬ ಅವರ ತೀಮಾ೯ನ ಮತ್ತು ನಿರಾಶೆಯಿಂದ ಲಸಿಕೆಯಿ೦ದ ದೂರ ಉಳಿಯಲು ಒಂದು ಕಾರಣ ಆಗಿತ್ತು ನಂತರ ಕ್ರಮೇಣ ಈ ವಾತಾವರಣ ಸರಿ ಆಯಿತು.   ಇದು ತಮಾಷೆಗಾಗಿ ಕುಡಿಯುವವರ ಕಾಲೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಜೋಕು ನಿಜವೆಂದೇ ಅನೇಕರು ಬಾವಿಸಿದ್ದರು.   #ಆದರೆ_ಮದ್ಯಪಾನಕ್ಕೂ_ಲಸಿಕೆಗೂ_ಯಾವುದೇ_ಸಂಬಂದವಿಲ್ಲ_ಎಲ್ಲರೂ_ಕೊರಾನ_ಲಸಿಕೆ_ತೆಗೆದುಕೊಳ್ಳಬಹುದು #ಎನ್ನುವ_ಪ್ರಚಾರ_ಸಕಾ೯ರ_ಮಾಡಬೇಕಿತ್ತು_ಆದರೆ_ಮಾಡಲಿಲ್ಲ. #coronavirus2020 #covid #Covishield #vaccine #VaccineSideEffects       2020-21 ರ  ಸಮಯದಲ್ಲಿ ಇಡೀ ವಿಶ್ವವವೇ ಚಿಕಿತ್ಸೆ ಇಲ್ಲದ ಹೊಸ ಸೊಂಕು ಕೋವಿಡ್ -19 ನಿಂದ ತತ್ತರಿಸಲು ಪ್ರಾರಂಬಿಸಿತ್ತು.    ಆಗ ಕೇಳಿ ಬಂದಿದ್ದು ಇದಕ್ಕೆ ರೋಗ ನಿರೋದಕ ಲಸಿಕೆ ಚುಚ್ಚುಮದ್ದು ಒಂದೇ ಪರಿಹಾರ ಆದರೆ ಅದನ್ನು ಕಂಡು ...

Blog number 3407. ನ್ಯಾಮತಿ ತರಕಾರಿ ಉಮೇಶಣ್ಣರ ನೆನಪುಗಳು

#ಶಿವಮೊಗ್ಗದ_ತರಕಾರಿ_ಉಮೇಶಣ್ಣ_ಇನ್ನು_ನೆನಪು_ಮಾತ್ರ #ನ್ಯಾಮತಿ_ಉಮೇಶ್_ಆಚಾರ್_ಅವರ_ನಿಜನಾಮ #ಅವರಿಂದ_22_ಅಕ್ಟೋಬರ್_2016_ರಂದು_ನಮ್ಮ_ಚಂಪಕಪ್ಯಾರಡೈಸ್_ಉದ್ಘಾಟನೆ_ಮಾಡಿಸಿದ್ದೆ. #vegetables #nyamathi #ಶಿವಮೊಗ್ಗ #apmcmarket #umeshanna        ಶಿವಮೊಗದ APMC ತರಕಾರಿ ಉಮೇಶಣ್ಣ ವಿಶೇಷ ವ್ಯಕ್ತಿಗಳು ಅವರ ಊರು ನ್ಯಾಮತಿ, ಅಸಾಧಾರಣ ನೆನಪಿನ ಶಕ್ತಿ, ವ್ಯವಹಾರದಲ್ಲಿ ಚತುರತೆ, ಎದುರಿನಲ್ಲಿರುವವರ ಮನಸ್ಸನ್ನು ರೀಡಿಂಗ್ ಮಾಡುವ ಚಾಕ ಚಕ್ಯತೆ ಅವರಲ್ಲಿತ್ತು.   ಅವರಿಗೆ ಪರಿಚಯ ಇಲ್ಲದವರೇ ಇಲ್ಲ ಅಷ್ಟು ಪಾದರಸದಂತ ಚಟುವಟಿಕೆಯ ವ್ಯಕ್ತಿ ಉಮೇಶಣ್ಣ.    ತರಕಾರಿ ಮಾರುಕಟ್ಟೆಯ ವಿಚಾರದಲ್ಲಿ ಇಡೀ ದೇಶದ ಮಾರುಕಟ್ಟೆಗಳನ್ನು ನೋಡಿ ಬಂದವರು ಅವರು,ವಿಶ್ವಕರ್ಮ ಸಮಾಜಕ್ಕೆ ಸೇರಿದ  ಅವರಿಗೆ  ಗೆಳೆಯರು ಮಾತ್ರ ಇಡೀ ರಾಜ್ಯಾದ್ಯಂತ ಇದ್ದರು.  ಅವರಿಗೆ ಪ್ರತಿ ವರ್ಷ ಅವರ ಕಾರು ಬದಲಿಸಲೇಬೇಕು ಅವರ ಕಾರು ಚಾಲನೆ ವೇಗ 120 ಕಿಲೋಮೀಟರ್ ಗಿಂತ ಹೆಚ್ಚಿನ ವೇಗ.   ಮಾಜಿ ಮಂತ್ರಿ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ  ರಾಮುಲು ಅವರನ್ನು ನಮ್ಮಲ್ಲಿಗೆ ಕರೆ ತಂದು ಪರಿಚಯಿಸಿದ್ದು ಇದೇ ಉಮೇಶಣ್ಣ, ರಾಮುಲು ಅವರಿಗೆ ಉಮೇಶಣ್ಣರ ಮೇಲೆ ವಿಶೇಷ ಗೌರವ ಇತ್ತು, ಇವರಿಬ್ಬರೂ ಬಳ್ಳಾರಿಯಲ್ಲಿ ಸರಾಯಿ ಕಂಪೆನಿಯಲ್ಲಿ ಒಟ್ಟಾಗಿ ನೌಕರಿ ಮಾಡಿದ್ದರಂತೆ.   ತ...

Blog number 3406. ಶ್ರೀ 108 ಕುಂತು ಸಾಗರ ಮಹಾರಾಜರು ಕೊಲಾಪುರ

#ಆಚಾರ್ಯಶ್ರೀ108_ಶ್ರೀಕುಂತುಸಾಗರಜೀ_ಮಹಾರಾಜರ #ಪುಣ್ಯಚರಣ_ಸ್ಪರ್ಶದ_ಬಾಗ್ಯ_ನಮ್ಮ_ಸಂಸ್ಥೆಗೆ #ನನ್ನ_ಪೂರ್ವ_ಜನ್ಮದ_ಪುಣ್ಯದ_ಫಲ_ಈ_ಸತ್ಸಂಗಳು ದೇಶದ ಅಗ್ರಗಣ್ಯ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರಜಿ ಜೈನ ಮುನಿ ಮಹಾರಾಜರನ್ನ ದರ್ಶನ ಮಾಡುವ ಸದಾವಕಾಶ ನಾಳೆ ಸಾಗರದ ಭಕ್ತವೃಂದಕ್ಕೆ ಸಿಗಲಿದೆ ಈ ಸುವರ್ಣಾವಕಾಶ ಕಳೆದು ಕೊಳ್ಳಬಾರದು. https://youtu.be/Jrkz48Bo634?si=YhkDb8X_5Z77FdQQ #jainism #kunthusagarji #kunthugirikshetra #munimaharaj #sudeerpatil #Humcha    ಭಾರತ ದೇಶದ ಜೈನ ಮುನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಸಮೀಪದ ಕುಂತು ಗಿರಿ ಕ್ಷೇತ್ರದ ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ ಜಿ ಮಹಾರಾಜರು ಇವತ್ತು ತಮ್ಮ ಪರ್ಯಟನೆಯಲ್ಲಿ ಹುಂಚಾದಿಂದ ಸಾಗರ ಮಾರ್ಗವಾಗಿ ಸಂಚರಿಸುವಾಗ ತಮ್ಮ ಆಹಾರ ಸೇವನೆಗಾಗಿ ನಮ್ಮ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಬಂದಿದ್ದರು.   ಕುಂತುಗಿರಿ ಕ್ಷೇತ್ರ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಗ್ಲಿ ಮಾರ್ಗವಾಗಿ 22 ಕಿ.ಮೀ ದೂರದಲ್ಲಿದೆ ಅಲ್ಲಿ 40 ಎಕರೆ ಪ್ರದೇಶದಲ್ಲಿ ಕುಂತುಗಿರಿ ಕ್ಷೇತ್ರ ಇದೆ ಇದರ ಸ್ಥಾಪಕರು ಆಚಾರ್ಯ ಶ್ರೀ 108 ಶ್ರೀ ಕುಂತು ಸಾಗರ್ ಜಿ. ಒಂದು ವಿಶೇಷವೆಂದರೆ 1961- 62 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕಾಗಿ ಇವರು ತಮ್ಮ ಗುರು ಮಹಾವೀರ ಕೀರ್ತಿ ಮಹಾರಾಜರ ಜೊತೆ ಬಂದವರು ವಾಪಸು ಹೋಗುವಾಗ ಹುಂಚಾದ ಶ್ರೀ ಪದ್...