#ಶಿವಮೊಗ್ಗದ_ತರಕಾರಿ_ಉಮೇಶಣ್ಣ_ಇನ್ನು_ನೆನಪು_ಮಾತ್ರ
#ನ್ಯಾಮತಿ_ಉಮೇಶ್_ಆಚಾರ್_ಅವರ_ನಿಜನಾಮ
#ಅವರಿಂದ_22_ಅಕ್ಟೋಬರ್_2016_ರಂದು_ನಮ್ಮ_ಚಂಪಕಪ್ಯಾರಡೈಸ್_ಉದ್ಘಾಟನೆ_ಮಾಡಿಸಿದ್ದೆ.
#vegetables #nyamathi #ಶಿವಮೊಗ್ಗ #apmcmarket #umeshanna
ಶಿವಮೊಗದ APMC ತರಕಾರಿ ಉಮೇಶಣ್ಣ ವಿಶೇಷ ವ್ಯಕ್ತಿಗಳು ಅವರ ಊರು ನ್ಯಾಮತಿ,
ಅಸಾಧಾರಣ ನೆನಪಿನ ಶಕ್ತಿ, ವ್ಯವಹಾರದಲ್ಲಿ ಚತುರತೆ, ಎದುರಿನಲ್ಲಿರುವವರ ಮನಸ್ಸನ್ನು ರೀಡಿಂಗ್ ಮಾಡುವ ಚಾಕ ಚಕ್ಯತೆ ಅವರಲ್ಲಿತ್ತು.
ಅವರಿಗೆ ಪರಿಚಯ ಇಲ್ಲದವರೇ ಇಲ್ಲ ಅಷ್ಟು ಪಾದರಸದಂತ ಚಟುವಟಿಕೆಯ ವ್ಯಕ್ತಿ ಉಮೇಶಣ್ಣ.
ತರಕಾರಿ ಮಾರುಕಟ್ಟೆಯ ವಿಚಾರದಲ್ಲಿ ಇಡೀ ದೇಶದ ಮಾರುಕಟ್ಟೆಗಳನ್ನು ನೋಡಿ ಬಂದವರು ಅವರು,ವಿಶ್ವಕರ್ಮ ಸಮಾಜಕ್ಕೆ ಸೇರಿದ ಅವರಿಗೆ ಗೆಳೆಯರು ಮಾತ್ರ ಇಡೀ ರಾಜ್ಯಾದ್ಯಂತ ಇದ್ದರು.
ಅವರಿಗೆ ಪ್ರತಿ ವರ್ಷ ಅವರ ಕಾರು ಬದಲಿಸಲೇಬೇಕು ಅವರ ಕಾರು ಚಾಲನೆ ವೇಗ 120 ಕಿಲೋಮೀಟರ್ ಗಿಂತ ಹೆಚ್ಚಿನ ವೇಗ.
ಮಾಜಿ ಮಂತ್ರಿ ಬಳ್ಳಾರಿಯ ಲೋಕಸಭಾ ಸದಸ್ಯರಾಗಿದ್ದ ರಾಮುಲು ಅವರನ್ನು ನಮ್ಮಲ್ಲಿಗೆ ಕರೆ ತಂದು ಪರಿಚಯಿಸಿದ್ದು ಇದೇ ಉಮೇಶಣ್ಣ, ರಾಮುಲು ಅವರಿಗೆ ಉಮೇಶಣ್ಣರ ಮೇಲೆ ವಿಶೇಷ ಗೌರವ ಇತ್ತು, ಇವರಿಬ್ಬರೂ ಬಳ್ಳಾರಿಯಲ್ಲಿ ಸರಾಯಿ ಕಂಪೆನಿಯಲ್ಲಿ ಒಟ್ಟಾಗಿ ನೌಕರಿ ಮಾಡಿದ್ದರಂತೆ.
ತರ್ಕ ಬದ್ಧವಾದ ಮಾತು, ತೂಕದ ಮಾತುಗಳು ಉಮೇಶಣ್ಣ ಅಂದರೆ ಒಳ್ಳೆಯ ಪಂಚಾಯಿತಿದಾರರು ಎಂಬ ಹೆಸರು ಇತ್ತು.
ನ್ಯಾಮತಿಯ ಜನ ವ್ಯವಹಾರದಲ್ಲಿ ಬಳಸುವ ಮಾತಾಡುವ ರಹಸ್ಯ ಸಂಕೇತದ ಭಾಷೆ ಅವರಿಗೆ ಗೊತ್ತಿತ್ತು
ತಮ್ಮ ಜೇಬಿನಲ್ಲಿರುತ್ತಿದ್ದ ನೋಟಿನ ಕಂತೆ ಹೊರತೆಗೆಯದೇ ಇಂಥದ್ದೇ ಡಿನೋಮಿನೇಷನ್ ನೋಟನ್ನು ಮಾತ್ರ ತಮ್ಮ ಬೆರಳುಗಳಿಂದಲೇ ಗುರುತಿಸಿ ಹೊರ ತೆಗೆಯುವ ವಿಶೇಷ ಜಾಣ್ಮೆಯ ಕೌಶಲ್ಯವು ಅವರಿಗೆ ಇತ್ತು.
ನಮ್ಮ ಸಂಸ್ಥೆಗೆ 2016ರಲ್ಲಿ ಜನರೇಟರ್ ಖರೀದಿ ಮಾಡುವಲ್ಲಿ ಮತ್ತು ನಮ್ಮ ದೊಡ್ಡದಾದ ಹೊಸ ಲಾಡ್ಜ್ 2018 ರಿಂದ ಕಾಮಗಾರಿ ಪ್ರಾರಂಬಿಸಲು ಹೆಚ್ಚು ಒತ್ತಾಯಿಸಿದವರು ಈ ಉಮೇಶಣ್ಣನವರು.
ಕೆಲವು ವರ್ಷ ವಾರಕ್ಕೆ ಎರಡು ದಿನ ಸಾಗರ ಮಾರ್ಗದಲ್ಲಿ ತರಕಾರಿ ಸರಬರಾಜು ಮಾಡುತ್ತಿದ್ದಾಗ ನಮ್ಮ ಸಂಸ್ಥೆಗೆ ತರಕಾರಿ ಇವರಿಂದಲೇ ಖರೀದಿಸುತ್ತಿದ್ದೆ ಆಗ ವಾರದಲ್ಲಿ ಎರೆಡು ಬಾರಿ ಇವರ ಬೇಟಿ ಆಗುತ್ತಿತ್ತು.
ಎಂತದೇ ವಸ್ತುವನ್ನು ಮಾರಾಟ ಮಾಡುವ ಮತ್ತು ಎಂಥವರನ್ನೂ ಪರಿಚಯ ಮಾಡಿಕೊಂಡು ಅವರ ಆತ್ಮೀಯ ಬಳಗದಲ್ಲಿ ಸೇರುವಂತ ವ್ಯಕ್ತಿತ್ವ ಅವರದ್ದು.
ಒಂದು ಸಂಗತಿ ಅವರು ಹೇಳಿದ್ದು ಇನ್ನೂ ನೆನಪಿದೆ... ಅವರು 90ರ ದಶಕದಲ್ಲಿ ಬೆಂಗಳೂರಿಂದ ಹೆಲಿಕ್ಯಾಪ್ಟರ್ ನಲ್ಲಿ ಪ್ರಯಾಣಿಸಿ ತಮ್ಮ ಊರು ನ್ಯಾಮತಿಯಲ್ಲಿ ಇಳಿಯಲೇ ಬೇಕೆಂಬ ಆಸೆಗೆ ಬಿದ್ದು ಬಾಡಿಗೆ ಹೆಲಿಕಾಪ್ಟರ್ ನಲ್ಲಿ ನ್ಯಾಮತಿಗೆ ಬಂದಿಳಿದರಂತೆ, ಇವರ ಗೆಳೆಯರು ಇವರನ್ನ ಹೆಲಿಪ್ಯಾಡನಿಂದ ಅವರು ತಂದ ಬುಲೆಟ್ ಬೈಕನಲ್ಲಿ ಇವರನ್ನ ಮನೆಗೆ ಸೇರಿಸಿದ್ದರಂತೆ ಅಂದರೆ ಹೆಲಿಕ್ಯಾಪ್ಟರ್ ಪ್ರಯಾಣ ಮಾಡಬೇಕೆನ್ನುವ ಅದನ್ನು ತಿಳಿಯಬೇಕೆನ್ನುವ ಅವರ ಅದಮ್ಯಆಸಕ್ತಿ ಹೇಗಾದರೂ ಸಾದಿಸಲೇ ಬೇಕೆಂಬ ಛಲ ಅವರದ್ದು.
ಬಾಲ್ಯದಿಂದ ಅತ್ಯಂತ ಕಷ್ಟದಿಂದ ಜೀವನ ಸಾಗಿಸಿದ ಕಥೆಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದರು,ಅದೆಲ್ಲವನ್ನು ದಾಟಿ ಶಿವಮೊಗ್ಗದಲ್ಲಿ ಆಸ್ತಿ ಅಂತಸ್ತುಗಳನ್ನು ಪಡೆಯುವ ತನಕ ಅವರು ಸಾಗಿ ಬಂದ ಜೀವನದ ಕಥೆ - ವ್ಯಥೆಗಳನ್ನು ನನ್ನ ಹತ್ತಿರ ಹೇಳಿಕೊಂಡಿದ್ದರು.
ಒಂದೆರಡು ಬಾರಿ ಅವರ ಮನೆಗೆ ಹೋಗಿ ಚಹಾ ಕುಡಿದಿದ್ದೆ, ನಾಲ್ಕು ವರ್ಷ ಹಿಂದೆ ಅವರಿಗೆ ಪೆರಾಲಿಸಸ್ ಆದಾಗ ಅವರಿಗೆ ಕೇರಳದ ಕೋಟೆಕಲ್ ಆಯುರ್ವೇದ ಔಷಧಿ ತಲುಪಿಸಲು ಅವರ ಮನೆಗೆ ಹೋಗಿದ್ದೆ.
ನಂತರ ಅವರ ಆರೋಗ್ಯ ಸುಧಾರಿಸಿ ಪುನಃ ವಾಹನ ಚಲಾಯಿಸುವಂತ ಆರೋಗ್ಯ ಪಡೆದಿದ್ದರು ಆದರೆ ದುರಾದೃಷ್ಟ ಪುನಃ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದವರು ನಿನ್ನೆ ಸಂಜೆ 4-ಏಪ್ರಿಲ್- 2025ರ ಶುಕ್ರವಾರ ಆರು ಗಂಟೆಗೆ ಇಹಲೋಕ ಯಾತ್ರೆ ಮುಗಿಸಿದರೆಂದು ಅವರ ಹಿರಿಯ ಪುತ್ರ ವಿನೋದ್ ಫೋನಾಯಿಸಿದಾಗ ತಿಳಿಯಿತು, ಈ ಮಧ್ಯದಲ್ಲಿ ಅವರ ಬೇಟಿ ಮಾಡ ಬೇಕೆಂದಿದ್ದೆ ಅದು ಸಾಧ್ಯವಾಗಲಿಲ್ಲ.
ನ್ಯಾಮತಿ ತರಕಾರಿ ಉಮೇಶಣ್ಣ ವಿಶೇಷ ಬುದ್ಧಿ ಶಕ್ತಿಯ ವ್ಯಕ್ತಿ ಅವರಿಗೇನಾದರು ಬಾಲ್ಯದಲ್ಲಿ ವಿದ್ಯಾಬ್ಯಾಸ ದೊರೆತಿದ್ದರೆ ಇನ್ನೂ ದೊಡ್ಡ ಸಾಧನೆ ಮಾಡುತ್ತಿದ್ದರೇನೊ ಇಂತಹ ವಿಶೇಷ ವ್ಯಕ್ತಿಗಳೆಂದರೆ ನನಗೆ ಆಸಕ್ತಿ ಆದ್ದರಿಂದಲೇ ಅವರ ನನ್ನ ಗೆಳೆತನದ ನೆನಪು ಶಾಶ್ವತವಾಗಿರಲಿ ಎಂದು ನಮ್ಮ ಚಂಪಕಾ ಪ್ಯಾರಾಡೈಸ್ 2016 ರಲ್ಲಿ ಇವರಿಂದ ಉದ್ಘಾಟನೆ ಮಾಡಿಸಿದ್ದೆ.
Comments
Post a Comment