#ಕೋವಿಶೀಲ್ಡ_ವ್ಯಾಕ್ಸಿನ್_ಮೊದಲ_ಡೋಸ್_ಪಡೆದ_ನೆನಪುಗಳು
#ನಾಲ್ಕು_ವರ್ಷದ_ಹಿಂದೆ_ಈ_ಲಸಿಕೆಗಾಗಿ_ಕಾಯುತ್ತಿದ್ದ_ನೆನಪು_ನಿಮಗೆ_ಇದೆಯಾ?
#ಭಯಪಟ್ಟವರು_ಎಷ್ಟೋ_ಜನ_ಕಾರಣ_ಗೊತ್ತಾ?
ಆಗ ಲಸಿಕೆ ಬಗ್ಗೆ ಸುಳ್ಳು ಸುದ್ದಿಯೂ ಪ್ರಾರಂಭ ಆಗಿತ್ತು, ಲಸಿಕೆ ತೆಗೆದುಕೊಂಡರೆ ಜೀವಮಾನದಲ್ಲಿ ಒಮ್ಮೆಯೂ ಮದ್ಯಪಾನ ಮಾಡುವಂತಿಲ್ಲ ಎಂಬುದು ಅನೇಕ ಪಾನಪ್ರಿಯರಿಗೆ ಭಯ ಉಂಟು ಮಾಡಿತ್ತು, ಲಸಿಕೆ ಬೇಕಾದರೆ ಬಿಡುತ್ತೇವೆ ಆದರೆ ಮಧ್ಯಪಾನ ಬಿಡುವುದಿಲ್ಲ ಎಂಬ ಅವರ ತೀಮಾ೯ನ ಮತ್ತು ನಿರಾಶೆಯಿಂದ ಲಸಿಕೆಯಿ೦ದ ದೂರ ಉಳಿಯಲು ಒಂದು ಕಾರಣ ಆಗಿತ್ತು ನಂತರ ಕ್ರಮೇಣ ಈ ವಾತಾವರಣ ಸರಿ ಆಯಿತು.
ಇದು ತಮಾಷೆಗಾಗಿ ಕುಡಿಯುವವರ ಕಾಲೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಜೋಕು ನಿಜವೆಂದೇ ಅನೇಕರು ಬಾವಿಸಿದ್ದರು.
#ಆದರೆ_ಮದ್ಯಪಾನಕ್ಕೂ_ಲಸಿಕೆಗೂ_ಯಾವುದೇ_ಸಂಬಂದವಿಲ್ಲ_ಎಲ್ಲರೂ_ಕೊರಾನ_ಲಸಿಕೆ_ತೆಗೆದುಕೊಳ್ಳಬಹುದು
#ಎನ್ನುವ_ಪ್ರಚಾರ_ಸಕಾ೯ರ_ಮಾಡಬೇಕಿತ್ತು_ಆದರೆ_ಮಾಡಲಿಲ್ಲ.
#coronavirus2020 #covid #Covishield #vaccine #VaccineSideEffects
2020-21 ರ ಸಮಯದಲ್ಲಿ ಇಡೀ ವಿಶ್ವವವೇ ಚಿಕಿತ್ಸೆ ಇಲ್ಲದ ಹೊಸ ಸೊಂಕು ಕೋವಿಡ್ -19 ನಿಂದ ತತ್ತರಿಸಲು ಪ್ರಾರಂಬಿಸಿತ್ತು.
ಆಗ ಕೇಳಿ ಬಂದಿದ್ದು ಇದಕ್ಕೆ ರೋಗ ನಿರೋದಕ ಲಸಿಕೆ ಚುಚ್ಚುಮದ್ದು ಒಂದೇ ಪರಿಹಾರ ಆದರೆ ಅದನ್ನು ಕಂಡು ಹಿಡಿದು ಜನರ ಮೇಲೆ ಪ್ರಯೋಗ ಮಾಡಿ ಪಲಿತಾಂಶ ನೋಡಿದ ಮೇಲೆ ಸಾವ೯ಜನಿಕರಿಗೆ ನೀಡಬಹುದು ಇದಕ್ಕೆ ಒಂದರಿಂದ ಎರೆಡು ವರ್ಷ ಆದರೂ ಬೇಕು ಎನ್ನುವ ತಜ್ಞರ ಮಾತು.
ಅಲ್ಲಿಯವರೆಗೆ ಮಾಸ್ಕ ದರಿಸುವ, ಸೋಪಿನಿಂದ ಕೈ ತೊಳೆದುಕೊಳ್ಳುವ ಹಾಗೂ ಜನ ಸಂದಣಿಯಿಂದ ದೂರವಿರಬೇಕೆಂಬ ಮುಂಜಾಗೃತೆ ಮೀರಿಯೂ ಅನೇಕರನ್ನ ಕಳೆದುಕೊಂಡ ಘಟನೆಯೂ ನಡೆಯಿತು.
2021ರ ಮಾರ್ಚ್ ನಲ್ಲಿ ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನಂತರದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಕಾ೯ರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಕಾಯ೯ಕ್ರಮ ಯಶಸ್ವಿಯಾಗಿ ನಡೆಯಿತು.
ಇದರ ನಡುವೆ ಲಸಿಕೆ ಬಗ್ಗೆ ಸುಳ್ಳು ಸುದ್ದಿಯೂ ಪ್ರಾರಂಭ ಆಗಿತ್ತು, ಲಸಿಕೆ ತೆಗೆದುಕೊಂಡರೆ ಮದ್ಯಪಾನ ಮಾಡುವಂತಿಲ್ಲ ಎಂಬುದು ಅನೇಕ ಪಾನಪ್ರಿಯರು ನಿರಾಶೆಯಿಂದ ಲಸಿಕೆಯಿ೦ದ ದೂರ ಉಳಿಯಲು ಒಂದು ಕಾರಣ ಆಗಿದೆ.
#ಆದರೆ_ಮದ್ಯಪಾನಕ್ಕೂ_ಲಸಿಕೆಗೂ_ಯಾವುದೇ_ಸಂಬಂದವಿಲ್ಲ_ಎಲ್ಲರೂ_ಕೊರಾನ_ಲಸಿಕೆ_ತೆಗೆದುಕೊಳ್ಳಬಹುದು
#ಎನ್ನುವ_ಪ್ರಚಾರ_ಸಕಾ೯ರ_ಮಾಡಬೇಕಿತ್ತು.
ಇವತ್ತಿಗೆ ನಾಲ್ಕು ವರ್ಷದ ಹಿಂದೆ ನಾನು 7 - ಏಪ್ರಿಲ್-2021 ರಂದು ನಮ್ಮೂರು ಆನಂದಪುರಂನ ಶ್ರೀಮತಿ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಕೋವಿಶೀಲ್ಡ್ ಡೋಸ್ ತೆಗೆದುಕೊಂಡಿದ್ದೆ ಮುಂದಿನ 28 ದಿನದ ನಂತರ ಅಥವ 35 ದಿನದ ಒಳಗೆ ಎರಡನೆ ಡೋಸು ಪಡೆಯಬೇಕು.
ಅದರ ನಂತರದ 15 ದಿನದಲ್ಲಿ ದೇಹ ಕೊರಾನಾ ರೋಗ ನಿರೋದಕ ಶಕ್ತಿ ಉಂಟಾಗಿಸಿಕೊಳ್ಳುತ್ತದೆ ಅಲ್ಲಿಯವರೆಗೆ ಜಾಗೃತರಾಗಿರಬೇಕು ಅದರ ನಂತರವೂ ಕೊವಿಡ್ ಸೊಂಕು ತಾಗುವುದಿಲ್ಲ ಅಂತ ಹೇಳಲಾಗುವುದಿಲ್ಲ ಆದರೆ ಸೊಂಕಿನ ತೀಕ್ಷಣತೆ ಪ್ರಾಣ ಹಾನಿ ಇರುವುದಿಲ್ಲ ಎಂಬುದು ತಜ್ಞರ ಸಂಶೋದನೆ.
ಆದರೆ ನಾಲ್ಕು ವರ್ಷಗಳಲ್ಲಿ ನಾವು ಇದನ್ನೆಲ್ಲ ಮರೆತು ಬಿಟ್ಟಿದ್ದೇವೆ #Public_memories_always_less
Comments
Post a Comment