#ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ಅಧ್ಯಕ್ಷರಿಗೆ_ಶೋಕಾಸ್_ನೋಟೀಸ್
#ನಾಲ್ಕು_ಬಾರಿ_ಜಿಲ್ಲಾ_ಸಾಹಿತ್ಯ_ಪರಿಷತ್_ಅದ್ಯಕ್ಷರಾಗಿರುವ_ಮಂಜುನಾಥರು
#ನಿರಂತರವಾಗಿ_ಕಾಯ೯ಕ್ರಮಗಳನ್ನ_ನಡೆಸುತ್ತಾರೆ
ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಡೆಸುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಅಪರಾದ ಅಂತ ಜೋಷಿ ಶೋಕಾಸ್ ನೋಟೀಸ್ ನೀಡಿದ್ದಾರೆ.
ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಅದು ನಡೆಸುವ ಸಮ್ಮೇಳನಗಳು ಮಹೇಶ್ ಜೋಷಿ ಅವರಿಂದ ಸ್ಥಗಿತವಾಗಬಾರದು.
ಸದಾ ಒಂದಲ್ಲ ಒಂದು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳುವ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ಶಿವಮೊಗ್ಗ ಜಿಲ್ಲೆಯಲ್ಲಿ ಇವರಷ್ಟೆ ಕ್ರಿಯಾಶೀಲರಾದ ದೊಡ್ಡ ಸಂಖ್ಯೆಯ ಕಾರ್ಯಪಡೆ ಇವರ ಜೊತೆ ಇದೆ.
ಈಗ ರಾಜ್ಯ ಅಧ್ಯಕ್ಷರಾಗಿರುವ ಮಹೇಶ್ ಜೋಷಿ ರಾಜ್ಯ ಸರ್ಕಾರದಿಂದ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದು ರಾಜ್ಯದ ಮಂತ್ರಿಯಂತೆ ಆಗಿದ್ದಾರೆ ಅವರ ವೈಯಕ್ತಿಕ ದ್ವೇಷ ಸಾಧನೆಗಾಗಿ ಶಿವಮೊಗ್ಗ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ತೊಂದರೆ ಆಗಬಾರದು.
#kannada #sahitya #parishath #maheshjoshi #Manjunath #shivamogga #ShowCauseNotice
ಮಂಜುನಾಥರನ್ನ ಸೋಲಿಸಲು ಈಗಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ್ ಜೋಷಿ ಶತಾಯಗತಾಯ ಪ್ರಯತ್ನಿಸಿ ವಿಫಲರಾದ ನಂತರ ಇವರಿಬ್ಬರ ಸಂಬಂದ ಎಣ್ಣೆ ಶೀಗೆ ಕಾಯಿಯಂತಾಗಿದೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.
ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು ಮುಂದೆ 1935ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.
ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ.
ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಷಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗ ರಾಜ್ಯ ಅಧ್ಯಕ್ಷರಾಗಿರುವ ಮಹೇಶ್ ಜೋಷಿ ರಾಜ್ಯ ಸರ್ಕಾರದಿಂದ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದು ರಾಜ್ಯದ ಮಂತ್ರಿಯಂತೆ ಆಗಿದ್ದಾರೆ.
ರಾಜ್ಯ ಮಟ್ಟದಲ್ಲಿ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ ಅನ್ನುವುದು ಸಾಹಿತ್ಯ ಪರಿಷತ್ ಸಂಘಟನೆಯವರೇ ಹೇಳ ಬೇಕು ಆದರೆ ತನ್ನ ವಿರೋಧಿಗಳನ್ನ ಹಳಿಯಲು ಮಾತ್ರ ಅವರು ಸದಾ ಮುಂದಿದ್ದಾರೆ ಅನ್ನುವುದಕ್ಕೆ ಇವರು ನೀಡಿದ ಶೋಕಾಸ್ ನೋಟಿಸ್ ಸಾಕ್ಷಿ ಆಗಿದೆ.
ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಸದಾ ಕ್ರಿಯಾಶೀಲರು ಅದಕ್ಕೆ ಸಾಕ್ಷಿ ಅವರು ಈಗಾಗಲೇ ಅನೇಕ ವರ್ಷಗಳಿಂದ ಸಂಘಟಿಸುತ್ತಾ ಬಂದಿರುವ ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಇದು ಪ್ರತಿ ವರ್ಷ ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಇದು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುತ್ತಾ ಬಂದಿದೆ ಇದನ್ನು ಮುಂದಿನ ದಿನಗಳಲ್ಲಿ ಸಾಹಿತ್ಯ ಆಸಕ್ತರು ಬೆಂಬಲಿಸ ಬೇಕು ಅದನ್ನು ವಿರೋದಿಸುವುದು ಸರ್ವತಾ ಸರಿಯಲ್ಲ.
ಇದೇ ರೀತಿ ಮಂಜುನಾಥರು ಶಿವಮೊಗ್ಗ ಜಿಲ್ಲಾ ಜನಪದ ಪರಿಷತ್ ಕೂಡ ಹುಟ್ಟು ಹಾಕಿದ್ದಾರೆ ಅದೂ ಕೂಡ ತಾಲ್ಲೂಕು ಮತ್ತು ಜಿಲ್ಲಾ ಸಮಾವೇಶ ನಡೆಸುತ್ತದೆ.
ಈ ಎಲ್ಲಾ ಸಂಘಟನೆಗಳ ಜಿಲ್ಲಾ ಅಧ್ಯಕ್ಷ ಸ್ಥಾನ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರೇ ಆಗಿರುವುದು ಎಷ್ಟು ಸರಿ ಅವರೇ ನಿರ್ದರಿಸಬೇಕು ಈ ರೀತಿ ಖಾಸಾಗಿ ಸಂಘಟನೆ ಸ್ಥಾನ ಮಾನವನ್ನ ಸಾಹಿತ್ಯ ಪರಿಷತ್ ಅಧ್ಯಕ್ಷರಾದವರು ಚಲಾಯಿಸುವುದು ರಾಜ್ಯ ಸಾಹಿತ್ಯ ಪರಿಷತ್ ಬೈಲಾಗೆ ವಿರುದ್ದ ಎಂಬುದು ಜೋಷಿ ಶೋಕಾಸ್ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಮಂಜುನಾಥರು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡುತ್ತಿರುವ ಸಾಹಿತ್ಯ ಸಂಘಟನೆಗಳನ್ನ ಯಾರೂ ವಿರೋದಿಸಲು ಸಾಧ್ಯವಿಲ್ಲ ಇವರ ಕಾರ್ಯಕ್ರಮಗಳನ್ನ ರಾಜ್ಯ ಸಾಹಿತ್ಯ ಪರಿಷತ್ ಅನುಕರಿಸಿ ಅಳವಡಿಸಿಕೊಂಡು ರಾಜ್ಯದಾದ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸ ಬಹುದಿತ್ತು ಆದರೆ ಇದನ್ನು ವಿರೋದಿಸುವುದಕ್ಕಷ್ಟೆ ಜೋಷಿ ಮುಂದಾಗಿರುವುದು ಸರಿ ಅನ್ನಿಸುವುದಿಲ್ಲ.
ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಅಪರಾದ ಅಂತ ಜೋಷಿ ಶೋಕಾಸ್ ನೋಟೀಸ್ ನೀಡಿದ್ದಾರೆ.
ಇಲ್ಲಿ ತಾವು ಸೋಲಿಸಲು ಸಾಧ್ಯವಾಗದ ಮಂಜುನಾಥರನ್ನ ತಾಂತ್ರಿಕವಾಗಿ ಪದಚ್ಯುತರನ್ನಾಗಿ ಮಾಡುವ ಜೋಷಿ ಉದ್ದೇಶ ಕುವೆಂಪು ನಾಡಾದ ಶಿವಮೊಗ್ಗ ಜಿಲ್ಲೆ ಸಾಹಿತ್ಯಾಸಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡ ಬೇಕು.
1995-2000 ರಲ್ಲಿ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಮಂಜುನಾಥರು ಅವರ ಪತ್ರಿಕೆಯ ವರದಿಗಾಗಿ ಜಿಲ್ಲಾ ಪಂಚಾಯತ್ ಸಭೆಗಳಿಗೆ ಬಂದಾಗ ನೋಡುತ್ತಿದ್ದೆ.
ಇವರ ಕಾಲೇಜು ಸಹಪಾಠಿ ಈಗಿನ ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ ಮೊದಲ ಅವಧಿ ಅಧ್ಯಕ್ಷರಾಗಿದ್ದ (ಈಗ ಮಾಜಿ ಅಧ್ಯಕ್ಷರು) ತ.ಮ.ನರಸಿಂಹ ಯಾವಾಗಲು ಮ೦ಜುನಾಥರ ಕ್ರಿಯಾಶೀಲತೆ ಬಗ್ಗೆ ಮಾತಾಡುತ್ತಿರುತ್ತಾರೆ.
ಸದಾ ಒಂದಲ್ಲ ಒಂದು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳುವ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ಶಿವಮೊಗ್ಗ ಜಿಲ್ಲೆಯಲ್ಲಿ ಇವರಷ್ಟೆ ಕ್ರಿಯಾಶೀಲರಾದ ದೊಡ್ಡ ಸಂಖ್ಯೆಯ ಕಾರ್ಯಪಡೆ ಇವರ ಜೊತೆ ಇದೆ.
ಶಿವಮೊಗ್ಗ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಅದು ನಡೆಸುವ ಸಮ್ಮೇಳನಗಳು ಮಹೇಶ್ ಜೋಷಿ ಅವರಿಂದ ಸ್ಥಗಿತವಾಗಬಾರದು.
Comments
Post a Comment