#ಈ_ತರುಣ_ಜೈನ_ಮುನಿಗಳ_ಕಣ್ಣಿನ_ಕಾಂತಿ_ನೋಡಿ
#ಬ್ರಹ್ಮಚರ್ಯ_ಸನ್ಯಾಸ
#ಅಷ್ಟು_ಸುಲಭವೆ?
#ಜೈನ_ಮುನಿಗಳು_ಈ_ಸಾಧನೆ_ಮಾಡುತ್ತಾರೆ.
https://youtube.com/shorts/wrtHlX6iaGI?si=KnzFsE5AiMvzDgoS
#jainmuni #Sanyas #brahnacharya #digambar
ಹಂತ ಹಂತವಾಗಿ ಪಂಚೇಂದ್ರಿಯಗಳನ್ನ_ನಿಷ್ಕ್ರಿಯಗೊಳಿಸಿ
ಚಳಿ ಮಳೆ ಬಿಸಿಲುಗಳಿಗೆ ದಿಗಂಬರರಾಗಿ ಮಾನವ ಜನ್ಮದ ದೇಹ ಒಡ್ಡಿಕೊಂಡು ಆದ್ಯಾತ್ಮದ ಸಾಧನೆಗೈಯುವುದು ಎಷ್ಟು ಸನ್ಯಾಸಿಗಳಿಗೆ ಸಾಧ್ಯ? ಆದರೆ ಜೈನ ಧರ್ಮದಲ್ಲಿ ಇದನ್ನು ಸಾದಿಸುತ್ತಾರೆ.
ಜೈನ ಧರ್ಮದಲ್ಲಿ ದಿಗಂಬರ ಸನ್ಯಾಸಿಗಳು ಸಂಪೂರ್ಣ ವಸ್ತ್ರ ತ್ಯಾಗ, ಜೀವಮಾನ ಪೂರ್ತಿ ಬರಿಗಾಲ ಸಂಚಾರ, ದಿನಕ್ಕೆ ಒಮ್ಮೆ ಮಾತ್ರ ನೀರು ಆಹಾರ, ತಮ್ಮ ದೇಹದ ಕೂದಲು ತಮ್ಮ ಕೈಯಿಂದಲೇ ಕಿತ್ತು ತೆಗೆಯುವ ಕೇಶ ಲೋಚ, ಇಚ್ಚಾ ಮರಣದ ಸಲ್ಲೇಖನ ವೃತ ಹೀಗೆ ಇವೆಲ್ಲ ಕಠೋರ ಸಾಧನೆ ತಿಳಿಯದೇ ಇದ್ದರೆ ಜೈನ ಧರ್ಮ ತಿಳಿಯಲು ಸಾಧ್ಯವಿಲ್ಲ.
ಈ ಸಂತರನ್ನ ನೋಡಿ ಎಷ್ಟು ಚಿಕ್ಕ ವಯಸ್ಸು ಆಗಲೇ ದಿಗಂಬರರಾಗಿ ದೀಕ್ಷೆ ಪಡೆದಿದ್ದಾರೆಂದರೆ ಇವರ ಸಾಧನೆ ಸಾಮಾನ್ಯವಲ್ಲ ದೀಕ್ಷೆ ಪಡೆಯಲು ಅನೇಕ ಹಂತಗಳ ಮನೋನಿಗ್ರಹದ ಪರೀಕ್ಷೆಗಳನ್ನ ದಾಟಿ ಬರಬೇಕು ಅದೆಲ್ಲ ದಾಟಿದ ಮೇಲೆಯೇ ಇವರು ಅರ್ಹರೆಂದರೆ ಮಾತ್ರ ಇವರ ಗುರು ಇವರಿಗೆ ದೀಕ್ಷೆ ನೀಡುತ್ತಾರೆ.
ಇವತ್ತು ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಆಚಾಯ೯ ಶ್ರೀ 108 ಶ್ರೀ ಕುಂತು ಸಾಗರ ಮಹಾರಾಜರ ಜೊತೆ ಆಗಮಿಸಿ ತಂಗಿ ಆಹಾರ ಸೇವಿಸಿದ ಈ ತರುಣ ಜೈನ ಮುನಿಗಳು ಶ್ರೀ108 ಸಮರ್ಥ ಭದ್ರಜೀ ಮಹಾರಾಜರು ನನಗೆ ಹೇಳಿದ್ದು ಕೇಳಿ "ನಾವು ಸಂತರು ನಾವಾಗಿ ನಿಮ್ಮಲ್ಲಿಗೆ ಬರಲಿಲ್ಲ ನಿಮ್ಮ ಪುಣ್ಯ ನಮ್ಮನ್ನು ನಿಮ್ಮಲ್ಲಿಗೆ ಸೆಳೆದುಕೊಂಡು ಬಂದಿದೆ" ಎಂತಹ ಮಾತು.
ಇಂತಹ ಸತ್ಸಂಗಗಳು ನಮ್ಮಂತಹ ಹುಲುಮಾನವರ , ಹಣ - ಯಶಸ್ಸು - ಯೌವನದ ದುರಹಂಕಾರದ ಕಣ್ಣಿನ ಪೊರೆ ಕಳಚುತ್ತದೆ.
ಸತ್ಸಂಗಗಳು ಲಭಿಸಲು ಪೂರ್ವ ಜನ್ಮದ ಪುಣ್ಯವೂ ಬೇಕಂತೆ.
Comments
Post a Comment