Skip to main content

Posts

Blog number 1343. ಕನ್ನಡ ಮೀಡಿಯಂ 24X7 ಚಾನಲ್ ನ ಹೊನ್ನಾಳಿ ಚಂದ್ರಶೇಖರ್ ನನ್ನ ಅತಿಥಿ, ವಿದ್ಯಾರ್ಥಿ ಜೀವನದಿಂದ ಜನಪರ ಹೋರಾಟಗಾರರು, ವಕೀಲರು - ಪತ್ರಕರ್ತರು - ರಂಗಕಮೀಗಳು - ಸಾಹಿತಿಗಳು ಇವರಿಗೆ ಆನಂದಪುರಂನ ನಂಟು.

#ಕನ್ನಡ_ಮೀಡಿಯಂ_24_7. #ಹೊನ್ನಾಳಿ_ಚಂದ್ರಶೇಖರ್ #ಪತ್ರಿಕಾ_ಅಕಾಡಮಿ_ಪ್ರಶಸ್ತಿ_ವಿಜೇತರು #ಕನ್ನಡ_ಪ್ರಭ_ಜಿಲ್ಲಾ_ವರದಿಗಾರರಾಗಿದ್ದರು. #ನಿನ್ನೆ_ನನ್ನ_ಆಫೀಸಿನಲ್ಲಿ.   ಹೊನ್ನಾಳಿ ಚಂದ್ರಶೇಖರ್ ವಿದ್ಯಾರ್ಥಿ ಜೀವನದಿಂದಲೇ ಜನಪರ ಹೋರಾಟಗಾರರಾಗಿದ್ದವರು, ರಂಗಕರ್ಮಿ, ವಕೀಲರು, ಸಾಹಿತಿಗಳು, ಪತ್ರಕರ್ತರು ಈಗ ಇವರದ್ದೇ ಸ್ವಂತದ್ದಾದ ಕನ್ನಡ ಮೀಡಿಯಂ 24X7 ಚಾನೆಲ್ ಮೂಲಕ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಜನ ಈ ಚಾನೆಲ್ ನೋಡುವಂತೆ ಮಾಡಿ ಈಗ ರಾಜ್ಯದಾದ್ಯಂತ ದಿನೇ ದಿನೇ ವೀಕ್ಷಕರನ್ನು ಸೆಳೆಯುತ್ತಿರುವುದು ಮುಂದಿನ ದಿನದಲ್ಲಿ ಶಿವಮೊಗ್ಗ ಚಂದ್ರಶೇಖರ್ ರಾಜ್ಯದ ಪ್ರಮುಖ ಪತ್ರಕರ್ತರ ಸಾಲಿನಲ್ಲಿ ಸೇರಲಿದ್ದಾರೆ.    1995-2000 ಇಸವಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸುವ ಸಂದರ್ಭ ಬಂದಿತ್ತು ಇದಕ್ಕೆ ಪ್ರೇರಣೆ ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘದ ಆಗಿನ ಕ್ರಿಯಾಶೀಲ ಅಧ್ಯಕ್ಷ ಗೆಳೆಯ ಹಾ.ಮೋ. ಬಾಷಾ.    ಆಗೆಲ್ಲ ಯುವಜನ ಮೇಳದಲ್ಲಿ ಖಾಯಂ ತೀರ್ಪುಗಾರರಾಗಿ ಇರುತ್ತಿದ್ದವರ ಮೇಲೆ ಅವರ ತೀರ್ಪಿನ ಮೇಲೆ ಅನುಮಾನಗಳು ಇರುತ್ತಿತ್ತು, ಒಂದು ರೀತಿ ಮ್ಯಾಚ್ ಪಿಕ್ಸಿಂಗ್.    ಇದಕ್ಕೆ ಇತಿಶ್ರೀ ಹಾಡಲು ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಲ್ಕೀಷ್ ಬಾನು ಮತ್ತು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ...

Blog number 1342. ರಾಮಚಂದ್ರಪುರ ಮಠದ ಕೇಸಿನಲ್ಲಿ ಸರ್ಕಾರದ ಪರ ಸಾಕ್ಷಿ ಆಗಿದ್ದ ಅಭಿರಾಮ ಹೆಗ್ಗಡೆ ಅಂಗಾಂಗ ವೈಫಲ್ಯದಿಂದ 31ನೇ ವಯಸ್ಸಿನಲ್ಲಿ ಸಾಗರದ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

#ನಾಲ್ಕು_ವರ್ಷದ_ಹಿಂದೆ_ನಾಡಿನ_ಎಲ್ಲಾ_ಮಾಧ್ಯಮಗಳಲ್ಲಿ_ಸುದ್ದಿ_ಆಗಿದ್ದ_ಅಭಿರಾಮಹೆಗ್ಗಡೆ #ಬಾಗಿಲ_ಕೀ_ರಂದ್ರದಲ್ಲಿ_ನೋಡಿದ_ರಾಸಲೀಲೆಯ_ಪ್ರತ್ಯಕ್ಷದರ್ಶಿ #ಈ_ಸ್ಟಾರ್_ವಿಟ್ನೆಸ್_ಮೇಲೆ_5_ಕೋಟೆ_ಮಾನನಷ್ಟ_ದಾವೆ #ನಿನ್ನೆ_ಸಾಗರದ_ಆಸ್ಪತ್ರೆಯಲ್ಲಿ_ದೇಹಾಂತ್ಯ? #ಸ್ವಾಮಿಗಳ_ಅತ್ಯಾಚಾರ_ಕೇಸಿನಲ್ಲಿ_ಪ್ರೈಮ್_ವಿಟ್ನೆಸ್ #ಕೇವಲ_31ವರ್ಷದಲ್ಲಿ_ಇಹಲೋಕ_ತ್ಯಜಿಸಿದ_ಸುದ್ದಿ   ಅಭಿರಾಮ ಹೆಗ್ಗಡೆ ಸಾಗರ ತಾಲ್ಲೂಕಿನ ಗಡಿ ಕಾನಲೆ ಸೈದೂ ರಿನಿಂದ 5-6 ಕಿಮಿ ದೂರದ ಸಿದ್ದಾಪುರ ಪೇಟೆಗೆ ಸಮೀಪದ ಅಕ್ಕುಂಜಿ ಹತ್ತಿರದ ಅಣಜಿಬೈಲು ಹಳ್ಳಿಯವರು.   ಇವರಿಗೆ ಬಾಲ್ಯದಲ್ಲಿ ಯಾವುದೋ ಅನಾರೋಗ್ಯ ಇದರಿಂದ  ಅಸಾಧ್ಯ ಹಸಿವು ಇದಕ್ಕೆ ಯಾವುದೋ ಬೂತದ ಕಾಟವೆನ್ನುವ ಭಾವನೆ ಕುಟುಂಬದಲ್ಲಿತ್ತು ಆಗ ಇವರ ಅಜ್ಜ ಸೊರಬ ತಾಲ್ಲೂಕಿನ ಮಳಲಗದ್ದೆಯ ಟಿ.ಜಿ.ರಾಯರು ಮೊಮ್ಮಗ ಅಭಿರಾಮನನ್ನು ರಾಮಚಂದ್ರಪುರ ಮಠಕ್ಕೆ ಸೇರಿಸುತ್ತಾರೆ ಅಲ್ಲಿ ಅಭಿರಾಮ ಆಶ್ಚರ್ಯ ರೀತಿಯಲ್ಲಿ ಗುಣಮುಖರಾಗುತ್ತಾರೆ ಮತ್ತು ಸ್ವಾಮೀಜಿಗಳ ಆಪ್ತ ಸಿಬ್ಬಂದಿಯಲ್ಲಿ ಒಬ್ಬರಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಾರೆ.   ಹಳೆಯ ಸ್ವಾಮಿಗಳ ಕಾಲದಲ್ಲಿ ಟಿ.ಜಿ.ರಾಯರು ಸರ್ವಾಧಿಕಾರಿ ಹುದ್ದೆ ನಿರ್ವಹಿಸಿದ್ದರು ಈಗಲೂ ಅವರಿಗೆ ಮಠದ ಆಡಳಿತ ಮಂಡಳಿಯಲ್ಲಿ ಗೌರವದ ಸ್ಥಾನವಿದೆ.    ಅಭಿರಾಮ ಅತ್ಯಂತ ಬುದ್ಧಿವಂತ ಮತ...

Blog number 1341. ದೇಶದ ಅತ್ಯಂತ ಹಿರಿಯ ಸಕ್ರಿಯ ಪತ್ರಕರ್ತ 98ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಾಮ್ರೇಡ್ ಲಿಂಗಪ್ಪ ಇಹಲೋಕ ತ್ಯಜಿಸಿದ್ದಾರೆ.

 ಶಿವಮೊಗ್ಗದ ಕಾಮ್ರೇಡ್ ಲಿಂಗಪ್ಪನವರಿಗೆ 98ನೇ ವರ್ಷ ಪೂರೈಸಿದ ಸಮಯದಲ್ಲಿ ಸನ್ಮಾನ ಸ್ವೀಕರಿಸಿದ್ದ ಕ್ರಾಂತಿ ಭಗತ್ ಪತ್ರಿಕೆ ಸಂಪಾದಕರು ನಿನ್ನೆ (24- ಮಾರ್ಚ್ -2023) ರಂದು ಇಹಲೋಕ ತ್ಯಜಿಸಿದ್ದಾರೆ, ಸದಾ ಕೆಂಪು ಬಣ್ಣದ ಉಡುಗೆ ತೊಡುಗೆ ಎಲ್ಲದೂ ಕೆಂಪು ದೇಶದ ಅತ್ಯಂತ ಹಿರಿಯ ಸಕ್ರಿಯ ಪತ್ರಕರ್ತರು ಇವರು December 20, 2022 #ಕಾಮ್ರೇಡ್_ಲಿಂಗಪ್ಪರ_ನಿಮಗೇನು_ಗೊತ್ತು. #ಇದೇ_ತಿಂಗಳ_31ಕ್ಕೆ_ಸನ್ಮಾನವಿದೆ #ಅವರಿಗೆ_98ರ_ಪ್ರಾಯ. #ಶಿವಮೊಗ್ಗದ_ಕ್ರಾಂತಿ_ಭಗತ್_ಪತ್ರಿಕೆ_ಸಂಪಾದಕರು. #ಸದಾ_ಸೂಟು_ಬೂಟು_ಹ್ಯಾಟು_ಎಲ್ಲದೂ_ಕೆಂಪು. #ಒಂಟಿ_ದ್ವನಿಯ_ಏಕ_ವ್ಯಕ್ತಿ_ಹೋರಾಟ_ಇವರದ್ದು #ಜೊತೆಗೆ_ಜಾಗಟೆ_ಶಂಖ   ನಾನು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಸಭೆಗಳು ಶಿವಮೊಗ್ಗದ ಡಿಸಿಸಿ ಸಭಾಂಗಣದಲ್ಲಿ ನಡೆಯುತ್ತಿತ್ತು ಅಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಕೆಂಪು ಟೋಪಿ, ಕೆಂಪು ಕೋಟು, ಕೆಂಪು ಟೈ, ಕೆಂಪು ಪ್ಯಾಂಟು, ಕೆಂಪು ಬೆಲ್ಟ್ ಮತ್ತು ಕೆಂಪು ಸಾಕ್ಸ್ ಬೂಟು ಮಾತ್ರ ಕಪ್ಪು ಧರಿಸಿದ್ದ ಕಾಮ್ರೆಡ್ ಲಿಂಗಪ್ಪ ಹೊಳೆಯುತ್ತಿದ್ದರು.   ಇವರನ್ನ 1985ರಿಂದ ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ಕ್ರಾಸಿನ ಸಮಾಜವಾದಿ ಪಿ.ಪುಟ್ಟಯ್ಯನವರ ಪ್ರಕೃತಿ ಮುದ್ರಣಾಲಯದಲ್ಲಿ ನೋಡುತ್ತಿದ್ದ ಪರಿಚಯ ನನ್ನದು ಇವರ #ಕ್ರಾಂತಿ_ಭಗತ್ ಪತ್ರಿಕೆ ಅಲ್ಲೇ ಮುದ್ರಣ ಆಗುತ್ತಿತ್ತು.   ...

Blog number 1340. ನಿತ್ಯ ವಾಕಿಂಗ್ ಪ್ರಾರಂಬಿಸಲು ಏನೆಲ್ಲ ಮಿತಿ ? ದ್ವಡ ಮನಸ್ಸು ಮಾತ್ರ ಬೇಕು.

#ವಾಕಿಂಗ್_ಬಗ್ಗೆ_ಏನೆಲ್ಲ_ಮಿತಿ? #ವಾಕಿಂಗ್_ಪ್ರಾರಂಬಿಸಿ_ ಇವತ್ತಿಗೆ_ಮೂರು_ವರ್ಷ #ತೂಕದಲ್ಲಿ_30_ಕಿಲೋ_ಇಳಿದಿದೆ.    ಇದೇ ಲಾಕ್ ಡೌನ್ ಪ್ರಾರಂಭದ ಸಂದರ್ಭದಲ್ಲಿ ವಾಕಿಂಗ್ ಶುರು ಮಾಡಿದೆ (25-ಮಾರ್ಚ್ -2020 ರಿಂದ) ಆಗ130 ಕೆಜಿ ತೂಕದ ದೇಹ ವಾಕಿಂಗ್ ಗೆ ಸಹಕರಿಸುತ್ತಿರಲಿಲ್ಲ ಆದರೆ ತೂಕ ಇಳಿಸಿಕೊಳ್ಳುವ ದೃಡ ನಿದಾ೯ರ ಮಾಡಿ ಆಗಿತ್ತು.   ನನ್ನ ಸ್ವಂತ ನಿದಾ೯ರದಲ್ಲಿ ನನ್ನ ವಾಕಿಂಗ್ ದಿನಕ್ಕೆ ಒಂದು ಗಂಟೆ ಅವದಿಗೆ ಒಯ್ದು ನಿಲ್ಲಿಸ ಬೇಕಾಗಿತ್ತು ಆದರೆ ಆ ಸಂದರ್ಭದಲ್ಲಿ ಇದು ನನಗೆ ತುಂಬಾ ಕಷ್ಟದ ಅಸಾಧ್ಯದ ಕೆಲಸ ಆಗಿತ್ತು, ಸ್ಥೂಲಕಾಯದ ದೇಹ ಸಹಕರಿಸುತ್ತಿರಲಿಲ್ಲ.   ಆಗ ನಾನು ಮಾಡಿದ ತೀಮಾ೯ನ ಮೊದಲ ವಾರ ಪ್ರತಿ ನಿತ್ಯ 5 ನಿಮಿಷ ದಂತೆ ನಡೆಯಲು ಶುರು ಮಾಡಿದೆ, ಎರಡನೇ ವಾರ 10 ನಿಮಿಷ, ಮೂರನೇ ವಾರ 15 ನಿಮಿಷದಂತೆ ಹೀಗೆ 12ನೇ ವಾರಕ್ಕೆ ನಿತ್ಯ ಲೀಲಾಜಾಲವಾಗಿ ಒಂದು ಗಂಟೆ ವಾಕಿಂಗ್ ಮಾಡಲು ದೇಹ ಹೊಂದಿ ಕೊಂಡಿದ್ದು ನನಗೆ ನಂಬಲಾಗಲಿಲ್ಲ.   ನಾನು ವಾಕಿಂಗ್ ಗೆ ನಿಗದಿ ಮಾಡಿಕೊಂಡ ಜಾಗ ಮಾತ್ರ ನನ್ನ ಮನೆಯ ಮುಂದಿನ ಪಾಕಿ೯೦ಗ್ ಜಾಗ ಇದು 15 ಅಡಿ ಉದ್ದ ಮತ್ತು ಅಗಲ 10 ಅಡಿ ಮಾತ್ರದ್ದು, ನೇರ ನಡೆದರೆ 10 ಹೆಜ್ಜೆ ಮಾತ್ರ 8 ಆಕಾರದಲ್ಲಿ ನಡೆದರೆ 15 ಹೆಜ್ಜೆ ಆಗುವ ಚಿಕ್ಕ ಜಾಗ ಇದರಲ್ಲಿ ಒ0ದು ಗಂಟೆ ಕಾಲಾವದಿ ವಾಕಿಂಗ್ ನಾನು ಮಾಡುವುದು.   ರಸ್ತೆ ಮೇಲೆ ವಾಕಿಂಗ್ ಹೋದರೆ ಸಿಗುವವರ ಜೊತೆ ಮಾತಿಗೆ ನಿ...

Blog number 1339. ಮಧ್ಯಪಾನ ಮಾಡಿಯೇ ಕಿಗ್ಗ ಋಷ್ಯಶೃಂಗ ದೇವರ ರಥ ಎಳೆಯಬೇಕೆಂಬ ನಂಬಿಕೆಯ ಆಚರಣೆ ಇಲ್ಲಿದೆ.

#ಕಿಗ್ಗಾ_ಶೃಂಗೇಶ್ವರ_ಜಾತ್ರೆ_ವಿಶೇಷ_ಗೊತ್ತಾ ? #ಶೂದ್ರರು_ಕುಡಿದು_ರಥ_ಎಳೆಯುವ_ಪದ್ಧತಿಗೆ_ಕಾರಣ ?   ಕಿಗ್ಗಾ ಶೃಂಗೇರಿ ಮತ್ತು ಸಿರಿಮನೆ ಜಲಪಾತದ ಮಧ್ಯದ ಸಣ್ಣ ಊರು, ಶೃಂಗೇರಿಯಿಂದ 9 ಕಿ.ಮಿ. ದೂರದಲ್ಲಿದೆ.   ಕಿಗ್ಗಾದ ಜಾತ್ರೆ ನಂತರ ಮಳೆ ಬಂದೇ ಬರುತ್ತದೆ, ಇಲ್ಲಿ ನರಸಿಂಹ ಪರ್ವತ ಇದೆ, ಇಲ್ಲಿನ ದೇವಾಲಯ 11ನೇ ಶತಮಾನದಲ್ಲಿ ನಿಮಾ೯ಣವಾದ 4 ಅಡಿ ಎತ್ತರದ ಶಿವಲಿಂಗ ಇದೆ.   ಋಷಿ ಶೃಂಗೇಶ್ವರರು ಜಿಂಕೆಯ ಕೊಂಬಿನಿಂದ ಜನಿಸಿದರೆಂಬ ಸ್ಥಳ ಪುರಾಣ ಇದೆ, ರಾಜ್ಯದಲ್ಲಿ ಬರಗಾಲ ಬಂದಾಗೆಲ್ಲ ಇಲ್ಲಿ ಪೂಜೆ ಸಲ್ಲಿಸಿದಾಗ ಭರಪೂರ ಮಳೆ ಆಗುತ್ತದೆ.   ಮೂರು ದಿನದ ಹಿಂದೆ ಕಿಗ್ಗಾ ರಥೋತ್ಸವ ಆಯಿತು ಹಗಲಿನ ರಥೋತ್ಸವ ಅರ್ಚಕರು ಮತ್ತು ಬ್ರಾಹ್ಮಣರು ನೆರವೇರಿಸುತ್ತಾರೆ ಸಂಜೆ ಶೂದ್ರರೇ ರಥ ಎಳೆಯುವ ಪದ್ಧತಿ ಇದೆ.   ಇಲ್ಲಿನ ನಂಬಿಕೆ ಒಂದು ಈಗಲೂ ಆಚರಣೆಯಲ್ಲಿದೆ ಅದೇನೆಂದರೆ ಶೂದ್ರ ಭಕ್ತರು ಮದ್ಯಪಾನ ಮಾಡಿಯೇ ರಥ ಎಳೆಯುವುದು!?     ಯಾವುದೋ ಕಾಲದಲ್ಲಿ ಶೂದ್ರರು ಭಕ್ತಿ ಪೂರ್ವಕವಾಗಿ ರಥ ಎಳೆಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗದಿದ್ದಾಗ ಕಾಲಜ್ಞಾನಿಯಿಂದ ಮಧ್ಯಪಾನ ಮಾಂಸಹಾರ ಮಾಡಿ ರಥ ಎಳೆಯಲು ತಿಳಿಸಿದಂತೆ ಹೇಳಿಕೆ ಆದಾಗ ರಥ ಚಲಿಸಿದ್ದರಿಂದ ಈಗಲೂ ಈ ಪದ್ದತಿ ಚಾಲ್ತಿಯಲ್ಲಿದೆ.   ಸ್ಥಳಿಯ ಶೂದ್ರರಲ್ಲಿ ಈ ರಥೋತ್ಸವಕ್ಕಾಗಿ ದ್ರಾಕ್ಷಿಯಿಂದ ಮಾಡಿದ ವೈನ್ ಎಲ್ಲರ ಮನೆ...

Blog number 1338. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ- 2. ಬಸ್ಸಿನಲ್ಲಿ ಗಾಜಿನ ವಿಂಡ್ ಶೀಲ್ಡ್ ದಿಟ್ಟಿಸುತ್ತಾ ಮೈ ಮರೆತಿದ್ದೆ, ಗೆಳೆಯರು ಎಚ್ಚರಿಸಿ ಏನು ಯೋಚಿಸುತ್ತಿದ್ದಿಯಾ ? ಅಂತ ಕೇಳಿದರು ಹೇಳಿದೆ.... ಆ ಕ್ಷಣದಲ್ಲಿ ಬಸ್ಸಿನ ಗಾಜು ಪುಡಿಪುಡಿ !!

 ಅತೀಂದ್ರೀಯ ಶಕ್ತಿ ಇದಿಯಾ? ನನ್ನ ಜೀವನದ ಹಲವು ಘಟನೆಗಳು ನನಗೆ ಅತೀಂದ್ರಿಯ ಶಕ್ತಿ ನಂಬುವಂತೆ ಮಾಡಿದೆ ಅಂತದರಲ್ಲಿ ಈ ಘಟನೆಯೂ ಕೂಡ ಒಂದು. #ಅತೀಂದ್ರಿಯ_ಶಕ್ತಿ_ಇದೀಯಾ? #ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ? #ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ. #ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ.      ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ? ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ, ಇದೆಲ್ಲ ಸತ್ಯವಾ? ಕಾಕತಾಳಿಯನಾ?   ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ...    1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು.   ಶಿವಮೊಗ್ಗ 30 km ಹಿಂದೆ ಇರುವಾಗ ನಾನು ಬಸ್ಸಿನ ಎಡ ಭಾಗದ ಗ್ಲಾಸ್ ದಿಟ್ಟಿಸುತ್ತಿದ್ದೆ....ಮನಸ್ಸಿನಲ್ಲಿ ಏನೋ ಒಂದು ರೀತಿ ಅನಿಸುತ್ತಿತ್ತು.     ಆಗ ಗೆಳೆಯರು "ಏನು ಮೌನವಾಗಿ ಆಕಡೆ ನೋಡುತ್ತಿದ್ದಿಯಾ?" ಅಂದಾಗ ನಾನು ಒಂದು ರೀತಿ ಎಚ್ಚೆತ್ತ...

Blog number 1337. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-1, ಆ ಗಟ್ಟಿ ಮುಟ್ಟಾದ ಮಾವಿನ ಮರ ಮಳೆ -ಗಾಳಿ ಇಲ್ಲದ ಬಿರು ಬೇಸಿಗೆಯಲ್ಲಿ ಬೀಳುತ್ತದೆಂದು ನನ್ನ ಒಳ ಮನಸ್ಸಿನಲ್ಲಿ ಅನ್ನಿಸಿ ಉಸಿರಾಟ ಎದೆ ಬಡಿತ ಜಾಸ್ತಿ ಮಾಡಿತ್ತು ನಂತರ ಮರ ಬಿದ್ದು ಮನಸ್ಸು ಸಹಜ ಸ್ಥಿತಿಗೆ ಬಂತು.

ಅತೀಂದ್ರಿಯ ಅನುಭವ ಭಾಗ -1. ಅತೀಂದ್ರಿಯ ಶಕ್ತಿ ನನ್ನಲಿದೆಯ? ಕೆಲವು ಘಟನೆಗಳು ಇದಕ್ಕೆ ಸಾಕ್ಷಿ ಆಗಿದೆ ಆದರೆ ಅದು ನನ್ನ ನಿಯಂಂತ್ರಣದಲ್ಲಿ ಇಲ್ಲ.  ಎತ್ತರದ ಮಾವಿನ ಮರದ ಕೆಳಗೆ ಕುಳಿತು ಸೆಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಿದ್ದ ಜೆಸಿಬಿ ಯಂತ್ರದ ಸಹ ಚಾಲಕ  ಆ ಮರ ಕೆಲವೇ ಕ್ಷಣದಲ್ಲಿ ಅವನು ಕುಳಿತ ಜಾಗದ ಮೇಲೆ ಬೀಳುತ್ತದೆ ಅಂತ ಮನಸ್ಸು ಹೇಳಲು ಪ್ರಾರಂಬಿಸಿತ್ತು.   ನಮ್ಮ ಆರು ಎಕರೆ ರಬ್ಬರ್ ಪ್ಲಾಂಟೇಶನ್ ನಮ್ಮ ಮನೆಯಿಂದ ಸುಮಾರು 3 ಕಿ.ಮಿ. ದೂರದ ತಾವರೇಹಳ್ಳಿ ಗ್ರಾಮದ ಜೇಡಿಸರದಲ್ಲಿದೆ.   ಅಲ್ಲಿ ಸುತ್ತಲು ಬಿದಿರು ಮೆಳೆಗಳು ಪಕ್ಕದ ಜಮೀನಿನಲ್ಲಿ ಚೊಕ್ಕ ಮಾಡಿಸದಿದ್ದರೆ ಬೇಸಿಗೆಯಲ್ಲಿ ರಬ್ಬರ್ ತೋಟಕ್ಕೆ ಅಪಾಯವಾದ್ದರಿಂದ ಬಾಡಿಗೆ ಜೇಸಿಬಿ ಯಂತ್ರ ಒಂದನ್ನು ಗೊತ್ತು ಮಾಡಿಕೊಂಡು ನಾನು ಮತ್ತು ಸಹಾಯಕ ಗೇರುಬೀಸು ಚೆನ್ನಪ್ಪನ ಜೊತೆ ಹೋಗಿದ್ದೆ.    ಚೆನ್ನಪ್ಪ ಬೈಕಲ್ಲಿ ಜೇಸಿಬಿ ಮುಂದೆ ದಾರಿಯಲ್ಲಿ ಹೋದರೆ ನಾನು ಜೇಸಿಬಿಯಲ್ಲಿ ಕುಳಿತು ಪ್ರಯಾಣಿಸಿದ್ದೆ ಈ ಸಂದರ್ಭದಲ್ಲಿ ಈ ಯಂತ್ರದ ಇಬ್ಬರು ಚಾಲಕರು ದೂರದ ಬೆಳಗಾವಿಯಿಂದ ಬಂದವರೆಂದು ಒಬ್ಬನ ಹೆಸರು ಈಶ್ವರ ಮತ್ತೊಬ್ಬ ಮಾರುತಿ.    ಅವರಿಗೆ ಕೆಲಸ ತೋರಿಸಿ ಅವರು ಯಂತ್ರ ಪ್ರಾರಂಬಿಸಿದ ಸಮಯ ಬರೆದು ಕೊಂಡು ಅಲ್ಲೇ ಕುಳಿತುಕೊಂಡಿದ್ದೆ ಸಮೀಪದಲ್ಲಿ ಚೆನ್ನಪ್ಪನೂ ಕುಳಿತಿದ್ದ.    ಸಹ ಚಾಲಕ ಮಾರುತಿ ಮೊಬೈಲ್ ಪ...