Skip to main content

Posts

ಐವತ್ತು ವರ್ಷದ ನಂತರ ಹುಟ್ಟೂರು ನೋಡಲು ಬರುವಂತೆ ಪ್ರೇರೇಪಿಸಿದ ಆನಂದಪುರಂನ ಚಂಪಕ ಸರಸ್ಸು

#ಒಂದು_ಕಾಲದ_ಆನಂದಪುರಂನ_ಸುಪ್ರಸಿದ್ಧ_ಕೋಮಲವಿಲಾಸ್_ಹೋಟೆಲ್ #ರಾಮಕಿಣಿಯವರ_ಪುತ್ರಿಯರು_ಐವತ್ತು_ವರ್ಷದ_ನಂತರ_ಚಂಪಕಸರಸ್ಸು_ವೀಕ್ಷಣೆಗೆ_ಬಂದಿದ್ದರು. #ಹುಟ್ಟಿದ_ಊರು_ಬೆಳೆದ_ಪರಿಸರದ_ಆಕರ್ಷಣೆ_ಅಂತಹದ್ದು. https://arunprasadhombuja.blogspot.com/2021/06/42.html    ನಾನು ಬಾಲ್ಯದಲ್ಲಿ ನೋಡುತ್ತಿದ್ದ ಆನಂದಪುರಂನ ರಾಮಕಿಣಿಯವರ ಕೋಮಲ ವಿಲಾಸ್ ಹೋಟೆಲ್ ಅಂತಹದ್ದು ಇನ್ನೊಂದು ಈವರೆಗೆ ನೋಡಿಲ್ಲ, ಈಗ ನಾನು ಸ್ವತ: ಲಾಡ್ಜ್ ರೆಸ್ಟೋರೆಂಟ್ ಗಳ ಮಾಲಿಕನಾಗಿ ಇದು ನನ್ನ ಪ್ರಾಮಾಣಿಕ ಅಭಿಪ್ರಾಯ.   ಅವರ ಮೂವರು ಪುತ್ರಿಯರು ನಿನ್ನೆ ಉಡುಪಿಗೆ ಕುಟುಂಬದ ವಿವಾಹ ಕಾರ್ಯಕ್ರಮಕ್ಕೆ ಬಂದವರು ತಾವು ಹುಟ್ಟಿದ ಊರಿಗೆ ಬಂದಿದ್ದರು ಜೊತೆಯಲ್ಲಿ ಅವರ ಪತಿಯವ ರ ಜೊತೆ.   ಸುಮಾರು 50 ವರ್ಷದ ಹಿಂದೆ ಈ ಊರು ತೊರೆದವರು ಪುನಃ ಆನಂದಪುರಂಗೆ ಬರಲು ಮುಖ್ಯ ಕಾರಣ ಚಂಪಕ ಸರಸ್ಸು ಮತ್ತೊಮ್ಮೆ ನೋಡ ಬೇಕೆಂಬ ತುಡಿತ.   ಸಾಮಾಜಿಕ ಜಾಲ ತಾಣ ಕಳೆದು ಹೋದ ಸಂಪರ್ಕವನ್ನು ಮತ್ತೆ ಜೋಡಿಸಿದೆ.   ದೊಡ್ಡ ಮಗಳು ಶ್ರೀಮತಿ ನಿರ್ಮಲಾ ಮತ್ತು ಅವರ ಪತಿ ರಾಮನಾಥ ನಾಯಕರು ದೂರದ ಓಮನ್ ದೇಶದಲ್ಲಿ ಕಳೆದ 35 ವರ್ಷದಿಂದ ನೆಲೆಸಿದ್ದಾರೆ.   ಎರಡನೆ ಮಗಳು ಶ್ರೀಮತಿ ನಳಿನಿ ಮತ್ತು ಅವರ ಪತಿ ಹೆಚ್.ಕೆ. ಕಾಮತ್ (ಭಾರತೀಯ ವಾಯುಪಡೆಯಲ್ಲಿ ಉದ್ಯೋಗಿ ಆಗಿದ್ದವರು) ದೇಶವೆಲ್ಲ ಸುತ್ತಿ ಈಗ...

ಹಳ್ಳಿಗಳಲ್ಲಿ ಒ0ದು ಕಾಲದಲ್ಲಿ ಕೋಳಿ ಸಾಕಾಣಿಕೆ ಆರ್ಥಿಕ ಸ್ವಾವಲಂಬನೆಗೆ ಕಾರಣ ಆಗಿತ್ತು ಈಗ ಪೌಲ್ಟ್ರಿ ಉದ್ಯಮದ ವೇಗದಲ್ಲಿ ಹಳ್ಳಿಯ ಮನೆ ಮನೆಯ ಕೋಳಿ ಗೂಡು ಅಪರೂಪವಾಗಿದೆ

#ಗೃಹಬಳಕೆಯ_ಕೋಳಿ_ಸಾಕಾಣಿಕೆ. #ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು. #ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ನಳಿಸಿದೆ. #ಶಾಲಾಮಕ್ಕಳಿಗೆ_ಮೊಟ್ಟೆ_ಬೇಕಾ_ಎಂಬ_ಚರ್ಚೆ_ಸಂದರ್ಭದಲ್ಲಿ_ಹಳ್ಳಿಗಳ_ಕೋಳಿಕಥೆ.   ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ, ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲದಲ್ಲಿ ಹಳ್ಳಿಯ ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.   ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳುವಾಗ ಗೂಡಿಗೆ ಕೂಡಿ ಬಾಗಿಲು ಭದ್ರ ಮಾಡುವ ಕೆಲಸ.   ಕೋಳಿ ಗೂಡಿನಲ್ಲಿ ಮೊಟ್ಟೆ ಸಂಗ್ರಹಿಸುವುದು, ಮೊಟ್ಟಿ ಮರಿ ಮಾಡಲು ಕಾವು ನೀಡಲು ಕುಳಿತ ಕೋಳಿ ಆರೈಕೆಗಳು ಮಾಡ ಬೇಕಿತ್ತು.   ಹತ್ತಾರು ಹೆಣ್ಣು ಕೋಳಿಗೆ ಒಂದೆರೆಡು ಗಂಡು ಹುಂಜಾ ಇರುತ್ತಿತ್ತು, ಇದರ ಮಧ್ಯದಲ್ಲಿ ದೈವಗಳಿಗೆ, ಬೂತಗಳಿಗೆ ಮೀಸಲಿಟ್ಟ ಹರಕೆ ಕೋಳಿಗಳು ಇರುತ್ತಿದ್ದವು.   ಕೋಳಿ ಮೊಟ್ಟೆ ತಿನ್ನಲು ಬರುವ ನಾಗರ ಹಾವು, ಕೋಳಿ ಮರಿ ಎತ್ತಿಕೊಂಡು ಹೋಗುವ ಗಿಡುಗಗಳು, ಇಡೀ ದೊಡ್ಡ ಕೋಳ...

ಅವದಿ ಮ್ಯಾಗಜೀನ್ ನಲ್ಲಿ ನನ್ನ ಕಥಾ ಸಂಕಲದ ಬಗ್ಗೆ ಆರ್.ಟಿ. ವಿಠಲಮೂರ್ತಿ ಅಭಿಪ್ರಾಯ ಪ್ರಕಟ ಆಗಿದೆ.

#AVADHI_MAG. #ಅವದಿ_ಮ್ಯಾಗಜೀನ್   ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅವದಿ ಆನ್ ಲೈನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಮ್ಯಾಗಜೀನ್ ಗೆ ಈಗ 14 ವರ್ಷದ ಆಚರಣೆಯಲ್ಲಿದೆ, ಈ ಡಿಜಿಟಲ್ ಮ್ಯಾಗಜೀನ್ ನಲ್ಲಿ ಏನಿದೆ ಏನಿಲ್ಲ! ಕನ್ನಡ ಸಾಹಿತ್ಯ ಸಂಸ್ಕೃತಿಯ ಸುದ್ದಿ ವಿಮರ್ಷೆಗಳ ಸಾಲು ಸಾಲೇ ಡಿಜಿಟಲ್ ರೂಪದಲ್ಲಿದೆ ವೀಕ್ಷಿಸಿ.   ನಿನ್ನೆ (8- ಡಿಸೆಂಬರ್ -20 21) ರಂದು ನನ್ನ ಸಣ್ಣ ಕಥಾ ಸಂಕಲನದ ಬಗ್ಗೆ ಆರ್.ಟಿ. ವಿಠಲ ಮೂರ್ತಿಯವರ ಅಭಿಪ್ರಾಯ ಪ್ರಕಟ ಆಗಿದೆ.   ಈ ಕಥಾ ಸಂಕಲದಲ್ಲಿ ಆರ್.ಟಿ. ವಿಠಲ ಮೂರ್ತಿ, ಅರವಿಂದ ಚೊಕ್ಕಾಡಿ ಮತ್ತು ಶೃಂಗೇಶರು ಮುನ್ನುಡಿಗಳ ಮೂಲಕ ಬೆನ್ನು ತಟ್ಟಿದ್ದಾರೆ.   ಮೊದಲ ಕಾದಂಬರಿ #ಬೆಸ್ತರ_ರಾಣಿಚ೦ಪಕಾ ನಾನು ನಿರೀಕ್ಷಿಸದ ಅಭೂತ ಪೂರ್ವ ಯಶಸ್ಸು ದಾಖಲೆಯ ಜೊತೆ ರಾಣಿ ಚಂಪಕಾಳಿಗಾಗಿ ರಾಜ ನಿರ್ಮಿಸಿದ ಸ್ಮಾರಕ #ಚ೦ಪಕ_ಸರಸ್ಸು ಅನೇಕರ ಸಂಶೋದನೆಗೆ, ವೀಕ್ಷಣೆಗೆ ಕಾರಣವಾಗಿ ಈಗ ನಾನೂರು ವರ್ಷದ ಆಚರಣೆ ಸಂದರ್ಭದಲ್ಲಿ ಪ್ರಖ್ಯಾತ ನಟ ಯಶ್ ಅವರ ಸಮಾಜ ಸೇವಾ ಸಂಸ್ಥೆ ಯಶೋಮಾಗ೯ದ ಮುಖಾಂತರ ಪುನಶ್ಚೇತನ ಕಾಮಗಾರಿ ನಾಡಿನ ಪ್ರಖ್ಯಾತ ಜಲ ವಿಜ್ಞಾನಿ ಶಿವಾನಂದ ಕಳವೆಯವರಿಂದ ಭರದಿಂದ ನಡೆದಿದೆ.   ನನ್ನ ಇನ್ನೊಂದು ಪುಸ್ತಕ #ಬಿಲಾಲಿ_ಬಿಲ್ಲಿ_ಅಭ್ಯಂಜನ 29 ಸಣ್ಣ ಕಥಾ ಸಂಕಲನ ಓದುಗರ ಮುಂದಿದೆ

ಮ್ಯಾನ್ಯೂಯಲ್ ಕ್ಲಿಪ್ಪರ್ ಕಂಡು ಹಿಡಿದು ಬಳಸಿದ್ದು ಖ್ಯೆದಿಗಳಿಗೆ ಶಿಕ್ಷೆ ನೀಡಲು ಇದು ಭಾರತದ ಕ್ಷೌರಿಕ ಅಂಗಡಿಗಳಲ್ಲಿ ಪ್ರತಿಷ್ಟಿತ ಯಂತ್ರದಂತೆ ಅನೇಕ ದಶಕ ವಿಜೃಂಬಿಸಿತ್ತು ಎ೦ಬುದು ಸತ್ಯ

#ಮ್ಯಾನ್ಯೂಯಲ್_ಕ್ಲಿಪ್ಪರ್_ನಮ್ಮ_ಬಾಲ್ಯದಲ್ಲಿ_ಅತಿಹೆಚ್ಚು_ನೋವು_ತರಿಸಿದ_ಕ್ಷೌರಿಕಯಂತ್ರ   ನಿನ್ನೆ ನನ್ನ ಬಾಲ್ಯದಲ್ಲಿ ಪ್ರಬಾವ ಬೀರಿದ ಡುಮಿಂಗ್ ರೆಬೆಲೋ ಲೇಖನ ಬರೆದಿದ್ದೆ ಅದರಲ್ಲಿ ಅವರು ಪ್ರತಿ ತಿಂಗಳು ಆನಂದಪುರದ ರಾಮಣ್ಣನ ಸಲೂನಿನಲ್ಲಿ ಕಷ್ಟಪಟ್ಟು ನನ್ನ ಕ್ಷೌರ ಮಾಡಿಸಿಕೊಂಡು ಬರುತ್ತಿದ್ದ ಬಗ್ಗೆ ಅಲ್ಲಿನ ಮಿಷನ್ ಒಂದರ ಬಗ್ಗೆ ಬರೆದಿದ್ದೆ, ಆ ಕಾಲಮಾನದ ಬಾಲ್ಯದಲ್ಲಿದ್ದ ಅನೇಕರಿಗೆ ಈ ಯಂತ್ರ ಯಮಯಾತನೆ ನೀಡಿತ್ತಂತೆ.   ಹಾಗಾಗಿ ನನಗೂ ಆ ಯಂತ್ರದ ಬಗ್ಗೆ ಕುತೂಹಲ ಹೆಚ್ಚಾಗಿ ಅಂತರ್ ಜಾಲದಲ್ಲಿ ಮಾಹಿತಿಗಾಗಿ ಹುಡುಕಿದಾಗ ಸಿಕ್ಕಿದ ವಿವರ ಇಲ್ಲದೆ.   ಇದರ ಹೆಸರು ಮ್ಯಾನ್ಯೂಯಲ್ ಕ್ಲಿಪ್ಪರ್ ಇದನ್ನು ಸೆರಿಬಿಯನ್ ದೇಶದ ಬಾಬ೯ರ್ ನಿಕೋಲಾ ಬಿಜುಮಿಲ್ ಎಂಬಾತ 1850-1890 ರ ಅವದಿಯಲ್ಲಿ ತಯಾರಿಸಿ ಅದನ್ನು ಕಾಲಕಾಲಕ್ಕೆ ಅಭಿವೃದ್ದಿ ಮಾಡುತ್ತಾನೆ.  ಈ ಮ್ಯಾನ್ಯೂಯಲ್ ಕ್ಲಿಪ್ಪರ್ ನ ಆ ಕಾಲದ ಸೈನಿಕರ ಕ್ಷೌರಕ್ಕಾಗಿ ಮಿಲಿಟರಿಗಳಲ್ಲಿ, ಜೈಲಿನ ಖೈದಿಗಳ ಕ್ಷೌರಕ್ಕಾಗಿ ಜೈಲಿನಲ್ಲಿ ನಂತರ ಶಾಲಾ ವಿದ್ಯಾಥಿ೯ಗಳಾದ ಗಂಡು ಮಕ್ಕಳ ಕ್ಷೌರಕ್ಕಾಗಿ ಬಳಸುತ್ತಿದ್ದರಂತೆ.  ರಷಿಯಾದ ಸ್ಯೆನ್ಯದಲ್ಲಿ ಇದನ್ನ ಬಳಸಿ ಸೈನಿಕರ ಕ್ಷೌರ ಮಾಡುತ್ತಿದ್ದರಂತೆ.  ಗ್ರೀಸ್ ನಲ್ಲಿ 1950-1960 ರಲ್ಲಿ ಶಿಕ್ಷೆಗಾಗಿ ಇದರಿಂದ ಕ್ಷೌರ ಮಾಡಿಸುತ್ತಿದ್ದರಂತ ವಿವರ ಇದೆ.   #ಹಾಗಾದರೆ_ಬಾರತದಲ್ಲಿ_ಯಾಕಾಗಿ_ನಮ್ಮ_ಬಾಲ್ಯದಲ್ಲಿ_ಇ...

ಆತ್ಮೀಯ ಗೆಳೆಯರಾದ ಆರ್.ಟಿ.ವಿಠಲಮೂರ್ತಿ ಗೆಳೆತನಕ್ಕೆ ಸಾಕ್ಷಿ ಎಂಬಂತೆ ನನ್ನ ಕಥಾ ಸಂಕಲನದ ಬಗ್ಗೆ ಬರೆದಿದ್ದಾರೆ

ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ  ಬಿಲಾಲಿ ಬಿಲ್ಲಿಯ ಅಭ್ಯಂಜನ        ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ,ಅವುಗಳ ಮೈ ತಡವುತ್ತಿದ್ದರೆ,ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.  ಇದು ಕಥಾನಾಯಕನ ಕತೆ. ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ ಈ ಕಥಾಸಂಕಲನ ನನ್ನನ್ನು ಬಿಟ್ಟು ಬಿಡದಂತೆ ಕಾಡಿದ್ದು ಅದರಲ್ಲಿನ ಜೀವನ ಪ್ರೀತಿಗಾಗಿ. ಇಲ್ಲಿರುವ ಕತೆಗಳಲ್ಲಿ ಸಾಮಾನ್ಯ ಜನರೇ ನಾಯಕರು.ಅವರ ಪ್ರೀತಿ,ಮೋಸ,ವಂಚನೆ,ತಂಟೆ,ತಕರಾರು,ಅಮಾಯಕತೆಯ ರೂಪಗಳನ್ನು ಅರುಣ್ ಪ್ರಸಾದ್ ಎಷ್ಟು ಆಪ್ತವಾಗಿ ಹೇಳುತ್ತಾರೆಂದರೆ,ಆ ಕತೆಗಳಲ್ಲಿ ನಾವೂ ಒಂದು ಪಾತ್ರವಾಗಿ ಬೆರೆತು ಹೋಗಿ ಹೋಗಿ ಬಿಡುತ್ತೇವೆ. ಚುನಾವಣೆ ಮತ್ತು ರಮ್ಜಾದಳ ಟಿವಿ ಕತೆಯಲ್ಲಿ ಗಂಡನಿಲ್ಲದ ಹೆಣ್ಣಿನ ಬದುಕು ಎಷ್ಟು ಕಷ್ಟಕರ ಎಂದು ಹೇಳುತ್ತಲೇ ವಿಧವೆ ರಮ್ಜಾದಳ ಖಾಸಗಿ ಬದುಕಿನ ಕತೆ ಪಡೆಯುವ ತಿರುವುಗಳು ನಿಬ್ಬೆರಗು ಮೂಡಿಸುತ್ತವೆ. ರಮ್ಜಾದ್ ಮತ್ತು ಡ್ರೈವರ್ ನಡುವಿನ ಖಾಸಗಿ ಘಟನೆಯೊಂದು ಆಚಾರಿಯ ಬಾಯಲ್ಲಿ ಡಬಲ್  ಮೀನಿಂಗ್ ಪದಗಳಾಗಿ ಹೊರಹೊಮ್ಮುವುದು,ಕೆರಳಿದ ರಮ್ಜಾದ್ ಅತನಿಗೆ ಬಾರಿಸುವುದು ಊರ ಮಧ್ಯೆ ಏನೇನೋ ರೂಪ ಪಡೆದು ಕಾಂಗ್ರೆಸ್-ಬಿಜೆಪಿಯ ಮಧ್ಯೆ ನಡೆದ ಗಲಾಟೆ ಎಂಬಂತೆ ಬಣ್ಣನೆಯಾಗುತ್ತಾ,ಊರ ಜನರ ಬಾಯಿಗೆ ತಾಂಬೂಲವಾಗುತ್ತದೆ. ಆ ಊರಲ್ಲೊಂದು ಶಾಂತಿ ಸಭೆ ಕತೆಯಲ್ಲಿ ಬ...

ಹುಲಿ ಬತ್ತ ಎಂಬ ಮೀಟರ್ ಬಡ್ಡಿ ರೂಪದ ಅನಿಷ್ಟ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ಆಚರಣೆ ಇತ್ತು.

#ಒಂದು_ಕಾಲದಲ್ಲಿ_ಮಲೆನಾಡಿಗರ_ರಕ್ತ_ಕುಡಿದ_ಹುಲಿ_ಬತ್ತ #ಹುಲಿ_ಬತ್ತ_ಹೋಯಿತು #ಈಗ_ಹುಲಿ_ರೂಪದಲ್ಲಿ_ಮೀಟರ್_ಬಡ್ಡಿ_ಊರಿಗೆ_ಬಂತು!?   ಐವತ್ತು ವರ್ಷದ ಹಿಂದೆ ಮಲೆನಾಡ ಹಳ್ಳಿಗಳಲ್ಲಿ ರೂಪಾಯಿ ನೋಟು ಅಷ್ಟಾಗಿ ಚಲಾವಣಿ ಇರಲಿಲ್ಲ ಇದಕ್ಕೆ ಪರ್ಯಾಯವಾಗಿ ತಾವು ಬೆಳೆದ ಬತ್ತವನ್ನೆ ವಿನಿಮಯವಾಗಿ ಬಳಸುತ್ತಿದ್ದರು.   ವೈದ್ಯರಿಗೆ, ಕ್ಷೌರಿಕರಿಗೆ, ಕುಲುಮೆಯರಿಗೆ, ವೀಳ್ಯದೆಲೆ ಮತ್ತು ಮೀನು ಮಾರಟಗಾರಿಗೆ ವರ್ಷ ವರ್ಷ ಬತ್ತ ನೀಡುವ (ವರ್ತನೆ ಬತ್ತ) ಪದ್ಧತಿ ಇತ್ತು.   ಇದೇ ರೀತಿ ಬರ - ನೆರೆ ಬಂದು ಪಸಲು ನಷ್ಟವಾದಾಗ ಊಟಕ್ಕೂ ತಾತ್ವಾರ ಆದಾಗ ಮಲೆನಾಡಿನ ರೈತರು ದೊಡ್ಡ ರೈತರ ಮನೆಯಿಂದ ಬತ್ತ ಸಾಲವಾಗಿ ತರುತ್ತಿದ್ದರು.   ಸಾಮಾನ್ಯವಾಗಿ ಏಪ್ರಿಲ್ ಮೇ ನಂತರ ಪಡೆದ ಬತ್ತ ಡಿಸೆಂಬರ್ ಒಳಗೆ ಸುಗ್ಗಿ ಕಾಲದಲ್ಲೇ ಅಂದರೆ ಆರು ತಿಂಗಳಿಗೆ ವಾಪಾಸ್ ಮಾಡುವ ವಾಯಿದೆ ಆಗಿರುತ್ತಿತ್ತು.   ಒಂದು ಕ್ವಿಂಟಾಲ್ ಬತ್ತಕ್ಕೆ ಒ0ದೂವರೆ ಕ್ವಿಂಟಾಲ್ ಬತ್ತ ವಾಪಾಸ್ ನೀಡುವ ಈ ಸಾಲದ ಬತ್ತಕ್ಕೆ #ಹುಲಿ_ಬತ್ತ ಎಂಬ ಹೆಸರಿತ್ತು.  ಆರು ತಿಂಗಳ ಅವಧಿಯಲ್ಲಿ ಶೇಕಡ 100 % ವಾಷಿ೯ಕ ಬಡ್ಡಿಯ ಹುಲಿ ಬತ್ತ ಪಡೆದವ ಕೈ ಸೋತು ಬಡವನಾದರೆ, ಹುಲಿ ಬತ್ತ ನೀಡಿದ ದಣಿ ಬತ್ತ ಬೆಳೆಯುವ ಕಷ್ಟ ನಷ್ಟ ಇಲ್ಲದೆ ನೀಡಿದ ಬತ್ತ ವರ್ಷವಷ೯ ದ್ವಿಗುಣವಾಗಿ ಶ್ರೀಮಂತನಾಗುತ್ತಲೇ ಸಾಗುತ್ತಾನೆ.  ಆ ವರ್ಷ ವಾಪಾಸು ನೀಡದಿದ್ದರೆ ಹುಲಿ ಬಡ್ಡ...

ಮಲೆನಾಡಿನ ಬಹುತೇಕ ಜನರಿಗೆ ಮಾಹಿತಿ ಇಲ್ಲದ ಗಣಪೆ ಕಾಯಿ ಖಾದ್ಯದ ರುಚಿ

# ಬಹುಶಃ ಈ ತರಕಾರಿ ಬಹಳ ಜನಕ್ಕೆ ಗೊತ್ತೇ ಇಲ್ಲ, ಮಲೆನಾಡಿಗರಿಗೂ ಕೂಡ#  ಇದರ ಹೆಸರು ಗಣಪೆ ಕಾಯಿ +----++++++++++++++----+  ಇದು ಮಲೆನಾಡಿನ ದಟ್ಟ ಅಡವಿಯಲ್ಲಿನ ಬೃಹತ್ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ ಬಿಡುತ್ತದೆ, ಉದ್ದದ ಕಾಯಿಯಲ್ಲಿ ಹಣ್ಣಾಗಿ ಒಡೆದು ಮರದ ಬುಡದಲ್ಲಿ ಬಿದ್ದಾಗ ಸಂಗ್ರಹಿಸುತ್ತಾರೆ.   ನಾನು ನಮ್ಮ ತಾಯಿ ಬಿದನೂರು ನಗರದಿಂದ ತಂದಿರಿಸಿದ್ದ ಗಣಪೆ ಕಾಯಿ ಚಿಕ್ಕವನಿದ್ದಾಗ ನೋಡಿದ್ದೆ, ಕೆಮ್ಮಣ್ಣು ನೆಲಕ್ಕೆ ಸಾರಿಸಿ ಅದನ್ನ ಹೊಳಪು ಮಾಡಲು ಈ ಗಣಪೆ ಕಾಯಿಯಿಂದ ತಿಕ್ಕುತ್ತಿದ್ದರು, ಯಾವುದೋ ಮನೆ ಮದ್ದಿಗೆ ಇದನ್ನ ತೇಯಿದು ಸೇವಿಸುವುದು ಗೊತ್ತಿತ್ತು.   ಮೊನ್ನೆ ಹಸೆ ಚಿತ್ತಾರದ ಈಶ್ವರ ನಾಯ್ಕರು ನಮ್ಮ ಕಾಟೇಜಿಗೆ ಹಸೆ ಚಿತ್ತಾರದ ಸ್ಪಷ೯ ನೀಡಲು ಬಂದಾಗ ಈ ಗಣಪೆ ಕಾಯಿ ಖಾದ್ಯದ ಬಗ್ಗೆ ಹೇಳಿದಾಗ ಬಾಯಲ್ಲಿ ನೀರು ಬಂತು.   ಸಿದ್ದಾಪುರ, ಸಿರಸಿ ಭಾಗದ ಕಾಡಲ್ಲಿ ಗಣಪೆ ಕಾಯಿ ಯತೇಚವಾಗಿ ಸಿಗುತ್ತದೆ, ಅದನ್ನ ಸಂಗ್ರಹಿಸಿ ತಂದಿಟ್ಟುಕೊಳ್ಳುತ್ತಾರೆ, ಇದರ ಪದಾಥ೯ ತಯಾರಿಸುವಾಗ ಈ ಗಣಪೆ ಕಾಯಿ ಸುಡುತ್ತಾರೆ, ನಂತರ ಒಡೆದು ಒಳಗಿನ ತಿರುಳು ಎರಡು ಸಾರಿ ಬೇಯಿಸಿ ನೀರು ಚೆಲ್ಲಿ ಸಣ್ಣ ತೆಳು ತುಂಡು ಮಾಡುತ್ತಾರೆ, ನಂತರ ಇದೇ ರೀತಿ 5 ಸಾರಿ ಬೇಯಿಸಿ ನೀರು ಬದಲಿಸಿ, ನಂತರ ಒಣ ಮಸಾಲೆ, ಉಪ್ಪು, ಕಾರ ರುಚಿಗೆ ತಕ್ಕಂತೆ ಬೆರೆಸಿ ಪಲ್ಯ ಮಾಡುತ್ತಾರೆ.  ಅವರು ಅವರ ಮನೆಯಲ...