Skip to main content

Posts

ಚಂಪಕ ಸರಸ್ಸುವಿನ ಶಿಲಾ ಮಯ ಆನೆಯ ಸುಂದರ ಚಿತ್ರ ಕ್ಲಿಕ್ಕಿಸಿದ ನಿವೃತ್ತ ಅಬಕಾರಿ ಅಧಿಕಾರಿ ಚೋರಡಿ ದತ್ತಾತ್ರೇಯರ ಕುಟುಂಬ.

#ಚ೦ಪಕಸರಸ್ಸುವಿನ_ಶಿಲಾಮಯ_ಆನೆಯ_ಸುಂದರ_ಚಿತ್ರ_ಸೆರೆಹಿಡಿದವರು. #ಡೇರ್_ಅಂಡ್_ಡೆವಿಲ್_ಅಬಕಾರಿ_ಅಧಿಕಾರಿ_ಆಗಿದ್ದ_ದತ್ತಾತ್ರೇಯಸ್ವಾಮಿ. #ನಾಣ್ಯ_ಸಂಗ್ರಹಾಕಾರರೂ_ಇತಿಹಾಸದ_ಬಗ್ಗೆ_ಹೆಚ್ಚಿನ_ಆಸಕ್ತಿ. #ಇವರ_ಪತ್ನಿ_ಕುವೆಂಪು_ವಿಶ್ವವಿದ್ಯಾಲಯದ_ಸಿಂಡಿಕೇಟ್_ಸದಸ್ಯರು_ಜಿಲ್ಲಾ_ಮಹಿಳಾ_ಈಡಿಗ_ಸಮಾಜದ_ಅಧ್ಯಕ್ಷರು.   ನಾನು ಬರೆದ ಕಾದಂಬರಿ ತರಿಸಿಕೊಂಡು ಕೆಲವೇ ಗಂಟೆಯಲ್ಲಿ ಓದಿದ್ದರಂತೆ ಹಾಲಿ ಶಿವಮೊಗ್ಗ ತಾಲ್ಲೂಕಿನ ಚೋರಡಿಯಲ್ಲಿ ಕೃಷಿಯೊಂದಿಗೆ ನಿವೃತ್ತ ಜೀವನ ಮಾಡುತ್ತಿರುವ ದತ್ತಾತ್ರೇಯ ದಂಪತಿಗಳು.   ಈ ಕಾದಂಬರಿಯ ಕೇಂದ್ರವಾದ ರಾಣಿ ಚಂಪಕಳ ಸ್ಮರಣೆಗಾಗಿ ಕೆಳದಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಚಂಪಕ ಸರಸ್ಸುವಿಗೆ ಇತ್ತೀಚಿಗೆ ಬೇಟಿ ನೀಡಿದ್ದರು ಮತ್ತು ಚಿತ್ರಿಕರಿಸಿದ್ದ ಕೆಲ ಸುಂದರ ಚಿತ್ರ ಕಳಿಸಿದ್ದಾರೆ.   ಇದರಲ್ಲಿ ಚಂಪಕ ಸರಸ್ಸುವಿನ ಎರೆಡು ಸುಂದರ ಆನೆಗಳಲ್ಲಿ ಒಂದು ಆನೆಯ ಪೋಟೋ ಮಾತ್ರ ಈವರೆಗೆ ತೆಗೆದ ಆನೆ ಚಿತ್ರಗಳಲ್ಲಿ ಇದು ವಿಶೇಷ ಅನ್ನಿಸುವಂತ ನವೀನ ಕೋನದಲ್ಲಿ ತೆಗೆದದ್ದು ನೋಡಿ ಆಶ್ಚಯ೯ ಆಯಿತು.   ನಾನು ಊರಲ್ಲಿಲ್ಲದ್ದರಿಂದ ಇವರ ನನ್ನ ಬೇಟಿ ಆಗಲಿಲ್ಲ, ದತ್ತಾತ್ರೇಯರು ಅಬಕಾರಿ ಇಲಾಖೆಯಲ್ಲಿದ್ದಾಗ ಡೇರ್ ಡೆವಿಲ್ ಅಧಿಕಾರಿ ಅಂತಾನೆ ಹೆಸರು ಪಡೆದಿದ್ದರು, ನಕಲಿ ಬ್ರಾಂಡಿ ಮಾಡುವವರಿಗೆ ಸಿಂಹಸ್ವಪ್ನ ಆಗಿದ್ದರು ಯಾರದೇ ಪ್ರಭಾವಕ್ಕೂ ಒಳಗಾಗದ ಡೊಂಟ್...

ಉತ್ತರ ಪ್ರದೇಶದ ಆಲೀಘಡದ ಬೀಗ ಮಾರಾಟದಿಂದ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ ಮಗನನ್ನ ಇಂಜಿನಿಯರ್ ಮಾಡಿರುವ ಶಿವಮೊಗ್ಗದ ಲಾಕ್ ಕಲಂದರ್ ಸಾಬ್, ಚೈನಾ ಬೀಗದ ಪೈಪೋಟಿಯಲ್ಲಿ ನಲುಗುತ್ತಿರುವ ಆಲೀಘಡ, ದಿಂಡಿಗಲ್ ಮತ್ತು ನಮ್ಮ ಶರಾವತಿ ನದಿ ದಂಡೆಯ ಮಾವಿನ ಕುರ್ವೆ ಬೀಗದ ಗೃಹ ಕೈಗಾರಿಕೆಗಳು.

#ಅತ್ಯುತ್ತಮ_ನಿತ್ಯಬಳಕೆ_ಬೀಗಗಳ_ಡೋರ್_ಡೆಲಿವರಿ_ಮಾಡುವ_ಶಿವಮೊಗ್ಗದ_ಕಲಂದರ್_ಸಾಬ್. #ಬೀಗ_ಮಾರಾಟದಿಂದ_ಜೀವನ_ಪ್ರಾರಂಬಿಸಿ_ಮಗನನ್ನು_ಇಂಜನಿಯರ್_ಮಾಡಿದ_ಸಾದಕ #ಚೈನಾದೇಶದ_ಬೀಗಗಳಿಂದ_ಸಾಂಪ್ರದಾಯಿಕ_ದೇಶಿಬೀಗ_ತಯಾರಕ_ಆಲೀಘಡ_ಮತ್ತು_ಮಾವಿನಕುವೆ೯ಗೆ_ಕಂಟಕ.   ಹಳೇ ಕಾಲದ ಆಭರಣದ ಪೆಟ್ಟಿಗೆಗಳು ಈ ಕಾಲಕ್ಕೆ ಆಂಟಿಕ್  ವಸ್ತುಗಳು, ಹಿತ್ತಾಳೆ - ತಾಮ್ರ-ಕಬ್ಬಿಣ- ಮರದಲ್ಲಿ ತಯಾರಿಸುತ್ತಿದ್ದ ವಿಶ್ವಕರ್ಮಿಯರು ಇದಕ್ಕೆ ಒಳಗಿಂದ ಅಳವಡಿಸುತ್ತಿದ್ದ ಬೀಗಗಳು ಈಗಲೂ ವಿಸ್ಮಯ ಉಂಟು ಮಾಡುವ೦ತಹ ಕೌಶಲ್ಯವಿರುವ ಡಿಂಗ್ ಡಾಂಗ್ ಗಂಟೆ ನಿನಾದ ಉಂಟು ಮಾಡುವ ಅಥವ ಪೆಟ್ಟಿಗೆ ಮಾಲಿಕನಿಗೆ ಮಾತ್ರ ರಹಸ್ಯ ಗೊತ್ತಿರುವ ತಂತ್ರಜ್ಞಾನದ ನಮ್ಮ ಶರಾವತಿ ನದಿ ತೀರದ ಮಾವಿನ ಕುರ್ವೆ ದ್ವೀಪದ ಬೀಗಗಳು.   ಉತ್ತರ ಪ್ರದೇಶದ ಆಲೀಘಡದ ಗೃಹ ಕೈಗಾರಿಕಾ ಬೀಗಗಳು   ಮತ್ತು ತಮಿಳು ನಾಡಿನ ದಿಂಡಿಗಲ್ ಲಾಕ್ ಗಳು ಜಗತ್ ಪ್ರಸಿದ್ದವಾಗಿದ್ದ ಬೀಗಗಳು.    ಈಗ ಚೈನಾ ದೇಶದ ಬೀಗಗಳು ಇವುಗಳಿಗೆ ಪೈಪೋಟಿ ನೀಡಿ ಮಾರಾಟದ ಬಹುಪಾಲು ಅದರದ್ದೇ ಸಿಂಹಪಾಲು ಆಗಿದೆ.   ನಮ್ಮ ದೇಶದ ಗೋದ್ರೇಜ್ ಕಂಪನಿ ಬೀಗಗಳು ಉತ್ಕೃಷ್ಣ ತಂತ್ರಜ್ಞಾನದ್ದಾಗಿ ಕ್ಲಾಸ್ ಬೀಗದ ಮಾರಾಟ ವಿಭಾಗದಲ್ಲಿ ಮುಂದಿದೆ.   ಮೊನ್ನೆ ಶಿವಮೊಗ್ಗದ ಬೀಗ ಮಾರಾಟದ ಕಲಂದರ್ ಸಾಬ್ ಬಂದಿದ್ದರು ನಾನು ಇವರ ಬೀಗ ಖರೀದಿದಾ...

ಭಾಗ - 60, ಆನಂದಪುರಂ ಇತಿಹಾಸ, ರಾಮನಗರದ ಜನಪದ ಲೋಕ ಸೃಷ್ಟಿಕರ್ತ, ಭಾರತ ಇತಿಹಾಸ ಕನ್ನಡದಲ್ಲಿ "ಪ್ರವಾಸಿ ಕಂಡ ಇಂಡಿಯಾ" ಎಂಬ ಎಂಟು ಸಂಪುಟ ಕುವೆಂಪು ಪ್ರದಾನ ಸಂಪಾದಕತ್ವದಲ್ಲಿ ಪ್ರಕಟಿಸಿದ ಹೆಚ್.ಎಲ್.ನಾಗೇಗೌಡರು 1963 ರಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುವಾಗ ಆನಂದಪುರಂನ ಚಂಪಕ ಸರಸ್ಸು- ಕೋಟೆ ವೀಕ್ಷಣೆಗೆ ಬರುತ್ತಿದ್ದರು

#ಭಾಗ_60. #ಆನಂದಪುರಂ_ಇತಿಹಾಸ. #ಪ್ರವಾಸಿ_ಕಂಡ_ಇಂಡಿಯಾ_ಬರೆದವರು #ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು . #1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳು. #ಇವರು_ಆನಂದಪುರಂ_ಚಂಪಕಸರಸ್ಸು_ಅನೇಕ_ಬಾರಿ_ಸಂದರ್ಶಿಸಿದ್ದರು. #ಇವರು_ಬರೆದ_ಪುರಾತನ_ಕಾಲದಿಂದ_18ನೇ_ಶತಮಾನದವರೆಗಿನ_ಭಾರತ_ಇತಿಹಾಸ_ಪ್ರವಾಸಿ_ಕಂಡ_ಇಂಡಿಯಾ . #ಮೈಸೂರು_ವಿಶ್ವವಿದ್ಯಾಲಯದಿಂದ_ಪ್ರಕಟ #ಕುವೆಂಪು_ಪ್ರದಾನ_ಸಂಪಾದಕರು.     ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ  ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.   ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.   ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಬರೆದಿದ್ದಾರೆ.   #ಪ್ರಾಚೀನ_ಭಾರತದ_ಇತಿಹಾಸ ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು  #ಮಧ್ಯಕಾಲ_ಇತಿಹಾಸ 13 ನೇ ಶತಮಾನದಿಂದ 18ನೇ ಶತಮಾನದವರೆಗೆ #ಆದುನಿಕ_ಇತಿಹಾಸ 18ನೇ ಶತಮಾನದಿಂದ ಈವರೆಗಿನದ್ದು  ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ, ಅವರು ದಾಖಲೆ ಮಾಡುತ್ತಾ ಹೋಗಿರುವ...

ಮಲೆನಾಡಿನ ಅಪ್ಪೆಮಿಡಿಗೆ ಜಿಯೋಗ್ರಾಪಿಕಲ್ ಟ್ಯಾಗ್ ಸಿಕ್ಕಿ ಹತ್ತು ವರ್ಷವಾಯಿತು, ನಿನ್ನೆ ಅಂಚೆ ಇಲಾಖೆ ಅಪ್ಪೆ ಮಾವಿನ ಮಿಡಿಯ ಚಿತ್ರದ ಅಂಚೆ ಲಕೋಟೆ ಬಿಡುಗಡೆ ಮಾಡಿದೆ, ಸ್ವಾದಿಷ್ಟ ವಿಶೇಷ ಪರಿಮಳದ ಮಲೆನಾಡ ಅಪ್ಪೆಮಿಡಿಗಳ ಕಥೆ.

#ಮಲೆನಾಡಿನ_ವಿವಿಧ_ಸ್ವಾದದ_ಅಪ್ಪೆಮಿಡಿ_ಉಪ್ಪಿನಕಾಯಿ_ಸವಿದವರೇ_ಬಲ್ಲರು. #ಹತ್ತು_ವರ್ಷದ_ಹಿಂದೆ_ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ಸಿಕ್ಕಿದೆ. #ನಿನ್ನೆ_ಅಂಚೆ_ಇಲಾಖೆ_ಅಪ್ಪೆಮಿಡಿ_ಅಂಚೆ_ಲಕೋಟೆ_ಬಿಡುಗಡೆ_ಮಾಡಿದೆ. #ಏನಿದು_ಜಿಐ_ಟ್ಯಾಗ್?   ಒಂದು ಪ್ರದೇಶದ ಕೃಷಿ ಉತ್ಪನ್ನ, ವಿಶೇಷ ತಿನಿಸು, ವಿಶೇಷ ಕುಸುರಿ ವಸ್ತುಗಳು ಆಯಾ ಬೌಗೋಳಿಕ ಹವಾಮಾನ, ಮಣ್ಣು ಮತ್ತು ಸ್ಥಳಿಯರ ಪಾರಂಪರಿಕ ಕಲೆಗಳಿಂದ ವಿಶೇಷ ಉತ್ಪನ್ನ ಅನ್ನಿಸುತ್ತದೆ.   ಇವುಗಳಿಗೆ ಒ0ದು ಸಿಗ್ನೇಚರ್ ಬ್ರಾಂಡ್ ನೀಡಿ ಅದಕ್ಕೆ ಗುಣಮಟ್ಟ ಮತ್ತು ರೆಪ್ಯೂಟೇಷನ್ ಮೂಲಕ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ನೀಡುವ ವ್ಯವಸ್ಥೆ ವಿಶ್ವದ ಮುಂದುವರಿದ ದೇಶಗಳಲ್ಲಿದೆ.   ಬಾಸುಮತಿ ಅಕ್ಕಿ ಜಿಐ ಟ್ಯಾಗ್ ಪಾಕಿಸ್ತಾನ ಪಡೆದಿದೆ ನಂತರ ಭಾರತ ಈ ಬಗ್ಗೆ ಯುರೋಪಿಯನ್ ಒಕ್ಕೂಟದ ಸಂಬಂದ ಪಟ್ಟ ಸಂಸ್ಥೆಯೊಂದಿಗೆ ನಡೆಸಿದ ಹೋರಾಟದಿಂದ 11 ಸೆಪ್ಟೆಂಬರ್ 2020 ರಲ್ಲಿ ನವೀಕೃತ ಆದೇಶದಲ್ಲಿ ಭಾಸುಮತಿ ಅಕ್ಕಿ ಎರೆಡೂ ದೇಶಕ್ಕೆ GI tag ಸಿಕ್ಕಿದೆ.   ಜರ್ಮನಿ ದೇಶ ಇಂತಹ ಅನೇಕ ಉತ್ಪನ್ನಗಳಿಗೆ ವಿಶ್ವದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್ (9499) ಪಡೆದಿದೆ, ನಂತರದ ಸ್ಥಾನ ಚೀನಾದ್ದು.    ನಮ್ಮ ದೇಶದಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಜಿಐ ಟ್ಯಾಗ್ ಪಡೆದು (42) ಅಗ್ರ ಸ್ಥಾನದಲ್ಲಿದೆ ಇದರಲ್ಲ...

ಭಾಗ-59, ಆನಂದಪುರಂ ಇತಿಹಾಸ, ರಾಯರ ಪ್ರತಿನಿದಿ ಆಗಿ ಅವರ ವಾಕಿಂಗ್ ಸ್ಟಿಕ್ ಜೊತೆ ಎತ್ತಿನಗಾಡಿಯಲ್ಲಿ ಕೊಳಗ ಮತ್ತು ಗೋಣಿ ಚೀಲದ ಜೊತೆ ಗೇಣಿ ಬತ್ತದ ವಸೂಲಿಗೆ ಹೋಗುತ್ತಿದ್ದ ಆನಂದಪುರಂನ ಪೈಲ್ವಾನರ ಪಡೆ

#ಭಾಗ_59. #ಆನಂದಪುರಂ_ಇತಿಹಾಸ. #ರಾಮಕೃಷ್ಣಯ್ಯ0ಗಾರರ_ಕಟ್ಟಾಳುಗಳು. #ಗೇಣಿ_ಬತ್ತ_ವಸೂಲಿ_ಪಡೆ #ಆ_ಕಾಲದ_ಬೌನ್ಸರ್ಗಳು. #ರಾಮಕೃಷ್ಣಾಯ್ಯ೦ಗಾರರ_ವಾಕಿಂಗ್_ಸ್ಪಿಕ್_ಅವರ_ಪ್ರತಿನಿದಿ, #ಕಾಗೋಡು_ಚಳವಳಿಯಲ್ಲಿ_ಸಾವ೯ಜನಿಕ_ಸಭೆಗಳಲ್ಲಿ_ಗಣಪತಿಯಪ್ಪ_ಶಾಂತವೇರಿಗೋಪಾಲಗೌಡರಿಂದ_ವಿರೋದ     ಆನಂದಪುರ0ನ ರಾಮಕೃಷ್ಣಾಯ್ಯಂಗಾರರು ಇನಾಂದಾರರು, ಜಮೀನ್ದಾರರು, ದೈವಭಕ್ತರು, ಕೊಡುಗೈ ದಾನಿಗಳು ಹೌದು ಅಷ್ಟೇ ಕುಟುಂಬದಲ್ಲಿ ಚಾಣಕ್ಷಮತಿಗಳು ಆಗಿದ್ದರು.    ಸಾವಿರಾರು ಎಕರೆ ಜಮೀನು ಪ್ರತಿ ವರ್ಷ ಗೇಣಿದಾರರಿಗೆ ನೀಡಿ ಗೇಣಿ ಬತ್ತ ವಸೂಲಿ ಮಾಡುವುದು ಆ ಕಾಲದಲ್ಲಿ ಸುಲಭದ ಕೆಲಸ ಆಗಿರಲಿಲ್ಲ, ಗೇಣಿದಾರರ ಕುಟುಂಬಗಳು ಗೇಣಿ ಜಮೀನುಗಳು ಒಂದೇ ಕಡೇ ಇರುತ್ತಿರಲಿಲ್ಲ.   ಸಂಬಾವಿತ ಗೇಣಿದಾರರು ಕಾಲ ಕಾಲಕ್ಕೆ ಸರಿಯಾಗಿ ಗೇಣಿ ಬತ್ತ ತಂದು ರಾಯರ ಅಕ್ಕಿ ಮಿಲ್ಲಿಗೆ ಜಮ ಮಾಡುತ್ತಿದ್ದರಾದರೂ ನೈಸಗಿ೯ಕ ವಿಕೋಪದಿಂದಲೋ, ಇನ್ನಾವುದೋ ಕಾರಣದಿಂದ ಗೇಣಿ ಪಾವತಿ ಮಾಡಲಾರದವರು ರಾಯರನ್ನು ಕಂಡು ವಿಶೇಷ ಅನುಮತಿ ಪಡೆಯುತ್ತಿದ್ದರು.   ಈ ರೀತಿ ಅನುಮತಿ ಪಡೆಯದ ಬಾಕಿದಾರರಿ೦ದ ಬತ್ತ ವಸೂಲಿ ಮಾಡಿಸಲು ಆ ಕಾಲದಲ್ಲಿ ಭೂ ಮಾಲಿಕರ ವಸೂಲಿ ಪಡೆ ಇರುತ್ತಿತ್ತು ಅವರ ಕೆಲಸ ಮಾಲಿಕರ ಗುಮಸ್ತರು ನೀಡುವ ಪಟ್ಟಿಯಂತೆ ಬಾಕಿದಾರನ ಮನೆಗೆ ಹೋಗಿ ಬೆದರಿಸುವ ಅಥವ ಮನೆಯಲ್ಲಿನ ದವಸ ಧಾನ್ಯ ಅಪಹರಿಸುವ ದಬ್ಬಾಳಿಕೆ ಮಾಡುವವರಾಗಿರುತ್ತಿದ್ದರು....

ಭಾಗ - 58, ಆನಂದಪುರಂ ಇತಿಹಾಸ, ಸುಮಾರು ಐದು ನೂರು ವರ್ಷ ಪುರಾತನವಾದ ಆನಂದಪುರಂ ಕೋಟೆ ಆಂಜನೇಯ ಗುಡಿ, ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗಕ್ಕಾಗಿ ಐತಿಹಾಸಿಕ ಆನಂದಪುರಂ ಕೋಟೆ ಇಬ್ಬಾಗ ಮಾಡಿದ ಬ್ರಿಟೀಷ್ ಸರಕಾರ

#ಭಾಗ_58. #ಆನ೦ದಪುರಂ_ಇತಿಹಾಸ. #ಸುಮಾರು_500_ವರ್ಷ_ಪುರಾತನ_ಅನಂದಪುರಂ_ಕೋಟೆ_ಆಂಜನೇಯ. #ಶಿವಮೊಗ್ಗ_ತಾಳಗುಪ್ಪ_ರೈಲು_ಮಾಗ೯_ಆನಂದಪುರಂ_ಕೋಟೆ_ಸೀಳಿ_ನಿರ್ಮಿಸಿದ_ಬ್ರಿಟಿಷರು . #ಕೋಟೆಯಲ್ಲಿ_ನಿದಿ_ಸಿಕ್ಕಿದ_ಜನಪದ_ಕಥೆಯೂ_ಇದೆ. #ಅಯ್ಯಂಗಾರರ_ಕುಟುಂಬ_ಪೂಜೆ_ನೈವೇದ್ಯ_ಸಾಮೂಹಿಕ_ಬೋಜನ_ಏರ್ಪಡಿಸುತ್ತಿದ್ದರು. #ಯಡೇಹಳ್ಳಿ_ಕೋಟೆ_ಹೆಸರಿನ_ಈ_ಪ್ರದೇಶ_ಕಿರಾತಕರ_ಆಳ್ವಿಕೆಯಲ್ಲಿದ್ದದ್ದನ್ನು_ರಾಜವೆಂಕಟಪ್ಪ_ನಾಯಕ_ವಶ_ಪಡೆಯುತ್ತಾರೆ. #ರಾಮಕ್ಷತ್ರಿಯ_ಕೋಟೆಗಾರರಿಂದ_ಪುನರ್_ನಿರ್ಮಾಣವಾದ_ಆನಂದಪುರ೦_ಕೋಟೆ. #ಉಗಾಂಡದಲ್ಲಿ_ಸಕ್ಕರೆ_ಕಾರ್ಖಾನೆ_ಉದ್ಯೋಗಿ_1950ರ_ದಶಕದಲ್ಲಿ_ಕೋಟೆ_ಆಂಜನೇಯ_ಗುಡಿ_ಮತ್ತು_ಪಗಾರ_ನಿರ್ಮಿಸಿದ್ದರು     ಆನಂದಪುರಂನ ಐತಿಹಾಸಿಕ ಕೆಳದಿ ಅರಸರ ಕೋಟೆಯ ಕೋಟೆ ಆಂಜನೇಯ ದೇವಸ್ಥಾನ ಸುಮಾರು 500 ವಷ೯ದಷ್ಟು ಪುರಾತನ ಇರಬಹುದು.   1938 ರಲ್ಲಿ ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುವಾಗ ಈ ಐತಿಹಾಸಿಕ ಕೋಟೆ ಸಂರಕ್ಷಿಸದೆ ಕೋಟೆ ಮದ್ಯ ಸೀಳಿಕೊಂಡು ರೈಲು ಮಾರ್ಗ ನಿರ್ಮಿಸಿದ ಉದ್ದೇಶ ದುರಂತವೇ.    ಕೆಳದಿ ರಾಜ ವೆಂಕಟಪ್ಪ ನಾಯಕರು ಈ ಕೋಟೆ (ಆಗ ಯಡೇಹಳ್ಳಿ ಕೋಟೆ ಅಂತ ಈ ಪ್ರದೇಶದ ಮೂಲ ಹೆಸರು) ಮತ್ತು ಹರತಾಳು ಪ್ರದೇಶ ಕಿರಾತಕರಿಂದ (ಚಿತ್ರದುರ್ಗದ ನಾಯಕರು ಇರಬಹುದು) ವಶಪಡಿಸಿಕೊಂಡು ಅಭಿವೃದ್ದಿ ಮಾಡಿದ ಇತಿಹಾಸದ ದಾಖಲೆಗಳು ಲಭ್ಯವ...