Skip to main content

Posts

ನನಗಿಷ್ಟವಾದ ಈ ಆಪ್ತ ಲೇಖನ ಪ್ರಜಾವಾಣಿಯ ಸಂಗಣ್ಣ ಪ್ರಕಾಶ್ ಪೇಸ್ ಬುಕ್ನಲ್ಲಿ ಕಳೆದ ವರ್ಷ ಪಾದರ್ಸ್ ಡೇ ಗೆ ಬರೆದದ್ದು, ಇದು ಜೀವನದ ಸನ್ಮಾರ್ಗದ ಪಾಠ ಕಲಿಸುತ್ತದೆ ಓದಿ.

#ಹರವೆ_ಸಂಗಣ್ಣ_ಪ್ರಕಾಶ್_ಈಗ_ಪ್ರಜಾವಾಣಿ_ದಾವಣಗೆರೆ_ಬ್ಯೂರೋದ_ಪ್ರಸರಣ_ವಿಭಾಗದ_ವ್ಯವಸ್ಥಾಪಕರು         ಇವರು ಚಾಮರಾಜ ನಗರ ಜಿಲ್ಲೆಯವರು ತಮ್ಮ ತಂದೆಯ ಪ್ರೋತ್ಸಾಹ ಪತ್ರಿಕೆ ಹಂಚುವ ಮೂಲಕ ತೋರಿಸಿ ಕೊಟ್ಟಿದ್ದು ಅವರಿಗೆ ಇವತ್ತು ನಾಡಿನ ಪ್ರಖ್ಯಾತ ಪತ್ರಿಕೆಯಲ್ಲಿ ಪ್ರತಿಷ್ಟಿತ ಹುದ್ದೆಯಲ್ಲಿರುವ೦ತೆ ಮಾಡಿದ್ದನ್ನ ಪಾದರ್ಸ್‌ ಡೇನಲ್ಲಿ ನೆನಪು ಮಾಡಿ ಬರೆದಿದ್ದಾರೆ.     ಮನಸ್ಸಿದ್ದರೆ ಮಾಗ೯ ಉ೦ಟು, ವೃತ್ತಿಯಲ್ಲಿ ಮೇಲು ಕೇಳು ಇಲ್ಲ ಎನ್ನುವ ಸಂದೇಶ ಇವತ್ತಿನ ಎಲ್ಲಾ ಯುವ ಜನಾ೦ಗಕ್ಕೆ ಸ್ಪೂತಿ೯ ಉಂಟು ಮಾಡುತ್ತದೆ   ಓದಿ.   ಅಂದು ನನ್ನ ಡಿಗ್ರಿ ಓದಿದ ನಂತರ ಹಳ್ಳಿಯಲ್ಲಿ ಏನು ಮಾಡಲಾಗದೆ ಮೈಸೂರಿಗೆ ಇಡೀ ನಮ್ಮ ಕುಟುಂಬ ಬಂದೆವು. ಅಣ್ಣ ಅಲ್ಲೆ ಇದ್ದ ಕಾರಣ ಒಂದು ಚಿಕ್ಕ ಮನೆಯಲ್ಲಿ ನಾನು,ಅವ್ವ, ಅಪ್ಪ ಅಣ್ಣನ ಸಂಸಾರ ಚಿಕ್ಕ ಜಾಗದಲ್ಲೇ ಇದ್ದೆವು. ನನ್ನ ಕೆಲಸ ಕೆಲಸ ಹುಡುಕುವುದು ಊಟ ಮಾಡುವುದು.ಕೆಲ ದಿನಗಳವರೆಗೆ ಇಷ್ಟೇ ಆಗಿತ್ತು ನನ್ನ ದಿನಚರಿ. ಸುಮಾರು ದಿನಗಳ ನಂತರ ಅಪ್ಪ ನನ್ನನ್ನು ಕರೆದು ನೋಡು ಮಗ, ನಾವೀಗ ಇರುವುದು ನಿನ್ನ ಅಣ್ಣನ ಮನೆಯಲ್ಲಿ ಇರುವುದು, ಯಾರೇ ಆಗಿರಲಿ ಎಷ್ಟು ದಿನ ಅಂತ ಸುಮ್ಮನೆ ಕುಳಿತು ಊಟ ಮಾಡುವುದು..ಬೇಡ ಇದು ಸರಿಯಲ್ಲ, ಕೆಲಸ ಸಿಕ್ಕಿಲ್ಲ ಅಂತಾ ಸುಮ್ಮನೆ ಕುಳಿತುಕೊಂಡಿರುವುದು ಸರಿಯಲ್ಲ. ...

ಭಾಗ- 39,ಆನಂದಪುರಂ ಇತಿಹಾಸ, 1983 ರಲ್ಲಿ ಆನಂದಪುರಂ ರೈತ ಬಂಧು ಗ್ರಾಮೋದ್ಯೋಗದ ನಾಲ್ಕು ಕಾಮಿ೯ಕರ ಕೊಲೆ ರಾಜ್ಯದಲ್ಲೇ ಸೆನ್ಸೇಷನಲ್ ಸುದ್ದಿ ಮತ್ತು ಆತಂಕಕ್ಕೆ ಕಾರಣ ಆಗಿತ್ತು.

#ಭಾಗ_39. #ಆನಂದಪುರಂ_ಇತಿಹಾಸ #ಆ_ಕರಾಳ_ರಾತ್ರಿ_ನಡೆದ_ನಾಲ್ಕು_ಕೊಲೆಗಳು. #ರೈತ_ಬಂದು_ಗ್ರಾಮೋದ್ಯೋಗಕ್ಕೆ_ಕಪ್ಪು_ಚುಕ್ಕೆ_ಆದ_ಘಟನೆ #ಕೊನೆ_ಕ್ಷಣದಲ್ಲಿನ_ಪೋನ್_ಕರೆ_ರಾಮಭಟ್ಟರ_ಜೀವಉಳಿಸಿತು. #ಹಣದಾಸೆಗೆ_ಕೊಲೆಮಾಡಿದವರು_ಗ್ರಾಮೋದ್ಯೋಗದ_ಮಾಜಿ_ಕಾರ್ಮಿಕರೆ .     ತೀರ್ಥಹಳ್ಳಿಯ ಪೋಲಿಸ್ ಠಾಣೆಗೆ ಬೆಳ್ಳ೦ಬೆಳಗೆ ಆ ದಿನ (ದಿನಾಂಕ 28- ಆಗಸ್ಟ್ - 1983) ಬಂದ ಮಾಹಿತಿ ತೀರ್ಥಹಳ್ಳಿ  ಆನಂದಪುರಂ ರಸ್ತೆಯ ಸಂಕದ ಹೊಳೆ ಹತ್ತಿರ ಲಾರಿ ಅಪಘಾತವಾಗಿ ಇಬ್ಬರು ಮೃತರಾಗಿದ್ದಾರೆಂಬುದು.   ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾವಿಸಿದ ಮೇಲೆ ಅವರು ಗಮನಿಸಿದ್ದು ಇದು ಅಪಘಾತವಲ್ಲ ಕೊಲೆ! ಅಂತ ಮತ್ತು ಈ ಲಾರಿ ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯ್ಕರಿಗೆ ಸೇರಿದ್ದು ಅಂತ.    ಮೇಲು ನೋಟಕ್ಕೆ ಹಣಕ್ಕಾಗಿ ಅಥವ ದ್ವೇಷವೋ ಜಗಳವೋ ಆಗಿ ಲಾರಿ ಒಳಗಿನ ಮರದ ಕಟ್ಟೆಯಿಂದ ತಲೆಗೆ ಹೊಡೆದು ಕೊಂದ ಕೊಲೆ ಎಂದು ಅಂದಾಜಿಸುತ್ತಾರೆ ಮತ್ತು ತಕ್ಷಣ ಆನಂದಪುರಂ ರೈತ ಬಂದು ಗ್ರಾಮೋದ್ಯೋಗಕ್ಕೆ ಮಾಹಿತಿ ನೀಡಿ ಸಂಬಂದಪಟ್ಟವರಿಗೆ ಬರುವಂತೆ ತಿಳಿಸುತ್ತಾರೆ.   ತಕ್ಷಣ ಆನಂದಪುರಂನಿಂದ ರೈತ ಬಂದು ಗಾಮೋದ್ಯೋಗ ದ(ಅಕ್ಕಿ ಗಿರಣಿ ) ವ್ಯವಸ್ಥಾಪಕರಾದ ಶಂಕರ್ ನಾಯಕ್ ಎಂಬುವವರು ಬಂದು ತಮ್ಮ ಸಂಸ್ಥೆಯ ಲಾರಿ ಎಂದು ಕೊಲೆಯಾದ ಇಬ್ಬರಲ್ಲಿ ಒಬ್ಬ ತಮ್ಮ ಸಂಸ್ಥೆಯ ಲ...

ಕನ್ನಡದಲ್ಲಿ ಐಎಎಸ್ ಪಾಸು ಮಾಡಿದ ಮೊದಲ ಅಧಿಕಾರಿ ಕೆ.ಶಿವರಾಂ

2018ರ ಜೂನ್ ತಿಂಗಳಲ್ಲಿ ದಿಡೀರ್ ಆಗಿ ಬಂದಿದ್ದ ಕೆ.ಶಿವರಾಂ ನನಗೆ ತುಂಬಾ ಇಷ್ಟ, ನನ್ನ ಅತಿಥ್ಯ ಸ್ವೀಕರಿಸಿದ 3 ವರ್ಷದ ಹಿಂದಿನ ನೆನಪುಗಳು. *ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲಿಗರು.* *ಇವರ ಜೀವನ ಒಂದು ಹೊರಾಟ ಯಾಕೆಂದರೆ ಇವರ ಬಾಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬದಲ್ಲಿ ಜನಿಸಿದ ಇವರು ಎಲ್ಲಾ ಸವಾಲುಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದ ಕಥೆ ಎಲ್ಲರಿಗೂ ಒಂದು ಪ್ರೇರಣೆ ಆಗುತ್ತದೆ.*   *ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.*    *ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವ...

ಭಾಗ -38, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ರಕ್ತಸಿಕ್ತ ಈಸೂರು ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷ್ ಸರ್ಕಾರದ ಕಣ್ಣು ತಪ್ಪಿಸಿ ಭೂಗತರಾಗಲು ಬದರಿನಾರಾಯಣ ಅಯ್ಯ೦ಗಾರರ ಶಿಪಾರಸ್ಸಿನಂತೆ ಸಹಾಯ ಮಾಡಿದ ಆನಂದಪುರಂ ಸ್ವಾತಂತ್ರ್ಯ ಹೋರಾಟಗಾರ ಎ.ರಾಮರಾವ್

#ಭಾಗ_38. #ಆನಂದಪುರಂ_ಇತಿಹಾಸ. #ಸ್ವಾತಂತ್ರ_ಹೋರಾಟದಲ್ಲಿ_ಆನಂದಪುರಂ  #ಬದರಿನಾರಾಯಣ್_ಅಯ್ಯ೦ಗಾರರ_ಶಿಪಾರಸ್ಸಿನಂತೆ_ರಾಮರಾವ್_ಈಸೂರು_ಹೋರಾಟಗಾರರಿಗೆ_ಸಹಾಯ_ಮಾಡುತ್ತಾರೆ. #ಸ್ವಲ್ಪ_ರಹಸ್ಯ_ಸೋರಿದ್ದರೂ_ರಾಮರಾವ್_ನೇಣಿಗೆ_ಕೊರಳು_ಕೊಡಬೇಕಾಗಿದ್ದ_ಸಂದರ್ಭ  #ಇತಿಹಾಸದಲ್ಲಿ_ದಾಖಲಾಗದ_ರಹಸ್ಯ_ಕಾರ್ಯಾಚರಣೆ_ಈಸೂರು_ಸ್ವಾತಂತ್ರ_ಹೋರಾಟದಲ್ಲಿ #ಭಾಗವಹಿಸಿದವರಿಗೆ_ಭೂಗತರಾಗಲು_ಆನಂದಪುರ೦_ಅಯ್ಯ೦ಗಾರ್_ಕುಟುಂಬದ_ಸಹಾಯ   ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಚಳವಳಿ) 1942 ರಲ್ಲಿ ತೀವ್ರವಾಗಿ ಆಗಸ್ಟ್ 9-1942 ರಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟದ ನೇತಾರರೆಲ್ಲ ಜೈಲು ಸೇರಿದ್ದರು ಆಗ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರಿನಲ್ಲಿ ಸಾಹುಕಾರ್ ಬಸವಣ್ಯಪ್ಪರ ಮುಂದಾಳತ್ವದಲ್ಲಿ ಪ್ರತಿನಿತ್ಯ ಪ್ರಭಾತ್ ಪೇರಿ ನಡೆಯುತ್ತಿರುತ್ತದೆ.  ಇದು ಬ್ರಿಟೀಶ್ ಸರ್ಕಾರದ ಸ್ಥಳಿಯ ಅಧಿಕಾರಿಗಳಿಗೆ ಅಪತ್ಯ ಆಗುತ್ತದೆ ಈ ಬಿನ್ನಾಭಿಪ್ರಾಯ ದೊಡ್ಡದಾಗಿ 25- ಸೆಪ್ಟೆಂಬರ್-1942 ರಲ್ಲಿ ಈಸೂರಿನ ನಿವಾಸಿಗಳು "ಈಸೂರು ಸ್ವಾತಂತ್ರ್ಯ" ವಾಯಿತೆಂದು ಘೋಷಿಸುತ್ತಾರೆ, ರಾಷ್ಟ್ರದ್ವಜ ಹಾರಿಸುತ್ತಾರೆ ಇದರಿಂದ ಮರುದಿನ ಅಂದರೆ 28- ಸೆಪ್ಟೆಂಬರ್ - 1942 ರಂದು ಈಸೂರಿಗೆ ಬಂದ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಪೋಲಿಸ್ ಅಧಿಕಾರಿ ಕೆಂಚೆ ಗೌಡರ ಹತ್ಯೆಯಾಗುತ್ತದೆ.   ಇದರಿಂ...

ಮುಂಗಾರು ಮಳೆಯಲ್ಲಿ ಪಶ್ಚಿಮ ಘಟ್ಟದ ತೊಯ್ದ ಅರಣ್ಯ ಭೂಮಿಯಲ್ಲಿ ತ್ರತ್ಯಕ್ಷವಾಗುವ ವಿವಿದ ಅಣಬೆಗಳು ಇದರಲ್ಲಿ ಕೆಲವೇ ಕೆಲವು ಮಾತ್ರ ತಿನ್ನಲು ಯೋಗ್ಯ ಮತ್ತು ವಿಬಿನ್ನ ರುಚಿ ಇರುವುದು

#ಮು೦ಗಾರು_ಮಳೆ_ಪ್ರಾರಂಭ_ಆಗಿದೆ. #ಮಲೆನಾಡಿನ_ಸಂಪ್ರದಾಯಿಕ_ಆಹಾರ_ಕೂಡ #ಕಳಲೆ_ಮರ_ಕೆಸ_ಅಣಬೆ_ಹೀಗೆ. #ಇವತ್ತಿನ_ಉಪಹಾರ_ರೊಟ್ಟಿ_ಮತ್ತು_ಅಣಬೆ_ಪಲ್ಯ     ಪಶ್ಚಿಮ ಘಟ್ಟದಲ್ಲಿ 51 ವಿದದ ಅಣಬೆಗಳಲ್ಲಿ 8 ವಿದದ ಅಣಬೆ ಮಾತ್ರ ತಿನ್ನಲು ಯೋಗ್ಯವಂತೆ. ತರಕಾರಿ ಗುಂಪಿನ ಸಸ್ಯ ವರ್ಗಕ್ಕೆ ಸೇರಿದ ಶಿಲೀಂದ್ರ ಈ ಅಣಬೆ ಉತ್ತಮ ಆಹಾರ ಮತ್ತು ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವುದರಿಂದ ಡಯಾಬಿಟೀಸ್ ಇರುವವರಿಗೆ ಒಳ್ಳೆಯ ಆಹಾರ ಇದು.    ನಾನು ನೋಡಿದ್ದು ಇದರಲ್ಲಿ ಕೆಲವೇ ಕೆಲವು ಮತ್ತು ತಿಂದಿದ್ದು ಇನ್ನೂ ಕೆಲವು ಮಾತ್ರ.     ನಮ್ಮಲ್ಲಿ  ಹೆಚ್ಚಾಗಿ ಸಿಗುವುದು ಹೆಗ್ಗಲಾಣಬೆ ಅಂತ( ಇದನ್ನು ಬೇರೆ ಹೆಸರಲ್ಲೂ ಕರೆಯುತ್ತಾರೆ) ಇದರಲ್ಲಿ ಕಪ್ಪು ಮೊಗ್ಗು ಮತ್ತು ಬಿಳಿ ಮೊಗ್ಗು ಎಂಬ ಎರೆಡು ವಿದವಿದೆ.    ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ದೊರೆಯುತ್ತದೆ ಇದಕ್ಕೆ ಬೇಡಿಕೆ ಜಾಸ್ತಿ ರುಚಿ ಜಾಸ್ತಿ ಆದ್ದರಿಂದ ಕೆಜಿಗೆ 300 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಆಗುತ್ತೆ.   ನುಚ್ಚಾಣುಬೆ ಹೆಸರು ಹೇಳುವಂತೆ ಸಣ್ಣ ಗಾತ್ರದ್ದು, ರುಚಿ ಜಾಸ್ತಿ ಆದರೆ ಇದನ್ನು ಕಿತ್ತು ತಂದು ಸ್ವಚ್ಚ ಮಾಡುವುದು ಮೈತುಂಬಾ ಕೆಲಸವಾದ್ದರಿಂದ ಇದರ ಬಳಕೆ ಸಲೀಸಲ್ಲ. (ಸಣ್ಣವನಾಗಿದ್ದಾಗ ತಿಂದ ನೆನಪು)   ...

ಭಾಗ-37, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಕಾಂಗ್ರೇಸ್ ರಾಜಕಾರಣಿ ಬದರಿನಾಯಣ ಅಯ್ಯಂಗಾರರು ದೇವರಾಜು ಅರಸರ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಆಗಿದ್ದವರಿಂದ ರಾಜಿನಾಮೆ ಪಡೆಯುವ ಷಡ್ಯಂತ್ರ

*#ಭಾಗ_37.* *#ಆನಂದಪುರಂ_ಇತಿಹಾಸ.* *#ವಿದ್ಯಾಮಂತ್ರಿ_ಬದರಿನಾರಾಯಣರ_ರಾಜಿನಾಮೆ.* *#ಇಂದಿರಾಗಾಂಧಿಗೆ_ಸುಳ್ಳು_ಮಾಹಿತಿ_ನೀಡಿದ_ಪ್ರಕರಣ* *#ರಾಜಿನಾಮೆ_ಬೇಡ_ಕಾಲಾವಕಾಶ_ಕೊಡಿ_ಎಂದು_ಮುಖ್ಯಮಂತ್ರಿ_ದೇವರಾಜ್_ಅರಸ್* *#ಶಿವಮೊಗ್ಗದ_ಹೊಸನಗರದ_ಶಾಸಕರಾಗಿದ್ದ_ಶಿರ್ನಾಳಿ_ಚಂದ್ರಶೇಖರ್_ಕಾರಣ.*   *ಆನಂದಪುರಂನ ಬದರಿನಾರಾಯಣ ಅಯ್ಯಂಗಾರರರು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಆಗಿನ ಖಾಯಂ ಖಜಾಂಚಿಗಳು, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಶಾಸಕರಾಗಿ ವಿದ್ಯಾ ಮಂತ್ರಿ ಆಗಿದ್ದು ಅವತ್ತಿನ ಕಾಲದಲ್ಲಿ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಬದರಿನಾರಾಯಣ ಅಯ್ಯಂಗಾರ್ ಎಷ್ಟು ಪ್ರಬಾವಶಾಲಿ ಅನ್ನುವುದು ಅಂದಾಜಿಸಬಹುದು.*    *ಮುಖ್ಯಮ೦ತ್ರಿ ನಿಜಲಿಂಗಪ್ಪರ ವಿರುದ್ಧ ದೇವರಾಜ ಅರಸರ ಬಂಡಾಯಕ್ಕೆ ನೀರು ಗೊಬ್ಬರ ಹಾಕಿ ಪೋಷಿಸಿದವರೇ ಬದರಿನಾರಾಯಣ್ ಅಯ್ಯಂಗಾರರು, ಮುಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಅವಧಿಯಲ್ಲೂ ಹಿರಿಯ ಶಾಸಕರೂ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಮುಖಂಡರಾಗಿದ್ದ ಬದರಿ ನಾರಾಯಣ ಅಯ್ಯಂಗಾರರಿಗೆ ದೇವರಾಜ ಅರಸರ ಗುಂಪು ಎಂಬ ಕಾರಣದಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ.*     *ದೇವರಾಜ್ ಅರಸರು ಮುಖ್ಯಮಂತ್ರಿ ಆದ ಮೇಲೆ ಬದರಿನಾರಾಯಣ ಅಯ್ಯಂಗಾರರಿಗೆ ಕ್ಯಾಬಿನೆಟ್ ದರ್ಜೆ ವಿದ್ಯಾ ಮಂತ್ರಿ ಸ್ಥಾನ ಸಿಗುತ್ತದೆ ಇದು ಇಡೀ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಚಲನ ಉಂಟು ...