Skip to main content

Posts

ಸಕಾ೯ರಿ ಕಾಯ೯ಕ್ರಮಗಳು ಪಕ್ಷಾತೀತವಾಗಿರಬೇಕು, ಪಕ್ಷದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿರಬೇಕಾ?

#ಸಕಾ೯ರಿ_ಕಾಯ೯ಕ್ರಮದಲ್ಲಿ_ಪಕ್ಷದ_ಪದಾಧಿಕಾರಿಗಳನ್ನ_ವೇದಿಕೆಯಲ್ಲಿ_ಕೂರಿಸುವ_ಪ್ರೋಟೋಕಾಲ್ !?   ತೀ.ನಾ.ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ಅವರ ಪಕ್ಷ ಸಂಘಟನೆ ಸಭೆ ಸಮಾರಂಭ ಹೊರತು ಪಡಿಸಿದ (ಆಗ ಆಡಳಿತದಲ್ಲಿದ್ದದ್ದು ಅವರ ಪಕ್ಷ) ಸಕಾ೯ರಿ ಕಾಯ೯ಕ್ರಮದಲ್ಲಿ ವೇದಿಕೆಯಲ್ಲಿ ಭಾಗವಹಿಸದೆ ಒಳ್ಳೆಯ ನೀತಿ ಪಾಲಿಸಿದ್ದರು.   ಸಕಾ೯ರಿ ಕಾಯ೯ಕ್ರಮಕ್ಕೆ ಪ್ರೋಟೋಕಾಲ್ ಇದೆ ಯಾರ್ಯಾರು ವೇದಿಕೆಯಲ್ಲಿ ಅಧ್ಯಕ್ಷತೆವಹಿಸಬೇಕು, ಯಾರು ಉಪಸ್ಥಿತರಿರಬೇಕು ಅಂತ ಈ ಪ್ರೋಟೋಕಾಲ್ ನಲ್ಲಿ ಪಕ್ಷ ಸಂಘಟನೆಯ ಪಧಾದಿಕಾರಿಗಳಿಗೆ ಅವಕಾಶವೇ ಇಲ್ಲ.   ಆದರೆ ಇತ್ತೀಚಿಗಿನ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಕಾ೯ರಿ ಕಾಯ೯ಕ್ರಮದಲ್ಲಿ ವೇದಿಕೆಯಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳು ವೇದಿಕೆ ಹಂಚಿಕೊಂಡು ಉಪಸ್ಥಿತರಿರುವುದು ಮಾತ್ರ ಅಭಾಸವೇ ಸರಿ.   ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಹಿಂದೆ ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ತಿ.ನಾ. ಶ್ರೀನಿವಾಸರ ಶಿಸ್ತಿನ ನಡೆ ಬಗ್ಗೆ ತಿಳಿದು ಮುಂದಿನ ದಿನದಲ್ಲಿ ಸಕಾ೯ರಿ ಕಾಯ೯ಕ್ರಮ ಪಕ್ಷಾತೀತವಾಗಿ ನಡೆಯಲು ಅನುವು ಮಾಡಿಕೊಡಬಾರದೇಕೆ ?

ನಿಂತು ಹೋಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭ, ಎಲ್ಲವೂ ನುಡಿದಂತೆ ನಡೆದರೆ 2021 ರಲ್ಲಿ ವಿಮಾನ ಸಂಚಾರ ಪ್ರಾರಂಭ.

#ಶಿವಮೊಗ್ಗ_ವಿಮಾನ_ನಿಲ್ದಾಣ_ಕಾಮಗಾರಿ_ಶಂಕು_ಸ್ಥಾಪನೆ  ಯಡೂರಪ್ಪರ ಬಹುದಿನದ ಕನಸು ನನಸು     ಶಿವಮೊಗ್ಗ ಜಿಲ್ಲೆಯವರಾದ ಮುಖ್ಯಮಂತ್ರಿ ಯಡೂರಪ್ಪನವರಿಗೆ ತಮ್ಮ ತವರು ಜಿಲ್ಲೆ ಅಭಿವೃದ್ದಿ ವಿಚಾರದಲ್ಲಿ ಅಪಾರ ಶ್ರಮ ಪಡುತ್ತಾರೆ.   ಜಿಲ್ಲೆಯ ಶಿವಮೊಗ್ಗ ತಾಳಗುಪ್ಪ ಬ್ರಾಡ್ಗೇಜ್ ರೈಲು ಮಾಗ೯ ಪರಿವತ೯ನೆ ರೈಲು ಪುನರ್ ಸಂಚಾರ ಮರೀಚಿಕೆ ಅನ್ನಿಸಿ ದಶಕಗಳ ಕಾಲ ಈ ಮಾಗ೯ದಲ್ಲಿ ರೈಲು ಸಂಚಾರ ನಿಂತಿದ್ದು ಯಡೂರಪ್ಪನವರ ಇಚ್ಚಾಶಕ್ತಿಯ ರಾಜಕಾರಣದಿಂದ ಪುನರ್ ಪ್ರಾರಂಭ ಆಗಿದ್ದು ಇತಿಹಾಸ.   ಇದೇ ರೀತಿ ಸಾಗರ ತಾಲ್ಲೂಕಿನ ತುಮರಿ ಸೇತುವೆ ಶರಾವತಿ ಯೋಜನೆ ಪ್ರಾರಂಭದಿಂದ ಜನರ ಒತ್ತಾಸೆ ಆಗಿದ್ದರೂ ಯಡೂರಪ್ಪನವರು ಈ ಹಿಂದೆ ಮುಖ್ಯಮಂತ್ರಿ ಆದಾಗ ಶಂಕುಸ್ಥಾಪನೆ ಮಾಡಿದ್ದರೂ ಕಾಯ೯ಗತ ಆಗಿರಲಿಲ್ಲ ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ತುಮರಿ ಸೇತುವೆ ಟೆಂಡರ್ ಪ್ರಕ್ರಿಯೆ ಮುಗಿದು ಈಗ ಕಾಮಗಾರಿ ಪ್ರಾರಂಭ ಆಗಿದೆ.   ಇದೇ ರೀತಿ ಯಡೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗಲೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭ ಮಾಡಲು ಪ್ರಯತ್ನಿಸಿದ್ದು ಗುತ್ತಿಗೆದಾರರ ಸಮಸ್ಯೆಯಿ೦ದ ನಿಂತೇ ಹೋಗಿತ್ತು.   ಈಗ ಯಡೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣ ಶೀಘ್ರವಾಗಿ ನಿಮಿ೯ಸಲು ಹಣ ಬಿಡುಗಡೆ ಮಾಡಿದ್ದಾರೆ ನಿಂತು ಹೋಗಿದ್ದ ಕಾಮಗಾರಿ ಪ್ರಾರಂಭ ಆಗಿದೆ ಕೆಲ ದಿನದಲ್ಲಿ ...

ಶಾಸಕರುಗಳಿಗೆ ಬಿಸಿ ತುಪ್ಪವಾಗಲಿರುವ ಗ್ರಾಮ ಪಂಚಾಯತ್ ಸದಸ್ಯರ ನಾಮ ನಿದೇ೯ಶನ ಕೆಲಸ

#ಗ್ರಾಮ_ಪಂಚಾಯತ್_ಸದಸ್ಯರ_ನಾಮಕರಣ_ಶಾಸಕರ_ಅಂಗಳದಲ್ಲಿ. *ಸ್ಥಳಿಯ ಶಾಸಕರಿಗೆ ಬಿಸಿ ತುಪ್ಪ ಆಗಲಿರುವ ಗ್ರಾಮ ಪಂಚಾಯತ್ ನಾಮ ನಿರ್ದೇಶನ*         ಮುಂದಿನ ಆರು ತಿಂಗಳು ಗ್ರಾಮ ಪಂಚಾಯತ್ ಚುನಾವಣೆ ಸಾಧ್ಯವಿಲ್ಲ, ಮುಂದಿನ ವರ್ಷ ಮಾಚ್೯ ನಂತರವೆ ಗ್ರಾಮ ಪಂಚಾಯಿತಿಗೆ ಚುನಾವಣೆ ಆದರೆ ಕನಿಷ್ಟ ಒಂದು ವರ್ಷ ಅವದಿ ಆಡಳಿತ ನಾಮ ನಿದೇ೯ಶನ ಸದಸ್ಯರೇ ಆಡಳಿತ ಮಾಡಲಿದ್ದಾರೆ.   ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳ ಆಡಳಿತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷದ ನಿಯ೦ತ್ರಣಕ್ಕೆ ಬರಲಿದೆ.    ಇದರಿಂದ ಆ ಪಕ್ಷದ ಗ್ರಾಮ ಮಟ್ಟದ ಸಂಘಟನೆ ಬಲಗೊಳ್ಳುವ ಸಾಧ್ಯತೆಯೂ ಇದೆ ಜೊತೆಗೆ ಮುಂದಿನ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಗೆ ಆ ಪಕ್ಷದವರೇ ಹೆಚ್ಚು ಆಯ್ಕೆಯೂ ಆಗಬಹುದು.   ಜೂನ್ ಕೊನೆಯಲ್ಲಿ 5000 ಗ್ರಾಮ ಪಂಚಾಯತ್ ಅವದಿ ಮುಕ್ತಾಯಗೊಳ್ಳಲಿದ್ದು ಆಯಾ ವ್ಯಾಪ್ತಿಯ ಶಾಸಕರು ಈಗಾಗಲೇ ಗ್ರಾಮ ಮಟ್ಟದ ಕಾಯ೯ಕತ೯ರ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಕಳಿಸುತ್ತಿದ್ದಾರೆ.   ಗ್ರಾಮ ಮಟ್ಟದಲ್ಲಿ ಶಾಸಕರಿಗೆ ಯಾರು ಆಪ್ತರು ಅವರಿಗೆ ಸ್ಥಾನ ಭದ್ರ ಹಾಗಂತ ಅವಕಾಶ ತಪ್ಪಿದವರ ನಡೆ ಮುಂದಿನ ಚುನಾವಣೆಯಲ್ಲಿ ಏನಾಗಬಹುದೆಂಬ ಕುತೂಹಲವೂ ಇದೆ.   ನಾಮಕರಣ ಮಾಡಿದವರು ಮುಂದಿನ ಚುನಾವಣೆಯಲ್ಲಿ ಸ್ಪದಿ೯ಸಬಾರದೆಂಬ ...

ರಾಜ್ಯದಲ್ಲಿ ರೈತರಲ್ಲದವರು ಕೃಷಿ ಮಾಡಲು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ರಾಜ್ಯ ಸಕಾ೯ರದ ಹೊಸ ಕಾನೂನು ಸ್ವಾಗತಾಹ೯

*ಯಾರು ಬೇಕಾದರು ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸುವ ಈ ಹೊಸ ಕಾನೂನು ಬಗ್ಗೆ ಚಚೆ೯*           ಲ್ಯಾಂಡ್ ಆಕ್ಟ 79 A & B ಇಲ್ಲಿವರೆಗೆ ಯಾವ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ತೊಂದರೆ ಮಾಡಿಲ್ಲ ಏಕೆಂದರೆ ರೈತನ ಹೆಸರಲ್ಲಿ ಭೂ ಪರಿವತ೯ನೆ ಮಾಡಿ ನಂತರ ಅವರ ಹೆಸರಿಗೆ ಖರೀದಿಸುತ್ತಾರೆ, ನಮ್ಮಲ್ಲಿ ಬೇರೆ ರಾಜ್ಯದಿಂದ ಬಂದವರಿಗೆ ಕೃಷಿ ಕುಟುಂಬದ ದೃಡೀಕರಣ ಪಡೆದು ಭೂಮಿ ಪರಭಾರೆ ಮಾಡಿದ್ದಾರೆ ಇಂತಹ ನಕಲಿ ದಾಖಲೆಯಿಂದನೇ ಭೂಮಿ ಖರೀದಿ ನಿರಾತಂಕ ಆಗಿ ನಡೆದಿದೆ.        *ಆದರೆ ಕೃಷಿ ಮಾಡ ಬೇಕೆ೦ಬ ಆಸಕ್ತರಿಗೆ ಜಮೀನು ಖರೀದಿಸಲು ಈ ಲ್ಯಾಂಡ್ ಆಕ್ಟ್ ಅವಕಾಶ ನೀಡಿರಲಿಲ್ಲ*       ದೇಶದ ಅನೇಕ ರಾಜ್ಯದಲ್ಲಿ ಇರದ ಈ ಕಾಯ್ದೆ ನಮ್ಮ ರಾಜ್ಯದಲ್ಲಿತ್ತು,        ಇಲ್ಲಿಯವರೆಗೆ ನಮ್ಮ ರಾಜ್ಯದ ರೈತರ ಅಭಿವೃದ್ದಿ ಈ ಕಾಯ್ದೆ ಇಲ್ಲದ ಬೇರೆ ರಾಜ್ಯದ ರೈತರ ಅಭಿವೃದ್ದಿ ಜೊತೆ ತುಲನೆ ಮಾಡಿ ನೋಡಬಹುದು.   ಇದು ರೈತರಿಗೆ ಮಾರಕ ಕಾನೂನು ತಿದ್ದುಪಡಿ ಎನ್ನುವವರು ಬೇರೆ ರಾಜ್ಯದಲ್ಲಿ ರೈತರಿಗೆ ಏನು ಮಾರಕ ಆಗಿದೆ ? ನೋಡಬಹುದು.   ಯಾವುದೇ ಬಂದನದ ಕಾನೂನು ಕಾಲಕ್ರಮೇಣ ಬದಲಾಗಬೇಕು.   ನಾನು ರಾಜ್ಯ ಸಕಾ೯ರ ಲ್ಯಾಂಡ್ ಆಕ್ಟ್ 79 A & B ರದ್ದು ಮಾಡಿದ್ದು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಇದರಿ೦ದ ರಾಜ್ಯದಲ್ಲಿ ಕೃಷಿ ಕ್ಷೇತ್ರದಲ...

ಕೊರಾನಾ ಲಾಕ್ ಡೌನ್ ಡೈರಿ -46.ದೇಶದ ರಾಜಧಾನಿಯಲ್ಲಿ ನಾಗಾಲೋಟದಲ್ಲಿ ಸಾಗಿರುವ ಕೊರಾನಾ ಸೊ೦ಕು ಮತ್ತು ಸಾವಿನ ಸರಣಿ

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 46.    ದಿನಾ೦ಕ: 11-ಜೂನ್ -2020. #ಭಾರತದ_ರಾಜದಾನಿ_ದೆಹಲಿಯಲ್ಲಿ_ನಿಯ೦ತ್ರಣಕ್ಕೆ_ಬರದ_ಕೊರಾನಾ_ಅಟ್ಟಹಾಸದ_ಕರಾಳ_ಛಾಯ. *ಪ್ರತಿ ದಿನ 1500 ಮೀರಿದ ಪಾಸಿಟೀವ್ ಕೇಸ್ ಗಳು. * ಹೀಗೆ ಸಾಗಿದರೆ ಜುಲೈ ಕೊನೆಗೆ ಬೇಕಾಗಿದೆ ಒ0ದೂವರೆ ಲಕ್ಷ ಬೆಡ್ ಗಳು.     10- ಜೂನ್ -2020 ರ ಬುಧವಾರ ದೆಹಲಿಯಲ್ಲಿ ಪತ್ತೆ ಆದ ಕೊರಾನಾ ಕೇಸ್ ಗಳಿಂದ ಈವರೆಗೆ ದೆಹಲಿಯಲ್ಲಿ 33 ಸಾವಿರ ಸೋಂಕಿತರ ಸಂಖ್ಯೆ ದಾಟಿದೆ.   ಇಲ್ಲಿಯವರೆಗೆ ದೆಹಲಿಯಲ್ಲಿ ಮೃತರಾದವರ ಸ೦ಖ್ಯೆ 984.    ಇದೇ ರೀತಿ ಕೊರಾನಾ ಹರಡುವುದು ಮು೦ದುವರಿದರೆ ಜುಲೈ ಕೊನೆಗೆ ದೆಹಲಿ ಆಸ್ಪತ್ರೆಗಳಲ್ಲಿ ಬೇಕಾಗುವ ಹೆಚ್ಚುವರಿ ಬೆಡ್ ಗಳ ಸಂಖ್ಯೆ 1.5 ಲಕ್ಷ !?    ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸದೆ ಹೆಚ್ಚು ಬಿಗಡಾಯಿಸುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.    ದೆಹಲಿ ಮುಖ್ಯಮಂತ್ರಿ ಮತ್ತು ಲಿಪ್ಟಿನೆಂಟ್ ಗೌರ್ನರ್ (ರಾಜ್ಯಪಾಲರು) ಬಿನ್ನಾಭಿಪ್ರಾಯ, ಕೇಂದ್ರ ಆಡಳಿತ ಪಕ್ಷದೊಂದಿಗೆ ದೆಹಲಿ ಆಡಳಿತದ ಆಮ್ ಆದ್ಮಿ ಪಕ್ಷದ ತಿಕ್ಕಾಟಗಳು ನಿಯಂತ್ರಣಕ್ಕೆ ಬರದ ರೋಗದ ಜೊತೆ ದೆಹಲಿ ಜನರ ಜೀವದ ಜೊತೆ ಚೆಲ್ಲಾಟ ನಡೆಸಿದೆ.    ಹೀಗಾಗಿಯೆ ದೆಹಲಿ ಮುಖ್ಯಮಂತ್ರಿ ಅಮಿತ್ ಶಾ ಜೊತೆ ಮಾತುಕತೆ ಮಾಡಿದ್ದಾರೆ, ಕೇ೦ದ್ರ ಸಕಾ೯ರ ದೆಹಲಿಯಲ್ಲ...

ಯಡೂರಪ್ಪರ ನಾಯಕತ್ವದಲ್ಲಿ ಚುನಾವಣೆ ಗೆಲ್ಲಬೇಕು ಆದರೆ ನಿದಾ೯ರಗಳು ಮಾತ್ರ ಯಡೂರಪ್ಪರಿಗೆ ಇಲ್ಲ!? ಇದು ಏನನ್ನ ಸೂಚಿಸುತ್ತದೆ? ಯಡೂರಪ್ಪ ವಿರೋದಿಗಳು ಹೈಕಮಾ೦ಡ್ ಹೆಸರಲ್ಲಿ ಯಡೂರಪ್ಪರನ್ನ ಹದ್ದುಬಸ್ತು ಮಾಡುವ ಹಿಂಬಾಗಿಲ ಪ್ರಯತ್ನವಷ್ಟೆ.

#ಯಡೂರಪ್ಪರ_ಮೂಲೆಗುಂಪು_ಮಾಡುವ_ಬಿಜೆಪಿ_ಹೈಕಮಾಂಡ್_ಕಲ್ಚರ್ .     ಕಾಯ೯ಕತ೯ರ ಆಯ್ಕೆ, ಹಿಂದುಳಿದ ಜಾತಿಗೆ ಪ್ರಾತಿನಿತ್ಯ ಅಂತೆಲ್ಲ ಪ್ಯಾಚ್ ಅಪ್ ಮಾತು ತೇಲಿ ಬಿಡಬಹುದು ಆದರೆ ಇದು ಮುಖ್ಯಮಂತ್ರಿ ಯಡೂರಪ್ಪರ ಕೈ ಕಟ್ಟಿ ಹಾಕುವ, ಅವರ ಶಕ್ತಿ ಕುಂದಿಸುವ ರಾಜತಾಂತ್ರಿಕ ನಡೆ ಅಂತ ಯಾರಿಗೂ ಗೊತ್ತಾಗುತ್ತದೆ.   ಶಿವಮೊಗ್ಗ ಜಿಲ್ಲೆಯವರೇ ಆದ ಈಶ್ವರಪ್ಪರು ಈ ಆಯ್ಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಯಡೂರಪ್ಪರನ್ನ ಬಿಟ್ಟು ಬೇರೆಲ್ಲರನ್ನ ಹೊಗಳಿದ್ದಾರೆ ಇದು ಯಡೂರಪ್ಪರ ವಿರುದ್ದದ ಗೆಲುವು ಎಂಬ ದ್ವನಿ ಇದೆ.   ಕಾಂಗ್ರೇಸ್ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕ್ರತಿ ಅಂತ ಗೇಲಿ ಮಾಡುತ್ತಿದ್ದ ಬಿಜೆಪಿ ಈಗ ಈ ರಾಜ್ಯಸಭಾ ಅಭ್ಯಥಿ೯ ಆಯ್ಕೆಯಲ್ಲಿ ಅನುಸರಿಸಿದ್ದು ಕಾಂಗ್ರೇಸ್ ಸಂಸ್ಕೃತಿಯನ್ನೇ.   ಕನಾ೯ಟಕದಲ್ಲಿ ಯಡೂರಪ್ಪರ ಸಕಾ೯ರಕ್ಕೆ ಸದಾ ಬಿನ್ನಮತ, ಅಸಹಕಾರಕ್ಕೆ ಬೆಂಬಲಿಸುವ ಮತ್ತು ಸಕಾ೯ರ ಉಳಿಸುಕೊಳ್ಳುವ ಯಡೂರಪ್ಪರ ಪ್ರಯತ್ನಕ್ಕೆ ಸದಾ ಅಡ್ಡಗಾಲಾಗುವ ಕೇಂದ್ರ ಬಿಜೆಪಿಯ ನಡೆ ಅನುಮಾನಸ್ಪದ ಮತ್ತು ಯಡೂರಪ್ಪರನ್ನ ವೈಯಕ್ತಿಕವಾಗಿ ಸಹಿಸದ ಕಾರಣ ಎನ್ನುವುದು ಸಾಬೀತಾಗಿದೆ.   ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿ ಅವಧಿ ಪೂಣ೯ ಆಡಳಿತ ನೀಡಲಿ, ಅವರಿಗೆ ಈ ವಯಸ್ಸಲ್ಲಿ ಪದೇ ಪದೇ ಸಂಕಷ್ಟಕ್ಕೆ ದೂಡಿ ಅವರನ್ನ ಅಧಿಕಾರದಿಂದ ಹೊರದಬ್ಬಿ ಬೇರೆಯವರನ್ನ ಮುಖ್ಯಮಂತ್ರಿ ಮಾಡುವ ಆ೦ತರಿಕ ಪರೋಕ್ಷ ಛಾಯಾ ಯುದ್ದ ಕೊನೆಯಾಗದಿದ್ದರೆ? ಮು...

ಕೊರಾನಾ ಲಾಕ್ ಡೌನ್ ಡೈರಿ 45.140 ಕೋಟಿ ಭಾರತೀಯರನ್ನ ಕೊರಾನ ಸೊಂಕಿನ ಪರೀಕ್ಷೆ ಮಾಡಲು ನಮ್ಮ ಹತ್ತಿರ ಲಭ್ಯವಿರುವ ಪರೀಕ್ಷಾ ಕಿಟ್ ಕೇವಲ 1.5 ಲಕ್ಷ ಮಾತ್ರ !? ಹಾಗಾಗಿ ನಮಗೆ ನಾವೇ 10 ದಿನ ಮನೇನಲ್ಲಿ ಪ್ರತ್ಯೇಕವಾಗಿ ಉಳಿದು ಸ್ವಯಂ ರೋಗ ನಿರೋದಕ ಶಕ್ತಿಯಿಂದ ಗುಣ ಆಗದಿದ್ದರೆ ಮಾತ್ರ ಕೋವಿಡ್ -19 ಹೆಲ್ಪ್ ಲೈನ್ ಗೆ ಕರೆ ಮಾಡಲು ವೈದ್ಯ ದೇವಿ ಶೆಟ್ಟಿ ಕರೆ ಮಾಡಿದ್ದಾರೆ ಎಂಬ ಸುಳ್ಳು ವಿಡಿಯೋ ಹೆಚ್ಚು ವೀಕ್ಷಣೆ ಆಗಿದೆ ಇದನ್ನ ಯಾರು ಮಾಡುತ್ತಾರೆ?

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 45.    ದಿನಾ೦ಕ: 8-ಜೂನ್-2020. #ಎಲ್ಲರನ್ನೂ ಕೊರಾನಾ ಸೊ೦ಕಿನ ಪರೀಕ್ಷೆ ಮಾಡಲು ಸಾಧ್ಯವಿಲ್ಲ!? #ನೀಮಗೆ ನೀವೇ ಪರೀಕ್ಷಿಸಿಕೊಳ್ಳಬಹುದು *ಡಾಕ್ಟರ್ ದೇವಿ ಶೆಟ್ಟಿ ಈ ಬಗ್ಗೆ ವಿವರವಾಗಿ ತಿಳಿಸಿದ್ದಾರೆ ಅನ್ನುವ ನಕಲಿ ವಿಡಿಯೋ ಹೆಚ್ಚು ಚಲಾವಣೆಯಲ್ಲಿದೆ*    ಭಾರತ ದೇಶವಾಸಿಗಳ ಸಂಖ್ಯೆ  140 ಕೋಟಿ ನಮ್ಮಲ್ಲಿ ಇವತ್ತಿಗೆ ಲಭ್ಯವಿರುವ ಕೊರಾನಾ ಪರೀಕ್ಷೆ ಕಿಟ್ ಗಳು ಒಂದೂವರೆ ಲಕ್ಷ ಮಾತ್ರ!?   ಹಾಗಾಗಿ ಭಾರತಿಯರೆಲ್ಲರನ್ನ  ಪರೀಕ್ಷೆ ಮಾಡಲು ಸಾದ್ಯವಿಲ್ಲ!?   *ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು?*ಅನ್ನುವುದಕ್ಕೆ ಪ್ರಖ್ಯಾತ ವೈದ್ಯರಾದ ದೇವಿ ಶೆಟ್ಟರು ಸಲಹೆ ನೀಡಿದ್ದಾರ೦ತೆ*    *ಕೊರಾನಾ ಶೇಕಡಾ 85% ಜನರಿಗೆ ಪ್ರಾಣಂತಿಕ ಆಗುವುದಿಲ್ಲ ಹಾಗಾಗಿ ಜ್ವರ ನೆಗಡಿ ಬಂದಾಗ 10 ದಿನ ಮನೇನಲ್ಲೆ ನಾವು ಪ್ರತ್ಯೇಕವಾಗಿ ಇರಬೇಕು.   *ಮೊದಲ ಮತ್ತು ಎರಡನೆ ದಿನ* ಸಣ್ಣ ಜ್ವರ, ತಲೆನೋವು, ಶೀತ ನೆಗಡಿ,ಗಂಟಲು ಕೆರೆತ  ಕಾಣಿಸಬಹುದು.  *3 ನೇ ದಿನ* ಮೂರನೇ ದಿನವೂ ಇದು ಮುಂದುವರಿಯ ಬಹುದು. *4ನೇ ದಿನ* ಸಣ್ಣ ತಲೆ ನೋವು.  *5 ನೇ ದಿನ* ಗ್ಯಾಸ್ಟ್ರಿಕ್, ಬೇದಿ, ಜ್ವರ ಜಾಸ್ತಿ, ಗಂಟಲು ಕೆರೆತ, ಕೆಮ್ಮುಮತ್ತು ಸ್ನಾಯು ಸೆಳೆತದಂತಾಗಬಹುದು. *6ನೇ ದಿನ ಮತ್ತು 7ನೇ ದಿನ* ಹಸಿವು ಇಲ್ಲ, ಬೇ...