Skip to main content

Posts

TIPPU SULTHAN AND ANANDAPURAM

#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ#     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹೈದರ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) .      ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿ...

P.R.SOMAN MEMORIAL PERSON.

# ಶ್ರದ್ದಾ೦ಜಲಿಗಳು# ಪಿ.ಆರ್. ಸೋಮನ್ ನಿವೃತ್ತ ಸೈನಿಕರು, ಕೇರಳ ಮೂಲದವರಾದರೂ ಜೀವನದ ಹೆಚ್ಚಿನ ಅವದಿ ಸಾಗರ ಪಟ್ಟಣದಲ್ಲಿ, ಇವರ ಅಣ್ಣ ಬಾಲ ಕೃಷ್ಣ ಮೇಸ್ತ್ರೀ ಸಾಗರದಲ್ಲಿ ಹೆಸರಾಂತ ಗುತ್ತಿಗೆದಾರರಾಗಿದ್ದ...

#ಮುಟ್ಟಿನ ಬಗ್ಗೆ ಸಮಾಜದ ಮೂಡನಂಬಿಕೆ#

# ಮುಟ್ಟಿನ ಬಗ್ಗೆ ಮಹಿಳೆಯರಿಗೆ ಜಾಗೃತಿ# ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಸಾಮೂಹಿಕವಾಗಿ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ. ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ. ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ.   ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು / ಸಾವುಗಳ ಸೂತಕ ಇದೆ ಹಾಗೆಯೆ ಮುಟ್ಟು ಸದರಿ ದಿನ ಆದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ, ಇಲ್ಲಿ ಬಾಡೂಟದ ಗಮ್ಮತ್ತು ಇರುವುದರಿಂದ ಈ ಕಾಯ೯ಕ್ರಮ ಮುಂದೂಡಲು ಹೆಚ್ಚಿನವರಿಗೆ ಇಷ್ಟ ಇರುವುದಿಲ್ಲ ಅದಕ್ಕಾಗಿ ಸೂತಕಗಳನ್ನೇ ನಿವಾರಿಸಿಕೊಳ್ಳುವ ಹೊಸ ಯೋಜನೆ ಆಚರಣೆಯಲ್ಲಿದೆ ಅದೇನೆ೦ದರೆ ಮುಟ್ಟಾಗುವ ಮುನ್ನವೆ ಹೆಣ್ಣು ಮಕ್ಕಳು ಹಳ್ಳಿ ತೊರೆದು ನೋನಿ ಇಲ್ಲದ ಹಳ್ಳಿಯ ನೆಂಟರ ಮನೆಗೆ ಹೋಗಬೇಕು.   ಇದನ್ನ ಸಾಗರದ ಖ್ಯಾತ ರಂಗಭೂಮಿ ಕಲಾವಿದೆ, ಕಡಿದಾಳು ಶಾಮಣ್ಣರ ಶಿಷ್ಯೆ ಪ್ರತಿಭಾ ರಾಘವೇ೦ದ್ರ ವಿವಿದ ಸಂಘಟನೆ...

ಶಿವಮೊಗ್ಗದಲ್ಲಿ ಚಾರಿಟೇಬಲ್ ಡಯಾಲಿಸಿಸ್

ಖಾಸಾಗಿ ಮಾಲಿಕತ್ವದ ಆ ಸ್ಪತ್ರೆಗಳ Hub ಆಗಿ ಮಾಪ೯ಟ್ಟಿರುವ ಶಿವಮೊಗ್ಗದಲ್ಲಿ corporate hospitalಗಳ ಎಲ್ಲಾ ಆಚಾರ ಅನಾಚಾರಗಳ ನಡುವೆ ಆಶಾವಾದದ ಚಾರಿಟಬಲ್ ಡಯಾಲಿಸಿಸ್ ಆಸ್ಪತ್ರೆ ಪ್ರಾರಂಬಿಸಿರುವುದು ಸಂತೋಷದ ವಿಷಯ, ಇವತ...

DANGEROUS FERRY TRANSPORT IN KARNATAK STATE.

#ಸ್ಥಳೀಯರ ಒಡಲಾಳದ ಮಾತು# " ಮುಂಬೈನ ರೈಲು ನಿಲ್ದಾಣದ ಕಾಲು ತುಳಿತದ ಅನಾಹುತ ಜಿಲ್ಲಾ ಆಡಳಿತಕ್ಕೆ ಪಾಠವಾಗಿದ್ದರೆ ಇಲ್ಲಿ ಹಬ್ಬ ಹರಿದಿನದಲ್ಲಿ ಜನರನ್ನ ನಿಯಂತ್ರಿಸಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸದಿದ್ದರೆ ಮುಂದೊಂದು ದಿನ ಅನೇಕ ರ ಸಾವು ನೋವಿಗೆ ಕಾರಣವಾಗ ಬೇಕಾದೀತು ಎಚ್ಚರ" ಶರಾವತಿ ನದಿ ದಾಟಿಸುವ ಈ ತುಮರಿಯ ಲಾಂಚ್ ನಲ್ಲಿ ಒಮ್ಮೆಗೆ ನೂರಾರು ಜನ ಪ್ರಯಾಣಿಸುತ್ತಾರೆ ಆದರೆ ಇದರಲ್ಲಿ ಜನರ ಸುರಕ್ಷೆಗಾಗಿ ಒಂದೇ ಒಂದು ಜೀವರಕ್ಷಕ ಉಪಕರಣವಿಲ್ಲ!?........ In this boat daily thousands of people crossing sharavathi river near world famous JOGFALLS but sad thing is no single life jacket in it. https://m.facebook.com/story.php?story_fbid=1687366887964143&id=100000725455473 http://kannada.eenaduindia.com/State/MalnadandKaravali/Shimoga/ShimogaCity/2017/10/01155724/full-of-tourists-in-launch-at-diganduru.vpf   

SHARAVATHI RIVER ಶರಾವತಿ ನದಿ

# ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯# ವಿಶ್ವವಿಖ್ಯಾತ ಜೋಗ ಜಲಪಾತ, ಲಿಂಗನ ಮಕ್ಕಿ ಆಣೆಕಟ್ಟು, ಮಹಾತ್ಮ ಗಾಂಧಿ ಜಲ ವಿದ್ಯುದಾಗರ ಇವೆಲ್ಲ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ಸಮೀಪದ ಆರಗ ದಿಂದ ಸುಮಾರು 10 ಕಿ.ಮಿ ದೂರದ ಅಂಬು ತೀಥ೯ ಎಂಬಲ್ಲಿ ಉಗಮವಾಗುವ ಶರಾವತಿ ನದಿ ಕಾರಣ .   ರಾಮೇಶ್ವರ ದೇವರ ವಿಗ್ರಹದ ಎದುರು ಸಣ್ಣ ಜರಿ ಹುಟ್ಟಿ ಅಲ್ಲೇ ಸ್ವಲ್ಪ ದೂರದಲ್ಲಿ ದೊಡ್ಡ ಕೊಳವಾಗಿ ಅಲ್ಲಿ೦ದ ತು೦ಬಿ ತುಳುಕಿ ಹಳ್ಳ ಹೊಳೆಯಾಗಿ ನದಿಯಾಗಿ ತೀಥ೯ಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕಿನ ಬಹುಭೂಭಾಗ ಆಣೆಕಟ್ಟಿಂದ ಮುಳುಗಡೆ ಆಗಿ ರಾಜ್ಯಕ್ಕೆ ಪ್ರಮುಖ ಜಲ ವಿದ್ಯುತ್ ಉತ್ಪಾದಿಸಿ ನೀಡುವ ಈ ನದಿ ವಿಶ್ವವಿಖ್ಯಾತ ಜೋಗ ಜಲಪಾತವಾಗಿ ಶರಾವತಿ ಕಣಿವೆಯಲ್ಲಿ ಹರಿದು ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.   ಪ್ರಸಿದ್ದ ಪ್ರವಾಸಿ ಕೇಂದ್ರವಾಗುವ೦ತ ಇತಿಹಾಸ ಮತ್ತು ರಾಜ್ಯಕ್ಕೆ ಆಥಿ೯ಕ ಲಾಭ ತರುವ ಈ ನದಿಯ ಉಗಮ ಸ್ಥಾನ ಯಾವುದೇ ಅಭಿವೃದ್ಧಿ ಕಾಣದಿರುವುದು ಬೇಸರದ ವಿಷಯ, ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಲಿಂಗನಮಕ್ಕಿ ಆಣೆಕಟ್ಟು ರಾಜ್ಯಕ್ಕೆ ಅಪಿ೯ಸುವ ಸಂದಭ೯ದಲ್ಲಿ ಇಲ್ಲಿ ಒಂದು ಪ್ರವಾಸಿಗಳಿಗಾಗಿ ಕೊಠಡಿ ನಿಮಿ೯ಸಿದ್ದು ಬಿಟ್ಟರೆ ಈ ವರೆಗೆ ಇಲ್ಲಿ ಈ ನದಿಯ ಬಗ್ಗೆ, ಜೋಗ ಜಲಪಾತದ ಬಗ್ಗೆ, ಲಿಂಗನಮಕ್ಕಿ ಆಣೆಕಟ್ಟು ವಿದ್ಯುತ್ ಉತ್ಪಾದನೆ ಬಗ್ಗೆ ಒಂದೇ ಒಂದು ಮಾಹಿತಿ ಫಲಕವಿಲ್ಲ.   1970ರ ದಶಕದಲ್ಲಿ ಜಿಲ್ಲೆಯ ಶಾಲಾ ಶ...