Skip to main content

Posts

Blog number 1257. ನನ್ನ ಕಾದಂಬರಿ ಓದಿ ಪ್ರತಿಕ್ರಿಯಿಸಿರುವ ಬರಹಗಾರರಾದ ನಾಗೇಂದ್ರ ಸಾಗರ್.

ಗೆಳೆಯ Arun Prasad ಬರೆದ ಬೆಸ್ತರರಾಣಿ ಚಂಪಕ ಪುಸ್ತಕದ ಕುರಿತ ನನ್ನ ಇನ್ನೊಬ್ಬ ಹಿರಿಯ ಗೆಳೆಯರಾದ Gangadhara Nayak ತಮ್ಮ ಗೋಡೆಯಲ್ಲಿ ಬರೆದಿದ್ದನ್ನು ನಾನು ಇತ್ತೀಚೆಗೆ ಓದಿದ್ದೆ.  ಅರೆ ಪುಸ್ತಕ ತಂದು ಇಷ್ಟು ದಿನವಾದರೂ ನಾನು ಓದಿಲ್ಲವಲ್ಲ ಅಂದುಕೊಂಡೆ.ನೋಡು ನೋಡುತ್ತಿದ್ದಂತೆ ಆ ಬರಹದ ಮೇಲೆ ಕೆಲವು ಚರ್ಚೆಗಳಾದವು.. ನನ್ನ ಇನ್ನೊಬ್ಬ ಹಿರಿಯ ಮಿತ್ರರಾದ Ganapathikl Ganapathi ಪುಸ್ತಕದಲ್ಲಿ ಐತಿಹಾಸಿಕ ಪ್ರಮಾದಗಳಿವೆ ಎಂದು ಬರೆದರು. ನನ್ನೊಳಗಿನ ಓದುಗ ಇನ್ನು ತಡಮಾಡದೇ ಪುಸ್ತಕವನ್ನು ಓದು ಎಂದು ಬಡಿದೆಬ್ಬಿಸಿದ. ಗೆಳೆಯ ಅರುಣ್ ಪ್ರಸಾದ್ ತಮ್ಮ ಮೊದಲ ಕಾದಂಬರಿ ' ಬೆಸ್ತರರಾಣಿ ಚಂಪಕ' ವನ್ನು ಓದಲೆಂದು ಬಹು ದಿನಗಳ ಹಿಂದೆಯೇ ಕೊಟ್ಟಿದ್ದರು. ಕಾರ್ಯ ಬಾಹುಳ್ಯದಿಂದ ಓದಲು ಆಗಿಯೇ ಇರಲಿಲ್ಲ. ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ರೆಸ್ಟ ಮಾಡಲೇ ಬೇಕಾದ ಅನಿವಾರ್ಯತೆ. ಟೇಬಲ್ಲಿನ ಮೇಲೆ ಇದ್ದ ಈ ಪುಸ್ತಕವನ್ನು ಓದಿ ಮುಗಿಸಿದೆ... ಓದಾದ ಬಳಿಕ ದುರಂತ ಅಂತ್ಯಕ್ಕೊಳಗಾದ ಕಥಾ ನಾಯಕಿ ಚಂಪಕಳ ಅಸಹಾಯಕ ಚಿತ್ರ ಮನಸ್ಸಿನಲ್ಲಿ ಉಳಿಯಿತು.. ಸುಂದರವಾಗಿ ರಂಗೋಲಿ ಬರೆಯುವ ಅವಳ ಕಲೆ ಕೆಳದಿ ಅರಸನ ಮನವನ್ನು ಸೆಳೆದು ಆಕೆಯನ್ನು ಓಲಿಸಿಕೊಂಡು ರಾಣಿಯನ್ನಾಗಿಸಿ ಕೊಳ್ಳುತ್ತಾನೆ.. ಆದರೆ ಆಗಿನ ಕಾಲಕ್ಕೆ ಸಮಾಜದ ಕೆಳವರ್ಗಕ್ಕೆ ಸೇರಿದ ಚಂಪಕಳು ಸಮಾಜದ ಅವಕೃಪೆಗೆ, ಅವಮಾನಗಳಿಗೆ ತತ್ತರಿಸಿ ತನ್ನದಲ್ಲದ ತಪ್ಪಿಗೆ ಪರಿತಪಿಸಿ ವಿಷಪ್ರ...

Blog number 1256. ಶಿವಮೊಗ್ಗದ ಸೋಗಾನೆಯಲ್ಲಿ ಯಡೂರಪ್ಪನವರ ಸತತ ಪ್ರಯತ್ನದಿಂದ ನಿರ್ಮಾಣವಾಗಿ ದಿನಾಂಕ 27-ಪೆಬ್ರವರಿ -2023 ಸೋಮವಾರ ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ.

ಶಿವಮೊಗ್ಗ_ವಿಮಾನ_ನಿಲ್ದಾಣದ_ಕನಸು_ನನಸಾಯಿತು #ಇದರ_ಸಂಪೂರ್ಣ_ಕ್ರೆಡಿಟ್_ಯಡೂರಪ್ಪನವರದ್ದೆ #ಕಾಮಗಾರಿ_ನಿರ್ವಹಿಸಿದ_ಸಂಸ್ಥೆ_ತೀರ್ಥಹಳ್ಳಿ_ಷರೀಪ್_ಸಾಹೇಬರದ್ದು, #ಕನ್ನಡಕ್ಕೆ_ಮೊದಲ_ಜ್ಞಾನಪೀಠ_ಪ್ರಶಸ್ತಿ_ತಂದ_ಕವಿ_ಕುವೆಂಪು_ಹೆಸರಿನ_ವಿಮಾನ_ನಿಲ್ದಾಣ #ತಮ್ಮ_ಹೆಸರಿನ_ನಾಮಕರಣ_ನಯವಾಗಿ_ನಿರಾಕರಿಸಿ_ಕುವೆಂಪು_ಹೆಸರು_ಸೂಚಿಸಿದ_ಯಡೂರಪ್ಪ #ರಾಷ್ಟ್ರಪತಿಗಳು_ಕೊಯಮತ್ತೂರು_ಪ್ರವಾಸಕ್ಕೆ_ಬಳಸಿದ್ದ_ಬೋಯಿಂಗ್_737_ಇವತ್ತು_ಶಿವಮೊಗ್ಗದಲ್ಲಿಳಿದ_ಮೊದಲ_ವಿಮಾನ. #ಪೆಬ್ರುವರಿ_27_ಸೋಮವಾರ_ಪ್ರದಾನಿ_ಮೋದಿ_ಉದ್ಘಾಟಿಸಲಿದ್ದಾರೆ. #ಆಕಾಶದಿಂದ_ಕಮಲದ_ಆಕಾರದಲ್ಲಿ_ಕಾಣುವ_ವಿಮಾನ_ನಿಲ್ದಾಣ. #ಯಡೂರಪ್ಪರ_ಸಾದನೆ_ತ್ಯಾಗಕ್ಕೆ_ಬದಲಾಗಿ_ಅವರ_ಹೆಸರು_ಸೂಕ್ತ_ಸ್ಥಳಕ್ಕೆ_ನಾಮಕರಣ_ಮಾಡಲೇ_ಬೇಕು https://youtu.be/aqp5vMnoE9w    ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾದರೆ ಮದ್ಯ ಕರ್ನಾಟಕದ ಶಿವಮೊಗ್ಗ - ಚಿಕ್ಕಮಗಳೂರು - ದಾವಣಗೆರೆ - ಚಿತ್ರದುರ್ಗ - ಹಾಸನ ಜಿಲ್ಲೆಗಳಿಗೆ ಸುಲಭ ಸಂಪರ್ಕವಾಗುವುದರಿಂದ ಈ ಜಿಲ್ಲೆಗಳಿಗೆ ಅನೇಕ ಉದ್ಯಮಗಳು ಬರಲಿದೆ ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ ಈ ಬಾಗದಲ್ಲಿ ವ್ಯಾಪಾರ- ಕೈಗಾರಿಕೆ - ಪ್ರವಾಸೋದ್ಯಮದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧ್ಯವಾಗಲಿದೆ.    ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ಕಂಡವರು ಯಡೂರಪ್ಪನವರು, 20 -ಜೂನ್ - 2008ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್...

BLOG NUMBER 1255. ತಲೆಮಾರುಗಳ ನೆನಪಿಸುವ ಕುಟು೦ಬದ ಕುಡಿಗಳ ಚಿತ್ರಗಳು

# ಕಾಲದ ವೇಗದಲ್ಲಿ ಏನೆಲ್ಲ ಪರಿವತ೯ನೆ#   ಮೊದಲ ಚಿತ್ರ ನಾನು 1993 ಅಥವ 1994ರಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದದ್ದು ನನ್ನ ಮಗಳು, ನನ್ನ ಅಣ್ಣನ ಇಬ್ಬರು ಮಕ್ಕಳು, ಇಬ್ಬರು ಅಕ್ಕ೦ದಿರ ತಲಾ ಇಬ್ಬರು ಮಕ್ಕಳನ್ನ ಹಿಡಿದು ಒಂದು ಕಡೆ ಕೂರಿಸಿ ಈ ಪೋಟೊ ತೆಗೆಯುವ ಕಷ್ಟದ ಕೆಲಸ ಇದಾಗಿತ್ತು.  ಈಗ 2018 ಡಿಸೆಂಬರ್ 4 ರಂದು ತೆಗೆದ ಪೋಟೊ ಅತ್ಯಂತ ಸಂತೋಷದ ಸವಿ ನೆನಪಿನದ್ದಾಗಿದೆ ಯಾಕೆಂದರೆ ಸುಮಾರು 23 ಅಥವ 24 ವಷ೯ದ ನಂತರ ನನ್ನಣ್ಣನ ಮಗಳಾದ ಅನು ಪ್ರಿಯಳ ಮದುವೆಯಲ್ಲಿ ಅವರವರೆ ಸೇರಿ ತೆಗೆಸಿ ಕೊಂಡ ನಮ್ಮ ಮುಂದಿನ ತಲೆಮಾರಿನ ಪ್ಯಾಮಿಲಿ ಪೋಟೋ ಸೇಷನ್.   ಇದರಲ್ಲಿನ 1993ರ ಪೋಟೋ ತೆಗೆಯುವಾಗ ನನ್ನ ಮಗ ಇನ್ನು ಹುಟ್ಟಿರಲಿಲ್ಲ, ಮದುವೆ ಪೋಟೋದಲ್ಲಿ ನನ್ನ ದೊಡ್ಡಮ್ಮನ ಮಗಳು ದಿವ೦ಗತ ಗುಲಾಬಿ ಮಗ ಮತ್ತು ನನ್ನ ಅಣ್ಣನ ನಾದಿನಿ ಮಗ ಕೂಡ ಇದ್ದಾರೆ. # Time changes every thing# 1993 old photo taken by my camera with difficult to make all children in one order another one is latest photo of our next generation marriage ceremony family photo session, after 23 years the old memories snap became valuable for them.

Blog number 1254. ಶಿವಭಕ್ತಿ ಮತ್ತು ಶಿವನ ಕರುಣೆ

#ಶಿವರಾತ್ರಿ ಶಿವನ ಆರಾದಕರಿಗೆಲ್ಲ ಶುಭ ಹಾರೈಕೆಗಳು.   ಈ ಚಿತ್ರ ಗುಂಟೂರಿನ ವಕೀಲರು ಕಳಿಸಿದ್ದು ನಿಜಕ್ಕೂ ಅಥ೯ ಪೂಣ೯, ಭಕ್ತಿ ಪೂಜೆಯಲ್ಲಿ ಈಶ್ವರನ ಉದ್ದೇಶವೇ ಮರೆತು ಬಿಡುವ ನಾವು ದೀನ ದಲಿತರ ರೋಗಿಗಳ ಹಸಿವಿನಿಂದ ಬಾಯಾರಿಕೆಯಿಂದ ಬಳಲುವವರ ಸೇವೆ ಮಾಡಬೇಕೆಂದು ನೆನಪಿಸುತ್ತದೆ.

Blog number 1253. ಕುಂದಾಪುರದ ಎಡಮೊಗೆಯ ಕೊಡಚಾದ್ರಿ ಸಿದ್ದ ಪೀಠ ಹಲವಾರಿ ಮಠದ ಸ್ವಾಮೀಜಿ ಜಗದೀಶ್ ಜಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋರಕ್ ಪುರದ ಬಾರಾಪಂತದ ಮಹಾ ಸಂತ ಯೋಗಿ ಆದಿತ್ಯನಾಥರ ಬೇಟಿ

#ಕಮಲಶಿಲೆ ಸಮೀಪದ ನಾಥಪ೦ಥದ ಹಲವಾರಿ ಮಠದ ಮಠಾಧೀಶರಾದ ಶ್ರೀಜಗದೀಶ್ ಸ್ವಾಮೀಜಿ, ಕುಂದಾಪುರದ ರಮೇಶ್ ಜೋಗಿ ಮತ್ತು ಭಕ್ತ ಪ್ರಮುಖರು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗು ಗೋರಕ್ ಪುರದ ನಾಥಪಂಥ್ ದ ಮಹಾಂತರಾದ ಶ್ರೀ ಯೋಗಿ ಆದಿತ್ಯನಾಥರನ್ನ ಬೇಟಿ ಮಾಡಿ ಗೌರವ ಸಮಪಿ೯ಸಿದರು (20 - ಪೆಬ್ರವರಿ -2020 )#

Blog number 1252. ಪೈಲ್ವಾನ್ ಅಯನೂರು ಶಿವಾನಾಯಕ್ ದೇವರಾಜ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರು

#ದೇವರಾಜ್_ಅರಸ್_ಅಂತರಾಷ್ಟ್ರೀಯ_ಕುಸ್ತಿ_ಅಸೋಸಿಯೇಷನ್_ಅಧ್ಯಕ್ಷರಾಗಿ #ಅಯನೂರು_ಶಿವಾನಾಯಕ್    ನಶಿಸುತ್ತಿರುವ ನಮ್ಮ ದೇಶಿ ಕ್ರೀಡೆ ಬಯಲು ಕುಸ್ತಿಗೆ ರಾಜ ಮಹಾರಾಜರ ಕಾಲದಲ್ಲಿ ರಾಜಾಶ್ರಯ ಇತ್ತು ಆದರೆ ಈಗ ಇದು ಜನ ಮನದಿಂದಲೇ ದೂರವಾಗುತ್ತಿದೆ.   ಗರಡಿ ಮನೆ ಎಂಬ ಕುಸ್ತಿ ತರಬೇತಿಯ ಕೇಂದ್ರಗಳು ಹೊಸದಾಗಿ ನಿರ್ಮಾಣ ಆಗುತ್ತಿಲ್ಲ, ಇರುವ ಪುರಾತನ ಗರಡಿ ಮನೆಗಳು ಜನರ ಬೆಂಬಲ ಸಹಾಯ ಸಹಕಾರ ಇಲ್ಲದೆ ಸೊರಗಿದೆ.   ಇವತ್ತಿಗೂ ಜಾತ್ರೆ ಮುಂತಾದ ಸಮಾರಂಭದಲ್ಲಿ ಬಯಲು ಕುಸ್ತಿ ನೋಡಲು ಸೇರುವ ಜನಸಂಖ್ಯೆ ನೋಡಿದರೆ ಅಥ೯ವಾದೀತು ಕುಸ್ತಿ ಪಂದ್ಯಾವಳಿಗೆ ಇರುವ ಆಕಷ೯ಣೆ.   ಈಗ ರಾಜ್ಯದಾದ್ಯಂತ ಇರುವ ಗರಡಿ ಮನೆ ಪುನಶ್ವೇತನಕ್ಕಾಗಿ ಮತ್ತು ಬಯಲು ಕುಸ್ತಿ ಪಂದ್ಯಾವಳಿ ಪುನರ್ ಪ್ರವದ೯ಮಾನಕ್ಕಾಗಿ ಕಾಯ೯ನಿವ೯ಹಿಸುತ್ತಿರುವ  ದೇವರಾಜ್ ಅರಸು ಅಂತರಾಷ್ಟಿಯ ಕುಸ್ತಿ ಸಂಘಟನೆಗೆ ಶಿವಮೊಗ್ಗದ ಯುವ ಮುಂದಾಳು, ಜಾತ್ಯಾತೀತ ಜನತಾದಳದ ಮುಖಂಡರಾದ ಅಯನೂರು ಶಿವನಾಯ್ಕರು ಆಯ್ಕೆ ಆಗಿದ್ದಾರೆ.   ಒಂದು ಕಾಲದಲ್ಲಿ ಜಿಲ್ಲೆಯಲ್ಲಿನ ಬಂಜಾರ ಸಮಾಜದ ಸಂಘಟನೆಯಲ್ಲಿ ಪೂರ್ಯಾನಾಯಕರ ಸಂಗಡಿಗರಾಗಿ ಸಂಘಟನೆ ಮಾಡಿ ತಮ್ಮ ಸಮಾಜದವರನ್ನ ವಿದಾನ ಸಭಾ ಸದಸ್ಯರನ್ನಾಗಿ ಮಾಡುವುದರಲ್ಲಿ ಸಫಲರಾದವರು ಈ ಶಿವಾ ನಾಯಕರು.    ರಾಜಕಾರಣದಲ್ಲಿ ಇವರಿಗೆ ಸಿಗಬೇಕಾದ ಸ್ಥಾನಗಳು ಸಿಗದೇ ಇರುವುದು ದುರಂತ ಆದರೂ ಅನೇಕ ಸಾಮಾಜ...

Blog number 1251. ಸಾಗರದ ಖ್ಯಾತ ಉದ್ದಿಮೆದಾರರು ಮತ್ತು ಒಂದು ಕಾಲದ ಅಬಕಾರಿ ಗುತ್ತಿಗೆದಾರರೂ ಆಗಿದ್ದ ಡೇರ್ & ಡೆವಿಲ್ ಆಗಿದ್ದ ಆತ್ಮೀಯರಾದ ನಾರಾಯಣ ರಾವ್ ರನ್ನು ನಿನ್ನೆ ಬೇಟಿ ಆಗಿದ್ದೆ.

#ನಿನ್ನೆ_ಹಿರಿಯ_ಗೆಳೆಯರಾದ_ಸಿಗ೦ದೂರೇಶ್ವರಿ_ಪ್ಯೂಯೆಲ್ಸ್_ನಾರಾಯಣರಾವ್_ಬೇಟಿ  #ಅಪರೂಪದ_ಬೇಟಿಯಲ್ಲಿ_ಅನೇಕ_ನೆನಪುಗಳು. #ಅಬಕಾರಿ_ಗುತ್ತಿಗೆದಾರರಾಗಿದ್ದವರು #ಸಾಗರದ_ಇಕ್ಕೇರಿರಸ್ತೆಯಲ್ಲಿ_ತಾಳಗುಪ್ಪದಲ್ಲಿ_ಪೆಟ್ರೋಲ್_ಬಂಕ್_ಮಾಡಿದ್ದಾರೆ. #ತಾಳಗುಪ್ಪದ_ಪೇಪರ್_ಮಿಲ್_ಜಾಗ_ಖರೀದಿಸಿದ್ದಾರೆ.   2019ರ ನವೆಂಬರ್ ತಿಂಗಳಲ್ಲಿ ನನ್ನ ಮಗಳ ಮದುವೆ ಆಹ್ವಾನ ನೀಡಲು ಸಾಗರದ ನಾರಾಯಣ ರಾವ್ ಬೇಟಿ ಮಾಡಿದ್ದೆ ಈಗ ನಾಲ್ಕು ವರ್ಷದ ನಂತರ ನಿನ್ನೆಯ ಅವರ ಬೇಟಿ ಆಯಿತು.    ಸರಾಯಿ ರದ್ದು ಆಗುವ ಮೊದಲು ಪ್ರತಿ ತಾಲ್ಲೂಕುಗಳಲ್ಲಿ ಸರಾಯಿ ಗುತ್ತಿಗೆ ಹರಾಜು ಹಿಡಿದು ಕಡಿಮೆ ದರದಲ್ಲಿ ಸರಾಯಿ ಸರಬರಾಜು ಮಾಡುವ ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಸರಾಯಿ ಉದ್ಯಮ ಈಗಿಲ್ಲ.    ಆಗ ಕಡಿಮೆ ದರದ ಸರಾಯಿ ಕಾಲದಲ್ಲಿ ಬಡವರು ಕೂಲಿ ಕಾರ್ಮಿಕರಿಗಿದ್ದ ಆರೋಗ್ಯ ಈಗಿನ ಹೊಸ ಲಿಕ್ಕರ್ ವ್ಯವಸ್ಥೆಯಲ್ಲಿ ಇಲ್ಲ ಮತ್ತು ದುಬಾರಿ ಬೆಲೆ ಇದರಿಂದ ಕೂಲಿ ಕಾರ್ಮಿಕರ ಜೀವನ ವ್ಯವಸ್ಥೆ ಸಮತೋಲನವೂ ತಪ್ಪಿದೆ.    ದೊಡ್ಡ ಸಂಖ್ಯೆಯ  ಸರಾಯಿ ಮಾರಾಟಗಾರರು ನಿರುದ್ಯೋಗಿಗಳಾದರು, ಸಕಾ೯ರ ಸರಾಯಿ ರದ್ದು ಮಾಡಲು ನೀಡಿದ ಕಾರಣ ಬಡವರಿಗೆ ಗುಣಮಟ್ಟದ ಮಧ್ಯ ಸರಬರಾಜು ಮಾಡುವ ಭರವಸೆ!!... ಅದು ಈಡೇರಿತಾ? ಬಡವರ ಕಿಡ್ನಿ ಸುರಕ್ಷಿತವಾಯಿತಾ?..... ಹೀಗೆ ಅನೇಕ ವಿಚಾರಗಳು ನಮ್ಮ ಮಾತಿನಲ್ಲಿ ಬಂ...