# ಕಲಿಯುಗದಲ್ಲಿ ನಿಜ ಸಂನ್ಯಾಸಿಗಳು ಜೈನ ಮುನಿಗಳು ಮಾತ್ರ# ನನ್ನ ತಂದೆ ಕಾಲದಿಂದ ನಮ್ಮ ಸ್ಥಳ ಜೈನ ದಿಗಂಬರರಿಗೆ, ಮಾತಾಜಿಯವರಿಗೆ ಒಂದು ತ೦ಗುದಾಣ, ಈವರೆಗೆ 2006ರಿಂದ 20I9ರವರೆಗೆ ಎರಡು ಬಾರಿ ಶ್ರವಣಬೆಳಗೋಳದ ಗೊಮ್ಮಟೇಶ್ವರನಿಗೆ ಮಹಾಮಜ್ಜನ ನಡೆದಿದೆ (12 ವಷ೯ಕೊಮ್ಮೆ) ಇಲ್ಲಿವರೆಗೆ ನಮ್ಮಲ್ಲಿ ತಂಗಿದ ಜೈನ ಮುನಿ ಮತ್ತು ಮಾತೆಯರ ಸಂಖ್ಯೆ 1000ಕ್ಕೂ ಹೆಚ್ಚು. ಜೈನ ಮುನಿ ಮಹಾರಾಜರ ಮತ್ತು ಮಾತೆಯರ ಸೇವೆ ಮಾಡಲು ಜೈನ ಸಮಾಜದ ಅನೇಕರು ಕಾತುರರಾಗಿರುತ್ತಾರೆ ಆದರೆ ಅವರು ಬರುವುದಿಲ್ಲ. ಅದೇನೋ ಗೊತ್ತಿಲ್ಲ ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿದ ಕಲ್ಯಾಣ ಮಂಟಪ (ಶ್ರೀ ಕೃಷ್ಣ ಸರಸ ಕನ್ವೆಷನ್ ಹಾಲ್, ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮ)ದಲ್ಲಿ ಇವರುಗಳು ತಂಗುತ್ತಾರೆ ಮತ್ತು ನಮ್ಮನ್ನ ಆಶ್ರೀವದಿಸುತ್ತಾರೆ. ಹುOಚದ ಹಿಂದಿನ ಸ್ವಾಮಿಗಳು ಸೂಚಿಸಿದ ಹೆಸರು ನನ್ನ ಲಾಡ್ಜ್ ಗೆ ಇಟ್ಟಿದ್ದೇನೆ ಅದು ಹೊಂಬುಜ ರೆಸಿಡೆನ್ಸಿ ಅಂತ ಅದಕೊಂದು ಹಿನ್ನೆಲೆ ಇದೆ ಕೇಳಿ, ದೂರದ ಗುಜರಾತಿನ ವಜ್ರ ವ್ಯಾಪಾರಿ ನಿಮ೯ಲ್ ಕುಮಾರ್ ಒಮ್ಮೆ ಹುಂಚದ ಹಿಂದಿನ ಸ್ವಾಮಿಗಳ ಬೇಟಿಗೆ ಬಂದವರು ನನ್ನ ಜೊತೆಯಲ್ಲಿ ಕರೆದೊಯ್ದಿದ್ದರು. ಅಲ್ಲಿ ಸ್ವಾಮಿಗಳ ಬೇಟಿ ಆಯಿತು, ಹಿಂದಿನ ದಿನವಷ್ಟೆ ಅವರು ಅಮೇರಿಕಾ ದೇಶದ ಪ್ರವಚನ ಪ್ರವಾಸ ಮುಗಿಸಿ ಬಂದಿದ್ದರು, ನನ್ನ ಅವರ ಬೇಟಿ ಅದು ಮೊಟ್ಟ ಮೊದಲಿನದು, ನನ್ನ ಪರಿಚಯ ನಿಮ೯ಲ್ಕು...