Blog number 1477.ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-3.ಅಮಾವಾಸ್ಯೆಯ ನಡು ರಾತ್ರಿ ಕೊಪ್ಪಾದಿಂದ ತೀರ್ಥಳ್ಳಿ ಮಾರ್ಗದಲ್ಲಿ ಶ್ವೇತ ವಸ್ತ್ರ ದಾರಿಣಿ, ನೀಳ ಕೇಶದಾರಿ ಕಾರಿನ ಪ್ರಖರ ಬೆಳಕಲ್ಲಿ ಪಳಪಳಿಸಿದ ಅವಳ ನತ್ತಿನ ಮೂಗುತಿ ! ಅವಳಾರು?!
#ಅಮಾವಾಸ್ಯೆಯ_ಮಧ್ಯರಾತ್ರಿ_ಶ್ವೇತವಸ್ತ್ರದಾರಿಣಿ_ನೀಳಕೇಶದ_ಮೂಗಿನ_ನತ್ತಿನ_ಪಳಪಳಿಸುತ್ತಾ #ಕೊಪ್ಪ_ತೀರ್ಥಳ್ಳಿ_ರಸ್ತೆ_ಬದಿಯಲ್ಲಿ_ವೇಗವಾಗಿ_ನಡೆದವಳು_ಯಾರು ? #ಇವತ್ತಿಗೂ_ಉತ್ತರ_ಸಿಕ್ಕಿಲ್ಲ. ಇದು ನಡೆದದ್ದು 1993ರಲ್ಲಿ ಅವತ್ತು ಅಮಾವಾಸ್ಯೆ, ಅವತ್ತು ಬೆಳಿಗ್ಗೆನೇ ತಾಳಗುಪ್ಪದ ಕೃಷ್ಣಮೂರ್ತಿ (ಅಂಬೇಡ್ಕರ್ ಸಂಘ ಇದ್ದಿದ್ದರಿಂದ ಇವರಿಗೆ ಅಂಬೇಡ್ಕರ ಕೃಷ್ಣಮೂರ್ತಿ ಅಂತ ಹೆಸರು) ಶಿವಮೊಗ್ಗದಿಂದ ಅಂಬಾಸಡರ್ ಟ್ಯಾಕ್ಸಿಯಲ್ಲಿ ಬಂದು ನನ್ನ ಕೊಪ್ಪಕ್ಕೆ ಕರೆದೊಯ್ದರು ಅಲ್ಲಿ ಪ್ರಖ್ಯಾತ ಜೋತಿಷಿ ಬಾಲಗೋಪಾಲರನ್ನು ಕರೆದುಕೊಂಡು ಕುಂದಾಪುರದ ಹಟ್ಟಿಯಂಗಡಿ ವಿನಾಯಕ ದೇವಸ್ಥಾನದಲ್ಲಿ ನಡೆಯುವ ವಿಶೇಷ ಗಣಹೋಮಕ್ಕೆ ಭಾಗವಹಿಸಲು ಹೋಗಿದ್ದೆವು. ಹಟ್ಟಿಯಂಗಡಿಯಲ್ಲಿ ಹೋಮ ಹವನ ಮುಗಿಸಿ ಪುನಃ ಜೋತಿಷಿ ಬಾಲಗೋಪಾಲರನ್ನು ಕೊಪ್ಪದ ಅವರ ಮನೆಗೆ ತಲುಪಿಸುವಾಗ ಮಧ್ಯರಾತ್ರಿ ಒ0ದು ಗಂಟೆ ದಾಟಿತ್ತು. ಅವರನ್ನು ಮನೆಗೆ ತಲುಪಿಸಿ ನನ್ನ ಮನೆಗೆ ತಲುಪಿಸಲು ಅಂಬಾಸಡರ್ ಟ್ಯಾಕ್ಸಿ ಕೊಪ್ಪದಿಂದ ತೀಥ೯ಹಳ್ಳಿ ಮಾರ್ಗವಾಗಿ ಹೊರಟಿತು. ಟ್ಯಾಕ್ಸಿ ಡ್ರೈವರ್ ನಿದ್ದೆ ಮಾಡಬಾರದೆಂದು ನಾನು ಮುಂದಿನ ಸೀಟಲ್ಲಿ ರಸ್ತೆ ಸವೆಸಲು ಡ್ರೈವರ್ ಗೆ ಒಂದೊಂದು ಪ್ರಶ್ನೆ ಉರಳಿಸುವುದು ಮಾಡುತ್ತಿದ್ದೆ, ಹಿರಿಯ ಗೆಳೆಯರು ಹಿಂದಿನ ಸೀಟಲ್ಲಿ ಕುಳಿತಲ್ಲೇ ಅರೆ ಬರೆ ನಿದ್ದೆ ಮಾಡುತ್ತಿದ್ದರು. ಕೊಪ್ಪ ದಾಟಿ ಕೆಲವು ಕಿಲೋ ಮೀಟರ್ ದಾಟಿರಬೇಕು ...