https://youtu.be/d5juNKmL-RI #ನಮ್ಮ_ಊರ_ಸಮೀಪದ_ಆಚಾಪುರ. #ಅವತ್ತು_ಇಡೀ_ಊರಿಗೆ_ಬಡತನ #ಇವತ್ತು_ಕೋಟ್ಯಾದೀಶರ_ಊರು #ಈ_ಊರಿನ_ಮೂಲ_ಹೆಸರು_ಮಾಚರಾಜಪುರ #ಈ_ಪ್ರದೇಶದಲ್ಲಿ_ಮುಸ್ಲಿಂ_ಮತ್ತು_ಪರಿಶಿಷ್ಟ_ಜಾತಿ_ಚೆಲುವಾದಿ_ಜನಾಂಗದವರು_ಬಹುಸಂಖ್ಯಾತರು. #ಬುಕೇಟ್_ವ್ಯಾಪಾರಿಗಳು_ಇದ್ದರು. #ಬುಕೇಟ್_ಎಂಬ_ಹೆಸರು_ಯಾಕೆ_ಬಂತು_ಗೊತ್ತಿಲ್ಲ. #ಜಿಲ್ಲಾ_ಪಂಚಾಯತ_ಸದಸ್ಯನಾಗಿ_ನಾನು_ ಆಚಾಪುರದ_ರಸ್ತೆ_ಮೊದಲ_ಬಾರಿ_1995ರಲ್ಲಿ_ಡಾ೦ಬರೀಕರಣ_ಮಾಡಿಸಿದ್ದೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಆನಂದಪುರಂ ಸಮೀಪದ ಆಚಾಪುರ ಎಂಬ ಊರು ನಮ್ಮ ಊರಿನ ಸಮೀಪದಲ್ಲಿದೆ. ಈ ಊರಿನ ತೀರ್ಥದ ದೇವಸ್ಥಾನದಲ್ಲಿ 25- ಡಿಸೆಂಬರ್ -1079ರಲ್ಲಿ ಮಾಚರಾಜನು ಪ್ರತಿಷ್ಟಾಪಿಸಿದ ಭೂದಾನದ ಶಿಲಾಶಾಸನವಿದೆ ಆಗ ಈ ಊರಿನ ಹೆಸರು ಮಾಚರಾಜಪುರ ಈಗ ಆಚಾಪುರ ಆಗಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಚಾಪುರ ಶಾಸನದ ಹೆಚ್ಚಿನ ಮಾಹಿತಿ ಓದಬಹುದು https://arunprasadhombuja.blogspot.com/2022/01/71-25-1079.html ಈಗ ಆಚಾಪುರ ಮತ್ತು ಅದರ ಸುತ್ತಲಿನ ಇಸ್ಲಾಂಪುರ - ಹೊಳ್ಳೂರು - ಮುರುಘಾಮಠ - ಕೋಡಿಮಠ ಎಂಬ ಊರಲ್ಲಿ ಅಡಿಕೆ ಬೆಳೆಗಾರರು, ರಬ್ಬರ್ ಬೆಳೆಗಾರರು, ಶುಂಠಿ ಬೆಳೆಗಾರರು, ಜಂಬಿಟ್ಟಿಗೆ ಕಲ್ಲು ಕೋರೆ ಮಾಲಿಕರು, ಲಾರಿ ಮಾಲಿಕರು ಮತ್ತು ಶುಂಠಿ ವ್ಯಾಪಾರಸ್ಥರು ಹೆಚ್ಚು ಇದ್ದಾರೆ...