Skip to main content

Posts

Showing posts from May, 2024

Blog number 2154. ನಾಡಿನ ಪ್ರಖ್ಯಾತ ಪುಣ್ಯ ಕ್ಷೇತ್ರ ಸಿಗಂದೂರು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಪರೋಪಕಾರಿ ರಾಜಣ್ಣ ಜೈನ್ ಅವ್ಯವಹಾರ ಬಯಲಿಗೆ ತಂದಿದ್ದರಿಂದ ಅವರನ್ನ ಜೈಲಿಗೆ ಕಳಿಸಿದ್ದ ಕರೂರು ಬಾರಂಗಿ ಹೋಬಳಿಯ 2013 ರ ಸತ್ಯಕಥೆ ನಂತರ ಅವ್ಯವಹಾರ ಮಾಡಿದ ನಿವೃತ್ತ ಭಾರತೀಯ ಸೇನೆಯ ಯೋದ ಅಮಾನತ್ತಾದರು.

#ತುಮರಿ_ಗ್ರಾಮಪಂಚಾಯತ್_ರಾಜ್ಯದ_ಪ್ರಸಿದ್ದ_ಸಿಗಂದೂರು_ಕ್ಷೇತ್ರ #ಇಲ್ಲಿನ_ಗ್ರಾಮಪಂಚಾಯಿತಿ_ಸದಸ್ಯರಾಗಿದ್ದ #ಸಾಲೆಕೊಪ್ಪ ರಾಜಣ್ಣ_ಜೈನ್_ಪರೋಪಕಾರಿ_ಶುದ್ಧಹಸ್ತ #ಅವರ_ಪಂಚಾಯಿತಿ_ಅವ್ಯವಹಾರ_ಬಯಲು_ಮಾಡಿದ್ದರಿಂದ #ಅವರನ್ನ_ಜೈಲಿಗೆ_ಕಳಿಸಲಾಗಿತ್ತು #ಇದನ್ನ_ಪ್ರತಿಭಟಿಸಿ_ತುಮರಿಯಲ್ಲಿ_ಪ್ರತಿಭಟನಾ_ಸಭೆ_ನಡೆಸಿದ್ದೆವು #ಪಿಡಿಓ_ನಿವೃತ್ತ_ಯೋದ_ಅಮಾನತ್ತು_ಆಗಿ_ಸುಖಾಂತ್ಯ_ಆಯಿತು.    ಒಂದು ಕಾಲದಲ್ಲಿ ಶರಾವತಿ ಹಿನ್ನೀರಿನ ಪ್ರದೇಶ ಕರಾರು ಬಾರಂಗಿ ಹೋಬಳಿ ರಿಪಬ್ಲಿಕ್ ಎಂದೇ ಕರೆಯಬಹುದಾದ ಪ್ರದೇಶ ಆಗಿತ್ತು ಅಲ್ಲಿಗೆ ಬರುವ ಅನುದಾನಗಳು ಲೂಟಿ ಕೋರರ ಖಜಾನೆಗೆ ಸೇರುತ್ತಿತ್ತು ಮತ್ತು ಅದಕ್ಕೆ ಸಾಗರದ ಆಡಳಿತರೂಡರ ಮೊಹರು ಬೀಳುತ್ತಿತ್ತು.   ವಿರೋಧಿಸಿದರೆ ಸುಳ್ಳು ಕೇಸಿನಲ್ಲಿ ಜೈಲು ಗ್ಯಾರಂಟಿ ಇಂತಹದೇ ಪ್ರಸಂಗ 2012ರಲ್ಲಿ ತುಮರಿ ಗ್ರಾಮ ಪಂಚಾಯಿತಿ ಸದಸ್ಯ ಸಾಲೆಕೊಪ್ಪ  ರಾಜಣ್ಣ ಜೈನ್ ಅವರ ಜೀವನದಲ್ಲಿ ನಡೆದ ಘಟನೆ ಇಲ್ಲಿ ನಮೂದಿಸಿದ್ದೇನೆ.   ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಿಗಂದೂರು ದೇವಸ್ಥಾನದ ತನಕ ಇದೆ ಈ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದವರು ತುಮರಿಯ ಸಮಾಜ ಸೇವಕ ಜೈನ ಧರ್ಮದ ಸಾಲೆಕೊಪ್ಪ ರಾಜಣ್ಣ ಜೈನ್ ಇವರು ತುಮರಿ ಯಲ್ಲಿ ಯಾರಿಗಾದರು ಆರೋಗ್ಯ ಏರುಪೇರಾದರೆ ತಮ್ಮ ವಾಹನದಲ್ಲಿ ಸಾಗರ ಆಸ್ಪತ್ರೆಗೆ ಸೇರುಸುವುದರಿಂದ ತುಮರಿ ಸರ್ಕಲ್ ನ...

Blog number 2153. ಕೊಡಚಾದ್ರಿ ಪ್ರವಾಸಿ ಮಂದಿರ ಉದ್ಘಾಟಿಸಿದ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರಿಗೆ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಿ.ಸ್ವಾಮಿ ರಾವ್ ಆಯೋಜಿಸಿದ್ದ ವಿಶೇಷ ಮಲೆನಾಡಿನ ಖಾದ್ಯಗಳ ಬೋಜನ

#ಸ್ವಾಮಿರಾವ್_ಮಾತುಕಥೆ_4. #ರಾಜ್ಯದಲ್ಲೇ_ಅತ್ಯಂತ_ವಿಸ್ತಾರದ_ವಿಧಾನಸಭಾ_ಕ್ಷೇತ್ರವಾಗಿತ್ತು #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ವಿಧಾನಸಭಾ_ಕ್ಷೇತ್ರ #ಈಗ_ಹೊಸನಗರ_ವಿಧಾನಸಭಾ_ಕ್ಷೇತ್ರ_ಅಸ್ತಿತ್ವದಲ್ಲಿ_ಇಲ್ಲ #ಸಾಗರ_ತೀರ್ಥಹಳ್ಳಿ_ಶಿವಮೊಗ್ಗ_ಗ್ರಾಮಾಂತರ_ವಿಧಾನಸಭಾ_ಕ್ಷೇತ್ರದಲ್ಲಿ_ಹರಿದು_ಹಂಚಿದೆ #ಕೊಡಚಾದ್ರಿ_ಅಮ್ಮನಘಟ್ಟಗಳು_ಈ_ಕ್ಷೇತ್ರಕ್ಕೆ_ಸೇರಿದೆ #ಕೊಡಚಾದ್ರಿ_ಬೆಟ್ಟದ_ಪ್ರವಾಸಿ_ಮಂದಿರದ_ಉದ್ಘಾಟನೆಗೆ_ಮುಖ್ಯಮಂತ್ರಿ_ಬಂಗಾರಪ್ಪರಿಂದ #ಅವತ್ತಿನ_ರಾತ್ರಿ_ಸ್ವಾಮಿರಾಯರು_ವ್ಯವಸ್ಥೆ_ಮಾಡಿದ_ವಿಶೇಷ_ಬೋಜನ #ಕೊಡಚಾದ್ರಿಗೆ_ಬಂದ_ಮೊದಲ_ಹೆಲಿಕಾಪ್ಟರ್ #ಸಾಗರದಿಂದ_ಪುತ್ತೂರಾಯರ_ಹೊಸ_ಹಸಿರು_ಪಿಯೆಟ್_ಕಾರ್_ಸ್ವತಃ #ಮುಖ್ಯಮಂತ್ರಿ_ಬಂಗಾರಪ್ಪ_ಚಾಲನೆ_ಮಾಡಿ_ಕೊಡಚಾದ್ರಿ_ತಲುಪಿದ್ದರು.    ಒಂದು ತುದಿಯಿಂದ ಇನ್ನೊಂದು ತುದಿಗೆ 175 ಕಿ.ಮಿ. ಉದ್ದ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿದಿಸಿದ್ದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ತಮ್ಮ 94 ಹುಟ್ಟು ಹಬ್ಬದ ಸಂದರ್ಭದಲ್ಲಿ ಅವತ್ತಿನ ದಿನಗಳ ನೆನಪಿಸಿ ಕೊಂಡಿದ್ದಾರೆ.    ಕೊಡಚಾದ್ರಿ ಬೆಟ್ಟದಲ್ಲಿ ಹೊಸ ಅತಿಥಿ ಗೃಹ ನಿರ್ಮಿಸಿ ಅದರ ಉದ್ಘಾಟನೆಗೆ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರನ್ನ ಕರೆತಂದಿದ್ದರು.    ಕೊಡಚ್ಚಾದ್ರಿ ಬೆಟ್ಟಕ್ಕೆ ಬಂದ ಮೊದಲ ಹೆಲಿಕಾಪ್ಟರ್ ಅದು ಅವತ್ತು ಬಂಗಾರಪ್ಪರ ಹೆಲಿಕಾಪ್ಟರ್ ಸಾಗರದಲ್ಲಿ ಲ್ಯಾಂಡ್ ಆಗಿತ್...

Blog number 2152.ಶಿವಮೊಗ್ಗ ಜಿಲ್ಲೆಯ ಎಲೆಮರೆ ಕಾಯಿಯಂತ ಉದಯೋನ್ಮುಖ ಇತಿಹಾಸ ಸಂಶೋದಕ ಇಕ್ಕೇರಿ ಸಮೀಪದ ಹುಲಿಮನೆಯ ಕಾಳೆ ಮನೆತನದ ಗಣಪತಿ H. K. ಇಕ್ಕೇರಿ ಇತಿಹಾಸ ನಾಡಿನ ಖ್ಯಾತ ಡಿಜಿಟಲ್ ಮಾಧ್ಯಮದಲ್ಲಿ ವಿವರಿಸಿದ್ದಾರೆ ಹತ್ತಿರ ಹತ್ತಿರ 10 ಲಕ್ಷ ಜನ ಇದನ್ನು ವೀಕ್ಷಿಸುತ್ತಿರುವುದು ವಿಶೇಷ.

#ನಮ್ಮ_ಸಾಗರ_ತಾಲ್ಲೂಕು_ಎರೆಡು_ರಾಜ_ವಂಶಸ್ತರು_ಆಳಿದ_ಊರು #ಗೇರುಸೊಪ್ಪೆ_ಮತ್ತು_ಕೆಳದಿ_ರಾಜರು #ಈ_ಇತಿಹಾಸ_ನಮಗೆ_ದೃಶ್ಯ_ಮಾಧ್ಯಮದ_ಮೂಲಕ_ಪರಿಣಾಮಕಾರಿ_ಆಗಿ_ತಲುಪಿಸುತ್ತಿರುವ #ನಾಡಿನ_ಪ್ರಖ್ಯಾತ_ಡಿಜಿಟಲ್_ಮಾಧ್ಯಮ #ಅದರಲ್ಲಿ_ಇತಿಹಾಸದ_ಕಥೆ_ಹೇಳುವವರು_ಶಿವಮೊಗ್ಗ_ಜಿಲ್ಲೆಯ_ಎಲೆಮರೆಯ_ಕಾಯಿಯಂತ #ಉದಯೋನ್ಮುಖ_ಇತಿಹಾಸ_ಸಂಶೋದಕರು #ಕೆಳದಿ_ರಾಜರ_ಎರಡನೆ_ರಾಜಧಾನಿ_ಇಕ್ಕೇರಿ_ಬಗ್ಗೆ_ವಿವರಿಸುತ್ತಿರುವ #ಇಕ್ಕೇರಿ_ಸಮೀಪದ_ಹುಲಿಮನೆಯ_ಕಾಳೆ_ಮನೆತನದ_ಗಣಪತಿ_H_K #ಇವರ_ವಿವರಣೆ_ಎಷ್ಟು_ಪರಿಣಾಮಕಾರಿ_ಅಂದರೆ_ಹತ್ತಿರ_ಹತ್ತಿರ_ಹತ್ತು_ಲಕ್ಷ_ಜನ_ವೀಕ್ಷಿಸುತ್ತಿದ್ದಾರೆ. #ಇಕ್ಕೇರಿಯ_ದೇವಾಲಯದ_ಹೊರ_ಆವರಣದಲ್ಲಿ_ಅಘೋರೇಶ್ವರನ_ಪಾದಗಳಿದೆ #ಅಘೋರೇಶ್ವರನ_ವಿಗ್ರಹದ_ಮೇಲು_ಭಾಗ_ಎಲ್ಲಿದೆ? #ಇಲ್ಲೊಂದು_ವದಂತಿ_ಇದೆ_ತಾಳಗುಪ್ಪ_ಸಮೀಪದ_ಆಲಳ್ಳಿಯ_ಗೌಡರ_ತೋಟದಲ್ಲಿ  #ಇಕ್ಕೇರಿ_ಅಘೋರೇಶ್ವರ_ಮೂರ್ತಿಯ_ಪಾದದ_ಮೇಲ್ಬಾಗ_ಹೋಲುವ_ಶಿಲಾವಿಗ್ರಹ_ಒಂದು_ಬಿದ್ದಿದೆ  #ಅನ್ನುತ್ತಾರೆ_ಅದನ್ನು_ಆಸಕ್ತ_ಸಂಶೋದಕರು_ಮಾಡಬೇಕು.    ಇಕ್ಕೇರಿ ಕೆಳದಿ ರಾಜರ ಎರಡನೆ ರಾಜಧಾನಿ, ವಿಜಯನಗರ ಸಾಮ್ರಾಜ್ಯದ ಟಂಕಸಾಲೆ, ಇಲ್ಲಿನ ಕೋಟೆ ಮತ್ತು ಅಘೋರೇಶ್ವರ ದೇವಾಲಯದ ಅಡಿಪಾಯ ಸ್ವತಃ ವಿಜಯನಗರದ ಅರಸ ಕೃಷ್ಣ ದೇವರಾಯರ ಅಮೃತ ಹಸ್ತದಿಂದ ನೆರವೇರಿದೆ.   ಕೆಳದಿ ಅರಸ ಸದಾಶಿವ ನಾಯಕರಿಗೆ ಇಬ್ಬರು ಪುತ್ರರು ದೊಡ್ಡ ಸಂಕಣ್ಣನಾಯಕ ಮತ್ತು ಸಣ್ಣ ಸಂಕಣ್ಣ ನಾಯಕ ಇವರಲ...

Blog number 2151.ಹಾರನಹಳ್ಳಿ ಮುಕ್ತಿಯಾರ್ ಸಾಹೇಬರ ತರಕಾರಿ - ನೀರುಳ್ಳಿ - ಕಾಯಿ ವ್ಯಾಪಾರ ನಮ್ಮ ಜೊತೆ 15 ವರ್ಷದಿಂದ ನಿರಂತರವಾಗಿ ನಡೆದು ಬಂದಿದೆ.

#ನಮ್ಮ_ಊರಿನ_ಶ್ರಮಜೀವಿ_ಮುಕ್ತಿಯಾರ್_ಸಾಹೇಬರು #ಕಾಯಿ_ತರಕಾರಿ_ನೀರುಳ್ಳಿ_ಸರಬರಾಜುದಾರರು #ಅವರ_ವ್ಯಾನಿಗೆ_ಅವರೇ_ಡ್ರೈವರ್_ಲೋಡು_ಆನ್_ಲೋಡು_ಅವರೇ #ವ್ಯಾಪಾರವೂ_ಅವರದ್ದೆ #ವಿದ್ಯಾಬ್ಯಾಸ_ಇಲ್ಲದಿದ್ದರೂ_ಲೆಖ್ಖ_ಪಕ್ಕಾ. https://youtube.com/shorts/moUcY9osAGw?feature=shared    ಅಯನೂರು ಸಮೀಪದ ಹಾರನಳ್ಳಿಯ ಮುಕ್ತಿಯಾರ್ ನಮ್ಮ ಊರವರೇ ಆಗಿದ್ದಾರೆ ಅವರು ಆನಂದಪುರಂ -ರಿಪ್ಪನ್ ಪೇಟೆ - ಬಟ್ಟೆಮಲ್ಲಪ್ಪ - ಮಾರುತಿಪುರ ವ್ಯಾಪ್ತಿಯ ಸಂತೆ ವ್ಯಾಪಾರ ಮತ್ತು ಈ ಭಾಗದ ಹೋಟೆಲ್ ಅಂಗಡಿಗಳಿಗೆ ಕಳೆದ 25 ವರ್ಷದಿಂದ ತೆಂಗಿನಕಾಯಿ - ನೀರುಳ್ಳಿ - ತರಕಾರಿ ಸರಬರಾಜದಾರರು.    ಕೊರಾನಾ ಲಾಕ್ ಡೌನ್ ಆದಾಗ ನಮ್ಮ ಮಲ್ಲಿಕಾ ವೆಜ್ ಇವರಿಗೆ ಪಾವತಿ ಮಾಡಬೇಕಾದ ಬಾಕಿ 80 ಸಾವಿರಕ್ಕೂ ಜಾಸ್ತಿ ಈ ಸಂದರ್ಭ ಇವರು ಹೇಗೆ ವರ್ತಿಸುತ್ತಾರೆ ಎಂದು ನಾನು ಇವರನ್ನ ಗಮನಿಸಿದೆ...   " ಇಡೀ ಪ್ರಪಂಚವೇ ಲಾಕ್ ಡೌನ್ ಆಗಿದೆ ನಾವು ನೀವು ಯಾವ ಲೆಕ್ಕ ಬಿಡ್ರಣ್ಣ... ಬದುಕಿ ಬಂದರೆ ಎಲ್ಲಾ ಸರಿ ಆದರೆ ಮತ್ತೆ ನೋಡೋಣ" ಅಂದಾಗ ನನಗೇ ಆಶ್ಚರ್ಯ ಈ ಪ್ರಪಂಚದಲ್ಲಿ ಇಂತವರೂ ಇದ್ದಾರ ಅನ್ನಿಸಿತು.   ಅವರ ಹಾರೈಕೆಯಂತೆ ಬಂದ ಆಪತ್ತು ಕಾಲ ಮುಗಿಯಿತು ಈಗ ವಾರಕ್ಕೆ ಎರಡು ಬಾರಿ ನಮ್ಮ ಮಲ್ಲಿಕಾ ವೆಜ್ ಗೆ ತರಕಾರಿ, ಕಾಯಿ, ನೀರುಳ್ಳಿ ಎಲ್ಲಾ ತರುತ್ತಾರೆ.   ಒಂದು ವಿಶೇಷ ಅಂದರೆ ಇವರ ಪಿಕ್ ಅಪ್ ವ್ಯಾನ್ ಡ್ರೈವ...

Blog number 2150. ಅಪರೂಪದ ಚಿತ್ರ, ಕಾಡೆಮ್ಮೆ ತನ್ನ ಕರುವಿಗೆ ಹಾಲುಣಿಸುವ ಚಿತ್ರ

#ಅಪರೂಪದ_ಕಾಡೆಮ್ಮೆ_ಕರುವಿಗೆ_ಹಾಲುಣುಸುವ_ಪೋಟೋ #ಇದನ್ನು_ತೆಗೆದವರು_ಮಾಸ್ತಿಕಟ್ಟೆಯ_ಕೆಪಿಸಿ_ಇಂಜಿನಿಯರ್ #ವಿನಾಯಕ_ಕುಮಾರ್ #ವರಾಹಿ_ನದಿಯ_ಪಿಕಪ್_ಡ್ಯಾಂ_ರಸ್ತೆ_ಪಕ್ಕದಲ್ಲಿ. #ನಿತ್ಯ_ಕೆಪಿಸಿ_ನೌಕರರ_ವೃಂದ_ಕಾಡೆಮ್ಮೆಗಳನ್ನು_ನೋಡುತ್ತಿರುತ್ತಾರೆ #ಇದು_ಅಪರೂಪದ_ಚಿತ್ರ #ಅತ್ಯುತ್ತಮ_ವನ್ಯಜೀವಿ_ಚಿತ್ರ_ತೆಗೆದ_ಅವರಿಗೆ_ಅಭಿನಂದನೆ.

Blog number 2149, ಗೋಡೆಯ ಮೇಲಿನ ವಿದ್ಯುತ್ ಬಲ್ಪ್ ನ ನೆರಳಿನ ಮೇಲೆ ಹಲ್ಲಿ ಮರಿ

#ವಿದ್ಯುತ್_ಬಲ್ಪನ_ಮೇಲೆ_ಅಲ್ಲ #ಅದರ_ನೆರಳಿನ_ಮೇಲೆ_ಹಲ್ಲಿ_ಮರಿ

Blog number 2148. ನನ್ನ ಪ್ರೀತಿಯ ಶಂಭೂರಾಮನ ಜೊತೆ ಇವತ್ತಿನ ಬೆಳಗು

#ಎಂದಿನಂತೆ_ಇವತ್ತಿನ_ಬೆಳಗು_ಆದರೆ #ರಾಟವೀಲರ್_ರೋಟಿನ್ #ನನಗೆ_ಮತ್ತು_ನನ್ನ_ಪ್ರೀತಿಯ_ಶಂಭೂರಾಮನಿಗೆ_ಮಾತ್ರ_ನಿತ್ಯ_ನೂತನ #ಅವನ_ದೃಡವಾದ_ಸಂಯಮ_ನಮಗೆ_ಅನುಕೂಲವಾಗಿದೆ  #ಮತ್ತು_ಅವನ_ಮೇಲೆ_ಹೆಚ್ಚು_ಪ್ರೀತಿಗೆ_ಕಾರಣವಾಗಿದೆ. https://youtu.be/KqLC-NL32pI?feature=shared    ನಿತ್ಯ ನೂತನದ ಇವತ್ತಿನ ಬೆಳಗು ನನ್ನ ಮತ್ತು ಶಂಭೂರಾಮನ ಬೆಳಗಿನ ಒಂದು ಗಂಟೆಯ ವಾಕಿಂಗ್ ಪ್ರಾರಂಭಕ್ಕೆ ಮೊದಲಿನ ಕೆಲ ತಯಾರಿಗಳು ಇದೆ.  ಮೊದಲಿಗೆ ಅವನಿಗೆ ಕುಡಿಯುವ ನೀರು ಬಾಟಲ್ ನಲ್ಲಿ ತುಂಬಿಸಿ ಕೊಳ್ಳುವುದು, ಅವನ ಪೀಡಿಂಗ್ ಪ್ಲೇಟಿಗೆ ತೊಳೆದು ಸ್ಲೈಸ್ ಮಾಡಿದ ಸಲಾಡ್ ಸೌತೆ, ಬಾಳೆಹಣ್ಣು, ಅವನ ಸ್ಟ್ರಾಪ್, ಬಿಸ್ಕಿಟ್, ಗೇಟಿಗೆ ಹಾಕುವ ಬೇಗಗಳು, ನನ್ನ ಆಫೀಸ್ ಹಿಂಭಾಗದ ಬಾಗಿಲ ಬೀಗದ ಕೀ, ಬ್ಲೀಚಿಂಗ್ ಪುಡಿ ಡಬ್ಬಿ, ನನ್ನ ಶೂ, ನನ್ನ ವಾಕಿಂಗ್ ಪಾತ್ ಗಾರ್ಡನ್ ಹೂವಿನ ಗಿಡಕ್ಕೆ ಹಾಕುವ ನೀರು ತುಂಬಿದ ಬಕೇಟ್ ಜಗ್, ಪಿಟ್ನೆಸ್ ಟ್ರಾಕರ್ ಸಮೇತ ತಯಾರಾಗಬೇಕು.   ನಂತರ ಎಲ್ಲಾ ಗೇಟುಗಳ ಲಾಕ್ ಮಾಡಿದ ನಂತರ ಶಂಭೂರಾಮನಿಗೆ ತರಕಾರಿ ನೀಡುವ ಕೆಲಸ ಅವನು ಅದಕ್ಕಾಗಿ ಅವನು ನಿರ್ದಿಷ್ಟ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ ನನಗೆ ಪ್ರತಿ ತುತ್ತಿಗೆ ಎರೆಡು ಥ್ಯಾಂಕ್ಸ್ ಕೊಡುತ್ತಾನೆ.   ನನ್ನ ಒಪ್ಪಿಗೆ ಇಲ್ಲದಿದ್ದರೆ ತಿನ್ನುವುದಿಲ್ಲ, ಒತ್ತಾಯದಿಂದ ಬಾಯಿಗೆ ತುರುಕಿದರೂ ಊಹೂಂ....ತಿನ್ನುವುದಿಲ್ಲ ನನ್ನ ಒಪ್ಪಿ...

Blog number 2147. ದೇಸಿ ತಳಿ ಕಾಟು ಮಾವಿನ ಹಣ್ಣಿನ ಸಾಸಿವೆ ಮತ್ತು ಅನ್ನದ ಊಟದ ರುಚಿ ಬಲ್ಲವರೇ ಬಲ್ಲರು

#ಇಡೀ_ಪಶ್ಚಿಮಘಟ್ಟದಲ್ಲಿ_ಅಸಂಖ್ಯ_ದೇಸಿ_ತಳಿ_ಮಾವಿನ_ಮರಗಳಿದೆ #ತರಹೇವಾರಿ_ರುಚಿ_ಸುವಾಸನೆ_ಗಾತ್ರಗಳಲ್ಲಿ_ಸಿಗುತ್ತದೆ #ಈ_ಕಾಟು_ಮಾವಿನ_ಹಣ್ಣು_ಚಿಕ್ಕ_ನಿಂಬೆ_ಗಾತ್ರದ್ದೂ_ಇದೆ #ಇದರಿಂದ_ವಿಶೇಷವಾದ_ಮಾವಿನಹಣ್ಣಿನ_ಸಾಸಿವೆ_ಮಾಡುತ್ತಾರೆ. https://youtu.be/nmyXSx6cMXs?feature=shared    ಈ ವರ್ಷ ಕಾಟು ಮಾವಿನ ಹಣ್ಣು ಪಸಲು ಇಲ್ಲ ಆದ್ದರಿಂದ ಮಾವಿನ ಹಣ್ಣಿನ ಸಾಸಿವೆ ಮರೆತು ಬಿಟ್ಟಿದ್ದೆ ನಮ್ಮ ಸಂಸ್ಥೆಯ ಕಣ್ಣೂರು ನಾಗರಾಜ್ ಅವರ ತಂಗಿ ಮನೆಯಿಂದ ಕಾಟು ಮಾವಿನ ಹಣ್ಣು ತಂದು ಕೊಟ್ಟಿದ್ದರಿಂದ ಈ ವರ್ಷದ ಕಾಟು ಮಾವಿನ ಹಣ್ಣು ಸವಿಯುವ ಭಾಗ್ಯ ಸಿಕ್ಕಿತು.    ಈ ಸಾಸಿವೆ ಮತ್ತು ಅನ್ನದ ಜೊತೆ ತಿನ್ನಲು ರುಚಿಕರವಾಗಿರುತ್ತದೆ.   ಕಾಟು ಮಾವಿನ ಹಣ್ಣಿನ ರೆಸಿಪಿ ನೂರಾರು youtube ನಲ್ಲಿ ಇದೆ ಅದನ್ನು ನೋಡಿ ಸುಲಭವಾಗಿ ತಯಾರಿಸಿಕೊಳ್ಳಬಹುದು

Blog number 2146.ಕೆಳದಿ_ಅರಸರ_ಆಡಳಿತ_ಬೆಂಗಳೂರು_ಮೆಜಿಸ್ಟಿಕ್_ತನಕ#ಕಾಳಿ_ನದಿ_ಆಚೆಯ_ಸದಾಶಿವಘಡದಿಂದ_ಕೇರಳದ_ಬೇಕಲ್_ಕೋಟೆವರೆಗೆ#ವಿಜಯ_ನಗರ_ಸಾಮ್ರಾಜ್ಯದ_ಟಂಕಸಾಲೆ_ಕೆಳದಿ_ಅರಸರ_ಇಕ್ಕೇರಿ#ಇಕ್ಕೇರಿ_ಎಂದರೆ_ಚಿನ್ನ#ಸ್ವಸ್ತಿಕ್_ವಿನ್ಯಾಸದಲ್ಲಿ_ನಿಮಿ೯ಸಿದ_ಸಾಗರ_ಪಟ್ಟಣ#ಇಕ್ಕೇರಿ_ಕೋಟೆ_ಅಘೋರೇಶ್ವರ_ದೇವಸ್ಥಾನಕ್ಕೆ_ಶಂಕುಸ್ಥಾಪನೆ_ಕೃಷ್ಣದೇವರಾಯರಿಂದ#ಕೆಳದಿ_ಇತಿಹಾಸ_ಮರೆಯಬಾರದಾದ_ರಾಜರಾದ_ಸದಾಶಿವ_ನಾಯಕ#ರಾಜ_ಹಿರಿಯ_ವೆಂಕಟಪ್ಪ_ನಾಯಕರನ್ನ_ಮರೆತಿದ್ದೇವೆ#ಸಾಗರ_ತಾಲ್ಲೂಕಿನ_ಜನ_ನಮ್ಮ_ಇತಿಹಾಸ_ಡಿಜೆಟಲ್_ಮಾಧ್ಯಮದಲ್ಲಿ#ಸಾಗರ_ತಾಲ್ಲೂಕಿನ_ಇತಿಹಾಸ_ಸಂಶೋದಕ_ಇಕ್ಕೇರಿ_ಸಮೀಪದ_ಗಣಪತಿ_H_K#ವಿವರಿಸಿದ್ದಾರೆ_ಇದು_ಎರಡನೆ_ಕಂತು

#ಕೆಳದಿ_ಅರಸರ_ಆಡಳಿತ_ಬೆಂಗಳೂರು_ಮೆಜಿಸ್ಟಿಕ್_ತನಕ #ಕಾಳಿ_ನದಿ_ಆಚೆಯ_ಸದಾಶಿವಘಡದಿಂದ_ಕೇರಳದ_ಬೇಕಲ್_ಕೋಟೆವರೆಗೆ #ವಿಜಯ_ನಗರ_ಸಾಮ್ರಾಜ್ಯದ_ಟಂಕಸಾಲೆ_ಕೆಳದಿ_ಅರಸರ_ಇಕ್ಕೇರಿ #ಇಕ್ಕೇರಿ_ಎಂದರೆ_ಚಿನ್ನ #ಸ್ವಸ್ತಿಕ್_ವಿನ್ಯಾಸದಲ್ಲಿ_ನಿಮಿ೯ಸಿದ_ಸಾಗರ_ಪಟ್ಟಣ #ಇಕ್ಕೇರಿ_ಕೋಟೆ_ಅಘೋರೇಶ್ವರ_ದೇವಸ್ಥಾನಕ್ಕೆ_ಶಂಕುಸ್ಥಾಪನೆ_ಕೃಷ್ಣದೇವರಾಯರಿಂದ #ಕೆಳದಿ_ಇತಿಹಾಸ_ಮರೆಯಬಾರದಾದ_ರಾಜರಾದ_ಸದಾಶಿವ_ನಾಯಕ #ರಾಜ_ಹಿರಿಯ_ವೆಂಕಟಪ್ಪ_ನಾಯಕರನ್ನ_ಮರೆತಿದ್ದೇವೆ #ಸಾಗರ_ತಾಲ್ಲೂಕಿನ_ಜನ_ನಮ್ಮ_ಇತಿಹಾಸ_ಡಿಜೆಟಲ್_ಮಾಧ್ಯಮದಲ್ಲಿ #ಸಾಗರ_ತಾಲ್ಲೂಕಿನ_ಇತಿಹಾಸ_ಸಂಶೋದಕ_ಇಕ್ಕೇರಿ_ಸಮೀಪದ_ಗಣಪತಿ_H_K #ವಿವರಿಸಿದ್ದಾರೆ_ಇದು_ಎರಡನೆ_ಕಂತು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/EQC59YGvFeI?feature=shared

Blog number 2145. ಸಾಹಸಿ ಆದರ್ಶ ಶಿಕ್ಷಕ ಆರ್.ಸಿ. ಮಂಜುನಾಥ್ ನೇತೃತ್ವದಲ್ಲಿ ಯೌವತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಅರಣ್ಯ ಇಲಾಖೆ ಮತ್ತು ಕನಾ೯ಟಕ ಪವರ್ ಕಾರ್ಪೋರೇಷನ್ ಅನುಮತಿಯೊಂದಿಗೆ 20 ಜನರ ತಂಡ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ನಿಡಗೋಡು ಸಮೀಪದ ಕುಂಚಿಕಲ್ ಪಾಲ್ಸ್ ಅನ್ವೇಷಣೆ ಮಾಡಲಿದೆ.

#ನಮ್ಮ_ಜಿಲ್ಲೆಯ_ಆದರ್ಶ_ಶಿಕ್ಷಕ_ಆರ್_ಸಿ_ಮಂಜುನಾಥ್ #ನಮ್ಮ_ದೇಶದ_ಅತಿದೊಡ್ಡ_ಜಲಪಾತವಾದ_ವರಾಹಿ_ನದಿಯ #ಮಾಸ್ತಿಕಟ್ಟೆ_ಸಮೀಪದ_ಕುಂಚಿಕಲ್_ಜಲಪಾತವನ್ನು_ಯೌವತ್_ಹಾಸ್ಟೆಲ್_ಸಹಯೋಗದಲ್ಲಿ #ಇಪ್ಪತ್ತು_ಜನರ_ತಂಡದೊಂದಿಗೆ_ಅನ್ವೇಷಣೆ_ಹಮ್ಮಿ_ಕೊಂಡಿದ್ದಾರೆ #ಶಿಕ್ಷಕರು_ಹೋಗಲು_ಇಷ್ಟಪಡದ_ಕುಗ್ರಾಮದ_ಶಾಲೆಗೆ_ಸಂತೋಷದಿಂದ_ಹೋಗಿ_ಪಾಠ_ಮಾಡುವ #ಸದಾ_ಕಾಡು_ಮೇಡು_ಜಲಪಾತಗಳ_ಸುತ್ತುವ #ಅಸಹಾಯಕರಿಗೆ_ಸಹಾಯ_ಹಸ್ತ_ಚಾಚುವ #ಅಪರೂಪದ_ಶಿಕ್ಷಕರ_ಸಂಪರ್ಕ_ಸಂಖ್ಯೆ_9449165868.    ಅನೇಕ ದಿನಗಳಿಂದ ಆರ್.ಸಿ. ಮಂಜುನಾಥ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿನ ವರಾಹಿ ನದಿಯ #ಕುಂಚಿಕಲ್_ಪಾಲ್ಸ್ ಗೆ ಅನ್ವೇಷಣೆಗೆ ಹೋಗುವ ಉತ್ಸಾಹದಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.     ಅವರು 20 ಜನರ ಆಸಕ್ತ ತಂಡ ಒಂದನ್ನ ಒಟ್ಟು ಮಾಡಿ ಯೌವತ್ ಹಾಸ್ಟಲ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಅರಣ್ಯ ಇಲಾಖೆ ಮತ್ತು ಕೆಪಿಟಿಸಿಎಲ್ ಅನುಮತಿಯೊಂದಿಗೆ ಕುಂಚಿಕಲ್ ಪಾಲ್ಸ್ ಅನ್ವೇಷಣೆಗೆ ತಯಾರಾಗಿದ್ದಾರೆ.    ನಮ್ಮ ಜಿಲ್ಲೆಯ ಸಾಹಸಿ ತರುಣರ ಈ ಸಾಹಸ ಅಭಿನಂದನೀಯ ಅವರ ತಂಡಕ್ಕೆ ಈ ಹಿಂದೆ ಮಳೆಗಾಲದಲ್ಲಿ ಮಳೆ-ಗಾಳಿಯಲ್ಲಿಯೇ 2019 ರಲ್ಲಿ ಹೋಗಿ ಮೊದಲ ವಿಡಿಯೋ ಮಾಡಿದ ಸಮಾಜ ಸೇವಕರಾದ #ನಗರ_ನಾರಾಯಣ_ಕಾಮತರ ತಂಡವೂ ಕೈಜೋಡಿಸಲಿ ಎಂದು ಆಶಿಸುತ್ತ...

Blog number 2144. ಸಾಗರ ತಾಲ್ಲೂಕಿನ ಇತಿಹಾಸ ಸಂಶೋದಕ ಇಕ್ಕೇರಿ ಸಮೀಪದ ಹುಲಿಮನೆಯ ಕಾಳೆ ಮನೆತನದ ಗಣಪತಿ ಹೆಚ್.ಕೆ.

#ಇಕ್ಕೇರಿ #ಕೆಳದಿ_ಅರಸರ_ರಾಜದಾನಿ_ಬಗ್ಗೆ_ಡಿಜಿಟಲ್_ಮಾಧ್ಯಮದಲ್ಲಿ #ಸಾಗರ_ತಾಲ್ಲೂಕಿನ_ಇನ್ನೊಬ್ಬ_ಇತಿಹಾಸ_ಸಂಶೋಧಕ_ಲೇಖಕ_ನಿವೃತ್ತ_ಉಪನ್ಯಾಸಕ #ಹುಲಿಮನೆಯ_ಗಣಪತಿ_ಕಾಳೆ_ವಿವರಿಸುತ್ತಿದ್ದಾರೆ_ನೋಡಿ #ಈ_ಕೆಳಗಿನ_ಲಿಂಕ್_ಕ್ಲಿಕ್_ಮಾಡಿ_ನೋಡಿ https://youtu.be/AbQ7rAocrOo?feature=shared    ಗಣಪತಿ H.K. ಸಾಗರದ ಕೆಳದಿ ರಾಜದಾನಿ ಇಕ್ಕೇರಿ ಸಮೀಪದ ಹುಲಿಮನೆಯ ಕಾಳೆ ಮನೆತನದವರು, ನಿವೃತ್ತ ಉಪನ್ಯಾಸಕರು.    ಸಾಹಿತ್ಯ ರಚನೆಕಾರರೂ ಆಗಿರುವ ಇವರಿಗೆ ಇವರ ಮನೆ ಪರಿಸರದಲ್ಲೇ ಇರುವ ಇಕ್ಕೇರಿ ಕೋಟೆ, ಅಘೋರೇಶ್ವರ ದೇವಾಲಯಗಳನ್ನ ನೋಡುತ್ತಾ ಬೆಳೆದವರು.    ಇವರ ಮನೆತನದಲ್ಲಿದ್ದ ಅನೇಕ ಕೆಳದಿ ಇತಿಹಾಸಕ್ಕೆ ಸಂಬಂದ ಪಟ್ಟ ವಿಶೇಷ ವಸ್ತುಗಳನ್ನು ಗಣಪತಿ H.K. ಜೋಪಾನವಾಗಿ ಕಾಪಿಟ್ಟಿದ್ದಾರೆ.    ಇಕ್ಕೇರಿ ಸುತ್ತ ಮುತ್ತ ಯಾವುದೇ ಕೆಳದಿ ಅರಸರ ಕುರುಹು ಕಂಡರೆ ಸ್ಥಳಿಯರು ಇವರನ್ನು ಸಂಪರ್ಕಿಸುತ್ತಾರೆ.   ರಾಜ್ಯದ ಇತಿಹಾಸ ತಿಳಿಸುವ ಖ್ಯಾತ #ಡಿಜಿಟಲ್_ಮಾಧ್ಯಮಕ್ಕೆ ತಮ್ಮ ವೃದ್ದಾಪದಲ್ಲೂ ಸಹಕರಿಸಿ ಕೆಳದಿ ರಾಜರ ರಾಜಧಾನಿ #ಇಕ್ಕೇರಿ ಬಗ್ಗೆ ವಿವರಿಸಿದ್ದಾರೆ.   ಈ ಸಂದರ್ಭದಲ್ಲಿಯೇ ಸ್ಥಳೀಯ ರೈತರ ಜಮೀನಿನಲ್ಲಿ ಸ್ವತಃ ಇವರು ಮತ್ತು ಡಿಜಿಟಲ್ ಮಾಧ್ಯಮದವರು ಸೇರಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಮದ್ದು ಅರೆಯುವ ಕಲ್ಲು ತೆಗೆದಿದ್ದಾರೆ ಇದು ಇತಿಹಾಸದ ಬಗ್ಗೆ ಇವರ...

Blog number 2143.8000 ವರ್ಷಗಳಿಂದ ಕಾಡುದನ ಪಳಗಿಸಿ ಹಾಲು-ಮಾಂಸಕ್ಕಾಗಿ, ವದು ದಕ್ಷಿಣೆಗಾಗಿ,ದಂಡ ರೂಪಕ್ಕಾಗಿ ಒಂದು ರೀತಿ ಕರೆನ್ಸಿಯಾಗಿಯೂ ಈಶಾನ್ಯ ಭಾರತದಲ್ಲಿ ಬಳಸುವ ಮಿಥುನ್ ಗಳು

#ಕಾಡು_ಕೋಣಗಳ_ರೀತಿಯ_ಕಾಡು_ದನದ_ಡೊಮೆಸ್ಟಿಕ್_ಅನಿಮಲ್_ತಳಿ_ಈಶಾನ್ಯ_ಭಾರತದ #ಮಿಥುನ್ #ಮಿಥುನ್_ವದು_ದಕ್ಷಿಣೆಯಾಗಿ_ಪಂಚಾಯಿತಿಗಳ_ದಂಡ_ರೂಪದಲ್ಲಿ_ಬಳಕೆ #ಒಂದು_ಜೀವಂತ_ವಿಥುನ್_ಬೆಲೆ_80_ಸಾವಿರದಿಂದ_ಒಂದು_ಲಕ್ಷ #ಅರುಣಾಚಲ_ಪ್ರದೇಶದಲ್ಲಿ_2019ರ_ಗಣತಿಯಲ್ಲಿ_3_ಲಕ್ಷದ_50_ಸಾವಿರ_ಮಿಥುನ್_ಇದೆ    ಮಲೆನಾಡಿನ ಕಾಡುಕೋಣಗಳ ಕೋಡುಗಳು ಈಶಾನ್ಯ ಭಾರತದಲ್ಲಿ 8000 ವರ್ಷಗಳ ಹಿಂದೆ ಪಳಗಿಸಿದ ಕಾಡುಕೋಣಗಳಂತ ಕಾಡು ದನಗಳಾದ ಮಿಥುನ್ ಗಳ ಕೋಡು ವ್ಯತ್ಯಾಸ ಇದೆ ಆದರೆ ಬೆನ್ನು ಮೇಲಿನ ಡುಬ್ಬ, ಕಾಲಿನ ಬಿಳಿ ಬಣ್ಣ, ಗಾತ್ರ ಮತ್ತು ಮಾಂಸದ ರುಚಿ ಮಾತ್ರ ಒಂದೇ ರೀತಿ ಅಂತೆ.    90ರ ದಶಕದಲ್ಲಿ ನಮ್ಮ ಊರಲ್ಲಿ ಉತ್ತರ ಪ್ರದೇಶದ ಹಜರತ್ ಈ ಊರಿನ ಡೊಮೆಸ್ಟಿಕ್ ಪ್ರಾಣಿ ಮಿಥುನ್ ಕಾಡು ಕೋಣದಂತೆ ಇದೆ ಎಂದು ತಿಳಿಸಿದಾಗ ನಂಬಲಾಗಿರಲಿಲ್ಲ.   ಈಶಾನ್ಯ ಭಾರತದ ನಿಶಿ ಗುಡ್ಡಗಾಡು ಸಮುದಾಯದ ವಿವಾಹದ ಸಂಪೂರ್ಣ ಚಿತ್ರೀಕರಣ ಮಾಡಿದ ಯೂಟ್ಯೂಬರ್ ಗೆಳೆಯ ಆಲ್ಫ್ರೆಡ್ ಆ ವಿವಾಹದಲ್ಲಿ ವದು ದಕ್ಷಿಣೆ ಆಗಿ ವಿಥುನ್ ನೀಡುವ ಬಗ್ಗೆ, ಮಿಥುನ್ ಮಾಂಸದ ಔತಣದ ಬಗ್ಗೆ ಮತ್ತು ಅಲ್ಲಿನ ಸಾಕುಪ್ರಾಣಿ ಆಗಿರುವ ಮಿಥುನ್ ಎಂಬ ಕಾಡು ದನದ ಬಗ್ಗೆ ಸುದ್ದಿ ಮಾಡಿದ್ದಾರೆ.   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/4HxlrAWA0o8?feature=shared    ನಮ್ಮ ಪಶ್ಚಿಮ ಘಟ್ಟ ಪ್ರದೇಶದಲ್...

Blog number 2142.ಸ್ಥೂಲ ಕಾಯದವರೇ ಗಮನಿಸಿ 2019 ರ ನನ್ನ ಪೋಟೋಕ್ಕೂ 2023ರ ಮತ್ತು ಇವತ್ತಿನ 2024ರ ಪೋಟೋಗು ಇರುವ ವ್ಯತ್ಯಾಸ ಗಮನಿಸಿ.

#ಸ್ಥೂಲಕಾಯದವರೆ_ಗಮನಿಸಿ #ಆರು_ವರ್ಷದ_ಹಿಂದೆ_ಇದೇ_ದಿನದ_ಚಿತ್ರ_26_ಮೇ_2019. #ನಾಲ್ಕು_ವರ್ಷದ_ಹಿಂದಿನ_ಇದೇ_ದಿನದ_ನನ್ನ_ಚಿತ್ರ_2023. #ಇವತ್ತಿನ_26_ಮೇ_2024_ನನ್ನ_ಪೋಟೋ #ಮನಸ್ಸು_ಮಾಡಿದರೆ_ಎಲ್ಲದೂ_ಸಾಧ್ಯ_ಅನ್ನುತ್ತಿದೆ.     26-ಮೇ -2019 ರಂದು ಉಡುಪಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ ಬಂದಿದ್ದರು ಅವರು ಉಡುಪಿಗೆ ವರ್ಗಾವಣೆ ಮೊದಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಟಿಪ್ ಕಾಪ್ ಎಂಬ ಬಿರುದು ಪಡೆದವರು.   ಅವತ್ತು ನನ್ನ ತೂಕ 140 ಕೆ.ಜಿ. ದಾಟಿ ದಾಪುಗಾಲು ಹಾಕುತ್ತಾ ಹೋಗುತ್ತಿತ್ತು, ಹತ್ತು ಹೆಜ್ಜೆ ಹಾಕಲು ಅಸಾಧ್ಯ ಅನ್ನಿಸಿ ಬಿಟ್ಟಿತ್ತು, ಮಲಗಿದ ತಕ್ಷಣ ಘೋರ ಗೊರಕೆಯೊಂದಿಗೆ   ಗಾಡ ನಿದ್ದೆ, ಹೊಟ್ಟೆ ಹೊಕ್ಕುಳಲ್ಲಿ ಹರ್ನಿಯಾ, ಅನಿಯಂತ್ರಿತ ಬಿಪಿ -ಶುಗರ್ ಒಟ್ಟಾರೆ ಜೀವನೋತ್ಸವ ಸತ್ತೇ ಹೋಗಿದ್ದ ನರಕವಾಗಿತ್ತು.     2020 ಕೊರಾನಾ ಲಾಕ್ ಡೌನ್ ದಿನಗಳಲ್ಲಿ ರಾತ್ರಿ ಊಟ ಬಿಟ್ಟೆ, ಬೆಳಿಗ್ಗೆ ಒಂದು ಗಂಟೆ ವಾಕಿಂಗ್ ಗಳಿಂದ ಸುಮಾರು 30 ಕೆ.ಜಿ ತೂಕ ಇಳಿಯಿತು, ಗೊರಕೆ ನಾಪತ್ತೆ ಆಯಿತು, ಹರ್ನಿಯಾ ಇಲ್ಲವಾಯಿತು, ಬಿಪಿ - ಶುಗರ್ ನಾರ್ಮಲ್ ಆಯಿತು ಪುನಃ ಜೀವನೋತ್ಸವ ಪುಟಿದೇಳಿತು.   ಅವತ್ತಿನ ನನ್ನ ಪೋಟೋ ನೋಡಿ ಡೊಳ್ಳು ಹೊಟ್ಟೆ, ತಾಮ್ರದ ತೊಪ್ಪಲೆಯಂತ ಮುಖ ಕಳೆದ ವರ್ಷದ 26 - ಮೇ -2023 ರ ಪೋಟೋದಲ್ಲಿ ಇಲ್ಲವಾಗಿದೆ. ...

Blog number 2141. ಹಿಂದೂ ಪತ್ರಿಕೆ ವರದಿಗಾರಿಕೆ ತೊರೆದು ಕಾನೂನು ಪದವಿ ವ್ಯಾಸಂಗ ಪೂರೈಸುತ್ತಿರುವ ವೀರೇಂದ್ರರ ನೆನಪಿನ ಶಕ್ತಿ ಅಗಾದ

#ಹೀಗೂ_ಉಂಟೆ? #ಇವರು_ನನ್ನ_ವಿಶೇಷ_ಅತಿಥಿ #ಶಿವಮೊಗ್ಗ_ಜಿಲ್ಲೆಯ_ಹಿಂದೂ_ಪತ್ರಿಕೆ_ವರದಿಗಾರರಾಗಿದ್ದರು #ಈಗ_ಪತ್ರಿಕೆ_ತೊರೆದು_ಅಂತಿಮ_ಕಾನೂನು_ಪದವಿ_ವಿದ್ಯಾರ್ಥಿ #ವೀರೇಂದ್ರ_ಮತ್ತು_ಅವರ_ಸಹಪಾಠಿ_ಜಯಂತ್ #ಇತಿಹಾಸ_ಸಂಶೋದಕ_ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಜೊತೆ   ರಾಷ್ಟ್ರಮಟ್ಟದ ಹಿಂದೂ ಪತ್ರಿಕೆಯ ಶಿವಮೊಗ್ಗ ಜಿಲ್ಲೆಯ ವರದಿಗಾರರಾಗಿ ಆ ಹುದ್ದೆ ತ್ಯಜಿಸಿ ಕಾನೂನು ಪದವಿಯ ವಿದ್ಯಾರ್ಥಿ ಆಗುವುದು ಉಹಿಸಲಾಗದ ಸಂಗತಿಯೇ...   ವೀರೆಂದ್ರ ಪಿ.ಎಂ. ಇದಕ್ಕೆ ಉದಾಹರಣೆ ಆಗಿದ್ದಾರೆ ಅವರು ಶಿವಮೊಗ್ಗ ಜಿಲ್ಲಾ ಹಿಂದೂ ಪತ್ರಿಕೆ ವರದಿಗಾರರಾಗಿದ್ದಾಗ ಸಾಗರದಲ್ಲಿ ವಿವಾಹ ಒಂದಕ್ಕೆ ಭಾಗವಹಿಸಲು ಹಾಯ್ ಬೆಂಗಳೂರ್ ವರದಿಗಾರರಾದ ಶೃಂಗೇಶ್ ಜೊತೆ ನನ್ನ ಆಫೀಸಿಗೆ ಬಂದಿದ್ದರು.   ಈಗ ಈ ಹುದ್ದೆ ತೊರೆದು ಕಾನೂನು ಪದವಿ ವ್ಯಾಸಂಗ ಮಾಡುತ್ತಾ ಅಂತಿಮ ಕಾನೂನು ಪದವಿ ವಿದ್ಯಾರ್ಥಿ ಆಗಿ ಅವರ ಕ್ಲಾಸ್ ಮೇಟ್ ಜಯಂತ್ ಮತ್ತು ಇತಿಹಾಸ ಸಂಶೋದಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರರ ಜೊತೆ ನನ್ನ ಆಫೀಸಿಗೆ ಬಂದಿದ್ದರು.   ಅವರ 42ನೇ ವಯಸ್ಸಲ್ಲಿ ಸೇಪರ್ ಝೋನ್ ತೊರೆದು ಕಾನೂನು ವಿದ್ಯಾಬ್ಯಾಸಕ್ಕೆ ದುಮುಕಿಸಿರುವುದು ಅವರ ಇಷ್ಟದ ಮಾರ್ಗದ ಅನ್ವೇಷಣೆಯೇ ಆಗಿದೆ.    ಇವರ ಜೊತೆ ಹೆಚ್ಚು ಸಮಯ ಕಳೆದರೂ ಕ್ಷಣ ಮಾತ್ರ ಅನ್ನಿಸಿತು, ಇವರ ನೆನಪಿನ ಶಕ್ತಿ ಅಗಾದವಾಗಿದೆ, ಇವರಿಗೆ ನಮ್ಮ ಆನಂದಪುರಂ ಇತಿಹಾಸದ ಜೊತೆ ಈಗಿನ ನಮ...

Blog number 2140. ಭಾರತ ದೇಶದ ಅತ್ಯಂತ ಎತ್ತರದ (1493 ಅಡಿ / 455 ಮೀಟರ್) ಜಲಪಾತ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ಕುಂಚಿಕಲ್ ಅಬ್ಬಿ ಪಾಲ್ಸ್.

#ನಮ್ಮ_ಭಾರತ_ದೇಶದ_ಅತ್ಯಂತ_ಎತ್ತರದ_ಜಲಪಾತ #ಇರುವ_ಜಿಲ್ಲೆ_ಶಿವಮೊಗ್ಗ_ಎಂಬ_ಹಿರಿಮೆ_ನಮ್ಮದು #ಕರ್ನಾಟಕ_ರಾಜ್ಯದ_ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ #ಮಾಸ್ತಿಕಟ್ಟೆಯ_ನಿಡುಗೋಡು_ಸಮೀಪದ_ವರಹಾ_ನದಿಯ_ಕುಂಚಿಕಲ್_ಅಬ್ಬಿ_ಪಾಲ್ಸ್ #ಇದರ_ಎತ್ತರ_1493_ಅಡಿ #ಕರ್ನಾಟಕ_ಪವರ್_ಕಾರ್ಪೋರೇಷನ್_ಈ_ಜಲಪಾತದ_ಎತ್ತರ_ಅಳತೆ_ಮಾಡಿದೆ #ದೇಶದ_ಜಲಪಾತಗಳ_ಕ್ರಮಾಂಕ_ಮರುಮಾರ್ಪಾಡು_ವಿಳಂಬವಾಗಿ_ದಾಖಲಾಗಿದೆ. #ವರಾಹಿ_ನದಿಯ_ಕುಂಚಿಕಲ್_ಪಾಲ್ಸ್_ಮೊದಲು_ನೋಡಿದವರು_ಈ_ಭಾಗದ_ಕುಣುಬಿ_ಜನಾಂಗದವರು #ಶಿವಮೊಗ್ಗ_ಜಿಲ್ಲಾ_ಕೇಂದ್ರದಲ್ಲಿ_ಈ_ಜಲಪಾತದ_ಬಗ್ಗೆ_1993ರಲ್ಲಿ_ಮೊದಲ_ಮಾಹಿತಿ #ನೀಡಿದವರು_ಸಾವೆಹಕ್ಕಲಿನ_ಕಂಚಿನಕಲ್_ಈರಪ್ಪಣ್ಣ #ಮೊದಲ_ವಿಡಿಯೋ_ಮಾಡಿದವರು_ನಗರನಾರಾಯಣ_ಕಾಮತರು #ಇತ್ತೀಚಿನ_ವರ್ಷಗಳಲ್ಲಿ_ಅನೇಕ_ಸಾಹಸಿಗಳು_ಇಲ್ಲಿಗೆ_ಬೇಟಿ_ನೀಡಿ_ಚಿತ್ರಿಸಿದ್ದಾರೆ. #ಈ_ಜಲಪಾತದ_ಬಗ್ಗೆ_ಹೆಲಿಕಾಪ್ಟರ್_ಬಳಸಿ_ಚಿತ್ರಿಕರಣ_ಮಾಡಲು_ಸುದ್ದಿ_ಸಂಸ್ಥೆ_ಒಂದು_ಮುಂದೆ_ಬಂದಿದೆ. https://youtube.com/shorts/p3W5GfY7v_Q?feature=shared   ನಮ್ಮ ದೇಶದಲ್ಲಿನ ಅತ್ಯಂತ ಎತ್ತರದ ಜಲಪಾತಗಳ ಪಟ್ಟಿ ಪುನರ್ ರಚಿಸಲಾಗಿದೆ ಇದರಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ನಿಡುಗೋಡು ಸಮೀಪದ ವರಾಹಿ ನದಿಯಿಂದ ಉಂಟಾಗಿರುವ ಕುಂಚಿಕಲ್ ಅಬ್ಬಿ ಫಾಲ್ಸ್ ಎಂದಾಗಿದೆ.    ಇದರ ಎತ್ತರ 1493 ಅಡಿ ಇ...

Blog number 2139. ಗೆಳೆಯ ಸಾಗರದ ಲೆಪ್ಟ್ ಹ್ಯಾಂಡ್ ಪಾಸ್ಟ್ ಬೋಲರ್ ಗೋಪಾಲರಿಗೆ ಶ್ರದ್ಧಾಂಜಲಿಗಳು

#ಶ್ರದ್ಧಾಂಜಲಿಗಳು_ಸಾಗರದ_ಗೋಪಾಲ್_ಅವರಿಗೆ #ಸದಾ_ಕ್ರೀಯಾಶೀಲ_ಸಾಮಾಜಿಕ_ನ್ಯಾಯದ_ಪ್ರತಿಪಾದಕರಾಗಿದ್ದವರು #ಜನಪರ_ಹೋರಾಟಗಾರರಿಗೆ_ಸದಾ_ಬೆಂಬಲ    1977-78ರಲ್ಲಿ ನಾನು ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಆನಂದಪುರಂನಿಂದ ಸಾಗರ ಪಟ್ಟಣಕ್ಕೆ ರೈಲಿನಲ್ಲಿ ಹೋಗುತ್ತಿದ್ದೆ ಆಗ ಸಾಗರದ ಮುನ್ಸಿಪ್ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ತುಂಬಿ ತುಳುಕುತ್ತಿತ್ತು ವಿದ್ಯಾರ್ಥಿಗಳಿಂದ ಬೆಳಿಗ್ಗೆ 11ರವರೆಗೆ ಕಾಲೇಜು ನಡೆಯುತ್ತಿತ್ತು ನಂತರ ನಮ್ಮ ಹೈಸ್ಕೂಲ್, ಆದ್ದರಿಂದ ಬೆಳಿಗ್ಗೆ 9ಕ್ಕೆ ನಮ್ಮ ರೈಲು ಸಾಗರ ನಿಲ್ದಾಣ ತಲುಪಿದಾಗ ಎರೆಡು ಗಂಟೆ ನಮಗೆ ಸಾಗರದ ಕೋರ್ಟ್ ಎದುರಿನ ಗ್ರಂಥಾಲಯ ನಿತ್ಯ ಪತ್ರಿಕೆ ಪುಸ್ತಕ ಓದುವ ತಾಣ ಆಗಿರುತ್ತಿತ್ತು.    ಅಲ್ಲಿ ನಾವು ಪ್ರತಿ ನಿತ್ಯ ಬೆಳಿಗ್ಗೆ ಗ್ರಂಥಾಲಯದಲ್ಲಿ ಈ ಗೋಪಾಲ್ ರನ್ನ ಮತ್ತು ಅವರ ತಮ್ಮನನ್ನ ನೋಡುತ್ತಿದ್ದೆವು ನಂತರ ಸಂಜೆ ನೆಹರೂ ಮೈದಾನದಲ್ಲಿ ಆ ಕಾಲದ ಸಾಗರದ ಸ್ಟಾರ್ ಕ್ರಿಕೆಟ್ ಆಟಗಾರರ ತಾಲೀಮು ನಡೆಯುವಾಗ ಅವರ ಜೊತೆ ಈ ಗೋಪಾಲ್ ನೋಡುತ್ತಿದ್ದೆ.   ಸಾಗರದ ಮುನ್ಸಿಪ್ ಹೈಸ್ಕೂಲ್ ನಲ್ಲಿ ಬಟ್ಟೆಮಲ್ಲಪ್ಪ ಸಮೀಪದ ನಂದಿಗದ ಗುಂಡಪ್ಪನವರು ಸೂಪರಿಡೆಂಟ್ ಆಗಿದ್ದರು, ಆರು ಅಡಿ ಎತ್ತರದ ಅವರು ಜುಬ್ಬಾ ಕಚ್ಚೆಪಂಜೆ ಧರಿಸಿ ಬರುತ್ತಿದ್ದರು ಬಾಯಿ ತುಂಬಾ ರಸಗವಳ ಅವರು ಶಿಸ್ತಿನ ಸಿಪಾಯಿ ಎಂದೇ ಆ ಕಾಲದ ಪ್ರಸಿದ್ಧರು ಅವರು ನನ್ನ ತಂದೆಯ ಗೆಳೆಯರು.    ನಂದಿ...

Blog number 2138. ಚಿಂತಕ ಅರವಿಂದ ಚೊಕ್ಕಾಡಿ ಜೊತೆ ಹೊಸ ಸಾಹಿತಿಗಳ ಪುಸ್ತಕ ಪ್ರಕಾಶನ ಇತ್ಯಾದಿ ಬಗ್ಗೆ ಸಣ್ಣ ಪೇಸ್ ಬುಕ್ ಸಂವಾದ

#ಸಾಹಿತ್ಯದ_ಆಸಕ್ತರಿಗೆ_ಪುಸ್ತಕ_ಪ್ರಕಾಶಕರಿಗೆ_ಲೇಖಕರಿಗೆ_ಮಾತ್ರ #ಇಷ್ಟ_ಆಗ_ಬಹುದಾದ_ಪೇಸ್_ಬುಕ್_ಸಂಭಾಷಣೆ #ಖ್ಯಾತ_ಲೇಖಕ_ಶಿಕ್ಷಣ_ತಜ್ಞ_ತರ್ಕಜ್ಞಾನಿ_ಅರವಿಂದಚೊಕ್ಕಾಡಿ_ಜೊತೆ #ಹೊಸ_ಲೇಖಕರಿಗೆ_ಪ್ರೋತ್ಸಾಹದ_ಕುರಿತು_ಚರ್ಚೆ ನಾನು ಅರವಿಂದ ಚೊಕ್ಕಾಡಿ ಅವರ ಪೇಸ್ ಬುಕ್ ಪೋಸ್ಟ್ ಒಂದಕ್ಕೆ  ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದೆ. . . . . #ಬರೆದದ್ದೆಲ್ಲ_ಅಚ್ಚಾಗಬೇಕು... ಅಚ್ಚಾಗಿದ್ದೆಲ್ಲ ಮಾರಾಟ ಆಗಬೇಕು.....  ಅನ್ನುವುದಕ್ಕಿಂತ ....  ಬರೆಯುವ ಹವ್ಯಾಸ ನಿರಂತರವಾಗಿರಬೇಕು......  ಅದು ಬೇಕಾದಾ ಆಸಕ್ತರಿಗೆ ಯಾವತ್ತಾದರೂ ತಲುಪ ಬಹುದು ಅಥವ ತಲುಪದೇ ಇರಬಹುದು. ಈ ಪ್ರತಿಕ್ರಿಯೆಗೆ #ಅರವಿಂದಚೊಕ್ಕಾಡಿ ಅವರು ಬರೆದದ್ದು #ಅರುಣ್_ಪ್ರಸಾದ್,     ನೀವನ್ನುವುದು ಸರಿ. ಬರೆದದ್ದೆಲ್ಲ ಅಚ್ಚಾಗಬೇಕು, ಎಲ್ಲರೂ ಕೊಂಡುಕೊಳ್ಳಬೇಕು, ಎಲ್ಲರೂ ಹಾಡಿಹೊಗಳಬೇಕು ಎಂಬ ನಿಲುಮೆ ಸರಿಯಲ್ಲ. ಇದು ಸಾಹಿತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ನಾನು ಹೇಳುತ್ತಿರುವುದು.      ತಾನು ಚುನಾವಣೆಯಲ್ಲಿ ಸ್ಪರ್ಧಿಸಿದ ಕೂಡಲೇ ಮುಖ್ಯಮಂತ್ರಿ ಆಗ್ತೇನೆ ಎಂದುಕೊಂಡು ರಾಜಕೀಯಕ್ಕೆ ಹೋಗ್ಲಿಕಾಗ್ತದಾ?ಮುಖ್ಯವಾಗಿ ಕನ್ನಡದಲ್ಲಿ ಬರೆದೇ ಬದುಕಬಲ್ಲೆ ಎನ್ನಲು ಸಾಧ್ಯ ಇಲ್ಲ ಎನ್ನುವುದು ನಿಜ.‌    ಇದು ಹೊಸಬರಿಗೆ ಮಾತ್ರ ಇರುವ ಸಮಸ್ಯೆಯಲ್ಲ‌. ಯಾವ ಹೆಸರಾಂತ ಲೇಖಕರು ಬರೆದೇ ಬದುಕು...