Skip to main content

Posts

Showing posts from June, 2024

Blog number 2225. ಜೋಗ ಜಲಪಾತ ಅದರ ವಿಶೇಷತೆಗಳು

#ಜೋಗ_ಜಲಪಾತ #ವಿಶ್ವ_ವಿಖ್ಯಾತ_ವಿಶ್ವದ_ಸುಂದರ_ಜಲಪಾತ #ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿ_ತಾಲ್ಲೂಕಿನ #ಅಂಬೂತೀರ್ಥದಲ್ಲಿ_ಉಗಮ_ಆಗುವ_ಶರಾವತಿ_ನದಿ #ಶಿವಮೊಗ್ಗ_ಉತ್ತರಕನ್ನಡ_ಜಿಲ್ಲೆಗಳ_ಗಡಿ_ಬಳಿ_ಪಶ್ಚಿಮಕ್ಕೆ_ತಿರುಗಿ #ಗೇರುಸೊಪ್ಪೆ_ಪ್ರಪಾತಕ್ಕೆ_ದುಮುಕುತ್ತದೆ https://youtu.be/FFsMJFRkvc8?si=2EvyVQE971U2MMi2   ಇದರ ಎತ್ತರ 829 ಅಡಿ, ಕೆಳಗೆ ಜಲಪಾತದ ತಳದ ಮಡುವಿನ ಆಳ 132 ಅಡಿ  1856 ರಲ್ಲಿ ಬ್ರಿಟೀಶ್ ನೌಕಾದಳದ ಅಧಿಕಾರಿಗಳು ಸ್ಥಳಿಯ ಕೆಲಸಗಾರರ ಸಹಾಯದಿಂದ ಅಳತೆ ಮಾಡಿದ್ದಾರೆ.  ಈ ಬೋರ್ಗರೆಯುವ ಜಲಪಾತದ ಶಬ್ದ ಕೇಳಿ ಬ್ರಿಟೀಶ್ ಸೈನಿಕರು ಟಿಪ್ಪು ಸೈನ್ಯದ ಅರ್ಭಟ ಎಂದು ಮೋಸ ಹೋಗಿದ್ದರಂತೆ.   ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚು ಆಗ ನೀರಿನಿಂದ ಏಳುವ ಮಂಜು ಜಲಪಾತದ ಪ್ರಪಾತ ಆವರಿಸುತ್ತದೆ.  ಆಗ ನೀರಿನ ಬೋರ್ಗರೆತದ ಶಬ್ದ ಹೃದಯ ಕಂಪಿಸುತ್ತದೆ.   ಸೂರ್ಯಕಿರಣದಿಂದ ಜಲಪಾತ್ ದಿನದ ವಿವಿಧ ಕಾಲದಲ್ಲಿ ವೈವಿಧ್ಯ ತಾಳುತ್ತದೆ ಮತ್ತು ಕಾಮನ ಬಿಲ್ಲು ಮೂಡಿಸುತ್ತದೆ, ಬೆಳದಿಂಗಳ ರಾತ್ರಿಯಲ್ಲೂ ಜಲಪಾತ ವಿಭಿನ್ನವಾಗಿ ಕಾಣುತ್ತದೆ.  ರಾಜ-ರೋರರ್ - ರಾಕೆಟ್ - ರಾಣಿ ಎಂಬ ನಾಲ್ಕು ಕವಲುಗಳಾಗಿ ಬೀಳುತ್ತದೆ.   ಸೊಂದೆಯ ತಾಳಿ ರಾಜಾ ಈ ಕವಲಿರುವ ಕಡೆಯಲ್ಲಿ ಕಟ್ಟಿಸಲು ಉದ್ದೇಶಿಸಿದ್ದ ಮಂಟಪದ ತಳಪಾಯದ ಗುರುತುಗಳನ್ನ ಈಗಲೂ ನೋಡಬಹುದು.  ರಾಜ ಜಲಪಾತದ ಕೆಳಗೆ ಬಂಡೆ ಬಿರುಕಿನ...

Blog number 2222. ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ನಿರ್ಮಿಸಿರುವ ಸ್ಮಾರಕ ರಾಣಿ ಚಂಪಕಾಳ ಪ್ರೇಮ ಸೌದ ಇದನ್ನು ಆದರಿಸಿ ನಾನು ಬರೆದ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕ ಕಾದಂಬರಿ ಓದಿ 2020 ರಲ್ಲಿ ಖ್ಯಾತ ಇತಿಹಾಸ ಸಂಶೋಧಕ ಅಂಬ್ರಯ್ಯ ಮಠರು ಬರೆದ ಅಭಿಪ್ರಾಯ ವಿಮರ್ಶೆ ಇಲ್ಲಿದೆ.

#ಕೆಳದಿ_ಇತಿಹಾಸದ_ಖ್ಯಾತಸಂಶೋದಕ #ಅ೦ಬ್ರಯ್ಯಮಠ_ಬಿದನೂರುನಗರವಾಸಿ #ಅವರು_4_10_2020ರಲ್ಲಿ_ನನ್ನ_ಕಾದಂಬರಿ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ #ಬೆಸ್ತರರಾಣಿ_ಚಂಪಕಾ_ಓದಿ_ವಿಮರ್ಶೆ_ಬರೆದಿದ್ದಾರೆ #ಅವರು_ನನ್ನ_ಕಾದಂಬರಿ_ಓದಿ_ಪ್ರತಿಕ್ರಿಯಿಸಿದ್ದು_ನನಗೆ_ಸಂತೋಷ_ತಂದಿದೆ. #ಡಿಜಿಟಲ್_ಮಾಧ್ಯಮದಲ್ಲಿ_ಅವರು_ಬಿದನೂರು_ಕೋಟೆ_ವಿವರಣೆ_ನೀಡುತ್ತಿದಾರೆ #ಈ_ಸಂದರ್ಭದಲ್ಲಿ_ಇನ್ನೊಮ್ಮೆ ಶ್ರೀ.ಕೆ.ಅರುಣ್ ಪ್ರಸಾದರು ಆನಂದಪುರದ ಕುರಿತಂತೆ ಇನ್ನೂ ಹೆಚ್ಚಿನ ಶೋಧನೆ ಮಾಡುವಂತಾಗಲಿ, ಹೆಚ್ಚು ಹೆಚ್ಚು ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡುವಂತಾಗಲಿ ಎಂದು ಹಾರೈಸುತ್ತ; ಈ ಕೃತಿಯನ್ನು ಓದುವ ಪ್ರತಿಯೊಬ್ಬರೂ  ಒಮ್ಮೆ ಆನಂದಪುರದ ಚಂಪಕ ಸರಸ್ಸನ್ನು ನೋಡುವಂತಾಗಲಿ, ಇದರ ರಕ್ಷಣೆಗೆ ಸರ್ಕಾರ ಹಾಗೂ ಸಾರ್ವಜನಿಕರು ಮುಂದಾಗಲಿ ಎಂದು ವಿನಂತಿಸಿಕೊಳ್ಳುತ್ತೇನೆ. ದಿನಾಂಕ: 04.10.2020 ಅಂಬ್ರಯ್ಯ ಮಠ, ಬಿದನೂರುನಗರ 9480402712  #ಬೆಸ್ತರರಾಣಿ_ಚಂಪಕಾ” ಕಾದಂಬರಿ ಕುರಿತು  ಒಂದು ಪ್ರತಿಕ್ರಿಯೆ  ಶ್ರೀ ಕೆ.ಅರುಣ್ ಪ್ರಸಾದ್ ಅವರು ಬರೆದ “ಬೆಸ್ತರರಾಣಿ ಚಂಪಕಾ” ಸಂಪೂರ್ಣವಾಗಿ  ಓದಿದೆ. ಓದಿದೆ ಎನ್ನುವುದಕ್ಕಿಂತ  ಕೃತಿ ಓದಿಸಿಕೊಂಡುಹೋಯಿತು ಎನ್ನುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಓದಿದ ಮೇಲೆ ಆ ಕುರಿತಂತೆ ಬರೆಯದೇ ಹೋದರೆ ಅಪಚಾರವಾದೀತು ಎಂಬ ಕಾರಣಕ್ಕಾಗಿ ನಾಲ್ಕು ವಾಕ್ಯ ಬರೆಯಬೇಕೆಂದು ಕುಳಿತ...

Blog number 2223. ಅಂತಾರಾಷ್ಟ್ರೀಯ ನಿದಿ ಚೋರರಿಂದ ಭಗ್ನವಾದ ಗೇರುಸೊಪ್ಪೆ ಸಂಸ್ಥಾನದ ಸ್ಮಾರಕಗಳು

#ನಿದಿ_ಚೋರರಿಂದ_ಭಗ್ನವಾದ_ಗೇರುಸೊಪ್ಪೆ_ಸಂಸ್ಥಾನದ_ಸ್ಮಾರಕಗಳು #ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಂಗ್ರಹಿಸಿದ್ದ_ಬೆಳ್ಳಿ_ಗಟ್ಟಿಗಳಿಗೆ #ಅಂತರಾಷ್ಟ್ರೀಯ_ಮಾಪೀಯಾ_ಸಂಸ್ಥೆಗಳು_ಇದಕ್ಕೆ_ಕಾರಣವಾಗಿತ್ತಾ?       19-ಡಿಸೆಂಬರ್-1961ರಲ್ಲಿ ಗೋವಾ ವಿಮೋಚನೆ ಆಗುವ ತನಕ ಅಂತರಾಷ್ಟ್ರೀಯ ಮಾಪಿಯಾ ಸಂಸ್ಥೆಗಳು ನಿದಿ ಚೋರರಿಗೆ ಆ್ಯಂಟಿಕ್ (ಪುರಾತನ) ವಸ್ತುಗಳನ್ನು ಮಾರುವವರಿಗೆ ಹೆಚ್ಚು ಸಹಕಾರ ನೀಡುತ್ತಿದ್ದವು, ಅವುಗಳನ್ನ ದುಬಾರಿ ಬೆಲೆಗೆ ಖರೀದಿಸಿ ಅದನ್ನು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿ ಬೇರೆ ದೇಶಗಳಲ್ಲಿನ ಖರೀದಿದಾರರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.   ಇಂತಹ ಒಂದು ಗೋದಾಮಿನಲ್ಲಿ 20 ಸಾವಿರಕ್ಕೂ ಹೆಚ್ಚಿನ ಪಂಚಲೋಹದ ಪುರಾತನ ವಿಗ್ರಹಗಳ ಮಾರಾಟಕ್ಕಾಗಿ ಜೋಡಿಸಿದ್ದನ್ನ ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಆಸಕ್ತಿ ಇದ್ದ ಕಾಲೇಜು ಪ್ರಾಂಶುಪಾಲರೊಬ್ಬರು ಪ್ರತ್ಯಕ್ಷ ನೋಡಿದ್ದರಂತೆ 1960 ರಲ್ಲಿ ಅವುಗಳಲ್ಲಿ ಹೆಚ್ಚಿನದ್ದು ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿದ್ದಂತೆ.   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/bxPze2r8Xqo?si=xAH4I5pGhk5RoWzQ

Blog number 2221. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಪಡೆದ ಚಾಲೆಂಜಿಂಗ್ ಸ್ಟಾರ್ ದಶ೯ನ್ ಅಲ್ಲಿನ ಜನಸಾಮಾನ್ಯರ ಜೊತೆಯ ಒಡನಾಟ ಹಣ ಖ್ಯಾತಿಯ ಉತ್ತುಂಗಕ್ಕೆ ಏರಿದರೂ ಮರೆಯಲಿಲ್ಲ.

#ಸಾಗರ_ತಾಲ್ಲೂಕಿನ_ನೀನಾಸಂ_ಹೆಗ್ಗೋಡಿನ_ವಿದ್ಯಾರ್ಥಿ_ದರ್ಶನ್_ತೂಗುದೀಪ್ #ಹದಿನಾರು_ತಿಂಗಳ_ಹೆಗ್ಗೋಡಿನ_ವಾಸ_ವ್ಯಾಸಂಗ_ಹೇಗಿತ್ತು? #ಕನ್ನಡದ_ಚಲನಚಿತ್ರರಂಗದ_ಸೂಪರ್_ಸ್ಟಾರ್_ಆದಮೇಲೆ? #ಇಲ್ಲಿನ_ದರ್ಶನ್_ಪರಮಾಪ್ತರು_ಯಾರ್ಯಾರು?     ಕನ್ನಡದ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.    ವಿರೋದಿಗಳು ಮಾತ್ರ ಗೂಳಿ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಗಾದೆ ನೆನಪು ಆಗುವಂತೆ ಮಾಡಿದ್ದಾರೆ.    ಈಗ ಇವರ ಮೇಲಿನ ಅಪರಾದ ನ್ಯಾಯಾಲಯದ ತೀರ್ಪಿನ ಮೇಲೆ ಅ೦ತ್ಯದ ಪಲಿತಾಂಶಕ್ಕೆ ಕಾಯುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಚರ್ಚೆ ನಡೆಯುತ್ತಿದೆ.    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರ ನಿನಾಸಂ ಸಂಸ್ಥೆಯಲ್ಲಿ 10 ತಿಂಗಳ ನಟನಾ ತರಬೇತಿ ಮತ್ತು 6 ತಿಂಗಳ ನೀನಾಸಂ ತಿರುಗಾಟ ಎಂಬ ಶಿಭಿರಾರ್ಥಿಗಳು ರಾಜ್ಯಾದ್ಯಂತ ನೀಡುವ ಪ್ರದರ್ಶನಗಳಲ್ಲಿ ದರ್ಶನ್ ಭಾಗವಹಿಸಿದ್ದರು.    ಸುಮಾರು 16 ತಿಂಗಳು ಮಲೆನಾಡಿನ ಹೆಗ್ಗೋಡಿನಲ್ಲಿ ತಮ್ಮ ರಂಗ ತರಬೇತಿಯಲ್ಲಿ ದರ್ಶನ್ ವಿಧೇಯ ವಿದ್ಯಾರ್ಥಿ ಆಗಿದ್ದರು.   ಅವರ ಹೆಚ್ಚು ಒಡನಾಟ ಮತ್ತು ಗೆಳೆತನ ಅತ್ಯಂತ ಸಾಮಾನ್ಯ ಜನರ ಜೊತೆ ಜೊತೆಗೆ ಇತ್ತು ಎನ್ನುವುದು ...

Blog number 2220. ದಿನಾಂಕ 25-ಜೂನ್ -2024 ಮಂಗಳವಾರದಂದು ನಮ್ಮ ಊರಾದ ಯಡೇಹಳ್ಳಿ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ನಡೆದ ಅಂಗಾರಕ ಸಂಕಷ್ಟ ಹರ ಚತುರ್ಥಿ

#ನಮ್ಮ_ಊರಿನ_ಪುರದೈವ_ಶ್ರೀವರಸಿದ್ದಿವಿನಾಯಕ_ಸ್ವಾಮಿ #ದೇವಾಲಯದಲ್ಲಿ_ಮಂಗಳವಾರ_ನಡೆದ_ಅಂಗಾರಕ_ಸಂಕಷ್ಟಹರ #ಸಾಮೂಹಿಕ_ಗಣ_ಹೋಮ_ರಾತ್ರಿ_ಸಂಕಷ್ಟಹರ_ಪೂಜೆ #ಚಂದ್ರೋದಯದ_ನಂತರ_ಮಹಾಮಂಗಳಾರತಿ #ಪ್ರಸಾದ_ವಿನಿಯೋಗ_ನಡೆಯಿತು https://youtube.com/shorts/_ukosSWSJjg?si=T2yv-YUiku967MkT

Blog number 2219. ಬಿದನೂರು ನಗರದ ದೇವಗಂಗೆಯ ಕೆಳದಿ ರಾಜರ ಅಂತಃಪುರದ ರಾಣಿವಾಸಿಗಳಿಗೆ ನಿರ್ಮಿಸಿರುವ ನೈಸರ್ಗಿಕ ಈಜುಕೊಳ ಸಂಕೀರ್ಣ ಡಿಜಿಟಲ್ ಮಾಧ್ಯಮದಲ್ಲಿ

#ನಾನು_ಈಜು_ಕಲಿತ_ಕೊಳ_ಇದು #ಕೆಳದಿ_ಅರಸರ_ದೇವಗಂಗೆ_ಈಜು_ಕೊಳಗಳು #ಜಲ_ವಿಜ್ಞಾನಿಗಳಿಗೆ_ನೈಸಗಿ೯ಕ_ಈಜು_ಕೊಳದ_ಆದುನಿಕ_ಪ್ರತಿಪಾದಕರಿಗೆ  #ಮತ್ತು_ಇತಿಹಾಸ_ಪ್ರಿಯರಿಗೆ_ಕೈ_ಬೀಸಿ_ಕರೆಯುತ್ತಿರುವ_ದೇವಗಂಗೆ.   #ಬಿದನೂರುನಗರದ_ಈ_ಸು೦ದರ_ಈಜು_ಕೊಳಗಳ_ಸಂಕೀಣ೯ಕ್ಕೆ  #ಒಮ್ಮೆಯಾದರೂ_ಬೇಟಿ_ನೀಡಿ. #ಈ_ಈಜು_ಕೊಳದ_ಬಗ್ಗೆ_ಡಿಜಿಟಲ್_ಮಾಧ್ಯಮ_ಖ್ಯಾತ_ಇತಿಹಾಸ #ಸಂಶೋದಕ_ಅಂಬ್ರಯ್ಯಮಠ್_ವಿವರಣೆಯ_ಎಪಿಸೋಡುಗಳನ್ನ_ಪ್ರಕಟಿಸುತ್ತಿದೆ.       ಬಿದನೂರು ನಗರ ಸಮೀಪದ ಕೆಳದಿ ಅರಸರು ನಿರ್ಮಿಸಿರುವ ದೇವಗಂಗೆ ಕೊಳಗಳು ಸಂಶೋದಕರಿಗೆ, ಜಲ ತಜ್ಞರಿಗೆ ಮತ್ತು ಪ್ರವಾಸಿಗಳಿಗೆ ಕೈ ಬೀಸಿ ಕರೆಯುತ್ತಿದೆ.      ಜಲ ವಿಜ್ಞಾನಿಗಳಿಗೆ, ನೈಸಗಿ೯ಕ ಈಜು ಕೊಳದ ಆದುನಿಕ ಪ್ರತಿಪಾದಕರಿಗೆ ಮತ್ತು ಇತಿಹಾಸ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿರುವ ದೇವಗಂಗೆ.           ಸಂಶೋದಕ ಅಂಬ್ರಯ್ಯಮಠ್ ವಿವರಣೆಯ ಎಪಿಸೋಡುಗಳನ್ನ ಪ್ರಕಟಿಸುತ್ತಿದೆ.   ಇಲ್ಲಿ ಕ್ಲಿಕ್ ಮಾಡಿ ನೋಡಿ  1. https://youtu.be/ChIi8XZ9R3A?si=T4L5zQ-Da_1L9ClC. 2. https://youtu.be/PJcuDtqMYf4?si=YlUxbwLR0rFBawQa      ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹ...

2218.ಹತ್ತು ಅಡಿ ಎತ್ತರದ ಸೇವಂತಿಕೆ ಗಿಡ

#ಸೇವಂತಿಗೆ_ಗಿಡದ_ಗರಿಷ್ಟ_ಎತ್ತರ_ಎಷ್ಟು? #ನಮ್ಮ_ಮನೆಯ_ಸೇವಂತಿಗೆ_ಗಿಡ_ಮೂರು_ಮೀಟರ್_ಗಿಂತ_ಹೆಚ್ಚು_ಎತ್ತರ_ಆಗಿದೆ. https://youtube.com/shorts/-d6joU1oSEo?si=wWLZnAJKVcDeaxPg    ಸೇವಂತಿಗೆ ಹೂವಿಗೆ ಆಡುಭಾಷೆಯಲ್ಲಿ ಸೇವಂತಿಗೆ, ಶಾವಂತಿಗೆ, ಶ್ಯಾಮಂತಿಗೆ ಇತ್ಯಾದಿ ಹೆಸರುಗಳಿವೆ.     ಸೇವಂತಿಗೆ ಹೂವಿನಲ್ಲಿ ಅನೇಕ ಬಣ್ಣ, ಆಕಾರಗಳಿದ್ದರೂ, ಸಾಧಾರಣವಾಗಿ ಕಂಡು ಬರುವುದು ಹಳದಿ ಬಣ್ಣದ ಹೂವು.            ಇತರ ಬಣ್ಣಗಳು - ಬಿಳಿ, ಕೆಂಪು, ನೇರಳೆ, ತಿಳಿ ಗುಲಾಬಿ, ತಿಳಿಗೆಂಪು ಇತ್ಯಾದಿ.       ಹಬ್ಬ-ಹರಿದಿನಗಳಲ್ಲಿ ಸೇವಂತಿಗೆ ಹೂವಿನ ಬಳಕೆ ಜಾಸ್ತಿ. ಹೂಗೊಂಚಲು(ಬೊಕೆ) ತಯಾರಿಕೆಯಲ್ಲೂ ಸೇವಂತಿಗೆ ಸೂಕ್ತ ಸ್ಥಾನ ಪಡೆದಿದೆ.    ಸೇವಂತಿಗೆ ಗಿಡ ಗರಿಷ್ಟ ಒಂದು ಮೀಟರ್ ಎತ್ತರ ಬೆಳೆಯುತ್ತದೆ ಎನ್ನುತ್ತಾರೆ.    ನಮ್ಮ ಮನೆಯ ಈ ಸೇವಂತಿಗೆ ಗಿಡ ಮೂರು ಮೀಟರ್ ಗಿಂತ ಎತ್ತರಕ್ಕೆ ಬೆಳೆದಿದೆ.

Blog number 2217. ಆನಂದಪುರಂನಿಂದ ಸಿಂಹದಾಮದವರೆಗೆ ಹೊನ್ನಾವರ ಚಿತ್ತೂರು ರಾಷ್ಟ್ರೀಯ ಹೆದ್ದಾರಿ 69 ನಾಲ್ಕು ಲೇನ್ ರಸ್ತೆ.

#ಆನಂದಪುರಂನಿಂದ_ಶಿವಮೊಗ್ಗ_ಸಿಂಹದಾಮದ_ತನಕ #ಚತುಷ್ಪಾದ_ರಾಷ್ಟ್ರೀಯ_ಹೆದ್ದಾರಿ_ಎಲ್ಲೆಲ್ಲಿಂದ_ಮಾಹಿತಿ #ಹೊನ್ನಾವರ_ಚಿತ್ತೂರು_ರಾಷ್ಟ್ರೀಯ_ಹೆದ್ದಾರಿ_69 #ಶಿವಮೊಗ್ಗ_ಸಿಂಹದಾಮದಿಂದ_ಆನಂದಪುರಂವರೆಗೆ_ನಾಲ್ಕು_ಲೇನ್ #ಅಪಘಾತ_ವಲಯದ_ಬ್ಲಾಕ್_ಸ್ಪಾಟ್_ಗಳಾದ #ಗಿಳಾಲಗುಂಡಿ_ಕುಣೇಹೊಸೂರು_ತುಪ್ಪೂರು_ಚೋರಡಿ_ಸ್ಪಾಟ್ #ಬದಲಿಸಿ_ನೇರ_ಮಾಡಿದ್ದಾರೆ #ಕುಂಸಿಗೆ_ಬೈಪಾಸ್_ಆಗಲಿದೆ #ಚೊರಡಿ_ತುಪ್ಪೂರು_ಅಯನೂರು_ರಸ್ತೆ_ಅಗಲಿಕರಣ   ನಿನ್ನೆಯ ಲೇಖನದಲ್ಲಿ ಆನಂದಪುರOನಿಂದ ಶಿವಮೊಗ್ಗ ಮಾರ್ಗದ ಚೆನ್ನಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ 69 (ಹೊನ್ನಾವರ ಚಿತ್ತೂರು) 4 ಲೇನ್ ಕಾಮಗಾರಿ ಮಾಹಿತಿ ದಾಖಲಿಸಿದ್ದೆ.   ಈ ಲೇಖನದಲ್ಲಿ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮಪಂಚಾಯಿತಿಯ ಚೆನ್ನಕೊಪ್ಪದಿಂದ ನೇರವಾಗಿ ರಾ.ಹೆ. ತಂಗಳವಾಡಿ ರಸ್ತೆಯಿಂದ ಕೊಲ್ಲಿಬಚ್ಚಲು ಆಣೆಕಟ್ಟಿನ ಆಚೆ ಬದಿಯಿಂದ ಕುಣೇಹೊಸೂರು ನೇರವಾಗಿ ಸೇರಲಿದೆ.   ಇದರಿಂದ ಅಪಘಾತದ ಬ್ಲಾಕ್ ಸ್ಪಾಟ್ ಆಗಿದ್ದ ಗಿಳಾಲಗುಂಡಿ ಕ್ರಾಸ್ ಬದಲಾಯಿಸಲಾಗಿದೆ.   ಕುಣೇಹೊಸೂರು ತುಪ್ಪೂರು ಮಧ್ಯದ ದೀರ್ಘ ತಿರುವಾದ ಇನ್ನೊಂದು ಬ್ಲಾಕ್ ಸ್ಪಾಟ್ ಬದಲಿಸಿ ಕುಣೇಹೊಸೂರು- ತುಪ್ಪೂರು - ಜೋರಡಿ ನೇರ ಮಾರ್ಗ ಮಾಡಲಾಗಿರುವುದರಿಂದ ತುಪ್ಪೂರು ಚೊರಡಿಯಲ್ಲಿ ರಾ.ಹೆ. ನಾಲ್ಕು ಲೇನ್ ಮಾರ್ಗಕ್ಕಾಗಿ ರಸ್ತೆ ಅಗಲಿಕರಣ ಆಗಲಿದೆ.    ಚೊರಡಿಯಿಂ...

Blog number 2216. ಬರದವಳ್ಳಿ ರಾಮಪ್ಪ ನನ್ನ ಆತ್ಮೀಯರು ಅವರ ಪ್ರತ್ರ ಅಶೋಕ್ ಮರ್ಗಿ ಮುಂದಿನ ತಲೆಮಾರಿನ ಉದಯೋನ್ಮುಖ ರಾಜಕಾರಣಿ ಇವತ್ತು ನನ್ನ ಅತಿಥಿ.

#ಇವತ್ತಿನ_ನನ್ನ_ಅತಿಥಿಗಳು #ಅಶೋಕಮರ್ಗಿ_ಮತ್ತು_ಕುಗ್ವೆಸುಧಾಕರ್ #ದರ್ಮಸ್ಥಳದಿಂದ_ವಾಪಾಸು_ಬರುವಾಗ_ಭೇಟಿ    ಸಾಗರ ತಾಲ್ಲೂಕ್ ಪಂಚಾಯ್ತಿಯಲ್ಲಿ ಐದು ವರ್ಷ ಉಪಾಧ್ಯಕ್ಷರಾಗಿ ಆಡಳಿ ನಡೆಸಿ ಹೆಸರು ಗಳಿಸಿದ್ದರು ಅವರ ಜೀವನದ ವಿಶೇಷ ಸಂದರ್ಭದ ಕಾರಣದಿಂದ ಧರ್ಮಸ್ಥಳಕ್ಕೆ ಹೋಗಿದ್ದವರು ವಾಪಾಸಾಗುವಾಗ ಜಿಲ್ಲಾ ಕಾಂಗ್ರೇಸಿನ ಪ್ರಧಾನ ಕಾರ್ಯದರ್ಶಿ ಕುಗ್ವೆ ಸುಧಾಕರ್ ಜೊತೆ ನನ್ನ ಕಛೇರಿಗೆ ಬಂದಿದ್ದರು.    ಇವರ ತಂದೆ ರಾಮಪ್ಪ ನನ್ನ ಆತ್ಮೀಯರು 1995- 2000 ದ ಅವದಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನ್ನ ಎಲ್ಲಾ ಹೋರಾಟಗಳಿಗೆ ಜೊತೆ ಆದವರು.    ಅಶೋಕ್ ರಾಜಕಾರಣದ ಚಾಣಕ್ಷತನ ಅದರ ಒಳಗುಟ್ಟು ಚೆನ್ನಾಗಿ ತಿಳಿದಿದ್ದಾರೆ ಬರಲಿರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ಬಂದರೆ, ಮದುಬಂಗಾರಪ್ಪ ಅವಕಾಶ ನೀಡಿದರೆ ಸ್ಪರ್ದಿಸುವುದಾಗಿ ತಿಳಿಸಿದರು.    ಅವರ ಜೀವನದ ಶುಭ ಸಂದರ್ಭದ ವಿಶೇಷ ದಿನವಾದ ಇಂದು ಅವರಿಗೆ ಅವರ ಮುಂದಿನ ಜೀವನ ಸುಖಮಯವಾಗಲಿ,ಉಜ್ವಲವಾಗಲಿ ಮುಂದಿನ ಅವರ ರಾಜಕೀಯ ಜೀವನದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಿ ಬಿಳ್ಕೊಟ್ಟೆ.

Blog number 2215.ಬೆಳ್ಳಿ ಗಟ್ಟಿಗಳು 200 ಟನ್ ಕಲ್ಕತ್ತಾದಿಂದ ಇಂಗ್ಲೇಂಡ್ ಗೆ ಸಾಗಿಸುತ್ತಿದ್ದ ಎಸ್.ಎಸ್. ಗೇರುಸೊಪ್ಪಾ ಹಡಗು ಮುಳುಗಿಸಿದ ಕಥೆ.

#ಬೆಳ್ಳಿ_ತುಂಬಿದ್ದ_ಗೇರುಸೊಪ್ಪ_ಹಡಗು_ಮುಳುಗಿದ್ದು_ಹೇಗೆ #ಇಡೀ_ಹಡಗಿನಲ್ಲಿದ್ದ_85_ಸಿಬ್ಬಂದಿಯಲ್ಲಿ_ಬದುಕಿದ್ದು_ಒಬ್ಬನೆ #ರಿಚರ್ಡ್_ಐರೆಸ್_ಎಂಬ_ಎರಡನೆ_ಅಧಿಕಾರಿ #ಜರ್ಮನ್_ನಾಜಿ_ಸೈನ್ಯ_ಟಾರ್ಪೋಡೋ_ಹಾರಿಸಿ_ಗೇರುಸೊಪ್ಪ_ಹಡಗು_ಮುಳುಗಿಸಿತು. https://youtu.be/PrDYED4wiQs?si=KdbLfzaJZeWYqBm9  1940 ರ ಅಂತ್ಯದ ವೇಳೆಗೆ ಎಸ್. ಎಸ್. ಗೇರುಸೊಪ್ಪ ಹಡಗು ಕಲ್ಕತ್ತಾದಿಂದ ಯುಕೆಗೆ ಪ್ರಯಾಣ ಬೆಳೆಸಿತು,ಜನವರಿ 1941 ರ ಮೊದಲ ವಾರದಲ್ಲಿ ಹಡಗಿನ ಸಿಬ್ಬಂದಿ ದಕ್ಷಿಣ ಆಫ್ರಿಕಾದ ಡರ್ಬನ್ ಮತ್ತು ಕೇಪ್ ಟೌನ್‌ಗೆ ಸಂದೇಶ ಕಳಿಸಿದಲ ,ಜನವರಿ 22 ರಂದು ಹಡಗು ಸಿಯೆರಾ ಲಿಯೋನ್‌ನಲ್ಲಿರುವ ಫ್ರೀಟೌನ್‌ಗೆ ಬಂದರು ತಲುಪಿತು.    ಅಲ್ಲಿ ಅವರು ಯುಕೆಗೆ ಬೆಂಗಾವಲು ಪಡೆಯನ್ನು ಸೇರಲು ಕಾಯುತ್ತಿದ್ದರು, ಗೇರುಸೊಪ್ಪ ಹಡಗಿನಲ್ಲಿದ್ದ ಸರಕು 2,600 ಟನ್ ಪಿಗ್ ಐರನ್, 1,765 ಟನ್ ಚಹಾ, 2,369 ಟನ್ ಸಾಮಾನ್ಯ ಸರಕು, 200 ಟನ್ ಬೆಳ್ಳಿಯ ಗಟ್ಟಿಗಳು ಮತ್ತು ನಾಣ್ಯಗಳು ಮತ್ತು ಅಂಚೆ ರವಾನೆಯನ್ನು ಒಳಗೊಂಡಿತ್ತು.     ಬೆಳ್ಳಿಯು 1941 ರಲ್ಲಿ £600,000 ಮೌಲ್ಯದ್ದಾಗಿತ್ತು ಮತ್ತು ಹೊಸ ನಾಣ್ಯಗಳನ್ನು ಮುದ್ರಿಸಲು ರಾಯಲ್ ಮಿಂಟ್‌ ಉದ್ದೇಶಿಸಲಾಗಿತ್ತು.    ಹಡಗಿನ ಸಿಬ್ಬಂದಿಯಲ್ಲಿ 11 ಇಂಗ್ಲೀಷ್ ಅಧಿಕಾರಿಗಳು, ಉಳಿದ ಸಿಬ್ಬಂದಿಗಳು ಮತ್ತು DEMS ಗನ್ನರ್‌ಗಳಲ್ಲಿ 84 ಲಸ್ಕರ್ಗಳ...

Blog number 2214. ಆನಂದಪುರಂನಲ್ಲಿ ಎರೆಡು ರಾಷ್ಟ್ರೀಯ ಹೆದ್ದಾರಿಗಳು, ಬೈಪಾಸ್, ಪ್ಲೈಒವರ್ ನಿರ್ಮಾಣ ಆಗಲಿದೆ.

#ಆನಂದಪುರಂನಲ್ಲಿ_ಎರೆಡು_ರಾಷ್ಟ್ರೀಯ_ಹೆದ್ದಾರಿಗೆ_ಬೈಪಾಸ್ #ಎರೆಡೂ_ರಾಹೆ_ವಿಂಗಡಿಸುವ_ಬೃಹತ್_ಪ್ಲೈಒವರ್ #ರಾಣಿಬೆನ್ನೂರು_ಬೈಂದೂರು_ರಾಹೆ_766ಸಿಗೆ_ಬೈಪಾಸ್  #ಹೊನ್ನಾವರ_ಚಿತ್ತೂರು_ರಾಹೆ_69ಕ್ಕೆ_ಬೈಪಾಸ್ #ಕನಾ೯ಟಕದಲ್ಲಿ_14_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ  #ಐದು_ಸ್ಥಳದಲ್ಲಿ_ಮಾತ್ರ_ಎರೆಡು_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ. #ಅದರಲ್ಲಿ_ನಮ್ಮ_ಆನಂದಪುರಂ_ಒಂದು  ನ್ಯಾಷನಲ್ ಹೈವೇ ಅಥಾರಿಟಿ ಆನಂದಪುರಂನಲ್ಲಿ ಹಾದು ಹೋಗುವ NH 766 C (ರಾಣಿಬೆನ್ನೂರು ಬೈಂದೂರು) ಮತ್ತು NH 69 (ಹೊನ್ನಾವರ ಚಿತ್ತೂರು) ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ಎಲ್ಲಾ ರೀತಿಯ ತಯಾರಿ ನಡೆಸಿ ಈಗ ಡಿಪಿಆರ್ ಆಗಿದೆ.      ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್ (DPR) ನನ್ನ ಟೀಬಲ್ ಮೇಲೆ ಇದೆ ಇದನ್ನ ವಿವರವಾಗಿ ನೋಡಿದ್ದೇನೆ ಅದರ ಫೋಟೋಗಳನ್ನ ಲಗತ್ತಿಸಿದ್ದೇನೆ ನೋಡಿ.    ಈ ಬೈಪಾಸ್ ಜೋಡಿ ರಸ್ತೆ ದಾಸಕೊಪ್ಪ ವೃತ್ತದ ಕಮಲಾಕ್ಷ ನಾಯಕರ ಜಾಗದಿಂದ ಗೌರಿಕೆರೆ ಕೆಳಗಿನ ಗುಂಡಿಬೈಲು ಜಮೀನಿನಲ್ಲಿ ಸಾಗಿ, ರಂಗನಾಥ ಸ್ವಾಮಿ ದೇವಾಲಯದ ಕೆಳಗಿನ ಕೆ.ಎಂ.ಎಸ್ ಲೇಔಟ್ ಗೆ ತಾಗಿ ಯಡೇಹಳ್ಳಿ ಕೆರೆ ಕೆಳಗಿನ ಗುಂಡಿಬೈಲು ಜಮೀನಿನ ಮುಖಾಂತರ ಯಡೇಹಳ್ಳಿ ಆಚಾಪುರ NH 69ರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೂವಪ್ಪಣ್ಣರ ಬಾವನ ವರ್ಕ್ ಶಾಪ್ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ NH 69 ಕ್ರಾಸ್ ಮಾ...

Blog number 2213. ಛತ್ರಪತಿ ರಾಜಾರಾಮ ಮಹಾರಾಜರು ಕೆಳದಿ ರಾಣಿ ಚೆನ್ನಮ್ಮರ ಆಶ್ರಯದಲ್ಲಿ ತಂಗಿದ್ದ ರಹಸ್ಯ ಅರಮನೆ ಬಿದನೂರು ನಗರದ ಅರಮನೆ ಕೊಪ್ಪದಲ್ಲಿದೆ.

#ಬಿದನೂರು_ನಗರ_ಸಮೀಪದ_ಅರಮನೆಕೊಪ್ಪದ_ರಹಸ್ಯ_ಅರಮನೆ #ಛತ್ರಪತಿಶಿವಾಜಿಮಹಾರಾಜರ_ಮಗ_ಛತ್ರಪತಿರಾಜಾರಾಮಮಹಾರಾಜ #ಕೆಳದಿ_ರಾಣಿಚೆನ್ನಮ್ಮ_ಆಶ್ರಯದಲ್ಲಿದ್ದದ್ದು_ಈ_ರಹಸ್ಯ_ಅರಮನೆಯಲ್ಲಿ #ಖ್ಯಾತ_ಮರಾಠಿ_ಟೀವಿ_ಎಬಿಪಿ_ಮಾಜಾ_ಡಾಕ್ಯುಮೆಂಟರಿ_ಮಾಡಿ_21_ಮಾಚ್೯_2021_ಪ್ರಸಾರ_ಮಾಡಿದೆ. #ಈಗ_ಶಿವಮೊಗ್ಗ_ಜಿಲ್ಲೆ_ಇತಿಹಾಸ_ಎಕ್ಸ್_ಫ್ಲೋರ್_ಮಾಡುತ್ತಿರುವ #ಖ್ಯಾತ_ಕನ್ನಡದ_ಡಿಜಿಟಲ್_ಮಾಧ್ಯಮ_ಇದನ್ನು_ಸರಣಿಯಾಗಿ_ಪ್ರಕಟಿಸುತ್ತಿದೆ #ಖ್ಯಾತ_ಇತಿಹಾಸ_ಸಂಶೋದಕ_ಅಂಬ್ರಯ್ಯಮಠ_ಮತ್ತು_ಈ_ಅರಮನೆಯ_ವಾಸಿ #ಮಂಜುನಾಥ_ಭಟ್ಟರು_ವಿವರಣೆ_ನೀಡಿದ್ದಾರೆ #ಇತಿಹಾಸ_ಆಸಕ್ತರಿಗಾಗಿ_ಮಾಹಿತಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಚೆನ್ನಗಿರಿ ಸಮೀಪದ ಹೊದಿಗೆರೆಯಲ್ಲಿದೆ, ಇವರ ಮಗ ಛತ್ರಪತಿ ರಾಜಾರಾಮ ಮಹಾರಾಜರನ್ನು ಕೆಳದಿ ರಾಣಿ ಚೆನ್ನಮ್ಮ ಆಶ್ರಯ ನೀಡಿ ರಹಸ್ಯವಾಗಿ ಬಚ್ಚಿಟ್ಟ ಮನೆ ಬಿದನೂರು ನಗರದ ಸಮೀಪದ ಅರಮನೆ ಕೊಪ್ಪದಲ್ಲಿದೆ.    ವಿಶೇಷ ಅಂದರೆ ಬಿದನೂರಿನಿಂದ 17 ಕಿಮಿ ದೂರದ ಮತ್ತಿ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಕೊಪ್ಪ ಎಂಬಲ್ಲಿ (ಕೊಲ್ಲೂರು ಮಾಗ೯ದಲ್ಲಿ) ಹಾಲಿ ಮಂಜುನಾಥ ಭಟ್ಟರ ಸುಪದಿ೯ಯಲ್ಲಿರುವ ಬೃಹತ್ ಮನೆ (ಒಂದು ಕಾಲದಲ್ಲಿ ಅರಮನೆ) ಯಲ್ಲಿ ಸುಮಾರು ಎರೆಡು ವರ್ಷ ಛತ್ರಪತಿ ರಾಜಾರಾಮ ಮಹಾರಾಜರನ್ನ ರಾಣಿ ಚೆನ್ನಮ್ಮ ರಹಸ್ಯವಾಗಿ ರಕ್ಷಿಸಿದ್ದಳು, ಈ ಕಾಲದಲ್ಲಿಯೆ ಛತ್ರಪತಿ ರಾಜಾರಾಮರು ...