Skip to main content

Posts

Showing posts from March, 2023

Blog number 1357. ಎಲ್ ಕೆ ಜಿ ಯಲ್ಲಿ ಗ್ರಾಜ್ಯುಯೇಷನ್ ಸೆರಮನಿ ಮುಂದೆ ಯು ಕೆ ಜಿ ಯಲ್ಲಿ ಡಾಕ್ಟರೇಟ್ ನೀಡುವ ಸೆರಮನಿ ಕೂಡ ಬರಬಹುದು.

ಎಲ್.ಕೆ.ಜಿ.ಯಲ್ಲಿ ಗ್ರಾಜುಯೇಶನ್ ಸೆರಮನಿ ಅಂತೆ!? ಮುಂದೊ೦ದು ದಿನ ಪಿ.ಹೆಚ್.ಡಿ.ಕೂಡ ಎಲ್.ಕೆ.ಜಿ.ಯಲ್ಲಿ ಹಂಚುವ ದಿನ ಬರಬಹುದು. ಹಣ ಮಾಡುವವರ ಹಪಾಹಪಿಗೆ ಬಲಿಯಾಗುವ ಮದ್ಯಮ ವಗ೯ದ ಪೋಷಕರಿಗೆ ಬುದ್ಧಿ ಹೇಳುವವರಾರು? ಈ ಮಗುವಿನ ತಾಯಿ ನಮ್ಮ ಊರಿನ ಅಂಗನವಾಡಿ, ಸಕಾ೯ರಿ ಶಾಲೆಯಲ್ಲಿ ಓದಿ, ತಂದೆಯ ಅನುಕ೦ಪದ ಆಧಾರದ ಮೇಲೆ ಸಕಾ೯ರಿ ನೌಕರಿ ಸಿಕ್ಕಿದ ಮೇಲೆ ಅವಳ ಹಣ ಖಚು೯ ಆಗುತ್ತಿರುವ ಮಾಗ೯ವಿದು. ಇಂತಾದೆಲ್ಲ ವಿರೋದಿಸಬೇಕ? ಒಪ್ಪಿಕೊಳ್ಳಬೇಕಾ?

Blog number 1356. ಆನಂದಪುರಂ ಇತಿಹಾಸ ಸಂಖ್ಯೆ - 90. ಆನಂದಪುರಂ ಪಂಚಾಯತ್ ಕಛೇರಿಯಲ್ಲಿ ಸಾಲಮೇಳ ಕಾರ್ಯಕ್ರಮ ನಡೆಸಿದ ಆಗಿನ ಕೇಂದ್ರ ಹಣಕಾಸು ಮಂತ್ರಿ ಜನಾರ್ದನ ಪೂಜಾರರು. ಜನಾರ್ದನ ಪೂಜಾರರ ಆತ್ಮಚರಿತ್ರೆ ಸಾಲ ಮೇಳದ ಸಂಗ್ರಾಮದಲ್ಲಿ ಬ೦ಗಾರಪ್ಪರ ತೇಜೋವಧೆ ಮಾಡುವ ಅಧ್ಯಾಯ ಇದೆ ಎಂಬ ಗಾಳಿಸುದ್ದಿ ಹಬ್ಬಿತ್ತು.

  ಜನಾರ್ದನ ಪೂಜಾರಿ ಅವರು ಬರೆದ ಅವರ ಆತ್ಮಚರಿತ್ರೆಯಲ್ಲಿ ಬಂಗಾರಪ್ಪರ ತೇಜೋವಧೆ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು.  ಬಂಗಾರಪ್ಪರ ಕುಟುಂಬದಲ್ಲಿ ಅವರ ಪುತ್ರರೋರ್ವರು ಜನಾರ್ದನ ಪೂಜಾರರ ಈ ಆತ್ಮಚರಿತ್ರೆ ಸುಡುವ ಬೆದರಿಕೆ ಪತ್ರಿಕೆಗಳಲ್ಲಿ ವರದಿ ಆಗಿತ್ತು.   ಪೂಜಾರರು ತಮ್ಮ ಆತ ಚರಿತ್ರೆಯಲ್ಲಿ ಮೂರು ಪುಟಗಳಲ್ಲಿ ಬಂಗಾರಪ್ಪರ ಬಗ್ಗೆ ಉಲ್ಲೇಖ ಮಾಡಿದ್ದಾರೆ.   ಈ ಮೂರು ಪುಟಗಳಲ್ಲಿ ಜನಾದ೯ನ ಪೂಜಾರರ ಆತ್ಮಚರಿತ್ರೆಯಲ್ಲಿ S. ಬಂಗಾರಪ್ಪರ ಬಗ್ಗೆ ಏನು ಬರೆದಿದ್ದಾರೆ ನೋಡಿ   ಜನಾದ೯ನ ಪೂಜಾರರ ಆತ್ಮಚರಿತ್ರೆಯನ್ನ ಸಂಪಾದಿಸಿದವರು ಶ್ರೀ ಲಕ್ಷ್ಮಣ ಕೊಡಸೆ ಪ್ರಜಾವಾಣಿಯ ಹಿರಿಯ ವರದಿಗಾರರು ಮತ್ತು ನಮ್ಮ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಸೆಯವರು.       ಇದರಲ್ಲಿ ನನಗೇನು ವಿವಾದ ಅನ್ನಿಸಲಿಲ್ಲ ಮತ್ತು ಜನಾದ೯ನ ಪೂಜಾರರು ಎಲ್ಲಿಯೂ ಬಂಗಾರಪ್ಪನವರನ್ನ ತೇಜೋವದೆ ಮಾಡಿಲ್ಲ.   ನಿಮ್ಮ ಅಭಿಪ್ರಾಯ?

Blog number 1355.ಕೊರೊನಾ ಡೈರಿ - 4 . (31-3-20 20) ಲಾಕ್ ಡೌನ್ ಮದ್ಯ ಮಾರಾಟ ನಿಷೇದದ ಪರಿಣಾಮ

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 4.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 31 - ಮಾಚ್೯ - 2020 #ಮದ್ಯ ಪಾನ ಮಾರಾಟ ರದ್ದು ಸರಿಯೇ#       ಇವತ್ತಿಗೆ ಅಂದರೆ 31 ಮಾಚ್ 2020 ರ ಮಧ್ಯರಾತ್ರಿ ತನಕ ಇದ್ದ ಮದ್ಯ ಮಾರಾಟ ನಿಷೇದ ನಾಳೆ ಅಂದರೆ ಏಪ್ರಿಲ್ 1 ರಿಂದ ತೆರವು ಆಗಲಿದೆ ಎಲ್ಲಾ ಸಕಾ೯ರಗಳು ನಿಯಮಿತ ಸಮಯದಲ್ಲಿ ಮಧ್ಯಮಾರಾಟ ಮಾಡಲಿದೆ ಎಂಬ ಆಶಾಭಾವನೆ ಮದ್ಯಪಾನಿಗಳಲ್ಲಿ ಇತ್ತು.   ಇದಕ್ಕೆ ಪೂರಕವಾಗಿ ಕುಡುಕರು ಕೇರಳದಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದು, ಖ್ಯಾತ ಚಿತ್ರ ನಟರು ರಾಜಕಾರಣಿಗಳು ಮನೋವೈದ್ಯರು ಮದ್ಯಪಾನ ಸಂಪೂಣ೯ ನಿಲ್ಲಿಸುವುದರಿಂದ ಅನೇಕರ ಆರೋಗ್ಯ ಮಾರಕವಾಗಲಿದೆ ಎಂದು ಎಚ್ಚರಿಸಿದ್ದರು.   ಆದರೆ ಏಪ್ರಿಲ್ 14 ರ ವರೆಗೆ ಮದ್ಯ ಮಾರಾಟ ನಿಷೇದ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ.    ಕೇರಳ ಮತ್ತು ಪಂಜಾಬ್ ರಾಜ್ಯದಲ್ಲಿ ಅವಶ್ಯಕ (Essential) ಆಹಾರ ಪಟ್ಟಿಯಲ್ಲಿ ಮಧ್ಯ ಸ್ಥಾನ ಪಡೆದಿದೆ.   ಇಡೀ ದೇಶದಲ್ಲಿ 2019 ರಲ್ಲಿ ಅಬಕಾರಿ ಆಧಾಯ 90 ಸಾವಿರ ಕೋಟಿ ಅಂದರೆ ಇದರ ವ್ಯವಹಾರದ ವಿಸ್ತಾರ 100 ಲಕ್ಷ ಕೋಟಿಗೂ ಹೆಚ್ಚು ಇದರಿ೦ದ ಸೃಷ್ಟಿ ಆಗುವ ನೇರ ಮತ್ತು ಪರೋಕ್ಷ ಉದ್ಯೋಗ ಇನ್ನೆಷ್ಟು ಯೋಚಿಸಿ.   ಜನತಾ ಕಪ್ಯೂ೯ ಅಂದಾಗಲೆ ಪಂಜಾಬ್ ಮತ್ತು ಉತ್ತರ ಭಾರತೀಯ ರಾಜ್ಯದಲ್ಲಿ ಪ್ರತಿ ಕುಟು೦ಬಗಳು ಒಂದು ತಿಂಗಳಿಗೆ ಬೇಕಾದ ಮಧ್ಯ  ದಿನಸಿಯ ...

Blog number 1354. ಲೋಹದ ವಸ್ತು ಮತ್ತು ಪಾತ್ರೆಗಳ ಮೇಲೆ ಅಕ್ಷರ ಕೊರೆಯುವ ಎನ್ ಗ್ರೇವರ್ ಆ ಕಾಲದಲ್ಲಿ ಒಂದು ವಿಸ್ಮಯ ಯಂತ್ರವಾಗಿತ್ತು.

https://youtu.be/Dekt3ylz9Zo #ಕ್ಷುಲ್ಲಕವಾದ ಆದರೆ ಬಾಲ್ಯದಿಂದ ಕಾಡುವ ಕೆಲವು ಆಸೆಗಳು. #ಬುದ್ದಿ_ಬಂದ_50_ ವರ್ಷದ_ನಂತರ_ಈಡೇರಿತು #ಪಾತ್ರೆ_ಅಂಗಡಿಯಲ್ಲಿ_ಪಾತ್ರೆಗೆ_ಹೆಸರು_ಬರೆಯುವ_ ಎನ್ ಗ್ರೇವರ್ #ಇದೊಂದು_ವಿಸ್ಮಯ_ಪೆನ್_ಅನ್ನಿಸಿತ್ತು.     ನಾವೆಲ್ಲ 1970 ರಲ್ಲಿ ಒಂದನೇ ಕ್ಲಾಸಿಗೆ ಸೇರುವಾಗ ನಿದಾನವಾಗಿ ಸ್ಟೀಲ್ ಪಾತ್ರೆಗಳು ಪ್ರಾರಂಭ ಆಗಿತ್ತು, ಆಗ ಈಗಿನಂತೆ ತರಹೇವಾರಿ ಮೌಲ್ಡ್ ಇರಲಿಲ್ಲ ಒಂದೇ ರೀತಿಯ ಡಿಸೈನ್ ನ ತಟ್ಟೆ-ಲೋಟ - ತಂಬಿಗೆ ನಂತರ ಅಡಿಗೆ ಪಾತ್ರೆಗಳು ಬಂದರೂ ಗ್ರಾಮೀಣ ಪ್ರದೇಶದಲ್ಲಿ ಅದರ ಬಳಕೆ ಕಡಿಮೆ ಕಾರಣ ಸೌದೆ ಒಲೆಯ ಮೇಲೆ ಸ್ಟೀಲ್ ಪಾತ್ರೆ ಇಟ್ಟರೆ ಅದರ ಬುಡ ಸುಟ್ಟು ಕಪ್ಪಗಾಗುವುದು ಆಗಿನ ಕಾಲದ ಗೃಹಿಣಿಯರಿಗೆ ಇಷ್ಟವಿಲ್ಲದ ವಿಚಾರ ಆಗಿತ್ತು.    ಇದರ ಮದ್ಯದಲ್ಲಿ ಕಬ್ಬಿಣದ ಪಾತ್ರೆಗಳಿಗೆ ಸ್ಟೀಲ್ ಗಿಲೀಟು ಹಾಕಿ ಹಳ್ಳಿಗಳಲ್ಲಿ ರಾತ್ರೋ ರಾತ್ರಿ ಮಾರಾಟ ಮಾಡಿ ಮೋಸ ಮಾಡುವ ವ್ಯಾಪಾರಿಗಳೂ ಬರುತ್ತಿದ್ದರು.    ಕಂಚು - ಹಿತ್ತಾಳೆ ಪಾತ್ರ ಬಳಸುತ್ತ ಇದ್ದವರು ತಕ್ಷಣ ಅಲ್ಯೂಮಿನಿಯಂ ಅಥವ ಸ್ಟೀಲ್ ಪಾತ್ರೆಗೆ ಬದಲಾಗುತ್ತಿರಲಿಲ್ಲ ಆದರೆ ಆ ಕಾಲದ ಗೃಹಿಣಿಯರಿಗೆ ಅಡಿಗೆ ಮನೆಯಲ್ಲಿ ಸ್ಟೀಲ್ ಪಾತ್ರೆಗೆ ಬದಲಾಗಿ ಆಧುನಿಕ ನಾರಿ ಎಂಬ ಹೆಸರು ಗಳಿಸುವ ತವಕ ಇರುತ್ತಿತ್ತು.    ಆಗೆಲ್ಲ ಸಾಗರದಲ್ಲಿ ಒಂದೆರೆಡು ಸ್ಟೀಲ್ ಪಾತ್ರೆ ಅಂಗಡಿ ಮಾತ್ರ ಇತ್ತು ಅವುಗಳಿಗೆ ಬಿಡು...

Blog number 1353. ಕೊರಾನಾ ಲಾಕ್ ಡೌನ್ ಗಾಗಿ ....

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 3.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 30 - ಮಾಚ್೯ - 2020) #ಪೋಲಿಸರಶ್ರಮಜನಸ್ನೇಹಿಆಗಿದ್ದಿದ್ದರೆ #ಇದೊಂದುವಿಶ್ವದಾಖಲೆಆಗುತ್ತಿತ್ತು   ಸ್ವಾತಂತ್ರ ನಂತರದಲ್ಲಿ ಇಡೀ ದೇಶ ಇದೇ ಮೊದಲ ಬಾರಿ 21 ದಿನದ ಲಾಕ್ ಡೌನ್ ನಡೆದಿದೆ, ಇದರಿಂದ ದೇಶದ ಜನರ ಆರೋಗ್ಯಕ್ಕಾಗಿ ಕರೋನಾ ವೈರಸ್ ಸಾಮೂಹಿಕವಾಗಿ ಹರಡದಂತೆ ತಡೆಯುವ ಮಹತ್ವದ ಉದ್ದೇಶವಿದು.   ಬೃಹತ್ ದೇಶ ಮತ್ತು ಅತಿ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಇದು ಕಟ್ಟುನಿಟ್ಟಿನ ಆಚರಣೆಗೆ ಎಲ್ಲಾ ರಾಜ್ಯಗಳ ಪೋಲಿಸರ ಶ್ರಮ ಅಪಾರ ಆದರೆ ಇವರ ಶ್ರಮಕ್ಕೆ ಕಪ್ಪು ಚುಕ್ಕೆಯOತೆ ಕೆಲ ಪೋಲಿಸರ ಅತಿರೇಕದ ವತ೯ನೆ ಮಾತ್ರ ಪೋಲಿಸರ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಯಿತು.   ಇದರಿಂದ ದೇಶದಾದ್ಯ೦ತ ಪೋಲಿಸರ ವಿರುದ್ಧ ಜನ ಆಕ್ರೋಷ ವ್ಯಕ್ತ ಪಡಿಸಿದ್ದಾರೆ ಹಾಗಾಗಿ ಲಾಕ್ ಡೌನ್ ನ 5ನೇ ದಿನದಿ೦ದ ಕತ೯ವ್ಯ ನಿವ೯ಹಿಸುವ ಪೋಲಿಸರಿಗೆ ಲಾಠಿ ಇಲ್ಲದೆ ಕಾಯ೯ ನಿವ೯ಹಿಸಲು ಆದೇಶಿಸಲಾಯಿತು.    ಲಾಠಿ ಇಲ್ಲದ ಪೋಲಿಸರಿಂದ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಅಂತ ಬಾವಿಸಲಾಗಿತ್ತು ಆದರೆ ಇವತ್ತು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಲಾಠಿ ರಹಿತ ಪೋಲಿಸರ ಕತ೯ವ್ಯ ಯಶಸ್ವಿಯಾಗಿರುವುದಾಗಿ ಮತ್ತು  ಪೋಲಿಸರು ಇನ್ನೂ ಹೆಚ್ಚಿನ ಜನ ಸ್ನೇಹಿ ಆಗಿ ಕತ೯ವ್ಯ ನಿವ೯ಹಿಸಲು ತಿಳಿಸಿದ್...

Blog number 1351. ಪ್ರತಿ ಚುನಾವಣೆ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ - ಪಸಲು ರಕ್ಷಣೆಗಾಗಿ ಪಡೆದ ಲೈಸೆನ್ಸ್ ರಿವಾಲ್ವಾರ್ / ಬಂದೂಕು ಪೋಲಿಸ್ ಠಾಣೆಯಲ್ಲಿ ತಂದಿಡುವ ಅವೈಜ್ಞಾನಿಕ ಓಬಿರಾಯನ ಕಾಲದ ಪದ್ದತಿ ಬದಲಿಸಬಾರದೇಕೆ ?

#ರಾಜ್ಯ_ವಿಧಾನಸಭಾ_ಚುನಾವಣೆ_ಘೋಷಣೆ_ಆಗಿದೆ. #ಆತ್ಮರಕ್ಷಣೆ_ಪಸಲುರಕ್ಷಣೆ_ರಿವಾಲ್ವಾರ್_ಬಂದೂಕುಗಳು_ಪೋಲಿಸ್_ಠಾಣೆಯಲ್ಲಿ_ಸರೆಂಡರ್_ಮಾಡಬೇಕು. #ಚುನಾವಣೆ_ಬಂದಾಗ_ದರೋಡೆಕೊರರು_ಪಸಲು_ತಿನ್ನುವ_ಪ್ರಾಣಿಗಳು_ಸುಮ್ಮನಿರುತ್ತದ? #ಈ_ಅನಾಗರೀಕ_ಅವೈಜ್ಞಾನಿಕ_ಪದ್ಧತಿ_ರಾಜ್ಯದಲ್ಲಿ_ಈ_ಚುನಾವಣೆಯಲ್ಲಿಯೂ_ಜಾರಿ_ಇದೆ #ಕೇರಳಾ_ರಾಜ್ಯದ_ಉಚ್ಚ_ನ್ಯಾಯಾಲಯ_ಈ_ಪದ್ದತಿಗೆ_ತಡೆ_ಆಜ್ಞೆ_ನೀಡಿದೆ. #ಕರ್ನಾಟಕ_ರಾಜ್ಯದಲ್ಲಿ_ಯಾರೋಬ್ಬರೂ_ಈ_ಬಗ್ಗೆ_ಉಚ್ಚ_ನ್ಯಾಯಾಲಯದಲ್ಲಿ_ಈ_ಪದ್ದತಿ_ರದ್ದತಿಗೆ_ರಿಟ್_ಹಾಕಿಲ್ಲ.    ಆತ್ಮ ರಕ್ಷಣೆ ಮತ್ತು ಪಸಲು ರಕ್ಷಣೆಗಾಗಿ ರಿವಾಲ್ವಾರ್ ಅಥವ ಬಂದೂಕು ಲೈಸೆನ್ಸ್ ಪಡೆದವರಿಗೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಮ್ಮ ತಮ್ಮ ರಿವಾಲ್ವಾರ್ / ಬಂದೂಕುಗಳನ್ನು ಅವರ ವ್ಯಾಪ್ತಿಯ ಪೋಲಿಸ್ ಠಾಣೆಗೆ ತಂದು ಸರೆಂಡರ್ ಮಾಡಬೇಕೆಂಬ ಜ್ಞಾಪನಾ ಪತ್ರ ಪೋಲಿಸರು ನೀಡುತ್ತಾರೆ.   ಅದರಂತೆ ಆ ವ್ಯಾಪ್ತಿಯ ಜನರು ಪೋಲಿಸರ ಆದೇಶ ಪಾಲಿಸುತ್ತಾರೆ ಆದರೆ ಈ ಪದ್ಧತಿ ಸರಿಯಾ? ದರೋಡೆಕೋರರು - ಕಳ್ಳರು ತಮ್ಮ ವೃತ್ತಿಯನ್ನು ಚುನಾವಣೆಯಲ್ಲಿ ಬಿಡುತ್ತಾರಾ? ಚುನಾವಣಾ ಸಂದರ್ಭದಲ್ಲಿ ಬಂದೂಕು ಪೋಲಿಸ್ ಠಾಣೆಯಲ್ಲಿ ಡಿಪೋಸಿಟ್ ಮಾಡಿರುತ್ತಾರೆಂಬ ಮಾಹಿತಿ ಅವರಿಗೆ ಹೆಚ್ಚಿನ ದೈರ್ಯ ನೀಡದೇ ಇರುತ್ತದಾ?.    ಈ ಅವೈಜ್ಞಾನಿಕ ಪದ್ದತಿಯನ್ನು ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಲ್ಲಿ ತಡೆ ಹಿಡಿದಿರುವುದರಿಂದ ಅಲ್ಲ...

Blog number 1352. ರಾಜಕಾರಣದ ಒಳಗುಟ್ಟು - 1

#ಪ್ರಸಕ್ತ ರಾಜಕಾರಣದ ಒಳಗುಟ್ಟು # ( ಕೆ.ಅರುಣ್ ಪ್ರಸಾದ್ ಇವರಿಂದ ಲೋಕಸಭಾ ಚುನಾವಣಾ ಅಂಕಣ) ಭಾಗ 1. ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಚುನಾವಣಾ ತಯಾರಿ.    ನಿನ್ನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಸಂಸದ ರಾಘವೇಂದ್ರ ಅಜಿ೯ಸಲ್ಲಿಸಿದ್ದಾರೆ, ಕಾಲಕ್ಕೆ ತಕ್ಕ೦ತೆ ಬಾರೀ ಜನಸ್ತೋಮ ಸೇರಿಸಿದ್ದರು ಆದರೆ ಅವರ ತಂದೆ, ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸರು ಬರಬೇಕಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಹಾರಲಿಲ್ಲ, ರಾಘವೇಂದ್ರರ ಅಜಿ೯ ಪಾರಂ ದೇವರ ಪೀಠದಿಂದ ಕೆಳಕ್ಕೆ ಉರುಳಿತು ಎಂಬ ವಿಚಾರ ವಿರೋದಿ ಪಾಳ್ಯವಾದ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಸುದ್ದಿ ಮಾಡಿತು.   ಈ ಬಗ್ಗೆ ಪೇಟೆ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಚಚೆ೯ ಆಗಿದೆ.   ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ 1700 ಪೋಲಿOಗ್‌ ಸ್ಟೇಷ್ ನ್ಗಳಿರಬೇಕು (ಪ್ರತಿ ಚುನಾವಣೆಯಲ್ಲಿ ಇದು ಬದಲಾಗುತ್ತದೆ) ಬಿಜೆಪಿಯವರ ಸ೦ಘಟನೆ ಹೇಗಿದೆ ಅಂದರೆ ಪ್ರತಿ ಬೂತಿನಿಂದ ಕನಿಷ್ಟ 15 ಜನ ಎರೆಡು ವಾಹನದಲ್ಲಿ ಅಜಿ೯ ಸಲ್ಲಿಸುವ ದಿನ ಕಡ್ಡಾಯ ಬರಲೇ ಬೇಕು, ಜೊತೆಯಲ್ಲಿ ಘಟಕಗಳ ಪದಾಧಿಕಾರಿಗಳು ಇದಕ್ಕಾಗಿ ಪ್ರತಿ ಬೂತ್ ಗೆ ರೂ 5000 ನೀಡಲಾಗಿದೆ (ಗುಟ್ಟಾಗಿ ) ಸ್ಥಳಿಯ ಶಾಸಕರು ಸ್ವಪಕ್ಷದವರು ಇದ್ದರೆ ಅವರ ಉಪಸ್ಥಿತಿಯಲ್ಲೇ ಅಥವ ಆ ಕ್ಷೇತ್ರದಲ್ಲಿ ಶಾಸಕರು ಇಲ್ಲದಿದ್ದರೆ ಪಕ್ಷ ಜವಾಬ್ದಾರಿ ನೀಡಿದ ಪದಾಧಿಕಾರಿ ಈ ಜವಾಬ್ದ...

Blog number 1350. ಕೊರಾನಾ ಲಾಕ್ ಡೌನ್ ಡೈರಿ -2

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 2.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 30 - ಮಾಚ್೯ - 2020) #ಕರೋನಾವೈರಸ್  #ಭಯದಿOದಮನೋವಿಕಾರ  ಲಾಕ್ ಡೌನ್ 5 ದಿನ ಮುಗಿದು ಈಗ 6ನೇ ದಿನ ಪ್ರಾರಂಭ ಆಗುತ್ತಿದೆ, ಜನ ಸಂಚಾರ 90% ಕಡಿಮೆ ಆಗಿದೆ ಮುಂದೇನು ಅನ್ನುವ ಚಿಂತೆಯ ಮದ್ಯ ಕ್ರಮೇಣ ನಮಗೆ ನಮ್ಮ ದೇಹದಲ್ಲೇ ನೋವು ಬಂದ ಹಾಗಾಗಿ ಜ್ವರ ಬಂತಾ ಅಂತ ಗಾಭರಿ, ಮನೇಲಿ ಯಾರಾದರೂ ಕೆಮ್ಮಿದರೆ ಶೀನಿದರೆ ಭಯ ಇದೆಲ್ಲ ಪ್ರಾರಂಭ ಆಗಲಿದೆ.   ಇದಕ್ಕೆಲ್ಲ ಕಾರಣ ಕರೋನಾ ವೈರಸ್ ಭಯ (phobia) ಇದನ್ನ ನಿವಾರಿಸಲು ಸರಿಯಾದ ಆಪ್ತ ಸಲಹೆ (counseling) ಅವಶ್ಯವಿದೆ.    ಈ ವೈರಸ್ ತನಗೆ ಬಂದಾಗಿದೆ ಅಂತ ಬುದ್ದಿ ಬ್ರಮಣೆ ಆದದ್ದು ಮತ್ತೊಬ್ಬರು ಆತ್ಮಹತ್ಯಮಾಡಿಕೊಂಡಿದ್ದು ಇದೇ ಬ್ರಮಣೆಯಿಂದ.   ಅದಕ್ಕಾಗಿ ಸದ್ಯದ ದೇಶದ ಪರಿಸ್ಥಿತಿಯಲ್ಲಿ ನಮಗೆ ನಾವೇ ಆಪ್ತ ಸಲಹೆ ಹಂಚಿಕೊ೦ಡು ಹೆಚ್ಚು ಜನರಿಗೆ ಜಾಗೃತಿ ಮಾಡಬೇಕಾದ ಅನಿವಾಯ೯ತೆ ಇದೆ. 1. ಒಣ ಕೆಮ್ಮು+ ಶೀನುವುದು= ಎರ್ ಪೊಲುಶನ್ನಿ೦ದ. 2. ಕೆಮ್ಮು+ಕಫ+ ಶೀನುವುದು+ ಮೂಗಿನಲ್ಲಿ ಸತತ ನೀರು ಬರುವುದು=ಸಾಮಾನ್ಯ ನೆಗಡಿಯಿ೦ದ. 3. ಕೆಮ್ಮು+ಕಫ+ ಶೀನು+ ನೀರಿಳಿಯುವ ಮೂಗು+ ದೇಹದಲ್ಲಿ ನೋವು+ನಿಶಕ್ತಿ+ ಸಣ್ಣ ಜ್ವರ= ಪ್ಲೂ ನಿಂದ. 4. ಒಣ ಕೆಮ್ಮು+ ಶೀನು+ ದೇಹದಲ್ಲಿ ನೋವು+ನಿಶಕ್ತಿ+ವಿಪರೀತ ಜ್ವರ+ ಉಸಿರಾಟದ ಕಷ್ಟ= ಕೊರಾನ ವೈರಸ್ ಪರೀಕ್ಷೆ ತಕ್ಷಣ ಮಾಡಿಸ...

Blog number 1349. ಕೊರೋನಾ ಡೈರಿ ನಂಬರ್ 1

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 1. (25-ಮಾಚ್೯ - 2020 ರಿಂದ 29 - ಮಾಚ್೯ - 2020) #ಕಾಗೆಗಳೇಕೆ ಕಾಣುತ್ತಿಲ್ಲ#    ಮೊನ್ನೆಯಿ೦ದ ಲಾಕ್ ಡೌನ್ ಆದಾ೦ಗಿ೦ದ ಶಬ್ದಮಾಲಿನ್ಯ ಕಡಿಮೆ ಆಯಿತು ಮನೆಯ ಗಡಿಯಾರದ ಮುಳ್ಳಿನ ಟಿಕ್.. ಟಿಕ್..ಶಬ್ದದ ಚಲನೆ ದಶಕದ ಮೇಲೆ ಕೇಳಿತು! ದೂರದ ಚಚಿ೯ನ ಗOಟೆ ಕೇಳುತ್ತಲೇ ಇರಲಿಲ್ಲ.    ಪರಿಸರದ ಹಕ್ಕಿಗಳ ಕಲರವ ಊರಿ೦ದ ದೂರದ ಜಮೀನಿನಲ್ಲಿ ಮಾತ್ರ ಕೇಳುವುದು ಈಗ ಮನೇಯಲ್ಲೇ ಕೇಳುವಂತಾಯಿತು.     ರಾತ್ರಿ 12 ಆದರೂ ಊರ ರಸ್ತೆ ಗಿಜಿಗಿಜಿ ಆಗಿರುತ್ತಿತ್ತು, ನಮ್ಮ ಮನೆ ನಾಲ್ಕು ರಸ್ತೆ ಸೇರುವ ಯಡೇಹಳ್ಳಿವೃತ್ತದಲ್ಲಿ ಇದೆ, NH 206 ಮತ್ತು ರಾಣಿ ಬೆನ್ನೂರು To ಬೈoದೂರು ರಾ.ಹೆದ್ದಾರಿ ಹಾಗೂ ತೀಥ೯ಹಳ್ಳಿ ಸಂಪಕ೯ ರಸ್ತೆ ರಾತ್ರಿ ಹಗಲು ಸಂಚರಿಸುವ ವಾಹನಗಳಿ೦ದ.   ಈಗ ಸೂಯ೯ ಅಸ್ತ ನಿದಾನ ಸಂಜೆ 7 ರ ನಂತರ ಊರು ರಸ್ತೆ ಬಿಕೋ ಅನ್ನುತ್ತದೆ, ರಾತ್ರಿ ಎಲ್ಲಾ ಸಂಚರಿಸುವವರನ್ನ ಅನುಮಾನದಿಂದ ಎಚ್ಚರಿಸುತ್ತಿದ್ದ ಸಾಕು ನಾಯಿ ಮತ್ತು ಬೀದಿ ನಾಯಿಗಳು ಯಾರದ್ದು ಸಂಚಾರ ಇಲ್ಲದ್ದು ನೋಡಿ ಊಳಿಡುವುದಕ್ಕೆ ವಿರಾಮ ಕೊಟ್ಟಿದೆ.   ಇದರ ಮಧ್ಯೆ ನನ್ನ ಗಮನಕ್ಕೆ ಬಂದದ್ದು ಇದ್ದಕ್ಕಿದ್ದ೦ತೆ ನಮ್ಮ ಊರಲ್ಲಿ ಸೂಯ೯ ಉದಯಿಸಲು ಕಾ ಕಾ ಅನ್ನುತ್ತಿದ್ದ ಕಾಗೆಗಳು ಈಗ ಕಾಣುತ್ತಿಲ್ಲ ಏಕೆ? ಮೊದಲೆಲ್ಲ ತಂಡ ಕಟ್ಟು ಕೊಂಡು ಹಾರಾಟ ಕೂಗಾಟ ಈಗ ಕೇಳಿ ಬರುತ್ತಿಲ್ಲ ಇವತ್ತು ಬಾನುವಾರ ಎ...

Blog number 1348. ಚೆರ್ರಿ ಟೊಮೋಟೊ ಎಂಬ ಅತಿ ಚಿಕ್ಕ ಟೋಮೋಟೋ ಹಣ್ಣು

#ಚೆರ್ರಿಟೊಮೊಟೊ ಬೆಂಗಳೂರು ಬಿಗ್ ಬಜಾರಿನಲ್ಲಿ#  ಮಲೆನಾಡಿನಲ್ಲಿ ಈ ತಳಿ ನಾಪತ್ತೆ ಆಗಿದೆ, ನಾವೆಲ್ಲ ಚಿಕ್ಕವರಿರುವಾಗ ಮಳೆಗಾಲದ ನಂತರದ ದಿನದಲ್ಲಿ ಬೇಲಿ ಸಾಲಿನಲ್ಲಿ ಗೊಬ್ಬರದ ಗುOಡಿಯಲ್ಲಿ ಈ ಚಿಕ್ಕ ಗೋಲಿಗಾತ್ರದ ಟೋಮೊಟೊ ಯಥೆಚ್ಚವಾಗಿ ಸಿಗುತ್ತಿತ್ತು.    ಅಡುಗೆಯಲ್ಲಿ ಹುಣಸೆ ಹುಳಿಗಾಗಿ ಹುಳಿ ಟೊಮೊಟಾ ಬಳಕೆ ಜಾಸ್ತಿ ಆಗಿ ಈಗ ಹುಳಿ ಟೊಮೊಟಾ ಕೂಡ ಇಲ್ಲ ಆಗಿದ್ದು ಉತ್ತರ ಭಾರತೀಯ ಅಡುಗೆ ಶೈಲಿಯ ಸಿಹಿಯಾದ ಉದ್ದ ಟೊಮೊಟಾ ಮಾರುಕಟ್ಟೆ ಆತಿಕ್ರಮಿಸಿದೆ.   ಇದರ ಮದ್ಯ ಬಾಲ್ಯದಲ್ಲಿನ ಗೋಲಿಗಾತ್ರದ ನೋಡಲು ಚೆರ್ರಿ ಹಣ್ಣಿನಂತೆ ಇರುವುದರಿಂದ ಚೆರ್ರಿ ಟೋಮೊಟಾ ಮರೆತೇ ಹೊಗಿತ್ತು ಇತ್ತಿಚಿಗೆ ಮಗಳು ಬೆಂಗಳೂರಿನ ಬಿಗ್ ಬಜಾರ್ ನಲ್ಲಿ ಇದನ್ನ ಮಾರಲಿಟ್ಟಿದ್ದು ನೋಡಿ ತಂದು ಕೊಟ್ಟಿದ್ದಳು 200 ಗ್ರಾo ಗೆ 49 ರೂಪಾಯಿ ಅಂದರೆ ಕೆಜಿಗೆ ಸುಮಾರು 250 ಇರಬಹುದು!.   ಇವತ್ತು ನಮ್ಮ ಆನಂದಪುರಂ ಹೋಬಳಿಯ ಮಿ೦ಚಿನ ಪತ್ರಕತ೯(ಅವರ ಮಿಂಚಿನಂತ ತಿರುಗಾಟ ನೋಡಿ ಈ ಬಿರುದು) ಉದಯ್ ಸಾಗರ್ ಅವರ ಶುಂಠಿ ಜಮೀನಿನಲ್ಲಿ ನೀರು ಹಾಯಿಸುವಾಗ ಈ ಹಣ್ಣು ಬಿಟ್ಟ ಚೆರ್ರಿ ಟೋಮೊಟ ಚಿತ್ರ FB ಯಲ್ಲಿ Post ಮಾಡಿದ್ದು ನೋಡಿದಾಗ ಬೆಂಗಳೂರಿನ ಬಿಗ್ ಬಜಾರ್ ನ ಈ ಹಣ್ಣಿನ ಫ್ಯಾಕೆಟ್ ಪೋಟೋ ತೆಗೆದದ್ದು ನೆನಪಾಯಿತು.   ಹಳೇ ಪ್ಯಾಷನ್ ಎಷ್ಟೋ ವಷ೯ದ ಮೇಲೆ ಹೊಸದಾಗಿ ಬಂದOತೆ ನಮ್ಮ ಬಾಲ್ಯದ ಹಳೆ ತಳಿ ಹೊಸದಾಗಿ ಮಾರುಕಟ್ಟೆಗೆ ಬ...

Blog number 1347. ಮದುಮೇಹಿಗಳಿಗೆ ಇನ್ಸುಲಿನ್ ಬೇಕಾ? ಬೇಡವಾ?

#ಇನ್ಸುಲಿನ್_ಬಳಸಲು_ಡಯಾಬಿಟಿಸ್_ರೋಗಿಗಳಲ್ಲಿ_ಹಿಂಜರಿತ_ಸರಿ_ಅಲ್ಲ.( ಟ್ಟೆಪ್-2 ಡಯಾಬಿಟಿಸ್ ನವರಿಗೆ) #ಸಕ್ಕರೆ_ಶಕ್ತಿಯಾಗಿ_ಪರಿವರ್ತನೆ_ಆಗದೆ_ರಕ್ತದಲ್ಲಿ_ಸೇರುವುದರಿಂದ_ಬಳಸಲಾಗದ_ಸಕ್ಕರೆ_ಮೂತ್ರದಲ್ಲಿ_ಹೊರ #ಹೋಗುವುದೇ_ಸಕ್ಕರೆ_ಕಾಯಿಲೆ. #ಭಾರತ_ಹೊರತು_ಪಡಿಸಿ_ಮುಂದುವರಿದ_ದೇಶಗಳು_ಸಕ್ಕರೆ_ಕಾಯಿಲೆ_ಪೀಡಿತರ #ದೇಹದಲ್ಲಿ_ಕಡಿಮೆ_ಉತ್ಪಾದನೆ_ಆಗುವ_ಇನ್ಸುಲಿನ್_ಇಂಜೆಕ್ಷನ್_ಮೂಲಕ_ನೀಡುವ_ಕ್ರಮ_ಇದೆ.    ಬಾರತೀಯ ವೈದ್ಯರು ಕೇವಲ ಗುಳಿಗೆಗಳನ್ನು ಮಾತ್ರ ನೀಡುತ್ತಾರೆ ಮತ್ತು #ನಿಮಗೆ_ಇನ್ಸುಲಿನ್_ನೀಡುವ_ಹಂತ_ಇನ್ನೂ_ಬಂದಿಲ್ಲ ಎನ್ನುವುದು ರೋಗಿಗಳಿಗೆ ಇನ್ಸುಲಿನ್ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಕಾರಣ ಆಗಿದೆ     ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಅತಿ ಹೆಚ್ಚು, ಸಣ್ಣ ವಯಸ್ಸಿನವರೂ ಹೆಚ್ಚಿದ್ದಾರೆ ಮತ್ತು 40 ವರ್ಷ ದಾಟುತ್ತಿದ್ದಂತೆ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ.    ವಿಪರೀತ ಬಾಯಾರಿಕೆ, ತೊಡೆಗಳಲ್ಲಿ ವಿಪರೀತ ನೋವು ಮತ್ತು ಪದೇ ಪದೇ ಮೂತ್ರ ವಿಸಜ೯ನೆಯಿಂದ ಈ ಕಾಯಿಲೆ ಪ್ರಾರಂಬಿಕವಾಗಿ ಗೋಚರಿಸಿ ವಿಪರೀತ ತೂಕ ಇಳಿತವೂ ಆದಾಗಲೇ ವೈದ್ಯರ ಹತ್ತಿರ ಹೋಗುತ್ತೇವೆ.   ಸಕ್ಕರೆ ಕಾಯಿಲೆ ಬಂತು ಅಂತ ಬಿಕ್ಕಿ ಬಿಕ್ಕಿ ಅತ್ತವರನ್ನೂ ನೋಡಿದ್ದೇನೆ ಅದಕ್ಕೆ ಕಾರಣ ಕೆಲ ತಪ್ಪು ತಿಳುವಳಿಕೆಗಳು.   ವೈದ್ಯರು ಪ್ರಾರಂಭದಲ್ಲಿ ಗುಳಿಗೆಗಳಿಂದ ಸಕ್ಕರೆ ಕಾಯಿಲೆ ನಿಯಂ...

Blog number 1346. ಚುನಾವಣಾ ಪಲಿತಾಂಶವೇ ಬದಲಿಸುವು ಶಕ್ತಿಯ ಕೆಲ ಘೋಷಣೆಗಳು

#ಶಿವಮೊಗದಲ್ಲಿ_ಹರಕುಬಾಯಿಗೆ_ಹೊಲಿಗೆ_ಎಂಬ_ಅಯನೂರು_ಮಂಜುನಾಥರ_ಘೋಷಣೆ #ರಾಮಕೃಷ್ಣ_ಹೆಗ್ಗಡೆ_ಎದರು_ಸಿದ್ದುನ್ಯಾಮೆಗೌಡರ_ಬಾಟಲಿ_ನೀರಿನ_ಘೋಷಣೆ  #ಚುನಾವಣಾ_ಪಲಿತಾಂಶದ_ಮೇಲೆ_ಬೀರುವ_ಪ್ರಭಾವ #ಚುನಾವಣೆಯಲ್ಲಿ_ಕೆಲವು_ವಿಚಾರ_ತೆಗೆದುಕೊಳ್ಳುವ_ತಿರುವು. #ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ #ಬಂಗಾರಪ್ಪರ_ಮತ_ವಿಭಜನೆ_ವಿಪಲವಾಗಿಸಿದ_ಖಾನ್_ಸಾಹೇಬರ_ತಂತ್ರ.       ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ  ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ ಸಿದ್ದುನ್ಯಾಮೇಗೌಡರ  "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು, ಇದು ನಡೆದ ಸಂದರ್ಭ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ...

Blog number 1345. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ (27-ಮಾರ್ಚ್ -2023) 43 ವಷ೯ದ ಹಿಂದೆ ಮಂತ್ರಿ ಯ೦ಕಟಪ್ಪರ ಮನೆ ಮೇಲಿನ ದಾಳಿ ನೆನಪಿಸಿತು.

#ಶಿಕಾರಿಪುರದಲ್ಲಿ_ಯಡೂರಪ್ಪರ_ಮನೆ_ಮೇಲೆ_ಕಲ್ಲು_ತೂರಾಟ #ತಪ್ಪು_ಮಾಡಿದವರನ್ನು_ಬಂದಿಸದಂತೆ_ಕ್ಷಮಿಸಿದ_ಯಡೂರಪ್ಪರ_ಮತ್ಸದ್ಧಿ_ರಾಜಕಾರಣ #ಮರುಕಳಿಸಿದ_ಶಿಕಾರಿಪುರ_ರಾಜಕೀಯ_ಚರಿತ್ರೆ #ಗುಂಡೂರಾವ್_ಸಂಪುಟದಲ್ಲಿ_ತೋಟಗಾರಿಕಾ_ಮತ್ತು_ಬಂದಿಖಾನೆ_ಮಂತ್ರಿ_ಆಗಿದ್ದ_ಶಿಕಾರಿಪುರದಿಂದ #ಎರೆಡು_ಬಾರಿ_ಶಾಸಕರಾಗಿದ್ದ_ಕೆ_ಯ೦ಕಟಪ್ಪರ_ಮನೆ_ಮೇಲೂ_ದಾಳಿ_ಆಗಿತ್ತು #ಶಿಕಾರಿಪುರ_ವಿದಾನ_ಸಭಾ_ಕ್ಷೇತ್ರದ_ನಿಜ_ಚಾಣಕ್ಯ_ಪದ್ಮನಾಭ_ಭಟ್ಟರು. #ದುರಂತ_ನಾಯಕ_ನಗರದ_ಮಹಾದೇವಪ್ಪ  ನಿನ್ನೆ ಇದ್ದಕ್ಕಿದ್ದಂತೆ ಶಿಕಾರಿಪುರದಲ್ಲಿ ಒಳ ಮೀಸಲಾತಿ ವಿರೋದಿಸಿ ನಡೆಯುತ್ತಿದ್ದ ಮೆರವಣಿಗೆ ದಿಕ್ಕು ಬದಲಿಸಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಶಿಕಾರಿಪುರ ಶಾಸಕರಾದ ಯಡೂರಪ್ಪರ ಮನೆ ಮೇಲೆ ಕಲ್ಲು ತೂರಾಟವಾಯಿತು, ಅವರ ಹುಟ್ಟು ಹಬ್ಬದ ಕೊಡುಗೆ ಆಗಿ ನೀಡಿದ್ದ ಸೀರೆಗಳನ್ನು ತಂದು ಸುಡಲಾಯಿತು, ಮನೆಯ ಮೇಲಿದ್ದ ಅವರ ಬಾವ ಚಿತ್ರದ ಪ್ಲೆಕ್ಸ್ ಮತ್ತು ಬಿಜೆಪಿ ದ್ವಜ ಕೂಡ ದ್ವಂಸ, ಲಾಠಿ ಚಾರ್ಚ್ ಮಾಡಲಾಯಿತು ಅನೇಕರನ್ನು ಬಂದಿಸಲಾಗಿದೆ ಎಂಬ ಸುದ್ದಿ ಕೇಳಿದವರಿಗೆ ದಿಗ್ಭ್ರಮೆ ಉಂಟಾಗಿದ್ದು ಸುಳ್ಳಲ್ಲ.   ಇಡೀ ರಾಜ್ಯದಲ್ಲಿ ಒಳ ಮೀಸಲಾತಿ ಬಗ್ಗೆ ಈ ರೀತಿ ಆಕ್ರೋಷ ನಡೆದಿಲ್ಲ ಆದರೆ ಶಿಕಾರಿಪುರದಲ್ಲಿ ಯಾಕೆ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಷ್ಟೆ.    ಯಾರೇ ಆದರೂ ಈ ವಾಮ ಮಾರ್ಗದಲ್ಲಿ ಪ್ರಚೋದನೆ ನೀಡಿದ್ದರೆ ಅದು ಖಂಡನೀಯವಾದದ್ದು. ...

Blog number 1344. ನಾಥ ಪಂಥ ರಹಮತ್ ತರೀಕೆರೆ

#ರಹಮತ್ತರೀಕೆರೆ ಇವರ ಸಂಶೋದನಾ ಗ್ರOಥ #ಕನಾ೯ಟಕದನಾಥಪಂಥ#    ನಾಸಿಕ್ ಕುಂಬ ಮೇಳದಿಂದ ಪ್ರತಿ 12 ವಷ೯ಕ್ಕೆ ಒಮ್ಮೆ ಮOಗಳೂರಿನ ಕದ್ರಿ ಮಠಕ್ಕೆ ನೂರಾರು ಸನ್ಯಾಸಿಗಳು ಪಶ್ಚಿಮ ಘಟ್ಟದ ಮಾಗ೯ದಲ್ಲೇ ನಡೆದು ಬರುವ ಬಾರಾ ಪಂಥಾ ಎಂಬ ಜೂOಡಿಯಾತ್ರೆ, ಇದನ್ನ ಸಾವಿರಾರು ವಷ೯ದಿಂದ ನಡೆಸಿಕೊಂಡು ಬರುವ ನಾಥಪ೦ಥದ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನ ವಿವರವಾಗಿ ತಿಳಿಯಲಾಗಿರಲಿಲ್ಲ.   4 ವಷ೯ದ ಹಿಂದೆ ಬಂದ ಬಾರಾ ಪಂಥ ಯಾತ್ರೆ ಸುದ್ದಿ ಹಾಯ್ ಬೆಂಗಳೂರಲ್ಲಿ ಮಾಡಿದ್ದ ಶ್ರOಗೇಶ್ ಈ ಪುಸ್ತಕದ ಬಗ್ಗೆ ತಿಳಿಸಿದ್ದರು ಆದರೆ ಈ ಪುಸ್ತಕ ನನಗೆ ಸಿಕ್ಕಿರಲಿಲ್ಲ ಮೊನ್ನೆ ಶ್ರOಗೇಶ್ ರವರೇ ಹುಡುಕಿ ಖರೀದಿಸಿ ತಂದು ಕೊಟ್ಟಿದ್ದು ಮೊನ್ನೆ ಜನತಾ ಕಪ್ಯೂ೯ನಿಂದ ಎರಡನೇ ದಿನದ ಲಾಕ್ ಡೌನ್ ವರೆಗೆ ಓದಿ ತಿಳಿದುಕೊಳ್ಳಲು ಕಾರಣ ಆಯಿತು.    ನಾಥಪಂಥದ ಆದಿ ಚುOಚನಗಿರಿ ಬಾರಾ ಪಂಥದ ಕೈತಪ್ಪಿದ ಅಪರೂಪದ ದಾಖಲೆ ಸಹಿತ ವಿವರವಾದ ಮಾಹಿತಿ ಈ ಪುಸ್ತಕದಲ್ಲಿ ಇದೆ.    ಕೃಷಿಕರ, ಕುರುಬರ, ನೇಕಾರರ ಮತ್ತು ಮೀನುಗಾರರೆಲ್ಲರಿಗೂ ನಾಥಪಂತದ ಮಚೆ೦ದ್ರ ನಾಥರು ಗೋರಕನಾಥರು ಅಧಿಪತಿಗಳು ಆದರೆ ಅದೆಲ್ಲದರ ಮಹತ್ವ ಇತಿಹಾಸ ಆಯಾ ಜನಾ೦ಗದ ಅವರಿಗೇ ಮರೆತು ಹೋಗಿದೆ.   ಬಾರಾ ಪಂಥದ ಕೇಂದ್ರ ಉತ್ತರ ಪ್ರದೇಶದ ಗೋರಕ್ ಪುರ ಅಲ್ಲಿನ ಮಹಾಂತರೇ ಇದರ ಅಧ್ಯಕ್ಷರು ಅವರು ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು.   ...