Skip to main content

Blog number 3559. ಮಲೆನಾಡಿನ ಅಪ್ಪೆಮಿಡಿ ಭಾಗ - 2

#ಮಲೆನಾಡಿನ_ಅಪ್ಪೆ_ಮಾವಿನ_ಮಿಡಿ_ಭಾಗ_2

#ಮಾಜಿ_ಉಪಮುಖ್ಯಮಂತ್ರಿ_ಈಶ್ವರಪ್ಪನವರಿಗೂ

#ಮಾವಿನ_ಮಿಡಿ_ಇಷ್ಟ

#ಮಾವಿನ_ಮಿಡಿ_ಎಂದರೆ_ಮಲೆನಾಡಿಗರಿಗೆ_ಪಂಚಪ್ರಾಣ

#ಕಳೆದ_2023ರಲ್ಲಿ_ಮಾವಿನಮಿಡಿಗೆ_ಬರ_ಬಂದಿತ್ತು_ವಿಪರೀತ_ಇಬ್ಬನಿ

#ಕಳೆದ_ವರ್ಷ_2024_ವಿಪರೀತ_ಬಿಸಿಲು_ಪ್ರಖ್ಯಾತ_ಬ್ರಾಂಡ್_ಅರಸಾಳು_ಅಪ್ಪೆಮಿಡಿ_ಕಡಿಮೆ.

#ಈ_ವರ್ಷ_ಮಾವಿನ_ಹೂವು_ಭಜ೯ರಿ_ಆದರೆ_ಇಬ್ಬನಿ_ಮಳೆಯಿಂದ_ಅಪ್ಪೆ_ಮಿಡಿ_ಹೇಗೋ?


#Tendermango #Mangopickle #Eshwarappa #Deputychiefminister #Arasalu #Appemidi

  ಪಶ್ಚಿಮಘಟ್ಟದ ಮಲೆನಾಡು ಪರಿಸರ ನನ್ನ ಹುಟ್ಟೂರು ಆದ್ದರಿಂದ ನನಗೆ ಈ ಪ್ರದೇಶದಲ್ಲಿ ಕಾಲಕಾಲಕ್ಕೆ ಬರುವ ಕಣ್ಣು ಕಾಯಿ ಸವಿಯದಿದ್ದರೆ ಮನಸ್ಸು ಒಪ್ಪುವುದಿಲ್ಲ.

   ಅದಕ್ಕಾಗಿ ಹೇಗಾದರೂ ಮಾಡಿ ಯಾರಿಂದಲಾದರೂ ಅವುಗಳನ್ನು ತರಿಸಿ ತಿನ್ನೋ ಬಯಕೆ ನನ್ನದು.

  ಮಾವಿನ ಮರದಲ್ಲಿ ಹೂವು ಕಾಯಿ ಕಚ್ಚಿದಾಗ ಎಳೆಯದಾದ ಮಾವಿನ ಮಿಡಿಗಳನ್ನು ಕೆಜಿಗಟ್ಟಲೆ ತಿನ್ನುವುದು, ಸ್ವಲ್ಪ ಹುಳಿ ಬಂದಾಗ ಊಟದ ಜೊತೆ ಅನ್ನದ ಪ್ರಮಾಣ ಮೀರಿ ಮಾವಿನ ಮಿಡಿ ತಿನ್ನುವುದು, ಮಾವಿನ ಮಿಡಿ ಕಾಯಿ ಆಗಿ ಹುಳಿ ರೂಪ ಪಡೆದಾಗ ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನಲಿಕ್ಕೆ ಆಗ ಊರಂಚಿನ ಮಾವಿನ ಮರಗಳನ್ನು ಎಡತಾಕುತ್ತಿದ್ದೆವು.
   
    ಮಾವು ಹಣ್ಣು ಆದಾಗ ವಿಧವಿಧವಾದ ಹಣ್ಣಿನ ರಸ ಸ್ವಾದನೆಗಾಗಿ ಸಿರ್ಸಿ - ಕುಮುಟಾ -ಅಂಕೋಲಾ -ಕಾರವಾರದ ತನಕ ಹುಡುಕಿ ಹೋಗುವ ಪರಿಪಾಠವೂ ಇತ್ತು.

  ವರ್ಷ ಪೂರ್ತಿಉಪ್ಪಿನಕಾಯಿ ನನಗೆ ಬೇಕೇ ಬೇಕು ಅದು ಒಂದು ರೀತಿ ಅಲ್ಲ ಕನಿಷ್ಠ 15 ರಿಂದ 20 ರೀತಿ ಉಪ್ಪಿನಕಾಯಿ ನನಗೆ ಇಷ್ಟ.

   ನಾನೊಬ್ಬನೇ ಅಲ್ಲ ನನ್ನಂತಹ ಉಪ್ಪಿನಕಾಯಿ ಪ್ರಿಯರು ಅನೇಕರು ನನ್ನ ಸಂಪರ್ಕದಲ್ಲಿದ್ದಾರೆ ಅವರಿಗೆಲ್ಲ ನಾನು ವಿಧವಿಧ ಉಪ್ಪಿನಕಾಯಿಯನ್ನು ಕಳಿಸಿಕೊಡುತ್ತೇನೆ.

  2022ನೇ ಇಸವಿಯಲ್ಲಿ ಮಾವಿನ ಮಿಡಿ ಸಿಕ್ಕಿದಷ್ಟು ನಂತರದ ವರ್ಷ 2023 ರಲ್ಲಿ ಇಬ್ಬನಿ ಕಾರಣದಿಂದ ಮಿಡಿಗಳು ಸಿಗಲಿಲ್ಲ.

    2024ರ ಫೆಬ್ರವರಿ ಕೊನೆಯಿಂದ ಮಾರ್ಚ್ ಕೊನೆಯವರೆಗೆ ಮಾವಿನ ಮಿಡಿಗಳು ಮಾರುಕಟ್ಟೆಗೆ ಬಂದೇ ಇಲ್ಲ... ಕಾರಣ 2024ರ ವರ್ಷದ ವಿಪರೀತ ಬಿಸಿಲು,ಸೆಕೆ ಮಾವಿನ ಹೂವುಗಳನ್ನು ಮುರುಟಿಸುತ್ತಿರುವುದು ಸತ್ಯ.

       2024 ರಲ್ಲಿ ನನ್ನ ತಿನ್ನುವ ಬಯಕೆಗಾಗಿ ಅರಸಾಳಿನಿಂದ ಸ್ವಲ್ಪ ಇನ್ನೂ ಚಿಗುರದ ಇನ್ನೂ ಬೆಳೆಯದ ಅರೆ ಜೀರಿಗೆ ಸುವಾಸನೆಯ ಮಾವಿನ ಮಿಡಿ ನನ್ನ ಆಫೀಸಿನ ಟೇಬಲ್ ಮೇಲಕ್ಕೆ ಬಂತು.

  ಅಷ್ಟರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ #ಕ_ಎಸ್_ಈಶ್ವರಪ್ಪನವರು ನನ್ನ ಆಫೀಸಿಗೆ  ಆಗಮಿಸಿದ್ದರು.

   ನನ್ನ ಟೇಬಲ್ ಮೇಲಿದ್ದ ಮಾವಿನ ಮಿಡಿ ನೋಡಿ ಈಶ್ವರಪ್ಪನವರು "ನಾನು ಈ ವರ್ಷ ಮಾವಿನ ಮಿಡಿಯೇ ನೋಡಿಲ್ಲ" ಎಂದು ಮಿಡಿ ಯ ರುಚಿ ನೋಡಿದರು.

   ಈ ರೀತಿ ಮಲೆನಾಡಿಗರಿಗೆ ಮಾವಿನ ಮಿಡಿಯ ಪರಿಚಯ, ಅದರ ಉಪ್ಪಿನಕಾಯಿಗಳು ಗೊತ್ತಿರುವಷ್ಟು ಬೇರೆ ಪ್ರದೇಶಗಳಲ್ಲಿ ಗೊತ್ತಿಲ್ಲ.

  ಬೇರೆ ಪ್ರದೇಶದಲ್ಲಿನ ಉಪ್ಪಿನಕಾಯಿ ಭಿನ್ನ ರುಚಿ ಮತ್ತು ಅದರ ರೆಸಿಪಿಯೇ ಬೇರೆ.

    ಹೆಚ್ಚಿನ ಪ್ರದೇಶದಲ್ಲಿನ ಜನ ಕಡಿ ಉಪ್ಪಿನಕಾಯಿ ಹೆಚ್ಚು ಇಷ್ಟಪಡುತ್ತಾರೆ.

      ಆದರೆ  ಶಿವಮೊಗ್ಗ- ಚಿಕ್ಕಮಗಳೂರು-ಮಂಗಳೂರು-ಉಡುಪಿ ಮತ್ತು ಉತ್ತರ ಕನ್ನಡದ ಜಿಲ್ಲೆಯ ಜನರಿಗೆ ಮಾತ್ರ ಈ ಮಾವಿನ ಅಪ್ಪೆಮಿಡಿ ಉಪ್ಪಿನ ಕಾಯಿ ಅಂದರೆ ಪಂಚ ಪ್ರಾಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...