https://youtu.be/kRXXOCiP8wU #ಕವಿಶೈಲದಲ್ಲಿ_ಮಾನಪ್ಪಗೌಡರಂತ_ಗೈಡ್ #ಇನ್ನೊಬ್ಬರು_ಈವರೆಗೆ_ಸಿಕ್ಕಿಲ್ಲ #ಕುವೆಂಪು_ಅವರ_113ನೇ_ಹುಟ್ಟು_ಹಬ್ಬದಂದು_ನಮಗೆ_ಮಾರ್ಗ_ದರ್ಶಕರಾಗಿದ್ದರು #ಅವತ್ತಿನ_ವಿಡಿಯೋ_ಇಲ್ಲಿದೆ #ಉಂಟೂರು_ಮಾನಪ್ಪ_ಗೌಡರು_ಈಗಿಲ್ಲ #ಆದರೂ_ಅವರ_ಮರೆಯಲುಂಟೆ. #ಕುವೆಂಪು_119ನೇ_ಜನ್ಮದಿನದಂದು_ಅವರ_ನೆನಪು ದಿನಾಂಕ 29- ಡಿಸೆಂಬರ್ -2017 ರಂದು ಕುವೆಂಪು ಅವರ 113ನೇ ಜನ್ಮ ದಿನದಂದು ನಾನು ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು ಅವರ ಬಾಯಿ ತುಂಬಾ ಮಲೆನಾಡಿನ ರಸಗವಳ ತುಂಬಿತ್ತು. ಇಲ್ಲಿನ ವಿವರ ನೀಡುತ್ತೀರಾ ಅಂದೆ... ಖಂಡಿತಾ ಅಂದ ಅವರು ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳನ್ನು ಕುವೆಂಪು ಅವರ ರಚನೆಯ ಕವನಗಳ ಸಾಲು ಸಾಲುಗಳನ್ನು ಸಂದರ್ಭಕ್ಕೆ ತಕ್ಕಂತೆ ಜೋಡಿಸುತ್ತಾ ಕುವೆಂಪು ಅವರ ಸಂಬಂದಿಗಳ ಹೆಸರು, ಮಕ್ಕಳು, ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ರಾಗವಾಗಿ ಗದ್ಯ - ಪದ್ಯದ ರೂಪವಾಗಿ ಹೇಳಿದರು, ಇದನ್ನು ಕೇಳಿ ನಮಗೆಲ್ಲ ಸಂತೋಷ ಆಯಿತು ಅಷ್ಟೇ ಅಲ್ಲ ಅವತ್ತು ಕವಿ ಶೈಲ ವೀಕ್ಷಿಸಲು ಬಂದ ಅನೇಕರಿಗೆ ರಸ ಕವಿಯ ರಸಗವಳ ಸವಿದಂತೆ ಆಗಿತ್ತು ಗೈಡ್ ಮಾನಪ್ಪ ಗೌಡರ ಕವಿಶೈಲದ ಮಾರ್ಗದರ್ಶನ,ಇವರ ನೆನಪಿನ ಶಕ್ತಿ ನೋಡಿ ನಮಗೆಲ್ಲ ಆಶ್ಚಯ೯ವಾಯಿತು. ಕುವೆಂಪು ಅವರ ಕವನದಲ್ಲಿನ ಸಾಲು...