Blog number 1274. ಎರೆಡು ಬಾರಿ ನನ್ನಿಂದ ಲಾಭ ಪಡೆದವರೇ ಹಾಕಿದ ಚೆಕ್ ಕೇಸುಗಳು... ಕೊಟ್ಟ ತೊಂದರೆಗಳು ಮರೆಯುವುದಾದರೂ ಹೇಗೆ?
ಎರೆಡು ಚೆಕ್ ಕೇಸಿನಲ್ಲಿ ಸಿಕ್ಕಿ ಬಿಳಿಸಿದ ವಂಚಕರ ಬಲೆಯಲ್ಲಿ ನನ್ನ ಪರದಾಟ, ಲಾಭ ಪಡೆದವರಿಂದಲೇ ಮೋಸ. ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ. ಇವತ್ತಿನ (1- ಮಾರ್ಚ್ -2020 ) ವಿಜಯಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ. ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ. ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ, ಮೊನ್ನೆ ಮೊನ್ನೆ ಗೆಳೆಯರಾದ ಗೇರುಬೀಸಿನ ದೇವರಾಜ ಆಚಾರ್ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವರ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು. ಆದರೆ ಸಾಲ ಕೊಟ್ಟವ ಶಿಕಾರಿಪುರದ ಪೋಲಿಸರು ಅವರ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಕೂಡ (ಸಾಲ ವಸೂಲಿಗೆ ಆದಾರವಾಗಿ) ಮಾಡಿಸಿಕೊಂಡಿದ್ದರು. ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವರ ಹೆಸರು ನಮೂದಾಗಿತ್ತು. ಸಾಲ ಪಡೆದವರಿಂದ ನಾಕಾರು ಖಾಲಿ ಚೆಕ್...