Blog number 1044. ತೊಂದರೆ ಕೊಡುವವರೂ ಸಮಾಜದಲ್ಲಿರುವಂತೆ ಆಪತ್ಕಾಲದಲ್ಲಿ ಸಹಾಯ ಮಾಡುವ ದೈವ ಸಮಾನರೂ ಇರುತ್ತಾರೆ ಅಂತವರಲ್ಲಿ ಶಿವಮೊಗ್ಗದ ಪ್ರಖ್ಯಾತರಾದ ಮಧು ಲಾಯರ್, ರವಿಬೆಳೆಗೆರೆಯವರ ಪ್ರಾರ್ಥನಾ ಶಾಲೆ ಸಿಇಒ ಉಮೇಶ್ ಹೆಗ್ಗಡೆ, ಅಬ್ಬಲಗೆರೆ ಎಸ್ಸಾರ್ ಪೆಟ್ರೋಲ್ ಪಂಪ್ ಗಂಗಾದರ್ ಹಂದಿಗೋಳ್ ಮತ್ತು ಶಿವಮೊಗ್ಗ ಕೆ.ಎಸ್.ಎಫ್.ಸಿ. ಉದ್ಯೋಗಿ ಶಾಲಾ ಸಹಪಾಠಿ ದಾಸಕೊಪ್ಪ ನಾಗರಾಜ್ ರ ಉಪಕಾರ ಜೀವಮಾನದಲ್ಲಿ ಮರೆಯಲಾರೆ.
#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್. #ತೊಂದರೆ_ಕೊಡುವವರೂ_ಸಮಾಜದಲ್ಲಿ_ಇರುವಂತೆ_ಸಹಾಯ_ಮಾಡುವವರೂ_ಇರುತ್ತಾರೆ. #ಜಿಲ್ಲಾಪಂಚಾಯತ್_ಸದಸ್ಯ_ಅವಧಿ_ಮುಗಿಯುವಾಗ_ಅಕ್ಷರಶಃ_ಪಾಪರ್_ಆಗಿದ್ದೆ. #ಉಪಕಾರ_ಮಾಡಿದವರ_ಸ್ಮರಿಸಲೇ_ಬೇಕು #ರವಿಬೆಳೆಗೆರೆಯ_ಪ್ರಾರ್ಥನಾ_ಶಾಲೆ_ಸಿಇಓ_ಉಮೇಶ್_ಹೆಗಡೆ. #ಅಬ್ಬಲಗೆರೆಯ_ಪೆಟ್ರೋಲ್_ಬಂಕ್_ಮಾಲಿಕರಾದ_ಗಂಗಾದರ್_ಹಂದಿಗೋಳ್ #ದಾಸಕೊಪ್ಪ_ನಾಗರಾಜ್_ಕೆ_ಎಸ್_ಎಪ್_ಸಿ_ಶಿವಮೊಗ #ಆಪತ್_ಕಾಲದಲ್ಲಿ_ಆಪತ್ಬಾ೦ದವರ_ನೆನಪಿನ_ಆಪ್ತ_ಲೇಖನ_ಪುನಃ_ಪುನಃ_ಓದುವಂತೆ_ಮಾಡುತ್ತದೆ. #ಸಹಾಯ_ಪಡೆದವರೂ_ಗೆಳೆಯರೂ_ಹಣ_ಅಧಿಕಾರ_ಕಳೆದುಕೊಂಡ_ಮಿತ್ರನಿಂದ_ದೂರವಾಗಿದ್ದ_ಕಾಲ ಶಿವಮೊಗ್ಗದ ಪ್ರಖ್ಯಾತ ಮದು ಲಾಯರ್ ಅವರ FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು. ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು. ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು, ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು. ಮಂತ್ರಿಗಳ ಅಧಿಕಾರದ ಪ್ರಬಾವಲಯದಲ್ಲಿರುವ ಅವರ ಹಿಂಬಾಲಕರು ಅಧಿಕಾರ ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ, ಅದಕ್ಕೆ ಅಧಿಕಾರಿಗಳೂ ಒಲೈಸುತ್ತಾ ...