Blog number 1770. ಪರಿಶುದ್ಧ ಅರಿಶಿಣದ ಹೆಸರಲ್ಲಿ ವಿಷಕಾರಿ ರಾಸಾಯ ಬಣ್ಣ ಮೆಟಾನಿಲ್ ಯೆಲ್ಲೋ ಸೀಮೆ ಸುಣ್ಣದ ಪುಡಿಯ ಕಲಬೆರಕೆ ಅರಿಶಿಣ ಪುಡಿ ಮಾರಾಟ ಮತ್ತು ಬಳಕೆಯಲ್ಲಿದೆ.
https://youtube.com/shorts/YTpObN0dRcA?feature=shared #ಕಲಬೆರಕೆ_ಅರಿಶಿಣ_ಪರೀಕ್ಷೆಯ_ಸುಲಭ_ವಿಧಾನ_ಇಲ್ಲಿದೆ #ಅರಿಶಿಣಪುಡಿಯಿಂದ_ಆರೋಗ್ಯ_ಆದರೆ #ಮಾರುಕಟ್ಟೆಯಲ್ಲಿರುವುದು_ಕಲಬೆರಕೆ_ಅರಿಶಿಣಪುಡಿ #ಸೀಮೆಸುಣ್ಣದ_ಪುಡಿ_ಮೆಟಾನಿಲ್_ಯಲ್ಲೋ_ಸೇರಿಸಿದ_ಅರಿಶಿಣಪುಡಿ_ಬಳಕೆಯಲ್ಲಿದೆ. #ನಾವು_ನಮ್ಮ_ಮಲ್ಲಿಕಾವೆಜ್_ರೆಸ್ಟೋರೆಂಟನಲ್ಲಿ_ಬಳಸುವುದು_ಪರಿಶುದ್ಧ_ಅರಿಶಿಣಪುಡಿ. #ಅರಿಶಿಣಪುಡಿ_ತುಪ್ಪ_ಬೆಲ್ಲ_ಮಿಶ್ರಿತ_ಗೋಲ್ಡನ್_ವಿಶ್ವವಿಖ್ಯಾತವಾಗಿದೆ. ಭಾರತೀಯ ಆಹಾರೋದ್ಯಮದಲ್ಲಿ ಕಲಬೆರಕೆ ಸಂಪೂರ್ಣ ನಿಷೇದ ಯಾವ ಕಾಯಿದೆಯಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಯಾಕೆಂದರೆ ನಾವು ಬೆಳೆಯುವ ಬೆಳೆಯಲ್ಲಿ ಸೇರುವ ಔಷದ ಮತ್ತು ಗೊಬ್ಬರದ ವಿಷ ಒಂದು ಕಡೆ ಆದರೆ ಮಾರಾಟಗಾರರು ಮಾರುವ ಸಿದ್ದಪಡಿಸಿದ ಆಹಾರ ಉತ್ಪನ್ನಗಳಲ್ಲಿ ಮಾಡುವ ಕಲಬೆರಕೆ ಇನ್ನೊಂದು ವಿಷದ್ದು ಇದನ್ನು ಬಳಸುವ ಗ್ರಾಹಕನಿಗೆ ಡಬಲ್ ವಿಷದ ದಮಾಕಾ!!... ಇವತ್ತು ಹೋಟೆಲ್ ಮಾಲಿಕರುಗಳ ಮೇಲೆ ಗ್ರಾಹಕರು ಕಡಿಮೆ ಬೆಲೆಯಲ್ಲಿ ಆಹಾರ ನೀಡಲಿ ಎಂಬ ಒತ್ತಡ ಮತ್ತು ಹೋಟೆಲ್ ಮಾಲಿಕರುಗಳು ದುರಾಸೆಯಿಂದ ಕಡಿಮೆ ಬೆಲೆಯ ಎಣ್ಣೆ, ಚಹಾಪುಡಿ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ಮಸಾಲೆ ಪುಡಿಯನ್ನು ಬಳಸುತ್ತಾರೆ ಕಡಿಮೆ ಬೆಲೆ ಅಂದರೆ ಅದು ಕಲಬೆರಕೆಯೇ ಆಗಿರುತ್ತದೆ. ಈಗ ಭಾರತೀಯ ಅಡುಗೆಯಲ್ಲಿ ಅವಿಭಾಜ್ಯ ಅಂಗವಾದ ಅರಿಶಿಣ ಪುಡಿ ಕೂಡ ಕಲಬೆರಕೆ ಅಂ...