#ಮಂಗನ ಕಾಟ ಪರಿಹಾರ ಸುಲಭ ಸಾಧ್ಯವಲ್ಲ ಯಾವುದೇ ಸಾಕುಪ್ರಾಣಿ, ಕಾಡು ಪ್ರಾಣಿ ಕಾಟವನ್ನ ತಡೆಯ ಬಹುದು ಆದರೆ ಮಂಗನ ಕಾಟವಿದೆಯಲ್ಲ ಅದು ಅನುಭವಿಸಿದವರಿಗೆ ಗೊತ್ತು, ಅವುಗಳ ದಾಳಿಯಿಂದ ತತ್ತರಿಸಿ ಹತಾಶರಾಗುತ್ತಾರೆ, ಅವುಗಳ ಕೈಗೆ ಸಿಕ್ಕಿದ್ದೆಲ್ಲ ಖಲಾಸ್! ಮಂಗನಿಗೆ ಹಿಂಸೆ ನೀಡಿದರೆ ಶಾಪಗ್ರಸ್ತರಾಗುವ ಭಯ, ಸಿಡಿ ಮದ್ದು ಸಿಡಿಸಿದರೆ ಆ ಕ್ಷಣದಲ್ಲಿ ಪರಾರಿ ಆದರೂ ಮತ್ತೊ೦ದು ಕ್ಷಣದಲ್ಲಿ ಪ್ರತ್ಯಕ್ಷ. ಇಂತಹ ಕಾಟ ಕೊಡುವ ಮಂಗಗಳ ಹಿಡಿಯಲು ರಿಪ್ಪನ್ ಪೇಟೆಯ ಕೃಷಿ ವಿಜ್ಞಾನಿ ಅನಂತಮೂತಿ೯ ಜವಳಿ ಒಂದು ಬೋನು ಮಾಡಿದ್ದಾರೆ ಅವರ ಪಾರಂಗೆ ನುಗ್ಗಿ ದಾಂದಲೆ ಮಾಡುವ ಮಂಗಗಳನ್ನ ಹಿಡಿದು ಆಗುಂಬೆ, ಬಾಳೆಬರೆ ಅಥವ ಹುಲಿಕಲ್ ಫಾಟಿಗಳಲ್ಲಿ ಬಿಡುತ್ತಾರೆ ಆ ಬೋನು ಮಾಡಿ ಮಂಗನ ಕಾಟದಿಂದ ಪರಿಹಾರ ಕ೦ಡುಹಿಡಿಯಲು ಆಸಕ್ತರು ಇವರನ್ನ ಬೇಟಿ ಮಾಡಿ ಮಾಹಿತಿ ಪಡೆಯಬಹುದು. ಇವರ ವಿಳಾಸ ಶ್ರೀ ಅನಂತ ಮೂತಿ೯ ಜವಳಿ ಅಂಕುರ್ ನಸ೯ರಿ ರಿಪ್ಪನ್ ಪೇಟೆ ಹೊಸನಗರ ತಾII, ಶಿವಮೊಗ್ಗ ಜಿಲ್ಲೆ.