Blog number 1155. 1979ರಲ್ಲಿ ಇಡೀ ಜಗತ್ತು ಸ್ಕೈ ಲ್ಯಾಬ್ ಭೂಮಿಗೆ ಬೀಳುವುದರಿಂದ ಪ್ರಳಯವೇ ಆದೀತೆಂಬ ಭಯದಲ್ಲಿತ್ತು, ಆ ಕಾಲದಲ್ಲಿ ಮಲೆನಾಡ ಹಳ್ಳಿಗಳಲ್ಲಿ ಇದ್ದ ಆತಂಕ ಈಗ ನೆನಪಿಸಿದರೆ ಹಾಸ್ಯ ಅನ್ನಿಸಬಹುದು ಆದರೆ ಆ ಕಾಲದ ಜಗತ್ತು ಅದಾಗಿತ್ತು.
#ದಕ್ಷಿಣ ಬಾರತೀಯರು ಅತಿ ಹೆಚ್ಚು ಭಯಪಟ್ಟಿದ್ದು ನಾಸಾದ Skylab ಬೀಳುತ್ತೆ ಎಂದು 1979ರಲ್ಲಿ ಅಮೆರಿಕಾದ ಮೊದಲ ಸೌರ ನಿಲ್ದಾಣವಾದ ಇದರಿಂದ ಅಮೆರಿಕಾ ಅಂತರಿಕ್ಷಾ ಸಂಶೋದನೆ ನಡೆಸಿತ್ತು, ಇದರ ಒಟ್ಟು ತೂಕವೇ 700 ಟನ್ ಗಳಾಗಿತ್ತೆಂದರೆ ಇದರ ಅಗಾದತೆ ಅರಿವಾದೀತು. ಇದು ತನ್ನ ಕಕ್ಷೆಯಿಂದ ಜಾರಲು ಪ್ರಾರಂಬಿಸಿದಾಗ ವಿಜ್ಞಾನಿಗಳಿಗೆ ಆತಂಕ ಪ್ರಾರಂಭ ಆಯಿತು ಕ್ರಮೇಣ ಇದು ಭೂಮಿಯ ಗುರುತ್ವಾಕಷ೯ಣೆಗೆ ತಲುಪಿ ಭೂಮಿ ಸಮೀಪಿಸಿ ಭೂಮಿಯ ವಾಯುಮಂಡಲ ಪ್ರವೇಶಿಸಿದರೆ ದೊಡ್ಡ ಅಗ್ನಿ ದುರಂತ ಆಗಲಿದೆ ಮತ್ತು ಇದು ಬೀಳುವ ಪ್ರದೇಶ ಜನವಸತಿ ಆದರೆ ಸಾವು ನೋವು, ಅರಣ್ಯ ಪ್ರದೇಶವಾದರೆ ಅರಣ್ಯ ನಾಶ ಎಂಬ ಸುದ್ದಿ ವಿಶ್ವದಾದ್ಯಂತ ದೊಡ್ಡ ಆತಂಕಕ್ಕೆ ಕಾರಣವಾಯಿತು. ಅಮೆರಿಕಾ ಸಕಾ೯ರ ಈ ಬಗ್ಗೆ ಉದಾಸೀನ ಪಡುತ್ತಿದೆ, ಈ ಪ್ರಯೋಗ ಶಾಲೆಯ ಹೆಚ್ಚಿನ ಭಾಗ ದಕ್ಷಿಣ ಭಾರತದ ಮುOಬೈ, ಕನಾ೯ಟಕ ಕೇರಳದ ಮೇಲೆ ಬೀಳುತ್ತದೆ, ಕ್ಷಣಗಣನೆ ಪ್ರಾರಂಭ ಆಗಿದೆ ಅಂತೆಲ್ಲ ಸುದ್ದಿಗಳು ನಮ್ಮ ಊರಲ್ಲಿ ಆತಂಕಕ್ಕೆ ಕಾರಣ ಆಗಿತ್ತು. ಸುಮಾರು 3-4 ತಿಂಗಳು ಇದು ಈ ಭಾಗದ ಜನ ಜೀವನಕ್ಕೆ ತುಂಬಾ ಆತಂಕ ತಂದಿತ್ತು, ಅಮೆರಿಕಾದ ನಾಸ ಸುದ್ದಿಗಳು ಈಗಿನಷ್ಟು ಪಾರದಶ೯ಕ ಆಗಿರಲಿಲ್ಲ ಭಾರತ ಮತ್ತು ರಷ್ಯಾದ ಸ್ನೇಹದಲ್ಲಿ ಭಾರತಕ್ಕೆ ಅಮೆರಿಕಾ ಸಹಕರಿಸುತ್ತಿರಲಿಲ್ಲ. ಮಲೆನಾಡಿನ ಹಳ್ಳಿಗಳಲ್ಲಿ ಈ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರಲಿಲ್ಲ ಗಾಳಿ ಸುದ್ದ...