Blog number 1937. ಶಿವಮೊಗ್ಗ ಸ್ಮಾರ್ಟ್ ಸಿಟಿ ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಆದರೆ ಪಾದಚಾರಿ ನಡೆದರೆ ಕುಸಿದು ಸಾಯುವ ಚರಂಡಿ ಸ್ಲಾಬ್, ಟ್ರೇ ಪಾರ್ಕ್ ನಲ್ಲಿ 5 ವರ್ಷದ ಮಗು ಕುಳಿತ ಜಿಂಕೆ ಪ್ರತಿಮೆ ಮುರಿದು ಬಿದ್ದು ಸಾಯುವುದಾದರೆ ....
#ಶಿವಮೊಗ್ಗದ_ಸ್ಮಾರ್ಟ_ಸಿಟಿ_ಯೋಜನೆ #ಮುದ್ದಿನಕೊಪ್ಪದ_ಟ್ರೀ_ಪಾರ್ಕ್ #ಇನ್ನೆಷ್ಟು_ಜೀವ_ಬಲಿ_ಪಡೆದೀತು? #ಇದಕ್ಕೆ_ಉತ್ತರದಾಯಿತ್ವ_ಯಾರು? #ಕಳಪೆ_ಕಾಮಗಾರಿ_ಫಲಾನುಭವಿಗಳು_ಯಾರು? #ಶಿವಮೊಗ್ಗ_ಪಾದಚಾರಿಗಳೆ_ಎಚ್ಚರ! #ಮಕ್ಕಳನ್ನು_ಪಾರ್ಕಗೆ_ಕರೆದೊಯ್ಯುವ_ಪೋಷಕರೆ_ಎಚ್ಚರ! #ನಿಮ್ಮ_ಜೀವಕ್ಕೆ_ಬೆಲೆಯೂ_ಇಲ್ಲ_ಗ್ಯಾರಂಟಿಯೂ_ಇಲ್ಲ. ಇದು ಪ್ರಜ್ಞಾವಂತರ ಜಿಲ್ಲೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ, ರೈತ ಚಳವಳಿ - ದಲಿತ ಚಳವಳಿ ಹುಟ್ಟಿಗೆ ಕಾರಣದ ಶಿವಮೊಗ್ಗ ಜಿಲ್ಲೆಯಲ್ಲಿ ಅನೂಷ್ಟಾನವಾಗಿರುವ ಕಳಪೆ ಗುಣಮಟ್ಟದ ಕಾಮಗಾರಿಗಳು. ಶಿವಮೊಗ್ಗ ಸಿಟಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ ಯೋಜನೆ ರೂಪು ರೇಷೆ ಒಳ್ಳೆಯದೆ ಆದರೆ ಅನೂಷ್ಟಾನ ಅನುಮಾನವೇ ಆಗಿದೆ. ಶಿವಮೊಗ್ಗದ ಚರಂಡಿಗೆ ಹಾಕಿದ ಸ್ಲಾಬ್ ಕುಸಿದು ಪಾದಚಾರಿ ಮರಣ ಹೊಂದಿದ ಘಟನೆ ನಡೆದಿದೆ ಅಂದರೆ ಚರಂಡಿ ಸ್ಲಾಬ್ ಒಬ್ಬ ಮನುಷ್ಯನ ಬಾರವೂ ತಡೆದುಕೊಳ್ಳದಂತ ಸ್ಲಾಬ್ ಗಳನ್ನು ಹಾಕಿ ಎಷ್ಟು ಹಣ ಬಿಲ್ ಆಗಿರಬಹುದು? ಅರಣ್ಯ ಇಲಾಖೆಯ ಮುದ್ದಿನಕೊಪ್ಪದ ಟ್ರೀ ಪಾರ್ಕ್ ನಲ್ಲಿ ಸಿಮೆಂಟ್ ಜಿಂಕೆ ಏರಿದ 5 ವರ್ಷದ ಮಗು ಜಿಂಕೆ ಪ್ರತಿಮೆಯೆ ಕುಸಿದು ಸಾವಿಗೆ ಈಡಾಯಿತು ಅಂದರೆ ಟ್ರೀ ಪಾರ್ಕ್ 10 ಕೇಜಿ ಬಾರದ ಮಗುವಿನ ತೂಕ ತಾಳಲಾರದೇ ಬೀಳುವ ಸಿಮೆಂಟಿನ ಜಿಂಕೆ ವಿಗ್ರಹ ಅಳವಡ...