Blog number 1096. ಖ್ಯಾತ ಪತ್ರಕರ್ತ ಸಾಹಿತಿ ಅರುಣ್ ಕುಮಾರ್ ಹಬ್ಬು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಷೆ ಮಾಡಿದ್ದಾರೆ.
ಕಾರವಾರ ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅರುಣ್ ಕುಮಾರ್ ಹಬ್ಬು ಈಗ ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಗಳು. ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ೨೩ ವರ್ಷಗಳ ಕಾಲ ಪತ್ರಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ನಂತರ ಉದಯವಾಣಿಯಲ್ಲಿ ಎಂಟು ವರ್ಷ ಹುಬ್ಬಳ್ಳಿ ಕಚೇರಿಯ ಮುಖ್ಮಸ್ಥರಾಗಿದ್ದರು ಮುಂದೆ ಹತ್ತು ವರ್ಷಗಳ ಕಾಲ ಯುಎನ್ ಐ ಸುದ್ದಿ ಸಂಸ್ಥೆಯ ವರದಿಗಾರ, ಹದಿನೈದು ವರ್ಷ ಪತ್ರಿಕೋದ್ಯಮ ವಿಷಯದ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇವರ ಇಡೀ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿರುವುದು ಅಪರೂಪ ಇವರು ಆರು ಸಹೋದರರೂ ಮತ್ತು ಇವರ ತಂದೆ ಸೇರಿ ಎಲ್ಲರೂ ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಕುಟು೦ಬದ ಈ ದಾಖಲೆ ಮೊದಲನೆಯದ್ದು ಈ ಬಗ್ಗೆ ಅನೇಕರು ತಿಳಿಸಿದ್ದು ನಮ್ಮ ದೇಶದ ಯಾವುದೇ ಬಾಷೆಯಲ್ಲಿ ಒಂದೇ ಕುಟುಂಬದಲ್ಲಿನ ಏಳು ಜನರು ಇಷ್ಟೆಲ್ಲ ಕೃತಿಗಳನ್ನು ಬರೆದು ಪ್ರಕಟಿಸಿದ ದಾಖಲೆ ಇಲ್ಲ ಇದು ಗಿನ್ನೆಸ್ ದಾಖಲೆಗೆ ಸೇರುವಂತಹದ್ದು ಅನ್ನುತ್ತಾರೆ. ಅರುಣ್ ಕುಮಾರ್ ಹಬ್ಬು ಸ್ವತಃ ಬರೆದು ಪ್ರಕಟಿಸಿದ ಕೃತಿಗಳು 1. #ಪತ್ರಿಕೋಧ್ಯಮದ_ತ್ರಿವಿಕ್ರಮ (ಡಿವಿಜಿ ಕುರಿತು). 2.#ನೀವು_ಉತ್ತಮ_ಸಂದಶ೯ಕಲಾಗುವಿರಾ (ಸಾಹಿತ್ಯ ಪ್ರಕಾಶನ) 3.#ವೈವಿಧ್ಯ_ಕಲ...