Skip to main content

Posts

Showing posts from December, 2024

Blog number 3345. ಕುವೆಂಪು ಎಕ್ಸ್ಪ್ರೆಸ್ ರೈಲಿನ ನಾಮಕರಣಕ್ಕೆ ಕಾರಣ ಪತ್ರಕರ್ತ ಡಿ.ಪಿ.ಸತೀಶ್

#ಡಿ_ಪಿ_ಸತೀಶ್ CNN NEWS_18 Group Editorial Advisor South ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಕೇಂದ್ರ ಸರ್ಕಾರ ನಾಮಕರಣ ಮಾಡಲು ಇವರೇ ಕಾರಣಕರ್ತರು. ಆನಂದಪುರಂ ಸಾಹಿತ್ಯ ಹಬ್ಬದಲ್ಲಿ ತಾಳಗುಪ್ಪ ಮ್ಮೆಸೂರು ಎಕ್ಸಪ್ರೆಸ್ ರೈಲಿಗೆ ಕುವೆಂಪು ನಾಮಕರಣ ಮಾಡಿಸಿದ ಪತ್ರಕತ೯ರಿಗೆ ಗೌರವಿಸಿದ ಕ್ಷಣಗಳು #kuvempuexpress #mysoretalaguppa #railwayrenaming #sagar #Shivamogga #talaguppa #mysore #thirthahalli #BangalorePress #PressClub #PressClubOfIndia #CNNNews18 #dpsatish    ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಕೊಳಚಗಾರಿನ ಡಿ.ಪಿ. ಸತೀಶ್ ತಾಳಗುಪ್ಪದ ನಲ೦ದಾ ಪ್ರೌಡ ಶಾಲಾ ವಿದ್ಯಾರ್ಥಿ.  ನಂತರ ಸಾಗರದ ಲಾಲ್ ಬಹದ್ದೂರ್ ಕಾಲೇಜ್ ಪದವಿ ವ್ಯಾಸಂಗ ಮಾಡಿ ಚೆನೈನಲ್ಲಿ ಏಷಿಯನ್ ಏಜ್ ಕಾಲೇಜ್ ಆಫ್ ಜನ೯ಲಿಸಂ ನಲ್ಲಿ ರ್ಯಾಂಕ್ ಪಡೆದದ್ದು ಅವರ ಸಾಧನೆ.  ಮೊದಲ ವೃತ್ತಿ ದೆಹಲಿಯಲ್ಲಿ ಪಾರ್ಲಿಮೆಂಟ್ ವರದಿಗಾರರಾಗಿ ಸಿಸೋಡಿಯರ ಜೊತೆ (ದೆಹಲಿಯ ಈಗಿನ ಆಮ್ ಆದ್ಮಿ ಪಾರ್ಟಿ ಉಪ ಮುಖ್ಯಮಂತ್ರಿ) ದೆಹಲಿಯಲ್ಲಿ ಪ್ರಾರಂಬಿಸಿದ್ದರು.    ಈಗ ದೇಶದ ಅಂತಾರಾಷ್ಟ್ರೀಯ ಪತ್ರಿಕೋಧ್ಯಮದಲ್ಲಿ ಇವರದ್ದು ದೊಡ್ಡ ಹೆಸರು ಹಾಲಿ TV 18 ಬ್ರಾಡ್ ಕಾಸ್ಟ್ ಲಿಮಿಟೆಡ್ ಗ್ರೂಪ್ ಎಡಿಟೋರಿಯಲ್ ಅಡ್ವೆಸರ್ ಆಗಿ ದಕ್ಷಿಣ ಭಾರತ, ಶ್ರೀಲಂಕ ಮತ್ತು ಮಾರ...

Blog number 3344. ಕಾಗೋಡು ತಿಮ್ಮಪ್ಪರಂತ ರಾಜಕಾರಣಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕು

#ಕಾಗೋಡು_ತಿಮ್ಮಪ್ಪನವರು ಕಾಗೋಡು ತಿಮ್ಮಪ್ಪನಂತವರು ಇರ ಬೇಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಆದರೆ ಇವರೇ ಕೊನೆಯವರು 1999 ರಿಂದ ನನಗೂ ಅವರಿಗೂ ರಾಜಕಾರಣ ಸಂಬಂದ ಇಲ್ಲದೆಯೂ ಅವರನ್ನ ಈ ಮೂಲಕ ಶ್ಲಾಘಿಸುತ್ತೇನೆ.    ಕಾಗೋಡು ತಿಮ್ಮಪ್ಪನವರು ನನ್ನನ್ನ ವಿರೋದಿಸಿದರೂ ನಾನು ಅವರನ್ನ ಶ್ಲಾಘನೆ ಮಾಡಲು ಕಾರಣ ಅವರ ವ್ಯಕ್ತಿತ್ವ. #KagoduThimmappa #ExMinister #Exspeaker #govtofkarnataka #ಕಾಂಗ್ರೆಸ್ #sagarvidanasabha  #ಶಿವಮೊಗ್ಗ #sagar #arunprasad #malenadu  #LandReforms #bagarhukum #kagoduhorata  #Tenancy    ಕಾಗೋಡು ಡಾ.ರಾಮಮನೋಹರ ಲೋಹಿಯ ಚಿಂತನೆಯಲ್ಲಿ, ಶಾಂತವೇರಿ ಗೋಪಾಲಗೌಡರ ಮೂಸೆಯಲ್ಲಿ ಬಂದವರು.  ಸಮಾಜವಾದಿ ಪಕ್ಷದಿಂದ- ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಲು ಕಾಂಗ್ರೆೇಸ್ ಸೇರಿದರು.    ಕಾಗೋಡು ತಿಮ್ಮಪ್ಪರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ ನನ್ನ ಮೇಲೆ 22 ಕ್ರಿಮಿನಲ್ ಕೇಸುಗಳು, ಗೂಂಡಾ ಕಾಯ್ದೆಯಲ್ಲಿ ರೌಡಿ ಶೀಟರ್ ಆಗಿ ನನ್ನನ್ನ ಅವರು ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ. ಅವರಿಗೆ ಬಡವರ, ರೈತರ ಬಗ್ಗೆ ನೈಜ ಕಾಳಜಿ ಇದೆ, ಮೂಗಿಗೆ ತುಪ್ಪ ಹಚ್ಚುವ ಬೇರೆ ರಾಜಕಾರ...

Blog number 3343. ದಂಗೆಯ ಸುಳಿಯಲ್ಲಿ ನಾನು

#ದಂಗೆಯ_ಸುಳಿಯಲ್ಲಿ_ನಾನು ವಿಷ್ಣು_ಭಟ್_ಗೋಡಶೆ_ವರಸಾಯಿಕರ_ಎಂಬ_ಮರಾಠಿ_ಪುರೋಹಿತರು_ಬರೆದ_ಪ್ರತ್ಯಕ್ಷ_ಅನುಭವ_ಕಥನ ದಂಗೆಯ_ಸುಳಿಯಲ್ಲಿ_ನಾನು_ಎಂಬ_ಪುಸ್ತಕ ಸಿಪಾಯಿ_ದಂಗೆ_1857ರನ್ನು_ಪ್ರತ್ಯಕ್ಷವಾಗಿ_ನೋಡಿ_ದಾಖಲಿಸಿದ_ದಾಖಲೆ. ಈ_ಪುಸ್ತಕ_ಮೂರು_ಬಾರಿ_ಓದಿದ್ದೆ. #dangeyadinagalu #vishnubattagodse #peshwe  #books #bookslover #amruthlalsagar #premansagar     ವಿಷ್ಣು ಭಟ್ಟ ಗೋಡಶೆ ವರಸಾಯಿಕರ ಸಂಸ್ಕೃತ ವಿದ್ಯಾ ಪಾರಂಗತ ಯಜ್ಞ ಯಾಗಗಳು, ಪೂಜೆ ಪುನಸ್ಕಾರಗಳನ್ನು ಮಾಡಿಸುವುದರಲ್ಲಿ ನಿಸ್ಸೀಮರು ಇವರು ಮಹಾರಾಷ್ಟ್ರದ  ಪುಣೆಯ ಬಳಿಯ ವರಸ ಊರಿನವರು.    ಪೇಷ್ವೆಯಿಂದ ಪತನದ ನಂತರ ತನ್ನ ಪರಿಸರದಲ್ಲಿ ಬ್ರಾಹ್ಮಣ ವೃತ್ತಿಗೆ ಪ್ರೋತ್ಸಾಹ ಸಿಗದ ಕಾರಣ ಬ್ರಹ್ಮಾವರ್ತದಲ್ಲಿ (ಕಾನ್ಪುರದಲ್ಲಿ) ದಿವ೦ಗತ ಪೇಷ್ವೆ ಇಮ್ಮಡಿ ಬಾಜಿ ರಾಯನ ದತ್ತು ಪುತ್ರ ನಾನಾ ಸಾಹೇಬನ ಆಶ್ರಯದಲ್ಲಿದ್ದರೆ ಅಲ್ಲಿದ್ದ ತನ್ನ ಚಿಕ್ಕಪ್ಪನ ಸಹಾಯದಿಂದ ಹಣಗಳಿಸಬಹುದೆಂದು ಉತ್ತರ ಭಾರತದ ತೀರ್ಥಕ್ಷೇತ್ರ ಸಂದರ್ಶಿಸುವ ಉದ್ದೇಶದಿಂದ ತನ್ನ ಇನ್ನೊಬ್ಬ ಚಿಕ್ಕಪ್ಪನ ಜೊತೆ ನಡೆಸಿದ ದೀರ್ಘ ಪ್ರವಾಸ ಕಥನ ಇದು.   ಕಾಲು ನಡಿಗೆಯಲ್ಲೇ ಈ ಪ್ರವಾಸ ಕಾಲದಲ್ಲಿ ಇವರು ಅನುಭವಿಸಿದ ಕಷ್ಟಗಳು, ಕಳ್ಳರ ಹಾವಳಿ, ಆಗಲೇ ಬ್ರಿಟಿಷರ ವಿರುದ್ದ ಸಿಡಿದೆದ್ದ ಸಿಪಾಯಿಗಳ ದಂಗೆ ಈ ಎಲ್ಲಾ ಕಷ್ಟಗಳು ಇದರಲ್ಲಿ ದಾಖಲಿಸಿದ್ದಾರೆ. ...

Blog number 3342. ನನ್ನ ಇಷ್ಟದ ಕತೆಗಾರ ಪ್ರಭಂದ ಅಂಬೂತೀರ್ಥ

#ಪ್ರಬಂದಅಂಬುತೀರ್ಥ. ಇದು ಸ್ತನ ಕ್ಯಾನ್ಸರ್ ಗೆದ್ದ ಮಹಿಳೆಯ ಕಥೆ ಮಾಯವಾಗುತ್ತಿರುವ ಮಲೆನಾಡಿನ ಕೊಟ್ಟಿಗೆಗಳು ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ     ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ.  ಅವರ ಕೃಷಿ ಕೆಲಸದ ಬಿಡುವಿನಲ್ಲಿ ಅವರ ಸಂಪರ್ಕ ಸಂಖ್ಯೆ ವಾಟ್ಸಪ್ 9481801869 #malenadu #westernghats #westernghatsofindia #thirthahalli #sringeri #koppa #cancerawareness #cancertreatment #cancersurvivor #cancerrecovery #cancercare #Cancer #breastcancersurvivor #ಶಿವಮೊಗ್ಗ #ShivamoggaNews     ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.             ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾ...

Blog number 3341. ವಿದಾನ ಸೌದದ ಹಿರಿಯ ಪತ್ರಕರ್ತ ಆರ್.ಟಿ. ವಿಠಲಮೂರ್ತಿ ನನ್ನ ಹೋರಾಟ ಮತ್ತು ನನ್ನ ಕಥಾ ಸಂಕಲನದ ಬಗ್ಗೆ ಬರೆದಿದ್ದಾರೆ

#ಆರ್_ಟಿ_ವಿಠಲಮೂರ್ತಿ ನನ್ನ ಬಗ್ಗೆ ಬರೆದಿದ್ದಾರೆ ನೋಡಿ.... ....ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು.... ....ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ, ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು..... #hibangalore #rtvittalmurthy #Andolana #vidanasouda #BangalorePressClub #sagar #shivamogga #bangalore #karnataka #PressMeet #PressClub #Byregowda #agriculture #govtofkarnataka #horticulture  #Lokayukta #Anticorruptiondrive  ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆರ್.ಟಿ. ವಿಠಲ ಮೂರ್ತಿ ರಾಜ್ಯದ ರಾಜದಾನಿ ಬೆಂಗಳೂರಿನ ವಿಧಾನ ಸೌದದಲ್ಲಿ ಈಗ ಹಿರಿಯ ಪತ್ರಕರ್ತರು, ರವಿ ಬೆಳಗೆರೆ ಅವರ ಆತ್ಮೀಯ ಗೆಳೆಯರಾಗಿದ್ದವರು. ಅವರು ನನ್ನ ಕಥಾ ಸಂಕಲನ ಓದಿ ಬರೆದ ಅಭಿಪ್ರಾಯಗಳು ಇಲ್ಲಿದೆ. ನನ್ನ ಹೋರಾಟದ ಜೀವನದಲ್ಲಿ ಅವರ ಉಪಕಾರ ಮರೆಯಲು ಸಾಧ್ಯವೇ ಇಲ್ಲ. ನನ್ನ ಹೋರಾಟವಾದ ಸಾಗರ ತಾಲ್ಲೂಕಿನ  ಕೃಷಿ ಇಲಾಖೆಯ ಭ್ರಷ್ಟಾಚಾರ ಬಯಲು ಮಾಡಲು ಅಂದು ಅವರು 17 - ಸೆಪ್ಟೆಂಬರ್-1995ರಲ್ಲಿ ವೈಕುಂಠರಾಜು ಅವರ #ವಾರಪತ್ರಿಕೆ ಯಲ್ಲಿ ಬರೆದ ವರದಿ ದಿನಾಂಕ 6...

Blog number 3340. ಆನಂದಪುರಂ ಹೊಸ ಆನೆ ಕಾರೀಡಾರ್ ಆದೀತ?

https://www.facebook.com/share/p/18AzftsbvP/ *#ಕಾಡಾನೆಗಳು* *ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?*  *ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?* *ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.* *ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ -  ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್* *ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು.* #elephant #wildelephants #elephantcarridor  #badrawildlife #ambligoladam #kollibachaludam #Anandapuram #ripponpet #sagar #hosanagara #shivamogga #choradi #achapura #gilalagundi #kenchanala #ForestDepartment #DC #govtofkarnataka        *ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.*     *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*       *ವನ್ಯಜೀವಿ ಸಂರಕ್ಷಣಾ ಕಾಯ್...

Blog number 3339.. ಹಾವು ಗೊಲ್ಲರ ಕತ್ತೆ ಪುರಾಣ

#ಹಾವುಗೊಲ್ಲರು ನನ್ನ_ಹಾವುಗೊಲ್ಲರ_ಪುರಾಣ_ಎಂಬ_ಕಥೆಯ_ಕಥಾನಾಯಕ_ಕೃಷ್ಣಪ್ಪ​. ......ಅದಕ್ಕೆ ಅವರೆಲ್ಲರ ಸಮರ್ಥನೆ ಏನೆಂದರೆ ಬೇರೆ ಕತ್ತೆ ಆಗಿದ್ದರೆ ಅದು ರಾಮಸ್ವಾಮಿಗೆ ಹೊಟ್ಟೆ ಸವರಲು ಯಾವ ಕಾರಣಕ್ಕೂ ಬಿಡುತ್ತಿರಲಿಲ್ಲ ಲಾತಾ ಕೊಟ್ಟು ರಾಮಸ್ವಾಮಿ ಹಲ್ಲು ಉದುರಿಸುತ್ತಿತ್ತು ಅಂದರು.... .....ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ  ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." "ಸ್ವಾಮಿ ನಿನ್ನ ಕತ್ತೆ ತಿರುಗಲು ಹೋಗಿದ್ದು ವಾಪಾಸ್ ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ ಅಲ್ಲಿ ಎರಡು ಕತ್ತೆ ಇದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಯಿತು.... ....ಅವತ್ತು ರಾಮಸ್ವಾಮಿ ನಮ್ಮದಲ್ಲದ ಬೇರೆ ಕತ್ತೆ ಹೊಟ್ಟೆ ಒಳಗೆಲ್ಲ ಸವರಿನೂ ಹಲ್ಲು ಮುರಿಸಿಕೊಂಡಿಲ್ಲಲ್ಲ ಅಂತ !?.... #snakerescue #snakes #election #shiravanthe #halugudde #ripponpet #hosanagara #sagar #shivamogga #congressgovernment #nagaprathishte #nagaradane #Anandapuram #hebbodi #bilalibilli #SmallStories     ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಅವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.   1990ರ ದಶಕದ ತನಕ ಇವರೆಲ್ಲರದ್ದು ಅಲ...

Blog 3338. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಗೋಡುನಂತವರು ಇರಬೇಕು

https://www.facebook.com/share/p/15J7zxaaT9/ *#ಕಾಗೋಡು_ತಿಮ್ಮಪ್ಪನವರು* *ಕಾಗೋಡು ತಿಮ್ಮಪ್ಪನಂತವರು ಇರ ಬೇಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಆದರೆ ಇವರೇ ಕೊನೆಯವರು* *1999 ರಿಂದ ನನಗೂ ಅವರಿಗೂ ರಾಜಕಾರಣ ಸಂಬಂದ ಇಲ್ಲದೆಯೂ ಅವರನ್ನ ಈ ಮೂಲಕ ಶ್ಲಾಘಿಸುತ್ತೇನೆ.*    *ಕಾಗೋಡು ತಿಮ್ಮಪ್ಪನವರು ನನ್ನನ್ನ ವಿರೋದಿಸಿದರೂ ನಾನು ಅವರನ್ನ ಶ್ಲಾಘನೆ ಮಾಡಲು ಕಾರಣ ಅವರ ವ್ಯಕ್ತಿತ್ವ.* #KagoduThimmappa #ExMinister #Exspeaker #govtofkarnataka #ಕಾಂಗ್ರೆಸ್ #sagarvidanasabha  #ಶಿವಮೊಗ್ಗ #sagar #arunprasad #malenadu  #LandReforms #bagarhukum #kagoduhorata  #Tenancy    *ಕಾಗೋಡು ಡಾ.ರಾಮಮನೋಹರ ಲೋಹಿಯ ಚಿಂತನೆಯಲ್ಲಿ, ಶಾಂತವೇರಿ ಗೋಪಾಲಗೌಡರ ಮೂಸೆಯಲ್ಲಿ ಬಂದವರು.*  *ಸಮಾಜವಾದಿ ಪಕ್ಷದಿಂದ- ಜನತಾ ಪಕ್ಷದಿಂದ ಮುಂದೆ ಗುಂಡೂರಾಯರ ಪ್ರೇರಣೆಯಿಂದ ಸಾರೆಕೊಪ್ಪದ ಬಂಗಾರಪ್ಪನವರ ವಿರೋಧ ರಾಜಕಾರಣ ಮಾಡಲು ಕಾಂಗ್ರೆೇಸ್ ಸೇರಿದರು.*    *ಕಾಗೋಡು ತಿಮ್ಮಪ್ಪರ ವಿರುದ್ಧ 1999ರ ವಿಧಾನ ಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪದಿ೯ಸಿ ಶೇಕಡ 10 ಮತ ಪಡೆದದ್ದರಿಂದ ನನ್ನ ಮೇಲೆ 22 ಕ್ರಿಮಿನಲ್ ಕೇಸುಗಳು, ಗೂಂಡಾ ಕಾಯ್ದೆಯಲ್ಲಿ ರೌಡಿ ಶೀಟರ್ ಆಗಿ ನನ್ನನ್ನ ಅವರು ಸಿಲುಕಿಸಿದರೂ ಅವರ ಬಗ್ಗೆ ನನ್ನ ಅಭಿಪ್ರಾಯ ಕೇಳಿ.* *ಅವರಿಗೆ ಬಡವ...

Blog number 3337. ಅಲೆಮಾರಿ ಬುಡಕಟ್ಟು ಜನಾಂಗವನ್ನ ಆ ಕಾಲದ ರಾಜರ ಆಡಳಿತದಲ್ಲಿ ಬಳಕೆ

#ಕಾಡುಗೆಣಸು ಅಲೆಮಾರಿ ಬುಡಕಟ್ಟು ಜನಾಂಗಗಳು.     ವಷ೯ಕ್ಕೆ ಎರೆಡು ಬಾರಿ ಕಾಡು ಗೆಣಸು ಕಾಡಿನಿಂದ ಕಿತ್ತು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರರು            ಹಾವು ಗೊಲ್ಲರು ಈಗ ಅಲೆಮಾರಿಗಳ ಜೀವನದಿಂದ ಅರೆ ಅಲೆಮಾರಿಗಳಾಗಿದ್ದಾರೆ.       ರಾಜರ ಕಾಲದಲ್ಲಿ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನ ರಾಜ ತನ್ನ ಅನೇಕ ಆಡಳಿತ ವಿಚಾರಗಳಿಗೆ ಬಳಕೆ ಮಾಡುತ್ತಿದ್ದರು.      ಆದ್ದರಿಂದ ಪ್ರತಿ ವರ್ಷ ಮಳೆಗಾಲದ ಮುನ್ನ ಕೆಳದಿ ರಾಜರ ಆನಂದಪುರಂ ಕೋಟೆ ಎದರು ಈ ಎಲ್ಲಾ ಜನಾಂಗಗಳು ಬಂದು ಸೇರಿ ಮಳೆಗಾಲ ಕಳೆದ ನಂತರ ಪುನಃ ತಮ್ಮ ಸಂಚಾರಕ್ಕೆ ಹೊರಡುತ್ತಿದ್ದರು. #tribals #snakerescue #Cowards #sidda #sudugadusidda #korama #dombaru #keladi #Anandapuram #malenadu #ಅಲೆಮಾರಿ #ಬುಡಕಟ್ಟು #Kings #army    90 ರ ದಶಕದ ತನಕ ನಮ್ಮ ಆನಂದಪುರಂನ ಕೆಳದಿ ಅರಸರ ಕೋಟೆ ಎದುರಿನ ಕೆರೆ ಮತ್ತು ಆನಂದಪುರಂ ಕಾಲೇಜು ಎದುರಿನ ಬಯಲು (ಈಗ ಅಲ್ಲಿ ಹಾಸ್ಟೆಲ್ - ಪೆಟ್ರೋಲ್ ಬಂಕ್ - ಪೋಲಿಸ್ ಠಾಣೆ ಆಗಿದೆ) ಪ್ರದೇಶದಲ್ಲಿ ವರ್ಷವಿಡಿ ಸಂಚರಿಸುವ ಅಲೆಮಾರಿ ಬುಡಕಟ್ಟು ಜನಾಂಗದವರೆಲ್ಲ ಮಳೆಗಾಲದ ಮುನ್ನ ಬಂದು ತಂಗುವ ಖಾಯಂ ಜಾಗವಾಗಿತ್ತು. ಇದು ಸುಮಾರು ಶತಮಾನಗಳಿಂದ ನಡೆದು ಕೊಂಡು ಬಂದ ಪದ್ದತಿ ಆಗಿತ್ತು ಬಹುಶಃ ಈ ಅಲೆಮಾರಿ ಬುಡಕಟ್ಟು...

Blog number 3336.ಗಣಪೆ ಕಾಯಿ ಮಾಹಿತಿ

#ಗಣಪೆಕಾಯಿ       ನನ್ನ  ಗಣಪೇ ಕಾಯಿ ಖಾದ್ಯದ ಲೇಖನ ಹೆಚ್ಚು ಜನರಿಗೆ ತಲುಪಿದೆ.      ನನ್ನ ಗಣಪೆಕಾಯಿ  ಲೇಖನ ಓದಿ ಪ್ರತಿಕ್ರಿಯಿಸಿದವರು ಅನೇಕರು.    #ಗುರುಬಸಪ್ಪ_ಮತ್ತಿಹಳ್ಳಿ ಪ್ರತಿಕ್ರಿಯಿಸಿ ಹೆಚ್ಚಿನ ಮಾಹಿತಿ ಬರೆಯಿರಿ ಎಂದಿದ್ದಾರೆ. #ganapekayi #malenadu #westernghats #westernghatsofindia #vegitarianfood #foodblogger #ayurveda #dreamhurb #entadareedhi #ಗಣಪೆಕಾಯಿ         ಮಂಗಳೂರಿನ ಅತ್ರಿ ಬುಕ್ ಹೌಸಿನ ಸಾಹಸಿ #ಅಶೋಕವರ್ಧನ್ ಮಂಗಳೂರಿನಲ್ಲಿ ತಮ್ಮ ನೈಸರ್ಗಿಕ ಕಾಡು ಬೆಳೆಸುವಲ್ಲಿ 15 20 ವರ್ಷದ ಹಿಂದೆ ನೆಲಕ್ಕೆ ಊರಿದ ಗಣಪೆ ಬೀಜ  ಈಗ ಬೃಹತ್ ಬಳ್ಳಿ ಆಗಿ ಅರ್ಧ ಎಕರೆ ವಿಸ್ತರಿಸಿರುವ ಪೋಟೋ ಕಳಿಸಿದ್ದಾರೆ ಅದರ ಬೀಜಗಳನ್ನು ತಂದು ಅವರ ಇನ್ನೊಂದು ನೈಸರ್ಗಿಕ ಕಾಡು ಅಶೋಕ ವನದಲ್ಲಿ ಹರಡಿದ್ದಾರಂತೆ ಈ ಫೋಟೋ ಲಗತ್ತಿಸಿದ್ದೇನೆ.         ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ #ಸುಮಿತ್ರ_ಎಲ್_ಸಿ.  ಬಾಲ್ಯದಲ್ಲಿ ಅವರ ಮನೆಯ ಸಮೀಪದಲ್ಲಿ ಗಣಪೆ ಕಾಯಿ ಬಳ್ಳಿ ಇದ್ದ ಬಗ್ಗೆ ಮತ್ತು ಅದರ ತಿರುಳನ್ನು ಜಾನುವಾರುಗಳಿಗೆ ಬಳಸುತ್ತಿದ್ದನ್ನು ಬರೆದಿದ್ದಾರೆ.          ಹಿರಿಯ ಪತ್ರಕತ೯ರಾದ #ಅರ...

Blog number 3335. ಅಡಿಕೆಯನ್ನ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕ್ಯಾನ್ಸರ್ ಕಾರಕ ಹಣೆ ಪಟ್ಟದಿಂದ ತೆಗೆಸುವುದು ಹೇಗೆ?

#ಅಡಿಕೆ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದ ಸರಣಿ ಲೇಖನ ಭಾಗ-9. ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಮಾವೇಶದ ಉದ್ದೇಶ ತುರ್ತಾಗಿ ತೆಗೆದು ಕೊಳ್ಳಬೇಕಾದ ತೀರ್ಮಾನಗಳು ಅಡಿಕೆ ಬೆಳೆಗಾರರಿಗೆ ಸಿಗಬೇಕಾದ ಭರವಸೆಗಳು.   ಬಹುತೇಕ ಅಡಿಕೆ ಬೆಳೆಗಾರರಿಗೆ ಪ್ರಸಕ್ತ ಅಡಿಕೆ ಬೆಳೆಯ ಸಮಸ್ಯೆ ಏನು ಎನ್ನುವುದು ಅರಿವು ಮೂಡಿಸುವ ಕೆಲಸ ಮೊದಲು ಆಗ ಬೇಕಾಗಿದೆ.    ತಕ್ಷಣ ಅಡಿಕೆ ಕ್ಲೀನಿಕಲ್ ಟ್ರಯಲ್ ಪ್ರಾರಂಬಿಸಿದರೂ ಅಂತಿಮ ಪಲಿತಾಂಶ ಪಡೆಯಲು ಕನಿಷ್ಟ 10 ವರ್ಷ ಬೇಕು.     ಅಡಿಕೆಗೆ ಬಂದ ಗಂಡಾಂತರ ಭಾರತದ ಸಂಸತ್ ಅಥವ ಸರ್ವೋಚ್ಚ ನ್ಯಾಯಾಲಯದಿಂದ ಬಗೆಹರಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಅಡಿಕೆ ಬೆಳೆಗಾರರಿಗೆ ತಿಳಿದಿರಲಿ. #arecanut #arecafarmers #malenadu #panmasala #gutka #CancerCare #Cancerawareness #shivamogga #sagar #campco    9-ಅಕ್ಟೋಬರ್- 2024ರಂದು ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ ಕಾರಕ ಘೋಷಣೆ ಮಾಡಿದೆ ಇದರ ಪರಿಣಾಮಗಳು ಅಡಿಕೆ ಬೆಳೆ ಮತ್ತು ಬಳಕೆ ಮೇಲೆ ಯಾವ ರೀತಿ ಆಗಲಿದೆ?....   ಸುಪ್ರಿಂ ಕೋರ್ಟ್ ನಲ್ಲಿ ಅಡಿಕೆ ಬಗ್ಗೆ ಇದ್ದ ವ್ಯಾಜ್ಯ ಯಾವುದು? 2014 ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ? .....   ಸಂಸದ್ ಅದಿವೇಶನದಲ್ಲಿ ಸರ್ಕಾರ ನೀಡಿದ ಉತ್ತರ ಏನು?...    ಇವುಗಳನ್ನ ವಿವರಿಸಬೇಕು. ...

Blog number 3334. ಪಾನ್ ಪರಾಗ್ ಗುಟ್ಕಾ ಕಂಪನಿ ಸ್ಥಾಪಕ ಎಂ.ಎಂ. ಕೊಠಾರಿ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ನೀನಾಸಂ ಕೆ.ವಿ.ಸುಬ್ಬಣ್ಣ ಬಹಿರಂಗ ಪತ್ರ

#ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-10. #ಕೆ_ವಿ_ಸುಬ್ಬಣ್ಣ ಕೆ.ವಿ. ಸುಬ್ಬಣ್ಣ 1997ರಲ್ಲೇ ಗುಟ್ಕಾ ವಿರೋದಿಸಿದ್ದರು ಮತ್ತು ಸಂಪ್ರದಾಯಿಕ ಅಡಿಕೆಗೆ ಬರುವ ಅಪಾಯದ ಬಗ್ಗೆ ಎಚ್ಚರಿಸಿದ್ದರು.  16 ಫೆಬ್ರುವರಿ 1997 ರಂದು  ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೇ ಗೌರವ ಪ್ರಶಸ್ತಿಗೆ ಬಾಜನರಾದ ನೀನಾಸಂ ಸ್ಥಾಪಕ ಕೆ. ವಿ ಸುಬ್ಬಣ್ಣ ಪಾನ್ ಪರಾಗ್ ಗುಟ್ಕಾ ಕಂಪನಿಯ ಸ್ಥಾಪಕರಾದ ಎಮ್. ಎಮ್. ಕೊಠಾರಿ ಅವರಿಗೆ ಬರೆದ ಬಹಿರಂಗ ಪತ್ರ ಇದು.   ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಗುಟ್ಕಾ ಕಂಪನಿಯ ಮಾಲೀಕರಿಗೆ ಸನ್ಮಾನ ಸಮಾರಂಭ ನಡೆಸಿದ ಸಂದರ್ಭದಲ್ಲಿನ ಪತ್ರ ಇದು. ಆಗ ಅಡಿಕೆ ವ್ಯಾಪಾರಿಗಳು ಗುಟ್ಕಾ ಕಂಪನಿಗಳು ಇರುವುದರಿಂದಲೇ ಮತ್ತು ಜನ ಗುಟ್ಕಾ ತಿನ್ನುವುದರಿಂದಲೇ ಅಡಿಕೆಗೆ ಬೆಲ ಇರುವುದು  ಎಂಬ ರೀತಿ ಗುಟ್ಕಾ ಪರವಾಗಿ ಅಡಿಕೆ ಬೆಳೆಗಾರರ ಮನ ಪರಿವರ್ತಿಸಿದ್ದರು. ನಂತರ ಗುಟ್ಕಾ 2012-13ರಲ್ಲಿ ರದ್ದು ಆಯ್ತು.  ಈಗ ಅಡಿಕೆ ಏನಾಗುತ್ತದೆ ಗೊತ್ತಿಲ್ಲ ಈ ಬಗ್ಗೆ 6-ಡಿಸೆಂಬರ್ -2024 ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ನಡೆಯಲಿದೆ.     ಕೆ. ವಿ. ಸುಬ್ಬಣ್ಣನವರ ದೂರ ದೃಷ್ಟಿಯ ಈ ಪತ್ರ ಸರ್ವಕಾಲಿಕ ಆಗಿದೆ ಒಮ್ಮೆ ಓದಿ ನೋಡಿ.    ಅಡಿಕೆ ಉಳಿಯಬೇಕು ಆದ...

Blog number 2333. ಕೆ.ವಿ.ಸುಬ್ಬಣ್ಣ ಪಾನ್ ಪರಾಗ್ ಗುಟ್ಕಾ ಕಂಪನಿ ಮಾಲೀಕರಿಗೆ ಬರೆದ ಬಹಿರಂಗ ಪತ್ರ

#ಕೆ_ವಿ_ಸುಬ್ಬಣ್ಣ ಗುಟ್ಕಾ ಕಂಪನಿ ಪಾನ್ ಪರಾಗ್ ಸ್ಥಾಪಕ ಎಂ.ಎಂ. ಕೊಠಾರಿ ಅವರಿಗೆ ಅಡಿಕೆ ಬೆಳೆಗಾರರಿಂದ ಸನ್ಮಾನ ನೀಡುವಾಗ ಕೆ.ವಿ.ಸುಬ್ಬಣ್ಣ ಬರೆದ ಬಹಿರಂಗ ಪತ್ರ (ಕೃಪೆ:ಕರಪತ್ರ ಮಾವಿನಗುಂಡಿ ಅಶೋಕ್ ಹೆಗ್ಗಡೆ ಸಂಗ್ರಹದಿಂದ)

Blog number 2332. ಅಡಿಕೆ ಯಂತ್ರದ ಪಿತಾಮಹ

#ಇವತ್ತಿನ_ನನ್ನ_ವಿಶೇಷ_ಅತಿಥಿಗಳು. https://youtu.be/DvNru8UzWqE?si=ZcVsNXu_0zUHBciF ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹಾ ಮುಂಡಿಗೆಸರ ಮಂಜಪ್ಪರ ಪುತ್ರ ರಾಮಮೂರ್ತಿ. ಇವರು ಸಂಶೋಧಿಸಿದ ಮಾದರಿಯಲ್ಲಿ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಯಂತ್ರ ತಯಾರಿಸಿ ಮಾರಾಟ ಮಾಡಿದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕ ಹಾಜಿ ಬುಡನ್ ಅಬ್ಬಲ್ಲಾ ಸಾಹೇಬರ ಮರಿ ಮಗ ಯಾಸೀನ್. ಉಡುಪಿ ಯೋಜನ್ ಅಡಿಕೆ ಯಂತ್ರದ ಸಹಯೋಗಿ ತೀರ್ಥಹಳ್ಳಿಯ ಅಡಿಕೆ ಬೆಳೆಗಾರ ರಘು. ಶಿವಮೊಗ್ಗ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಮತ್ತು ಕೋಣಂದೂರು ಜಾನ್   ಮುಂಗರವಳ್ಳಿ ಮಂಜಪ್ಪನವರು 1964ರಲ್ಲೇ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದ್ದರು.    ಆ ಮೂಲ ಯಂತ್ರ ನಿಮಿಷಕ್ಕೆ ಒಂದು ಅಡಿಕೆ ಸಿಪ್ಪೆ ಸುಲಿಯುವ ಮೊದಲ ಯಂತ್ರ.    ವೇಗವಾಗಿ ಅಡಿಕೆ ಸಿಪ್ಪೆ ಸುಲಿಯುವ ಸುದಾರಿತ ಯಂತ್ರ ಮಾಡುವ ಸಂಶೋಧನೆ ಅನೇಕ ವರ್ಷ ಮಾಡುತ್ತಿದ್ದರು.   ಈ ಅಡಿಕೆ ಯಂತ್ರದ ಸಂಶೋಧನೆ ವಿವಿಧ ಹಂತಗಳನ್ನು ನೋಡಿದವರು ಕೆ ವಿ ಸುಬ್ಬಣ್ಣ ಮತ್ತು ಖ್ಯಾತ ಸಾಹಿತಿ ಶಿವರಾಮ ಕಾರಂತರು.    ಹೆಗ್ಗೋಡಿಗೆ ಬಂದಾಗೆಲ್ಲ ಶಿವರಾಮ ಕಾರಂತರು ಕೆವಿ ಸುಬ್ಬಣ್ಣನವರ ಜೊತೆ ಮುಂಗರವಳ್ಳಿಯ ಮಂಜಪ್ಪನವರ ಮನೆಗೆ ಬಂದು "ಮಂಜಪ್ಪ ನಿನ್ನ ಅಡಿಕೆ ಮಿಷನ್ ಎಲ್ಲಿ ತನಕ ಬಂತು" ಎಂದು ವಿಚಾರಿಸಿ,ಸ್ವತಃ ಅದರ ಕಾರ್ಯವಿಧಾನಗಳನ್ನು ವೀಕ್ಷಿಸುತ್ತಿದ್ದ...

Blog number 2331. ನಮ್ಮ ಹೊಂಬುಜ ಲಾಡ್ಜ್

#Hombujaresidency  https://maps.app.goo.gl/Ud1PPr2t6VXD2nBE7 ಹೊಂಬುಜ ರೆಸಿಡೆನ್ಸಿ ಲಾಡ್ಜ್ ಯಡೇಹಳ್ಳಿ ವೃತ್ತ NH 69. ಆನಂದಪುರಂ ಅಂಚೆ, ಸಾಗರ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ 577412 ಮ್ಯಾನೇಜರ್ ಸೆಲ್ ಫೋನ್ 8088857771.