Skip to main content

Posts

Showing posts from 2024

Blog number 3378. ಪ್ರಸಕ್ತ ಕಾಲದ ಹಾಡು

https://www.facebook.com/share/p/1A36bcaX8H/ #ಒಂದು_ಕಾಲದಲ್ಲಿ_ಕನ್ಯೆರಿಗೆ_ಸಾಣಿಗೆಯಲ್ಲಿ_ಸಾಣಿಸಿದಂತೆ_ಡಿಮೊರಲ್_ಮಾಡುತ್ತಿದ್ದ #ಎಲ್ಲಾ_ಜಾತಿಯ_ಮಾಣಿಗಳಿಗೆ_ಅನ್ವಯಿಸುವ_ಈ_ಹಾಡು_ಆ_ಕಾಲದಲ್ಲಿ_ಅನೇಕ_ಹೆಣ್ಣುಗಳ_ಕಂಕಣ_ಬಲ_ಕೂಡಿ_ಬರದಂತೆ_ಮಾಡಿತ್ತು ... #ಈಗ_ಗಂಡು_ಹೆಣ್ಣಿನ_ಅನುಪಾತದ_ವೃತ್ಯಾಸದಿಂದ_ಕಾಲ_ಬದಲಾಗಿದೆ.. #ಅನೇಕ_ಗಂಡುಗಳಿಗೆ_ಕಂಕಣ_ಬಲ_ಒಲಿಯುತ್ತಲೇ_ಇಲ್ಲ.    #ಸುಂದರವಾಗಿ_ರಚಿಸಿ_ಹವಿಗನ್ನಡದಲ್ಲಿ_ಸವಿಯಾಗಿ_ಹಾಡಿದ್ದಾರೆ #ಇದು_ಒಂದು_ಕ್ಷಣ_ಎಲ್ಲರನ್ನೂ_ನಿಂತು_ಕೇಳುವಂತೆ_ಮತ್ತು_ಕೇಳಿದ_ಮೇಲೆ_ಪದೇ_ಪದೇ_ಕೇಳುವಂತೆ #ಆಪ್ತರಿಗೆ_ಶೇರ್_ಮಾಡುವಂತೆ_ಮಾಡುತ್ತಿದೆ. #ಅಮಿತಾರವಿಕಿರಣ್_ಅವರಿಗೆ_ಶಹಬ್ಬಾಸ್_ಹೇಳಲೇಬೇಕು

Blog number 3377. ನಮ್ಮ ಊರ 60 ರ ದಶಕದ ಹವ್ಯಾಸಿ ರಂಗಭೂಮಿ ಕಲಾವಿದರು

#ಆನಂದಪುರದ_ಚಿರಪರಿಚಿತರಾದ_ಹೋಟೆಲ್_ಕೃಷ್ಣಣ್ಣರ_ನೆನಪುಗಳು ನಮ್ಮ ತಂದೆ ಆದಿ ಆಗಿ ಆಗಿನವರೆಲ್ಲ ಈಗಿಲ್ಲ ಅವರ ಕಿರಿಯ ಒಡನಾಡಿ ತಿಂಡಿ ಕೃಷ್ಣಣ್ಣ ಮೂರು ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ.  ಹೋಟೆಲ್ ಕೃಷ್ಣಣ್ಣ, ತಿಂಡಿ ಕೃಷ್ಣಣ್ಣ ಅಂತೆಲ್ಲ ಕರೆಯುವ ಸದಾ ನಗುಮೊಗದ ಕೃಷ್ಣಣ್ಣ 14 - ಡಿಸೆಂಬರ್- 2022 ರಂದು ಸಿಕ್ಕಿದ್ದರು ಅವರಿಗೆ ಆಗ 84 ವರ್ಷ ಆದರೆ ಅವರು 35 ವರ್ಷದವರಷ್ಟೆ ಕ್ರಿಯಾಶೀಲರು.   ಪ್ರತಿನಿತ್ಯ ಬೆಳಿಗ್ಗೆ ಸಂಜೆ ಅವರ ಕೃಷಿ ಕೆಲಸದ ಜೊತೆ ಆನಂದಪುರದಲ್ಲಿನ ಅವರ ಹೋಟೆಲ್ ವ್ಯವಹಾರ ನಿರಂತರ ನಡೆಸಿ ಕೊಂಡು ಬರುತ್ತಿದ್ದಾರೆ.   ಇದರ ಮಧ್ಯೆ ಸುತ್ತ ಮುತ್ತಲಿನ ಸಂತೆ ಮತ್ತು ಜಾತ್ರೆಯಲ್ಲಿ ಇವರ ಬೆಂಡು ಬತ್ತಾಸು, ಬೂಂದಿ ಖಾರ ಮತ್ತು ಮಂಡಕ್ಕಿ ಅಂಗಡಿ ಇರದಿದ್ದರೆ ನೆರೆದ ಜನ ಆ ವಷ೯ದ ಜಾತ್ರೆ ಜೋರಾಗಿಲ್ಲ ತಿಂಡಿ ಕೃಷ್ಣಣ್ಣ ಅಂಗಡಿನೇ ಹಾಕಿಲ್ಲ ಅನ್ನುವಷ್ಟರವರೆಗೆ ಇವರ ಪ್ರಸಿದ್ದಿ ಮತ್ತು ಜಾತ್ರೆ ಬ್ರಾಂಡ್ ಆಗಿದ್ದರು.   1960 ರ ದಶಕದಲ್ಲಿ ಇವರೆಲ್ಲ ಆನಂದಪುರದ ಪ್ರಸಿದ್ದ ನಾಟಕ ಕಲಾವಿದರು ನಮ್ಮ ತಂದೆ ಕೃಷ್ಣಪ್ಪ ಹೀರೋ ಪಾತ್ರವಂತೆ,ಸ್ತ್ರಿ ಪಾತ್ರದಾರಿ ಕೆರಹಿತ್ತಲು ಲಿಂಗಾರ್ಜುನ ಗೌಡರದ್ದಂತೆ ಇವರೆಲ್ಲರ ಜೊತೆ ತಿಂಡಿ ಕೃಷ್ಣಣರದ್ದು ನಾಟಕದಲ್ಲಿ ಮುಖ್ಯ ಪಾತ್ರ.  ಆಗ ಜೋಗಿ ಹನುಮಂತಣ್ಣ ನಾಟಕಗಳ ನಿದೇ೯ಶನ ಮಾಡುತ್ತಿದ್ದದ್ದು ನನಗೆ ಗೊತ್ತಾಗಿದ್ದೆ ಕೃಷ್ಣಣ್ಣರ ಹತ್ತಿರ ಮಾತಾಡಿದಾಗ.  ...

Blog number 3376.ಆರ್.ಎನ್. ಶೆಟ್ಟರ ಸಾಧನೆ

#ಆರ್_ಎನ್_ಶೆಟ್ಟರು #ಮುರ್ಡೇಶ್ವರ ಮುಡೇ೯ಶ್ವರ ವಿಶ್ವವಿಖ್ಯಾತಗೊಳಿಸಿದ ರಾಮ ನಾಗಪ್ಪ ಶೆಟ್ಟರು. ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆರ್.ಎನ್ ಶೆಟ್ಟರ ನಾಲ್ಕನೆ ಪುಣ್ಯತಿಥಿ ಇವತ್ತು    ಆರ್.ಎನ್. ಶೆಟ್ಟರೆಂದರೆ ಅಂದರೆ ಅವರ ನಿಮಾ೯ಣ ಸಂಸ್ಥೆಯಿಂದ ಆಗದ ಕೆಲಸವೇ ಇಲ್ಲ ಎ೦ಬ ಪ್ರತೀತಿ ಇದೆ ಇದಕ್ಕೆ ಕಾರಣ ಇವರ ಸಂಸ್ಥೆ ಸವಾಲಾಗಿ ನಿಮಿ೯ಸಿರುವ ಕೊಂಕಣ ರೈಲ್ವೆಯ 18 ಸುರಂಗ ಮಾಗ೯ಗಳು, ಯುಕೆಪಿಯ ನೂರಾರು ಕಿ.ಮೀ. ಉದ್ದದ ನೀರಾವರಿ ಕಾಲುವೆಗಳು, ಬೆಳಗಾಂ ಜಿಲ್ಲೆಯ ಹಿಡಕಲ್ ಆಣೆಕಟ್ಟುಗಳು ಎದ್ದು ಕಾಣುತ್ತದೆ.  ಇವರ ತಂದೆ ಕೃಷಿಕರು, ಪುರಾಣ ಪ್ರಸಿದ್ದ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ದೇವಾಲಯದ ಮುಕ್ತೇಸರರಾಗಿದ್ದರು, ಗೋಕಣ೯ದಲ್ಲಿ ಆತ್ಮಲಿಂಗ ಐಕ್ಯ ಆದಾಗ ರಾವಣ ಅದನ್ನು ಕೀಳುವ ಪ್ರಯತ್ನದಲ್ಲಿ ಆತ್ಮಲಿಂಗದ ಕೆಲ ತುಣುಕು ಇಲ್ಲಿಗೆ ಬಂದು ಬಿದ್ದಿದೆ ಎಂಬ ಪ್ರತೀತಿ, ಸ್ಥಳ ಪುರಾಣ ಇದೆ.   ಈಗಲೂ ಮುಡೇ೯ಶ್ವರದಲ್ಲಿ ದೇವರ ಎದುರು ಗೋಕಣ೯ದ ಆತ್ಮಲಿಂಗದ ಕಲ್ಲುಗಳ ತುಣುಕ ಅಪೇಕ್ಷೆ ಪಟ್ಟರೆ ಅಚ೯ಕರು ತೋರಿಸುತ್ತಾರೆ.    ಇಲ್ಲಿ ಜನಿಸಿ ಬಾಲ್ಯ ಕಳೆದ ಶೆಟ್ಟರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದರೂ ಅವರ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪಡೆಯುವಂತಾಗಿದ್ದು ಇತಿಹಾಸ.   1961 ರಲ್ಲಿ ಇವರು ಸ್ಥಾಪಿಸಿದ ನಿಮಾ೯ಣ ಸಂಸ್ಥೆ ಇವತ್ತು ಇವರ ಒಟ್ಟು ಆಸ್ತಿ ಮೌಲ್ಯ 18 ಸಾವಿರದ 70...

Blog number 3375. ಅತ್ಯಂತ ತೀವ್ರ ಚಳಿ 16-ಡಿಸೆಂಬರ್-2624

#ತೀವ್ರ_ಚಳಿ ಲ್ಯಾನಿನೋ ಸ್ಥಿತಿಯಿಂದ ಚಳಿ ಪ್ರಮಾಣ ತೀವ್ರಗೊಳ್ಳಲಿದೆ. ಇವತ್ತು ರಾತ್ರಿ ಕನಿಷ್ಟ ತಾಪಮಾನಕ್ಕೆ ತಲುಪುವ ಸಾಧ್ಯತೆ. ನಿನ್ನೆ ರಾತ್ರಿ 13 ಡಿಗ್ರಿಗೆ ಉಷ್ಣಾಂಶ ಇಳಿದಿತ್ತು. ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ. ಚಳಿಯಿಂದ ಪಾರಾಗಲು ಎಚ್ಚರ ವಹಿಸಿ.  ಈ ವರ್ಷದ ಚಳಿ ಹವಾಮಾನ ಮಾರ್ಚ್ ತಿಂಗಳ ತನಕ ಮುಂದುವರಿಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಅಂದಾಜಿಸಿದೆ. #winterseason #winter #coldwave #ಚಳಿ #ಚಳಿಗಾಲ #shivamogga #sagar #malenadu #temperaturedrop #lyanino      ಲ್ಯಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ತೀವ್ರಗೊಳ್ಳಲಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದ್ದು, ಈ ಪ್ರಕ್ರಿಯೆಯನ್ನೇ ಲ್ಯಾನಿನೋ ಎನ್ನಲಾಗುತ್ತದೆ.     ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಈ ಲ್ಯಾನಿನೋ ಪರಿಸ್ಥಿತಿ ಉಂಟಾಗಲಿದ್ದು, ಇದು ಮುಂದಿನ ಜನವರಿ ಹಾಗೂ ಮಾರ್ಚ್‌ ತನಕ ಮುಂದುವರಿಯಲಿದೆ.     ಹಾಗಾಗಿ ಲ್ಯಾನಿನೋ ಪ್ರಭಾವ ಬೀರುವುದರಿಂದ ರಾಜ್ಯದಾದ್ಯಂತ ತಾಪಮಾನ ಕಡಿಮೆಯಾಗಲಿದೆ. ಮತ್ತೊಂದೆಡೆ ಉತ್ತರ ಭಾರತದಿಂದಲೂ ಒಣ ಹಾಗೂ ತಣ್ಣನೆಯ ಗಾಳಿ ಬೀಸುವುದರಿಂದ ಕನಿಷ್ಠ ಉಷ್ಣಾಂಶ ಕ್ರಮೇಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. [

Blog number 3374. ನಮ್ಮ ಆನಂದಪುರಂನ ವಿಶೇಷ ವ್ಯಕ್ತಿ

#ಯಾಹ್ಯಾ_ಸಾಹೇಬರು ನಮ್ಮ ಊರಿನ ಸಜ್ಜನ ಉಪಕಾರಿ ಸಾಹುಕಾರರಾದ ಯಾಹ್ಯಾ ಸಾಹೇಬರ ನೆನಪುಗಳು. ಅರವತ್ತರ ದಶಕದಲ್ಲಿ ಇಡೀ ಆನಂದಪುರಂ ಹೋಬಳಿಗೆ ದೊಡ್ಡ ವರ್ತಕರು. ಆ ಕಾಲದ ಕೌಬಾಯ್ ಫ್ಯಾಷನ್ ಇವರದ್ದು. ಆ ಕಾಲದ ಹಿಂದಿ ನಟ ರಾಜೇಶ್ ಖನ್ನಾ ರೀತಿ ಇದ್ದರು.  ಕುದುರೆ ಸವಾರಿ ಶಿಕಾರಿ ಜೀಪ್ ಬೈಕ್ ಸವಾರಿ ಕೃಷಿ ವ್ಯಾಪಾರ ಇವರದ್ದು  ರೈಪಲ್, ತೋಟಾ ಬಂದೂಕು,ರಿವಾಲ್ವಾರ್ ಸಂಗ್ರಹಣೆಯ ಶೋಕಿ ಇವರದ್ದು.  ಇವರ ಅಂಗಡಿಯ ಕಡು ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕರೆ ಈಕಾಲದ ಬ್ಯಾಂಕ್ ಒಡಿ ಸಿಕ್ಕಿದಂತೆ ಸಾಗರ ಮತ್ತು ಶಿವಮೊಗ್ಗ ತಾಲ್ಲೂಕು ಅಂಚಿನ ಕುಣೇಹೊಸೂರು ಸಮೀಪದ ಉದನೂರು ಎಂಬಲ್ಲಿ ನೂರು ಎಕರೆ ಅಡಿಕೆ ತೋಟ ಇತ್ತು. ಯಡೇಹಳ್ಳಿಯಲ್ಲಿ  ಆರ್. ಆರ್.ರೈಸ್ ಮಿಲ್ ಇವರದ್ದೆ.    1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಆಗ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು.  ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಇವರ ಸ್ವಂತ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು.    ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು,ದಿನಸಿ ಪಟ್ಟಿ ಬರೆಯಲು ನಾಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.       ಮಾಲಿಕರಾದ ಯಾಹ್ಯ ಸಾಹೇಬರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರ...

Blog number 3373. ಆನಂದಪುರಂ ಆನೆ ಕಾರಿಡಾರ್ ಅಪ್ಡೇಟ್

#ಆನಂದಪುರಂ_ಆನೆ_ಕಾರಿಡಾರ್ ಆನೆ ತಜ್ಞರ ಅಂದಾಜು ಸರಿಯಾಗಿದೆ. ಕಳೆದ ವರ್ಷ ಸುಮಾರು 74 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ ಅಂತಿಮ ಗುರಿ ತಲುಪಿದೆ. ಕಳೆದ ವರ್ಷ ಈ ಭಾಗದಲ್ಲಿ ಸಂಚಾರ ಮಾಡಿದ್ದ ಕಾಡಾನೆಗಳು ಈ ವರ್ಷ ಕೂಡ ಅದೇ ಮಾರ್ಗದಲ್ಲಿ ಸಂಚರಿಸಿದೆ. ಈ ಪ್ರದೇಶದ ಜನರು ಜಾಗೃತರಾಗಿರಬೇಕು ಆನೆಗಳು ಬೆಳಿಗ್ಗೆ 4 ರಿಂದ 10 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ಮಾಡುವುದರಿಂದ ಈ ಸಮಯದಲ್ಲಿ ಕಾಡಾನೆ ಸಂಚರಿಸುವ ಪ್ರದೇಶದಲ್ಲಿ ಜನ ಸಂಚಾರ ಮಾಡಬಾರದು. ಅರಣ್ಯ ಇಲಾಖೆಯವರು ಈ ಕಾಡುಆನೆ ಸಂಚಾರ ಮಾನಿಟರಿಂಗ್ ಮಾಡುತ್ತಿದ್ದು ಕಾಲ ಕಾಲಕ್ಕೆ ಅವುಗಳು ಇರುವ ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಲ್ಲಿ ಮತ್ತು ಕೃಷಿಕರಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಸರ್ವೇ ನಂಬರ್ 116 ರಲ್ಲಿ ಪ್ರವೇಶ ಮಾಡಿ ಕಮದೂರಿನ ತೋಟದ ಕೆರೆಯಿಂದ ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ನೀರಾವರಿ ಆಣೆಕಟ್ಟು ತಲುಪಿ ಅಂತಿಮವಾಗಿ ಸಾಗರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಅಂಬ್ಲಿಗೋಳ ನೀರಾವರಿ ಅಣೆಕಟ್ಟು ತಲುಪುತ್ತದೆ. ಕಳೆದ ವರ್ಷ ಸುಮಾರು 78 ದಿನ ಈ ಪ್ರದೇಶದಲ್ಲಿ ಸಂಚರಿಸಿದ್ದ ಕಾಡಾನೆಗಳು ಈ ವರ್ಷ 53 ದಿನ ತಡವಾಗಿ ಇಲ್ಲಿಗೆ ಬಂದಿದೆ ಆದರೆ ಕೇವಲ 9 ದಿನಗಳಲ್ಲಿ ತಮ್ಮ...

Blog number 3372. ಬಿಲಾಲಿ ಬಿಲ್ಲಿ ಅಭ್ಯಂಜನ ಕಥಾ ಸಂಕಲನ ಅರವಿಂದ ಚೊಕ್ಕಾಡಿ ಅವರಿಂದ ಅವಲೋಕನ

https://www.facebook.com/share/p/15PhsikYNe/ *ಖ್ಯಾತ ಸಾಹಿತಿ ಶಿಕ್ಷಣ ತಜ್ಞ* *#ಅರವಿಂದ_ಚೊಕ್ಕಾಡಿಯವರಿಂದ* *ನನ್ನ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ* *#ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳ ಅವಲೋಕನ* *ಸ್ಟಾರ್ ವ್ಯಾಲ್ಯೂ ಇರುವ ಲೇಖಕರ ಪುಸ್ತಕಗಳಿಗೆ ಅವಲೋಕನದ ಬಾಗ್ಯ ಇರುವುದು ಸಹಜ ಆದರೆ* *ಸಾಹಿತಿ ಅಲ್ಲದ ಹವ್ಯಾಸಿ ಬರಹಗಾರನಾದ ನನ್ನ ಪುಸ್ತಕದ ಅವಲೋಕನ ಅನಿರಿಕ್ಷಿತ.* *ಖ್ಯಾತಸಾಹಿತಿ,ಅಂಕಣಕಾರ,ಶಿಕ್ಷಣತಜ್ಞ* *#ಅರವಿಂದ_ಚೊಕ್ಕಾಡಿಯವರು* *ನನ್ನ ಎರೆಡು ಪುಸ್ತಕಗಳ ಅವಲೋಕನ ಮಾಡಿದರು*  *ದಿನಾಂಕ :11-ಡಿಸೆಂಬರ್-2022* *ಸ್ಥಳ: ಆನಂದಪುರಂ ಕೃಷ್ಣ ಸರಸ* *ಕನ್ವೆನ್ಷನ್ ಹಾಲ್.* *ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ.*      *ಈ ಕಥಾ ಸಂಕಲನ ಮುದ್ರಣಕ್ಕೆ ಮುನ್ನ ಪೂರ್ತಿ ಓದಿ ಮುನ್ನುಡಿ ಬರೆದವರು ಅರವಿಂದ ಚೊಕ್ಕಾಡಿ ಅವರು ಅವರಿಂದಲೇ ಸಾಹಿತ್ಯ ಪರಿಷತ್ತು ಅವಲೋಕನ ಕಾಯ೯ಕ್ರಮ ಅಳವಡಿಸಿದ್ದರಿಂದ ನನ್ನ ಕಥಾ ಸಂಕಲನಕ್ಕೊಂದು ಗರಿ ಕೂಡ.*   *ಈ ಕಥಾ ಸಂಕಲನಕ್ಕೆ ಶಿರ್ಷಿಕೆ ಯಾವುದೆಂದು ನಾನು ನಿಗದಿ ಮಾಡಿರಲಿಲ್ಲ, ಆಗ ಮುನ್ನುಡಿ ಬರೆದ ಅರವಿಂದ ಚೊಕ್ಕಾಡಿ ಅವರಿಗೆ #ಬಿಲಾಲಿ_ಬಿಲ್ಲಿ ಕಥೆ ಹೆಚ್ಚು ಇಷ್ಟವಾದದ್ದರಿಂದ ಈ ಕಥಾ ಸಂಕಲನಕ್ಕೆ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ ಅಂತಲೇ ಶಿರ್ಷಿಕೆ ಇಟ್ಟಿದ್ದು.*   *ಈ ಕಥೆಯ ಕಥಾನ...

Blog number 3371. ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕ ಅವಲೋಕನ

https://www.facebook.com/share/p/19mGDWNFE8/ *ಖ್ಯಾತಸಾಹಿತಿ,ಅಂಕಣಕಾರಶಿಕ್ಷಣತಜ್ಞ* *#ಅರವಿಂದ_ಚೊಕ್ಕಾಡಿಯವರು* *ನನ್ನ ಎರೆಡು ಪುಸ್ತಕಗಳ ಅವಲೋಕನ ಮಾಡಿದರು*  *ದಿನಾಂಕ :11-ಡಿಸೆಂಬರ್-2022* *ಸ್ಥಳ: ಆನಂದಪುರಂ ಕೃಷ್ಣ ಸರಸ ಕನ್ವೆನ್ಷನ್ ಹಾಲ್* *ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ* *ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ.* *#ಬೆಸ್ತರರಾಣಿ_ಚಂಪಕಾ* *ಅವಲೋಕನ ಈ ಭಾಗದಲ್ಲಿದೆ.* *ಸ್ಟಾರ್ ವ್ಯಾಲ್ಯೂ ಇರುವ ಲೇಖಕರ ಪುಸ್ತಕಗಳಿಗೆ ಅವಲೋಕನದ ಭಾಗ್ಯ ಇರುವುದು ಸಹಜ ಆದರೆ ಸಾಹಿತಿ ಅಲ್ಲದ ಹವ್ಯಾಸಿ ಬರಹಗಾರನಾದ ನನ್ನ ಪುಸ್ತಕದ ಅವಲೋಕನ ಮಾಡಿಸಬೇಕೆಂಬ ಒತ್ತಾಸೆ ತಂದವರು ನನ್ನ ಊರಾದ ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಡಿ.ರವಿಕುಮಾರ್ ಮತ್ತು ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ಟಾಮಿಯವರು.*  *ಅವರಿಗೆ ಪ್ರೋತ್ಸಾಹಿಸಿ ಭಾಗವಹಿಸಿದ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್.*    *ವಿಶ್ವದಾಖಲೆಯ ಹಬ್ಬು ಸಾಹಿತ್ಯ ಕುಟುಂಬದ ಜೊತೆ ಸಂವಾದ ಸನ್ಮಾನದ ಜೊತೆ ನಡೆದ ನನ್ನ ಪುಸ್ತಕಗಳ ಅವಲೋಕನ ಮಾಡಿದವರು ಖ್ಯಾತ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಇದಕ್ಕಿಂತ ಹೆಚ್ಚಿನ ಸಂತೋಷ ತೃಪ್ತಿ ನನಗೆ ಬೇಕಾಗಿಲ್ಲ ಇದಕ್ಕಾಗಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ.*   *ಅರವಿಂದ ಚೊಕ್ಕಾಡ...

Blog number 3370. ನಮ್ಮ ಲಾಡ್ಜ್ ಹಸೆ ಚಿತ್ತಾರಗಳು

#ಹಸೆ_ಚಿತ್ತಾರಗಳು.... "ನಾನು ಇಂದು ನಿಮ್ಮ ಹೊಂಬುಜ ರೆಸಿಡೆನ್ಸಿ ಗೆ ಭೇಟಿ ಕೊಟ್ಟಿದ್ದೆ...ಹೊರಗಿನ ಚಿತ್ತಾರಗಳು ಚಂದವಾಗಿವೆ...feel happy 😊"  ಈ ರೀತಿ ಸಂದೇಶ ಕಳಿಸಿದವರು #ಗುರುಪ್ರಸಾದ್_ಕಂಚಿ ಅವರ ಮತ್ತು ನನ್ನ ಬೇಟಿ ಆಗಲಿಲ್ಲ. #ಹಸೆಚಿತ್ರ #ಮಲೆನಾಡು #ಹೆಗ್ಗೋಡು    ಅವರು ನಮ್ಮ ಲಾಡ್ಜ್ ಗೋಡೆಗಳ ಮೇಲೆ ಹೆಗ್ಗೋಡಿನ ನೀನಾಸಂನಲ್ಲಿ ಕಾರ್ಯನಿರ್ವಹಿಸಿದ #ಭಾಗೀರಥಿ (ಈಗ ಸಾಗರದ ಜೋಗ್ ರಸ್ತೆಯಲ್ಲಿ #ಖಾದಿಮನೆ ನಡೆಸುತ್ತಿದ್ದಾರೆ) ಅವರು ಮತ್ತು ಅವರ ಜೊತೆಗಾರ್ತಿ #ಸುಶೀಲಮ್ಮ ಬಿಡಿಸಿದ ಹಸೆ ಚಿತ್ತಾರವನ್ನ ಇಷ್ಟಪಟ್ಟಿದ್ದಾಗಿ ತಿಳಿಸಿ ಫೋಟೋ ತೆಗೆದು ಕಳಿಸಿದ್ದಾರೆ.   ಈ ಹಸೆ ಚಿತ್ತಾರವನ್ನು ಅನೇಕ ಪ್ರವಾಸಿಗಳೂ ಕೂಡ ನೋಡಿ ಇಷ್ಟ ಪಡುತ್ತಾರೆ ಈ ಚಿತ್ರಗಳ ಎದುರು Selfi ಕೂಡ ತೆಗೆದು ಕೊಳ್ಳುತ್ತಾರೆ. ಪಶ್ಚಿಮ ಘಟ್ಟದ ಮಲೆನಾಡಿನ ಹಸೆ ಚಿತ್ತಾರಕ್ಕೆ ನನ್ನ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಿದ್ದರಿಂದ ಅನೇಕರು ಅಭಿನಂದಿಸುತ್ತಾರೆ.   ಮುಂದೆ ಯಾವಾಗ ಬಂದರೂ ನನ್ನ ಬೇಟಿ ಮಾಡಿ ಎಂದು ಗುರುಪ್ರಸಾದ್ ಕಂಚಿ ಅವರಿಗೆ ತಿಳಿಸಿದ್ದೇನೆ.    ಅವರ ಪ್ರೋತ್ಸಾಹದ ಮಾತುಗಳಿಗೆ ದನ್ಯವಾದಗಳು.

Blog number 3369. ಆನಂದಪುರಂ ಆನೆ ಕಾರಿಡಾರ್ ದಿನಾಂಕ 13- ಡಿಸೆಂಬರ್- 2024 ರ ವರೆಗೆ ಅಪ್ಡೇಟ್

https://www.facebook.com/share/p/15pjBrQzia/ *#ಆನಂದಪುರಂ_ಆನೆ_ಕಾರಿಡಾರ್_ಅಪ್ಡೇಟ್* *10-ಡಿಸೆಂಬರ್ - 2024 ಮಂಗಳವಾರ ಮತ್ತು 11-ಡಿಸೆಂಬರ್-2024ರ ರಾತ್ರಿ 10ರ ತನಕದ ಮಾಹಿತಿ.*    *ನಿನ್ನೆ ರಾತ್ರಿ ಕಾಡಾನೆಗಳು (11 ಡಿಸೆಂಬರ್ 2024 ಬುಧವಾರ) ರಾತ್ರಿ 8 ಗಂಟೆಗೆಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಸಮೀಪದ ಚಂದಾಳಗೆರೆ ಭಾಗದಲ್ಲಿ ಕಂಡುಬಂದಿತ್ತು*    *ರಾತ್ರಿ 8:00 ಸಮಯದಲ್ಲಿ ರೈತರೊಬ್ಬರು ತಮ್ಮ ತೋಟದ ಬೋರ್ವೆಲ್ ನೀರಿನ ಪೈಪ್ ವಾಲ್  ತಿರುಗಿಸಲು ಹೋದಾಗ ಅವರ ತೋಟದ  ಮೇಲ್ಭಾಗದಲ್ಲಿ ಆನೆಗಳು ಇರುವುದು ಗೊತ್ತಾಗಿ ಊರವರಿಗೆಲ್ಲಾ ಫೋನ್ ಮಾಡಿ ಕರೆದಿದ್ದಾರೆ ನಂತರ ಊರವರೆಲ್ಲ ಸೇರಿ ಶಬ್ದ ಮಾಡಿ ಪಟಾಕಿ ಸಿಡಿಸಿದ್ದರಿಂದ ಆ ಭಾಗದಿಂದ ಆನೆಗಳು ಉದನೂರು ಕಾಡಿನ ಭಾಗಕ್ಕೆ ಹೋಗಿರುತ್ತದೆ.* *ಇದೇ ಸಂದರ್ಭದಲ್ಲಿ ಈ ಊರಿನ ಚೆನ್ನಪ್ಪ ಗೌಡರ ತೋಟವನ್ನು ಹಾದು ಹೋಗಿರುತ್ತದೆ.* *ಸೋಮವಾರ ರಾತ್ರಿ ಅಥವಾ ಮಂಗಳವಾರದ ಬೆಳಿಗಿನ ಜಾವ ಗೌತಮಪುರ ಗ್ರಾಮ ಪಂಚಾಯಿತಿಯ ಹೊಸಕೊಪ್ಪದ ಭಾಗದಲ್ಲಿ ಈ ಆನೆಗಳು ಸಂಚರಿಸಿದೆ, ಬೆಳಗಿನ ಜಾವ ಹೊಸಕೊಪ್ಪದ ರೈತ ಶಿವಾನಂದರ ಮನೆ ಪಕ್ಕದ ಗುಮ್ಮನಾಳ ಕೆರೆಗೆ ಬಂದಿದ್ದ ಆನೆಗಳು ಆ ಕೆರೆಯಲ್ಲಿ ನೀರು ಕುಡಿದು ಅಲ್ಲಿ ಲದ್ದಿಗಳನ್ನು ಹಾಕಿ ಹೋಗಿದೆ.*    *ಈ ಆನೆಗಳ ತಂಡದಲ್ಲಿ ಒಟ್ಟು ಐದು ಆನೆಗಳಿದೆ, ಒಂದು ಹೆಣ್ಣಾನೆ ಈ ಆನೆ ತಂಡದ ನ...

Blog number 3368. ಪ್ರಬಂದ ಅಂಬುತೀರ್ಥರ ಎರಡನೆ ಕಥೆ

https://www.facebook.com/share/p/1DJc75wPKw/ ಈ ಕಥೆ ಓದಿ ಅಭಿಪ್ರಾಯ ಬರೆಯಿರಿ ವಕ್ಷ ಸ್ಥಲೆ ಇವರ ಹಿಂದಿನ ಕಥೆ ನಾನು ಪೋಸ್ಟ್ ಮಾಡಿದ್ದು ಅತಿ ಹೆಚ್ಚು ವೀಕ್ಷರಿಂದ ಪ್ರಶಂಸಿಲ್ಪಟ್ಟಿತ್ತು. ಇದು ಎರಡನೆ ಕಥೆ ನಿಮಗಾಗಿ ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ     #ಪ್ರಬಂದಅಂಬುತೀಥ೯  ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ.  ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.             ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.        ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ. *#ಅನಾವರಣದಲ್ಲೋಂದು_ಅನಾವರಣ* *ಕಥೆಗಾರನ ಅರಿಕೆ......* ಕಣ್ಣಾರೆ ಕಂಡಿದ್ದೇ ಸತ್ಯವಾ...?...

Blog number 3367. ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದ ಮುಂಡಿಗೆಸರ ರಾಮಮೂರ್ತಿ ಮನದಾಳದ ಮಾತುಗಳು

https://www.facebook.com/share/v/1ChxnGzt1E/ *#ಅಡಿಕೆ_ಯಂತ್ರ* *ಅಡಿಕೆ ಯಂತ್ರದ ಅವಿಷ್ಕಾರ ಮಾಡಿದ ಮುಂಡಿಗೆಸರದ ರಾಮಮೂರ್ತಿ ಮನದಾಳದ ಮಾತು.* https://youtu.be/wG7pYafQBlc?si=anGXd1oJIPkeLvi9 *ಅಡಿಕೆ ಯಂತ್ರದ ಪಿತಾಮಹಾರನ್ನ ಕಡೆಗಾಣಿಸಿ ಇನ್ನಾರೊ ಸಂಶೋದಿಸಿದವರೆಂದು ಸನ್ಮಾನ ಮಾಡಿದ ಗಣ್ಯರು !?* *ಅಡಿಕೆ ಪತ್ರಿಕೆ ಶ್ರೀಪಡ್ರೆ, ಆಗಿನ ಮಾಮ್ಕೋಸ್ ಅಧ್ಯಕ್ಷರು ಉಪಸ್ಥಿತದಲ್ಲೇ ನಡೆದ ಸಮಾರಂಭ.*

Blog number 3366.ಮಲ್ಲಿಕಾ ವೆಜ್

https://www.facebook.com/share/v/15YnUVV6YB/ https://youtu.be/2GzVR76NwUs?si=sOqo6O36cE8PqShx https://maps.app.goo.gl/fzRzRPowfzpVkkrS7 *#mallikaveg* *#ಮಲ್ಲಿಕಾವೆಜ್*  *ಶಿವಮೊಗ್ಗ ಸಾಗರ ಮಾರ್ಗದ ಮಧ್ಯ NH 69 ರಲ್ಲಿ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಶುಚಿ ರುಚಿಯ ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ಮಲ್ಲಿಕಾ ವೆಜ್.* *ಊಟ ಉಪಹಾರದ ಜೊತೆ ಪ್ರತಿ ನಿತ್ಯ ವಿಶೇಷ* *#ಗಿಣ್ಣ* *#ಹಲಸಿನಎಲೆ_ಕೊಟ್ಟೆ_ಕಡಬು* *#ಗಿರ್ಮಿಟ್* *#ಗುಣವಂತೆ_ಅವಲಕ್ಕಿ_ಮೊಸರು* *ಆರ್ಡರ್ ಪಡೆದು ಬಿಸಿ ಬಿಸಿಯಾಗಿ* *ತಯಾರಿಸಿ ಕೊಡುವ* *ಬನ್ಸ್ ಪಕೋಡ ಮಿರ್ಚಿ*