Blog number 1844. ಕನಕದಾಸರು ಸುಮಾರು 500 ವರ್ಷದ ಹಿಂದೆ ಬಳಸಿದ್ದ ಮರದ ಬಿಕ್ಷಾ ಪಾತ್ರೆ ಮತ್ತು ಶಂಖಾ ಕಾಗಿನೆಲೆಯಲ್ಲಿ ಸಂರಕ್ಷಿಸಿಡಲಾಗಿದೆ.
https://youtu.be/IX_IT_hz_1g?feature=shared #ಕನಕ_ದಾಸರ_ಜಯಂತಿ #ಕನಕದಾಸರ_ಮರದ_ಬಿಕ್ಷಾಪಾತ್ರೆ #ಅವರು_ಬಳಸಿದ_ಶಂಖಾ #ಕಾಗಿನೆಲೆಯಲ್ಲಿ_ಸಂರಕ್ಷಿಸಿಡಲಾಗಿದೆ. #ಹುಟ್ಟೂರು_ಹಾವೇರಿ_ಜಿಲ್ಲೆಯ_ಶಿಗ್ಗಾಂವಿ_ತಾಲ್ಲೂಕಿನ_ಬಾಡಾ. #ಸಮಾದಿ_ಸ್ಥಳ_ಹಾವೇರಿ_ಜಿಲ್ಲೆಯ_ಬ್ಯಾಡಗಿ_ತಾಲ್ಲೂಕಿನ_ಕಾಗಿನೆಲೆ #ಉಡುಪಿಯ_ಕನಕನ_ಕಿಂಡಿ #ಕನಕದಾಸರ_ಸ್ಮಾರಕ_ಸ್ಥಳಗಳಾಗಿದೆ. 18-ಆಗಸ್ಟ್ -2016ರಂದು ಅಂದರೆ ಸುಮಾರು 7 ವರ್ಷದ ಹಿಂದೆ ಕಾಗಿನೆಲೆ ತಲುಪಿ ಕನಕದಾಸರ ಸಮಾದಿ ಸಂದರ್ಶಿಸುವಾಗಲೇ ಸಂಜೆ ಆಗಿತ್ತು ಅಲ್ಲಿಂದ ನರಸಿಂಹ ಸ್ವಾಮಿ ದೇವಸ್ಥಾನ ತಲುಪಿದಾಗ ಸ್ವಲ್ಪ ತಡವಾಗಿತ್ತು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ದೇವಾಲಯ ಪುನರ್ ನಿರ್ಮಾಣವಾಗುತ್ತಿದ್ದರಿಂದ ದೇವಾಲಯ ಬೇಗನೇ ಬಾಗಿಲು ಹಾಕಿದ್ದರು. ಪಕ್ಕದಲ್ಲೇ ಇರುವ ಮಸೀದಿಯವರು ಈಗಷ್ಟೇ ಭಟ್ಟರು ಮನೆಗೆ ಹೋಗಿದ್ದಾರೆ ಅನ್ನುವಾಗಲೇ ಟಿ.ವಿ.ಎಸ್.ನಲ್ಲಿ ಅಲ್ಲಿಗೆ ಬಂದ ಪುರೋಹಿತರು ನಾವು ಎಲ್ಲಿಂದ ಬಂದಿದ್ದಾಗಿ ವಿಚಾರಿಸಿ ನಂತರ ದೇವಾಲಯದ ಬೀಗ ತೆಗೆದು ದೇವರ ದಶ೯ನದ ಜೊತೆ ಸ್ಥಳ ಪುರಾಣವನ್ನು ತಿಳಿಸಿದರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಅಧಿಕ ದಾಸರಲ್ಲಿ ಕನಕದಾಸರೊಬ್ಬರೆ ಕೆಳ ಪಂಗಡದವರು ಆದ್ದರಿಂದಲೇ ಉಡುಪಿ ಕೃಷ್ಣ ಮಠದಲ್ಲಿ ಅವರಿಗೆ ಅವಮಾನ ಮಾಡಿ ಹೊರದೂಡಲಾಗಿತ್ತು ಆಗ ಸಾಕ್ಷಾತ್ ಶ್ರೀಕೃಷ...