ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡ ಸಂಘ ಸಂಸ್ಥೆಗಳು ಸಾದಕರನ್ನು ಸ್ಮರಿಸಲು ಮರೆಯದಿರಲಿ. #ಆನಂದಪುರಂ_ಇತಿಹಾಸ #ಭಾಗ_64. #ಕರ್ನಾಟಕ_ನಾಮಕರಣಕ್ಕೂ_ಆನಂದಪುರಂಗೂ_ನಂಟಿದೆ. #ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವದ_ಶುಭಾಷಯಗಳು. #ಶಿವಮೊಗ್ಗ_ಶಿವಮೊಗ್ಗ_ಎಂದು_ಬದಲಾಗಿ_ಹತ್ತನೇ_ವರ್ಷ. #ದೇವರಾಜಅರಸರು_1973_ನವೆಂಬರ್_1ರಂದು_ಕರ್ನಾಟಕ_ನಾಮಕರಣ_ಮಾಡುವಾಗ_ಜೊತೆಗಿದ್ದವರು_ಬದರಿನಾರಾಯಣಯ್ಯಂಗಾರರು. #ಕರ್ನಾಟಕ_ನಾಮಕರಣಕ್ಕೆ_ಆಗಿನ_ಶಿಕ್ಷಣ_ಮತ್ತು_ಕನ್ನಡಸಂಸ್ಕೃತಿ_ಇಲಾಖೆ_ಮಂತ್ರಿ_ಬದರಿನಾರಾಯಣಯ್ಯಂಗಾರ್_ಪ್ರಮುಖರು. #ಜ್ಞಾನಪೀಠಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ_ಕುವೆಂಪು. #ಶಿಮೊಗ್ಗ_ಎಂಬ_ಹೆಸರನ್ನು_ಶಿವಮೊಗ್ಗ_ಎಂದು_ಬದಲಿಸಿದವರು_ಸಿದ್ದರಾಮಯ್ಯ_2014ರಲ್ಲಿ. ಮೈಸೂರು ರಾಜ್ಯ 1956 ನವೆಂಬರ್ 1 ರಂದು ಉದಯವಾಯಿತು. ಕನ್ನಡ ಮಾತಾಡುವ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಮಾಡಲಾಗಿತ್ತು. 1973 ನವೆಂಬರ್ 1 ರಂದು ದೇವರಾಜ ಅರಸರು ಮೈಸೂರು ರಾಜ್ಯಕ್ಕೆ #ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ ಅವತ್ತು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಮಂತ್ರಿ ಆಗಿದ್ದವರು ಶಿವಮೊಗ್ಗ ಜಿಲ್ಲೆಯ ಎ.ಆರ್. ಬದರಿನಾರಾಯಣಯ್ಯಂಗಾರ್ (ಆನಂದಪುರಂ ರಾಮಕೃಷ್ಣಯ್ಯಂಗಾರ್ ಬದರಿನಾರಾಯಣ್ ಅಯ್ಯಂಗಾರ್ ಎಂಬುದು ಅವರ ಪೂರ್ಣ ಹೆಸರು...