#ನನ್ನ_ಆರೋಗ್ಯ_ಸಮತೋಲನಕ್ಕೆ_ಬೆಳಗಿನ_ವಾಕಿಂಗ್_ಪ್ರೆಂಡ್ #ಶಂಭೂರಾಮನಿಗೆ_ಸದಾ_ಚಿರ_ಋಣಿ #ವಾಕಿಂಗ್_ಮಧ್ಯದಲ್ಲಿ_ಅವನ_ಮಸ್ತಿ #ಆಗ_ನನ್ನನ್ನು_ಸ್ಟ್ರಾಪನಲ್ಲಿ_ಕಟ್ಟಿಕೊಂಡು_ಎಳೆದು_ಕೊಂಡು_ಹೋದಂತೆ #ಅಥವಾ_ಸ್ಟ್ರಾಪನ_ಮೇಲಿನ_ಸಿಟ್ಟೋ_ಗೊತ್ತಿಲ್ಲ #ಆದರೆ_ಈ_ಮಸ್ತಿ_ಇಬ್ಬರ_ಕೊಬ್ಬು_ಕರಗಿಸುತ್ತದೆ. https://youtu.be/Zp7IPMGTeqk?feature=shared ಸಾಕುಪ್ರಾಣಿ ನಮ್ಮ ಆರೋಗ್ಯಕ್ಕೆ ಯಾವ ರೀತಿ ಸಹಾಯ ಮಾಡುತ್ತದೆ?...ನನ್ನ ಸ್ವಂತ ಅನುಭವದಲ್ಲಿ ಕಳೆದ ಎರಡು ವರ್ಷಗಳಿಂದ ನನ್ನ ನಿರಂತರ ಬೆಳಗಿನ ವಾಕಿಂಗ್ ಸಂಗಾತಿ ನನ್ನ ಪ್ರೀತಿಯ ಶಂಭೂರಾಮ. ಒಂದು ದಿನವೂ ತಪ್ಪದೆ ಬೆಳಗ್ಗೆ 5.30 AM ನಿಂದ 6 ರ ತನಕ ನನ್ನ ಬಿಡದೇ ಎಚ್ಚರಿಸುತ್ತಾನೆ ನಂತರ ನಾನು ತಯಾರಾಗಿ ಇವನಿಗೆ ಸೌತೆ ಕಾಯಿ ಸ್ಲೈಸ್ ಮಾಡಿ, ಕುಡಿಯಲು ಇವನಿಗೆ ಒಂದು ಬಾಟಲ್ ನೀರು, ನನ್ನ ವಾಕಿಂಗ್ ಟ್ರಾಕ್ (ಹಾಗಂತ ಹೇಳಿಕೊಳ್ಳುವ ಮನೆ ಹಿಂಬಾಗ) ಪಕ್ಕದ ಗಿಡದ ಪಾಟ್ ಗಳಿಗೆ ನಾಲ್ಕು ಬಕೇಟ್ ನೀರು ತೆಗೆದುಕೊಂಡು ವಾಕಿಂಗ್ ಟ್ರಾಕ್ ನ ಮೂರು ಗೇಟ್ ಲಾಕ್ ಮಾಡಿ ವಾಕಿಂಗ್ ಪ್ರಾರಂಬಿಸುತ್ತೇನೆ. ಇದು ನಿರಂತರ ವಾಕಿಂಗ್ ಮಾಡಲು ಸಾಕುಪ್ರಾಣಿಯ ಸಹಕಾರ ಅಲ್ಲದೆ ಬೇರೇನು ಅಲ್ಲ ... ಆದ್ದರಿಂದ ನಾಯಿ ಸಾಕಿ ನಿತ್ಯ ಅದರ ಪಾಲನೆ ಮಾಡಿದವರ ಹೃದಯ ಆರೋಗ್ಯವಾಗಿರುತ್ತದೆ ಎಂಬ ಆಂಗ್ಲ ಗಾದೆ ಈ ಕಾರಣದಿಂದಲೇ ಇರಬೇಕು. ಒಂದು ಗಂಟೆ ವಾಕಿಂಗ್ ಮ...