Blog number 996. ಗಾಂಧೀಜಿ ಅವರನ್ನು ವಿರೋದಿಸುವ ಗಾಂಧೀ ಹತ್ಯೆ ಮಾಡಿದ ನಾಥುರಾಮ ಗೋಡ್ಸೆ ಸಮರ್ಥಿಸುವವರೆಲ್ಲ ಬಳಸುವುದು ಗಾಂಧಿ ನಮ್ಮ ರಾಷ್ಟ್ರೀಯತೆಗೆ ದಕ್ಕೆ ತಂದರು, ಅವರ ಹೋರಾಟದ ವೇದಿಕೆ ಕಾಂಗ್ರೇಸ್ ಬ್ರಿಟಿಷರ ಪರವಾಗಿತ್ತು ಇತ್ಯಾದಿ ಅದಕ್ಕೆಲ್ಲ ಉತ್ತರ ಇವರ ಲೇಖನದಲ್ಲಿದೆ ಓದಿ.
ಅರವಿಂದ ಚೊಕ್ಕಾಡಿಯವರ ಎಲ್ಲಾ ಲೇಖನ ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಆದರೆ ಈ ಲೇಖನ ಮಾತ್ರ ಈಗಿನ ತಲೆಮಾರಿನವರಿಗೆ ಇತಿಹಾಸ ತಿರುಚಿ ರಾಷ್ಟ್ರೀಯತೆ ಹೆಸರಲ್ಲಿ ಗಾಂದಿಯವರನ್ನು ಟಾರ್ಗೆಟ್ ಮಾಡಿ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಪ್ರೋತ್ಸಾಹಿಸುವ ಈ ಕಾಲಘಟ್ಟದಲ್ಲಿ ಕಣ್ಣು ತೆರೆಸುವಂತ ಲೇಖನ ಇದು🙏🙏🙏 ಕಿರಣ್ ಕಾಶಿ, ನಿಮ್ಮ ಒಂದು ಕಮೆಂಟ್ ಅನ್ನು ನಾನು ತೆಗೆದು ಹಾಕಿದ್ದೇನೆ. ಏಕೆಂದರೆ ಅಲ್ಲಿಗದು ಅಪ್ರಸ್ತುತವಾಗಿತ್ತು. ಆದರೆ ಇಲ್ಲಿ ಉತ್ತರಿಸುತ್ತೇನೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಬ್ರಿಟಿಷರನ್ನು ಬೆಂಬಲಿಸಲು ಇದ್ದದ್ದು, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಗಾಂಧಿಯೊಂದಿಗಿದ್ದವರು ಸ್ಥಳೀಯ ಹಿತಾಸಕ್ತಿಯವರು, ರಾಷ್ಟ್ರೀಯತೆಗೆ ವಿರುದ್ಧ ಇದ್ದವರು ಎಂಬ ನಿಮ್ಮ ವಾದವೇ ಹಿಸ್ಟಾರಿಕಲ್ ಮೆಥಡಾಲಜಿಯ ತಳಹದಿಯಲ್ಲಿ ಸ್ವೀಕಾರಾರ್ಹವಲ್ಲ. ನೀವು ಸ್ವಾತಂತ್ರ್ಯ ಬಂದ ನಂತರ ಗಾಂಧಿ, ನೆಹರೂ ಅವರನ್ನು ಜಾಸ್ತಿ ಹೈಲೈಟ್ ಮಾಡಿದರು ಎಂದರೆ ಪರಿಗಣನೆಗೆ ಅರ್ಹ ವಾದ. ಏಕೆಂದರೆ ಅಧಿಕಾರ ಕಾಂಗ್ರೆಸ್‌ನ ಬಳಿ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಧಿಕಾರ ಬ್ರಿಟಿಷರ ಬಳಿ ಇತ್ತು. ಹಿಂದೂ ಮಹಾ ಸಭಾ ಮತ್ತು ಮುಸ್ಲಿಂ ಲೀಗ್ ಎರಡೂ ಕಾಂಗ್ರೆಸ್‌ಗೆ ವಿರೋಧಿಗಳಾಗಿದ್ದವು. ಗಾಂಧೀಜಿಯ ಪ್ರಬಲ ಟೀಕಾಕಾರರಾದ ಅಂಬೇಡ್ಕರ್, ಸಾವರ್ಕರ್ ಆಗಲಿ, ವಿನ್ಸ್ಟನ್ ಚರ್ಚಿಲ್ ಆಗಲಿ ಗಾಂಧೀಜಿ ಅಥವಾ ಅಂದಿನ ಕಾಂಗ್ರೆಸ್ ಬ್ರಿಟಿಷರ ಪರವಾಗಿ ಕೆಲಸ ಮಾಡುವ ಸಂಸ್ಥೆ ಎಂಬ ಟ...