Blog number 1978. ಕೆ. ಶಿವರಾಂ ನೆನಪು ಭಾಗ-1. ಕನ್ನಡದಲ್ಲಿ ಐಎಎಸ್ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಕೆ.ಶಿವರಾಂ ಅಸ್ತಂಗತ
#ಕೆ_ಶಿವರಾಂ_ನೆನಪು_ಭಾಗ_1 #ನನ್ನ_ಅತ್ಯಂತ_ಆಪ್ತ_ಕನ್ನಡದ_ಐಎಎಸ್ #ಕೆ_ಶಿವರಾಂ_ಅಸ್ತಂಗತ #ಅವರ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ಪ್ರಾರ್ಥಿಸುತ್ತೇನೆ #ಸಂತಾಪ_ಸೂಚಿಸುತ್ತಾ_ಅವರ_ನೆನಪಿನ_ಕೆಲ_ಕಂತುಗಳ_ಲೇಖನ. ಮೊನ್ನೆ ರಾತ್ರಿ ಅವರ ಅಳಿಯ ಮಾಧ್ಯಮದವರಿಗೆ ತಿಳಿಸುತ್ತಿದ್ದದ್ದು ನೋಡಿದೆ,71 ವರ್ಷದ ಶಿವರಾಂ ಅವರು ಫೆಬ್ರವರಿ ಮೂರನೆ ತಾರೀಕು ಸಣ್ಣ ಆಪರೇಷನ್ಗಾಗಿ ಆಸ್ಪತ್ರೆಗೆ ದಾಖಲಾದವರು ಸತತ ಆರೋಗ್ಯದ ಏರುಪೇರಿನಿಂದ ಚೇತರಿಸಿಕೊಳ್ಳಲೇ ಇಲ್ಲ. ಅದೇ ದಿನ ಹೃದಯಾಘಾತಕ್ಕೆ ಒಳಗಾದರೂ ಅವರ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಎಂದಾಗಲೇ ನನಗೆ ಅನುವಾನವಾಗಿತ್ತು. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಯಿಂದ ಚಾಮರಾಜನಗರದ ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆ ಯಡಿಯೂರಪ್ಪನವರದಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರಿದ ಶ್ರೀನಿವಾಸ್ ಪ್ರಸಾದರಿಗಾಗಿ ಶಿವರಾಂ ಟಿಕೆಟ್ ವಂಚಿತರಾದರು ಆದರೂ ಶ್ರೀನಿವಾಸ ಪ್ರಸಾದರ ಪರವಾಗಿ ದೊಡ್ಡ ಕ್ಯಾಂಪೈನ್ ಮಾಡಿದ್ದರು. ಆಗ ಶ್ರೀನಿವಾಸ್ ಪ್ರಸಾದರು ಅವರಿಗೆ ನೀಡಿದ ಭರವಸೆ ಮುಂದಿನ ಬಾರಿ ನಾನು ವಯಸ್ಸಿನ ಮತ್ತು ಆರೋಗ್ಯ ಕಾರಣದಿಂದ ಸ್ಪರ್ಧಿಸುವುದಿಲ್ಲ ಶಿವರಾಂ ಅವರೆ ಈ ಕ್ಷೇತ್ರದ ಮುಂದಿನ ಅಭ್ಯರ್ಥಿ ಎಂದಿದ್ದರು. ಆದರೆ ಇತ್ತೀಚೆಗೆ ಶ್ರೀನಿವಾಸ್ ಪ್ರಸಾದರು ತಮ್ಮ ಇಬ್ಬರೂ ಅಳಿಯಂದಿರಲ್ಲಿ ಯಾರಿಗಾದರೂ ಒಬ್ಬರಿಗೆ ತಮ್...