Blog number 878, ನಮ್ಮ ಸುರಕ್ಷತೆಗಾಗಿ ಗ್ಯಾಸ್ ಪೈಪ್ ಲೈನ್ ಮಾಡಿಸಿ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯ ಹೊರಗೆ ಅಳವಡಿಸಲು ಸೂಕ್ತ ವ್ಯಕ್ತಿ ಶಿವಮೊಗ್ಗದ ಮೊಹಮ್ಮದ್ ವಾಸಿಂ, ಮನೆ- ಹೋಟೆಲ್ - ಕಲ್ಯಾಣ ಮಂಟಪ - ಆಹಾರ ಉದ್ಯಮ ಇದನ್ನು ಅಳವಡಿಸಿಕೊಳ್ಳಬೇಕು.
#ನನ್ನ_ಮತ್ತು_ಶಿವಮೊಗ್ಗದ_ಮೊಹಮದ್_ವಾಸೀಮ್_ವ್ಯವಹಾರದ_ಗೆಳೆತನಕ್ಕೆ_ದಶಕದ_ಹರೆಯ. #ಹೋಟೆಲ್_ಮತ್ತು_ಗೃಹಬಳಕೆಗೆ_ಎಲ್_ಪಿ_ಜಿ_ಗ್ಯಾಸ್_ಪೈಪ್_ಲೈನ್_ಅತ್ಯುತ್ತಮವಾಗಿ_ಅಳವಡಿಸಿಕೊಡುತ್ತಾರೆ. #ಇದರಿಂದ_ನೂರಕ್ಕೆ_ನೂರು_ಗ್ಯಾಸ್_ಅವಘಡ_ತಡೆಯಬಹುದು. #ಆಹಾರ_ಉದ್ಯಮ_ಕಲ್ಯಾಣಮಂಟಪ_ಹೋಟೆಲ್_ಮತ್ತು_ಮನೆಗೂ_ಅಳವಡಿಸಿಕೊಳ್ಳುವುದು_ಉತ್ತಮ. ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ನೇರವಾಗಿ ಅಡುಗೆ ಮನೆಯ ಒಳಗೆ ತಂದು ಒಲೆಗೆ ಅಳವಡಿಸಿ ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆದರೆ, ಗ್ಯಾಸ್ ಪೈಪ್ ಒಡೆದರೆ, ಅಡುಗೆ ಉಕ್ಕಿ ಬನ೯ರ್ ಬೆಂಕಿ ನಂದಿದರೆ,ಮರೆತು ಗ್ಯಾಸ್ ಆಫ್ ಮಾಡದಿದ್ದರೆ ಲೀಕಾದ ಗ್ಯಾಸ್ ಎಲೆಕ್ಟ್ರಿಕ್ ಸ್ವಿಚ್ ಆನ್ ಮಾಡಿದರೆ ಅಥವ ಯಾವುದೇ ರೀತಿಯ ಬೆಂಕಿ ಕಿಡಿಯಿಂದ ಅಗ್ನಿ ಅವಘಡಗಳು ಸಂಭವಿಸಿದರೆ ಆಗ ಒಳಗಿರುವ ಗ್ಯಾಸ್ ಸಿಲಿಂಡರ್ ಸೇರಿ ದೊಡ್ಡ ಅಗ್ನಿ ದುರಂತ ಶತಸಿದ್ದ . ಹೋಟೆಲ್ ಗಳಲ್ಲಿ, ಪಾಸ್ಟ್ ಫುಡ್ ಗಳಲ್ಲಿ, ಆಹಾರ ಉತ್ಪನ್ನ ಕೈಗಾರಿಕೆಯಲ್ಲಿ ಹೆಚ್ಚು ಪ್ರೆಶರ್ ನಲ್ಲಿ ಗ್ಯಾಸ್ ಒಲೆ ಬಳಸುವುದರಿಂದ ಯಾವುದೇ ಕಾರಣಕ್ಕೂ ಗ್ಯಾಸ್ ಸಿಲೆಂಡರ್ ಅಡುಗೆ ಮನೆಯಲ್ಲಿ ಇಡುವುದು ಅಪಾಯ. 2012ರಲ್ಲಿ ನಾನು ನನ್ನ ಕಲ್ಯಾಣ ಮಂಟಪ, ಮಲ್ಲಿಕಾ ವೆಜ್ ಮತ್ತು ಚಂಪಕಾ ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್ ಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ತೀರ್ಮಾನಿಸಿ ಒಬ್ಬರಿಗೆ ಗುತ್ತಿಗೆ ಕೊಟ್ಟೆ ಆದರೆ ಅವರ ಅನನುಭವಿ ಕೆಲಸ ನ...